HOME » NEWS » District » DAKSHINA KANNADA THIS VILLAGE PEOPLE DECIDED TO BOYCOTT ELECTION AS GOVT NOT PROVIDING ANY FACILITIES MAK

ದಕ್ಷಿಣ ಕನ್ನಡ; 40 ವರ್ಷಗಳ ಬೇಡಿಕೆಗೆ ಸ್ಪಂದಿಸದ ಸರ್ಕಾರ, ಚುನಾವಣೆ ಬಹಿಷ್ಕಾರಕ್ಕೆ ಗ್ರಾಮಸ್ಥರ ನಿರ್ಧಾರ

ಮಳೆಗಾಲದಲ್ಲಿ ತುಂಬಿ ಹರಿಯುವ ಈ ಕಲ್ಲಡ್ಕ ಕಿರು ಹೊಳೆಯಲ್ಲಿ ದಿನನಿತ್ಯದ ಅಗತ್ಯತೆಯಲ್ಲಿ ಹೋಗಬೇಕಾದ ಜನತೆಯ ಪರದಾಟ ಹೇಳತೀರದಂತಾಗಿದೆ. ಹಾಲು ಸೊಸೈಟಿಗೆ ಬರಬೇಕಾದರೆ ಸುಮಾರು 6 ಕಿ.ಮೀ. ದೂರ ಸುತ್ತಾಟ ಮಾಡಬೇಕಾಗುತ್ತದೆ.

news18-kannada
Updated:December 7, 2020, 3:30 PM IST
ದಕ್ಷಿಣ ಕನ್ನಡ; 40 ವರ್ಷಗಳ ಬೇಡಿಕೆಗೆ ಸ್ಪಂದಿಸದ ಸರ್ಕಾರ, ಚುನಾವಣೆ ಬಹಿಷ್ಕಾರಕ್ಕೆ ಗ್ರಾಮಸ್ಥರ ನಿರ್ಧಾರ
ಸೇತುವೆಗಾಗಿ ಜನರ ಒತ್ತಾಯ.
  • Share this:
ದಕ್ಷಿಣ ಕನ್ನಡ; ಈ ಭಾಗದಿಂದ ಆಯ್ಕೆಯಾದ ಜನಪ್ರತಿನಿಧಿ ಶಾಸಕರಾಗಿ, ಪಕ್ಷದ ರಾಜ್ಯಾಧ್ಯಕ್ಷರಾಗಿ, ಮುಖ್ಯಮಂತ್ರಿಯೂ ಆಗಿ ಹೋಗಿದ್ದಾರೆ. ಆದ್ರೆ ದೌರ್ಭಾಗ್ಯವೆಂದ್ರೆ ಅಲ್ಲಿನ ಜನರಿಗೆ ತೀರಾ ಅಗತ್ಯವಿರುವ ಸೇತುವೆಯೊಂದು ಇನ್ನು ಕೂಡಾ ಆಗಿಲ್ಲ. ಕಳೆದ 40 ವರ್ಷಗಳಿಂದ ರಸ್ತೆ ಸಂಪರ್ಕದ ಸೇತುವೆಗಾಗಿ ಅಲ್ಲಿನ ಜನ ಮನವಿ ನೀಡಿ ಕಂಗಾಲಾಗಿ ಹೋಗಿದ್ದಾರೆ. ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಹಿರೇಬಂಡಾಡಿ ಗ್ರಾಮದ ಅಗರಿಯ ಜನ ಕಳೆದ 40 ವರ್ಷಗಳಿಂದ ರಸ್ತೆ ಸಂಪರ್ಕದ ಸೇತುವೆಗಾಗಿ ಮನವಿ ನೀಡಿ ಕಂಗಲಾಗಿ ಹೋಗಿದ್ದಾರೆ. ಉಪ್ಪಿನಂಗಡಿ-ಕಡಬ ರಸ್ತೆಯನ್ನು ಪೆರಿಯಡ್ಕದ ಮೂಲಕ ಸಂಪರ್ಕಿಸುವ ಈ ಅಗರಿ ರಸ್ತೆಗೆ ಕಲ್ಲಡ್ಕ ಎಂಬಲ್ಲಿರುವ ಕಿರು ಹೊಳೆಗೆ ಸೇತುವೆಯೊಂದು ತೀರಾ ಅಗತ್ಯವಿದ್ದು, ಹಲವು ಬಾರಿ ಇಲ್ಲಿನ ಮಂದಿ ಮನವಿ ಮಾಡುತ್ತಿದ್ದಾರೆ. ಆದರೆ ಯಾವ ಅಧಿಕಾರಿಗಳೂ, ಜನಪ್ರತಿನಿಧಿಗಳು ಇದನ್ನು ಪರಿಹರಿಸದಿದ್ದಕ್ಕೆ 35ಕ್ಕೂ ಹೆಚ್ಚು ಕುಟುಂಬಗಳು ಇದೀಗ ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿವೆ.

ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ಪುತ್ತೂರಿನ ಶಾಸಕರಿದ್ದಾಗ ಅಗರಿ ದಲಿತ ಕಾಲೋನಿ ಸಂಪರ್ಕಿಸುವ ರಸ್ತೆಗೆ ಸೇತುವೆ ನಿರ್ಮಾಣ ಮಾಡುವಂತೆ ಇಲ್ಲಿನ ಜನತೆ ಮನವಿ ನೀಡಿದ್ದರು. ನಂತರ ಬಂದ ಮೂರು ಶಾಸಕರಿಗೂ ಬೇಡಿಕೆಯನ್ನು ಮುಂದಿಟ್ಟಿದ್ದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಾಲಿ ಸಿಎಂ ಯಡಿಯೂರಪ್ಪ ಅವರಿಗೂ ಇಲ್ಲಿನ ಜನತೆ ವಿಧಾನಸಭೆಯ ಮೆಟ್ಟಿಲು ಹತ್ತಿ ಸೇತುವೆ ಮಾಡಿಕೊಡಿ ಎಂದು ದುಂಬಾಲು ಬಿದ್ದಿದ್ದಾರೆ. ಆದರೆ ಯಾವ ಪಕ್ಷದ ಜನಪ್ರತಿನಿಧಿಗಳು ಇವರ ಕೂಗಿಗೆ ಕಿವಿಗೊಟ್ಟಿಲ್ಲ.

ಇದನ್ನೂ ಓದಿ : ಸದ್ಯಕ್ಕಿಲ್ಲ ಬಿಬಿಎಂಪಿ ಚುನಾವಣೆ; ಹೈಕೋರ್ಟ್​ ಆದೇಶ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಲು ರಾಜ್ಯ ಸರ್ಕಾರ ನಿರ್ಧಾರ

ಮಳೆಗಾಲದಲ್ಲಿ ತುಂಬಿ ಹರಿಯುವ ಈ ಕಲ್ಲಡ್ಕ ಕಿರು ಹೊಳೆಯಲ್ಲಿ ದಿನನಿತ್ಯದ ಅಗತ್ಯತೆಯಲ್ಲಿ ಹೋಗಬೇಕಾದ ಜನತೆಯ ಪರದಾಟ ಹೇಳತೀರದಂತಾಗಿದೆ. ಹಾಲು ಸೊಸೈಟಿಗೆ ಬರಬೇಕಾದರೆ ಸುಮಾರು 6 ಕಿ.ಮೀ. ದೂರ ಸುತ್ತಾಟ ಮಾಡಬೇಕಾಗುತ್ತದೆ. ಯಾರಿಗಾದರೂ ಅನಾರೋಗ್ಯ ಕಾಣಿಸಿಕೊಂಡರೆ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಸಮಸ್ಯೆಯಾಗುತ್ತಿದೆ.
Youtube Video

ಇಂತಹ ಅವ್ಯವಸ್ಥೆ ತುಂಬಿರುವ ಈ ಗ್ರಾಮೀಣ ಭಾಗದ ಸೇತುವೆ ನಿರ್ಮಾಣಕ್ಕೆ ಜನಪ್ರತಿನಿಧಿಗಳು ಮುಂದಾಗದಿರುವುದು ಇಲ್ಲಿನ ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ. ಇದೀಗ ಚುನಾವಣೆ ಬಹಿಷ್ಕಾರದ ನಿರ್ಧಾರದ ಮೂಲಕವಾದರೂ ತಮ್ಮ ಜೀವಿತಾವಧಿಯ ಬೇಡಿಕೆಗೆ ಬೆಂಬಲ ಸಿಗಬಹುದು ಎಂಬುದು ಇಲ್ಲಿನ ಜನತೆಯ ಆಶಾವಾದವಾಗಿದೆ.
Published by: MAshok Kumar
First published: December 7, 2020, 3:30 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories