ಚಿಕ್ಕಮಗಳೂರು (ಜೂನ್ 07); ನಟ 'ಡಿ'ಬಾಸ್ ದರ್ಶನ್ ಮಾತಿನಿಂದಲೇ ಪ್ರೇರೆಪಣೆಗೊಂಡು ಕಾಫಿನಾಡಿನ ದಂಪತಿಯೊಬ್ಬರು ಮೂರು ಪಕ್ಷಿಗಳನ್ನ ದತ್ತು ಪಡೆದಿರೋ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಇವರ ಹೆಸರು ಸಂದೀಪ್ ವಸಿಷ್ಠ. ದಂಪತಿಗಳಿಬ್ಬರಿಗೂ ಚಿಕ್ಕಂದಿನಿಂದಲೂ ಪ್ರಾಣಿ-ಪಕ್ಷಿ-ಪರಿಸರ ಅಂದ್ರೆ ಎಲ್ಲಿಲ್ಲದ ಪ್ರೀತಿ. ಡಿ ಬಾಸ್ ದರ್ಶನ್ ಅಂದ್ರು ಅಷ್ಟೆ ಪ್ರೀತಿ. ಅವರು ಹೇಳಿದ್ದು ಒಂದೇ ಮಾತಿಗೆ ಈ ದಂಪತಿಗೆ ಮೈಸೂರಿನ ಮೃಗಾಲಯದಲ್ಲಿ ಮೂರು ಪಕ್ಷಿಗಳನ್ನ ದತ್ತು ಪಡೆದಿದ್ದಾರೆ. ಸಂದೀಪ್ ವರ್ಷಕ್ಕೆ 10 ಸಾವಿರದಂತೆ ಎರಡು ಯಮೋ ಗಳನ್ನ ದತ್ತು ಪಡೆದಿದ್ರೆ, ಅವರ ಪತ್ನಿ ವರ್ಷಕ್ಕೆ 4300 ರೂಪಾಯಿಯಂತೆ ಒಂದು ಬಿಳಿ ನವಿಲನ್ನ ದತ್ತು ಪಡೆದಿದ್ದಾರೆ.
ಈಗಾಗಲೇ ದರ್ಶನ್ ಮಾತಿಗೆ ರಾಜ್ಯಾದ್ಯಂತ ಲಕ್ಷಾಂತರ ಜನ ಪ್ರಾಣಿಪಕ್ಷಿಗಳನ್ನ ದತ್ತು ಪಡೆದಿದ್ದಾರೆ. ಅವರ ಅಭಿಮಾನಿಯಾಗಿ ಪ್ರಾಣಿ ಪಕ್ಷಿಗಳಿಗೆ ನಮ್ಮದೊಂದು ಕಿರುಕಾಣಿಕೆ ಅಂತಾರೆ ಸಂದೀಪ್. ವರ್ಷಕ್ಕೆ ಮೂರ್ನಾಲ್ಕು ಬಾರಿ ಮೈಸೂರು ಮೃಗಾಲಯಕ್ಕೆ ಹೋಗಿ ಬರುತ್ತೇವೆ. ನಾವೇ ನೋಡಿ ಬಂದಿರುವ ಪ್ರಾಣಿಗಳು ಈಗ ಸಂಕಷ್ಟದಲ್ಲಿದೆ. ಕೊರೋನಾ ದಿಂದ ಮೃಗಾಲಯಕ್ಕೆ ಬರುವವರ ಸಂಖ್ಯೆ ಕೂಡ ಕಡಿಮೆ ಇದೆ. ಪ್ರಾಣಿ-ಪಕ್ಷಿಗಳ ನಿರ್ವಹಣೆ ಕೂಡ ಕಷ್ಟವಾಗಿದೆ. ಹಾಗಾಗಿ, ನಾವು ಕೆಲ ಪಕ್ಷಿಗಳನ್ನ ದತ್ತು ಪಡೆದಿದ್ದೇವೆ. ಮುಂದಿನ ವರ್ಷ ದೊಡ್ಡ ಪ್ರಮಾಣದಲ್ಲಿ ದತ್ತು ಪಡೆಯುತ್ತೇವೆ ಅಂತಾರೆ ಸಂದೀಪ್.
ಈ ವರ್ಷ ಮೂರು ಪಕ್ಷಿಗಳ ದತ್ತು ಪಡೆದಿರುವ ಸಂದೀಪ್ ಕುಟುಂಬ. ಮುಂದಿನ ವರ್ಷ ಹುಲಿ, ಆನೆಯನ್ನ ದತ್ತು ಪಡೆಯಲು ನಿರ್ಧರಿಸಿದ್ದಾರೆ. ಒಂದು ಹುಲಿಗೆ ವರ್ಷಕ್ಕೆ ಒಂದು ಲಕ್ಷ. ಒಂದು ಆನೆಗೆ ಒಂದು ವರ್ಷಕ್ಕೆ ಒಂದು ಲಕ್ಷದ ಎಪ್ಪತ್ತೈದು ಸಾವಿರ. ಮುಂದಿನ ವರ್ಷ ಹುಲಿ-ಆನೆಯನ್ನ ದತ್ತು ಪಡೆಯಲು ನಿರ್ಧರಿಸಿದ್ದಾರೆ. ಹೀಗೆ ದತ್ತು ಪಡೆಯುವುದರಿಂದ ಟ್ಯಾಕ್ಸ್ ಕೂಡ ಕಡಿಮೆಯಾಗಲಿದ್ದು, ವರ್ಷಕ್ಕೆ ಐದು ಜನಕ್ಕೆ ಎರಡು ಬಾರಿ ಫ್ರೀ ಪಾಸ್ ಕೂಡ ಸಿಗಲಿದೆ ಎಂದಿದ್ದಾರೆ. ಜೊತೆಗೆ, ಸರ್ಟಿಫಿಕೇಟ್ ನೀಡುತ್ತಾರೆ.
ಇದನ್ನೂ ಓದಿ: ಮಂಡ್ಯದಲ್ಲಿ ರಾತ್ರೋ ರಾತ್ರಿ ನಡಿತು ಎರಡು ಜೋಡಿ ಬಾಲ್ಯ ವಿವಾಹ; ಈ ಅನಿಷ್ಟಕ್ಕೆ ಪೊಲೀಸರೇ ಪೌರೋಹಿತ್ಯ!
ಅದಕ್ಕೆಲ್ಲಾಕ್ಕಿಂತ ಮಿಗಿಲಾಗಿ ಸಂಕಷ್ಟದ ಸಮಯದಲ್ಲಿ ಹೀಗೆ ಪ್ರಾಣಿಗಳನ್ನ ದತ್ತು ಪಡೆಯುವುದರಿಂದ ಮನಸ್ಸಿಗೆ ನೆಮ್ಮದಿ ಅನ್ನೋದು ಸಂದೀಪ್ ಮಾತು. ಸಂದೀಪ್ ಅವರ ಈ ಸಹಾಯ ಹಸ್ತಕ್ಕೆ ಆತನ ಸ್ನೇಹಿತರು ಕೂಡ ಫಿದಾ ಆಗಿದ್ದಾರೆ. ನಾವು ಕೂಡ ಯಾವುದಾದರೂ ಪ್ರಾಣಿಯನ್ನ ದತ್ತು ಪಡೆಯುತ್ತೇವೆ ಅಥವ ಮುಂದಿನ ವರ್ಷ ಹುಲಿ-ಆನೆಯನ್ನ ದತ್ತು ಪಡೆಯುವಾಗ ನಾವು ಅವರ ನೆರವಿಗೆ ನಿಲ್ಲುತ್ತೇವೆ ಎಂದು ಸಂತಸ ತೋರಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿ ಈವರೆಗೆ 30,000 ಮಕ್ಕಳು ಕೊರೋನಾದಿಂದಾಗಿ ಅನಾಥರಾಗಿದ್ದಾರೆ: ಸುಪ್ರೀಂಗೆ ಮಕ್ಕಳ ಆಯೋಗ ಮಾಹಿತಿ
ಒಟ್ಟಾರೆ, ಕೋರೋನಾ ಅಬ್ಬರದಲ್ಲಿ ಇಡೀ ಜಗತ್ತೇ ತಲ್ಲಣಗೊಂಡಿದೆ. ಜನಸಾಮಾನ್ಯರಿಗೆ ಉಳ್ಳವರು ಕಿಟ್ ನೀಡಿ ಬದುಕಿನ ಭಾರವನ್ನ ಸ್ವಲ್ಪ ಕಡಿಮೆ ಮಾಡಿದ್ದಾರೆ. ಆದರೆ, ಪ್ರವಾಸಿಗರನ್ನ ನಂಬಿಕೊಂಡು ಬದುಕುತ್ತಿದ್ದ ಪ್ರಾಣಿ-ಪಕ್ಷಿಗಳ ಸ್ಥಿತಿಯೂ ಕಷ್ಟವಾಗಿತ್ತು. ಹಾಗಾಗಿ, ಡಿ ಬಾಸ್ ಮಾಡಿದ ಒಂದೇ ಒಂದು ಮನವಿಗೆ ರಾಜ್ಯದಲ್ಲಿರೋ 9 ಮೃಗಾಲಯಗಳ ಲ್ಲಿನ ಪ್ರಾಣಿಪಕ್ಷಿಗಳ ನಿರ್ವಹಣೆಗೆಂದು ರಾಜ್ಯದ ಲಕ್ಷಾಂತರ ಜನ ಪ್ರಾಣಿಪಕ್ಷಿಗಳನ್ನ ದತ್ತು ಪಡೆದಿದ್ದಾರೆ. ಜನಸಾಮಾನ್ಯರಿಗೆ ಪ್ರಾಣಿ-ಪಕ್ಷಿಗಳ ಮೇಲಿರೋ ಪ್ರೀತಿ ಹೀಗೆ ಇದು ಆ ಪ್ರೀತಿ ಪರಿಸರದ ಮೇಲೆ ಮತ್ತಷ್ಟು ಹೆಚ್ಚಾಗಲಿ ಅನ್ನೋದು ನಮ್ಮ ಬಯಕೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ