HOME » NEWS » District » DASARA 2020 WILL BE CELEBRATING SIMPLE WITH MINIMUM FORMALITIES IN SRIRANGAPATTANA HK

ದಸರೆಯ ಮೂಲ ಸ್ಥಳದಲ್ಲಿ ಅದ್ದೂರಿ ದಸರೆಗೆ ನಿರ್ಬಂಧ : ಈ ಬಾರಿ ಶ್ರೀರಂಗಪಟ್ಟಣದಲ್ಲಿ ಸರಳ ದಸರೆಗೆ ನಿರ್ಧಾರ

ಕೋವಿಡ್ ಕಾರಣದಿಂದ ಸರಳ ದಸರೆಗೆ ಅನುಮತಿ‌ ನೀಡಲಾಗಿದೆ. ಯಾವುದೇ ಮೆರವಣಿಗೆ ಇಲ್ಲದೆ ಸಾಂಸ್ಕೃತಿಕ ಕಾರ್ಯಕ್ರಮ ವಿಲ್ಲದೆ ಸರಳವಾಗಿ  ಈ ಬಾರಿ ದಸರಾ ನಡೆಯಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

news18-kannada
Updated:October 7, 2020, 7:28 AM IST
ದಸರೆಯ ಮೂಲ ಸ್ಥಳದಲ್ಲಿ ಅದ್ದೂರಿ ದಸರೆಗೆ ನಿರ್ಬಂಧ : ಈ ಬಾರಿ ಶ್ರೀರಂಗಪಟ್ಟಣದಲ್ಲಿ ಸರಳ ದಸರೆಗೆ ನಿರ್ಧಾರ
ಶ್ರೀರಂಗಪಟ್ಟಣ
  • Share this:
ಮಂಡ್ಯ(ಅಕ್ಟೋಬರ್​. 07): ಕಳೆದ ಒಂದು ದಶಕದಿಂದ ಮೂಲ ಸ್ಥಳದಲ್ಲಿ ಕೂಡ ಸರ್ಕಾರ ದಸರಾ‌ ಆಚರಣೆಯ ಸಂಪ್ರದಾಯ ಬೆಳೆಸಿಕೊಂಡು ಬಂದಿತ್ತು. ಕಳೆದ ಒಂದು  ದಶಕದಿಂದಲೂ ಶ್ರೀರಂಗಪಟ್ಟಣದಲ್ಲಿ ಅದ್ದೂರಿಯಾಗಿ ದಸರಾ ಅಚರಣೆ, ಜಂಬೂಸವಾರಿ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳ ನಡೆಯತ್ತಿದ್ದವು. ಆದರೆ, ಈ ಬಾರಿ ಕೋವಿಡ್ ಕಾರಣದಿಂದ ಶ್ರೀರಂಗಪಟ್ಟಣ ಅದ್ದೂರಿ ದಸರೆಗೆ ಬ್ರೇಕ್ ಬಿದ್ದಿದೆ. ಈ ಬಾರಿ ಕೊವಿಡ್ 19ರ ಕಾರಣದಿಂದ ದಸರೆಯ ಮೂಲ ಸ್ಥಳ ಶ್ರೀರಂಗಪಟ್ಟಣದಲ್ಲಿ ನಡೆಯುತ್ತಿದ್ದ ಅದ್ದೂರಿ  ಮತ್ತು ವಿಜೃಂಭಣೆಯ ದಸರೆಗೆ ಬ್ರೇಕ್ ಬಿದ್ದಿದೆ. ಕಳೆದೊಂದು‌ ದಶಕದಿಂದ ‌ಮೂಲ ದಸರೆ ಜಾಗ ಶ್ರೀರಂಗಪಟ್ಟಣದಲ್ಲಿ ನಡೆಯುತ್ತಿದ್ದ ದಸರಾ ಸಂಭ್ರಮಾಚರಣೆ ಈ ಬಾರಿ ಕೇವಲ‌ ಸರಳ ದಸರಾ ಆಚರಣೆಗೆ ಮಾತ್ರ ಸೀಮಿತ. ಮೈಸೂರಿನಲ್ಲಿಅರಮನೆಯಂಗಳಕ್ಕೆ ವಿಶ್ವ ವಿಖ್ಯಾತ ದಸರೆ ಸೀಮಿತವಾದ್ರೆ, ಮೂಲ ದಸರೆಯ ಸ್ಥಳ ಶ್ರೀರಂಗಪಟ್ಟಣದಲ್ಲೂ ದಸರಾ ಸಂಭ್ರಮಾ ಚರಣೆ ಶ್ರೀರಂಗನಾಥ ದೇವಾಲಯ ಅಂಗಳಕ್ಕೆ ಸೀಮಿತವಾಗಿದೆ.

ದಸರಾ ಪೂರ್ವಭಾವಿ ಸಭೆಯಲ್ಲಿ ಈ ಕುರಿತಾಗಿ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದು, ಕೋವಿಡ್ ಕಾರಣದಿಂದ ಸರಳ ದಸರೆಗೆ ಅನುಮತಿ‌ ನೀಡಲಾಗಿದೆ. ಯಾವುದೇ ಮೆರವಣಿಗೆ ಇಲ್ಲದೆ ಸಾಂಸ್ಕೃತಿಕ ಕಾರ್ಯಕ್ರಮ ವಿಲ್ಲದೆ ಸರಳವಾಗಿ ಈ ಬಾರಿ ದಸರಾ ನಡೆಯಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಕಳೆದ ವರ್ಷ ಸೇರಿದಂತೆ ಹಿಂದಿನ ಎಲ್ಲಾ ವರ್ಷಗಳಲ್ಲಿ ಶ್ರೀರಂಗಪಟ್ಟಣ ದಸರೆ ಅದ್ದೂರಿಯಾಗಿ ವಿಜೃಂಭಣೆಯಿಂದ ನಡೆದಿದ್ದು. ಪ್ರತಿ ವರ್ಷದ ಕಿರಂಗೂರಿನ ಬನ್ನಿ ಮಂಟಪದಿಂದ ರಂಗನಾಥ ದೇವಾಲಯದ ವರೆಗೂ ದಸರಾ ಜಂಬೂ ಸವಾರಿ‌ ಮೆರವಣಿಗೆ ನಡೆಯುತ್ತಿತ್ತು. ಅಲ್ಲದೇ ಮೂರರಿಂದ ಐದು ದಿನಗಳವರೆಗೆ ರಂಗನಾಥ ಮೈದಾನದ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯ ಕೂಡ ಅದ್ದೂರಿಯಾಗಿ ನಡೆಯುತ್ತಿತ್ತು‌.

ಇದರ ಜೊತೆಗೆ ಪಟ್ಟಣದಲ್ಲಿ ವಿದ್ಯುತ್ ದೀಪಾಲಾಂಕಾರ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಕೊರೋನಾ ಕಾರಣದಿಂದ ಶ್ರೀರಂಗಪಟ್ಟಣದಲ್ಲಿ ದಸರೆ ಆಚರಣೆಯೇ ಬೇಡ ಎನ್ನುವ ವಾತಾವರಣವಿದ್ದಾಗ ಸ್ಥಳೀಯ ಶಾಸಕ ಪೂರ್ವಭಾವಿ ಸಭೆಯಲ್ಲಿ ವಿರೋಧ ವ್ಯಕ್ತಪಡಿಸಿ ನನ್ನ ಸ್ವಂತ ಹಣದಲ್ಲಿ ಶ್ರೀರಂಗಪಟ್ಟಣದಲ್ಲಿ ಸಾಂಪ್ರದಾಯಿಕವಾಗಿ ಆದರೂ ಸರಿಯೆ ಪಟ್ಟಣದಲ್ಲಿ ದಸರೆ ಆಚರಿಸುವೆ ಎಂದಾಗ ಜಿಲ್ಲಾಡಳಿತ ಸರಳ ದಸರೆಗೆ ಅವಕಾಶ ನೀಡಿದ್ದು, ಅಗತ್ಯ ಮುನ್ನೆಚ್ಚರಿಕೆ ಕ್ರಮದೊಂದಿಗೆ ಅಕ್ಟೋಬರ್ 23 ರಂದು ಬನ್ನಿಮಂಟಪದ ಬಳಿ ಶ್ರೀರಂಗಪಟ್ಟಣ ದಸರೆ ಉದ್ಘಾಟನೆಗೆ ದಿನಾಂಕ ನಿಗದಿ ಪಡಿಸಿದೆ.

ಇದನ್ನೂ ಓದಿ : ಕೊರೋನಾ ಹಾಟ್​ಸ್ಪಾಟ್​ ಜಿಲ್ಲೆಗಳೊಂದಿಗೆ ಅಕ್ಟೋಬರ್​ 8 ರಂದು ಸಿಎಂ ವಿಡಿಯೋ ಸಂವಾದ

ಅಲ್ಲದೇ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮವಿಲ್ಲದೆ ರಂಗನಾಥ ದೇಗುಲದ ಆವರಣದಲ್ಲಿ ಸಂಗೀತ ಕಛೇರಿಗಷ್ಟೆ ಅನುಮತಿ ನೀಡಿ ಪಟ್ಟಣದಲ್ಲಿ ಮೂರು ದಿನಗಳ ವಿದ್ಯುತ್ ದೀಪಾಲಂಕಾರಕ್ಕೆ ಸೀಮಿತಗೊಳಿಸಿದೆ.
ಒಟ್ಟಾರೆ ಕಳೆದ ಒಂದು ದಶಕದಿಂದ ಅದ್ದೂರಿಯಾಗಿ ವಿಜ್ರಂಭಣೆಯಿಂದ ನಡೆಯುತ್ತಿದ್ದ ಶ್ರೀರಂಗಪಟ್ಟಣ ದಸರಾ ಮಹೋತ್ಸವ ಈ ಬಾರಿ ಕೊವಿಡ್ ಕಾರಣ ದಿಂದ ಕಳೆಗುಂದಿದೆ. ಅದರಲ್ಲೂ ಈ ಬಾರಿಯ ಕೊರೋನಾ ಮಹಾಮಾರಿ ವಿಶ್ವ ವಿಖ್ಯಾತ ಮೈಸೂರು ದಸರೆ ಮೇಲೂ ತನ್ನ‌ ಕರಿಛಾಯೆ ಬೀರಿದ್ದು, ಜನರು ರಾಜ್ಯದ ಜನರು ಸೇರಿದಂತೆ ದೇಶ ವಿದೇಶದ ಪ್ರವಾಸಿಗರಿಗೆ ಈ ಬಾರಿ ದಸರೆಯ ಸಂಭ್ರಮ ಸಿಗದೆ ನಿರಾಶೆ ಅನುಭವಿ ಸುವಂತಾಗಿದ್ದು ದುರ್ದೈವ.
Published by: G Hareeshkumar
First published: October 7, 2020, 7:28 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories