ದಕ್ಷಿಣ ಕನ್ನಡ(ಜೂ.28): ಕೊರೊನಾ ಎರಡನೇ ಅಲೆಯ ವೇಳೆ ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ನೆರಿಯಾ ಗ್ರಾಮದ ಸಿಯೋನ್ ಆಶ್ರಮದ ಆಶ್ರಮವಾಸಿಗಳು ಈಗ ಕೊರೊನಾ ಗೆದ್ದಿದ್ದಾರೆ. ಒಂದೇ ದಿನ ಅತೀ ಹೆಚ್ಚು ಕೊರೊನಾ ಪ್ರಕರಣ ಕಾಣಿಸಿಕೊಳ್ಳುವ ಮೂಲಕ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಸಿಯೋನ್ ಆಶ್ರಮದಲ್ಲಿ ಈಗ ಸಂತಸದ ವಾತವರಣ ನಿರ್ಮಾಣವಾಗಿದೆ. ಆಶ್ರಮದ ಭಾಗಶಃ ಎಲ್ಲರಲ್ಲೂ ಕೊರೋನಾ ಕಾಣಿಸಿಕೊಂಡು ಅತೀ ಸಂಕಷ್ಟದ ಸಮಯವನ್ನು ಎದುರಿಸಿದ ಆಶ್ರಮದ ಜನರು ಈಗ ತಮ್ಮ ಕಷ್ಟಗಳೆಲ್ಲಾ ದೂರವಾದ ಖುಷಿಯಲ್ಲಿದ್ದಾರೆ.
ಕೊರೊನಾ ಉತ್ತುಂಗದ ಸಮಯದಲ್ಲಿ ರಾಜ್ಯ ಕರಾವಳಿ ಜಿಲ್ಲೆಯಾದ ದಕ್ಷಿಣ ಕನ್ನಡ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ್ದ ಬೆಳ್ತಂಗಡಿ ಯ ಸಿಯೋನ್ ಆಶ್ರಮದ ಕೊರೋನಾ ಸ್ಫೋಟದಲ್ಲಿ, ಆಶ್ರಮವಾಸಿಗಳು ಕೊರೊನಾ ಗೆದ್ದು, ಸಾಹಸ ಮೆರೆದಿದ್ದಾರೆ. ಬೆಳ್ತಂಗಡಿ ತಾಲೂಕಿನ ನೆರಿಯಾ ಗ್ರಾಮದ ಸಿಯೋನ್ ಆಶ್ರಮದಲ್ಲಿ ಒಟ್ಟು 270 ಮಂದಿ ಆಶ್ರಮ ವಾಸಿಗಳಿದ್ದು, ನಡೆಸಿದ ಕೊರೊನಾ ಟೆಸ್ಟ್ ನಲ್ಲಿ 225 ಕ್ಕೂ ಹೆಚ್ಚು ಜನರಿಗೆ ಕೊರೋನಾ ಕಾಣಿಸಿಕೊಂಡು ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿತ್ತು. ಈಗ ಎಲ್ಲರಿಗೂ ಕೊರೊನಾ ನೆಗೆಟಿವ್ ಆಗಿದ್ದು,ಧರ್ಮಸ್ಥಳದ ರಜತಾದ್ರಿ ವಸತಿಗೃಹದ ಕೊವೀಡ್ ಕೇರ್ ಸೆಂಟರ್ ನಲ್ಲಿದ್ದ ಸುಮಾರು 150 ಕ್ಕೂ ಹೆಚ್ಚು ಮಂದಿ ಸಂಪೂರ್ಣ ಗುಣಮುಖರಾಗಿ ಈಗ ಮತ್ತೆ ಆಶ್ರಮ ಸೇರಿದ್ದಾರೆ.
ಇದನ್ನೂ ಓದಿ:Siddaramaiah: ಹಲವರ ನಿದ್ದೆಗೆಡಿಸಿರುವ ಸಿದ್ದು ಸಿಎಂ ವಿಚಾರ; ಡಿಕೆಶಿ ಬಳಿಕ ತಟಸ್ಥ ಬಣದಿಂದ ದೆಹಲಿ ಯಾತ್ರೆ
ಸಿಯೋನ್ ಆಶ್ರಮದಲ್ಲಿ 200ಕ್ಕೂ ಹೆಚ್ಚು ಆಶ್ರಮವಾಸಿಗಳಿದ್ದು, ಅದರಲ್ಲಿ ಅನಾಥರು, ನಿರ್ಗತಿಕರು, ಮನೋರೋಗಿಗಳು, ವೃದ್ಧರಿದ್ದರು. ಧರ್ಮಸ್ಥಳ ದ ರಜತಾದ್ರಿ ವಸತಿಗೃಹದಲ್ಲಿ 150 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಒಂದು ತಿಂಗಳ ಚಿಕಿತ್ಸೆಯ ಬಳಿಕ ಈಗ ಎಲ್ಲರೂ ಗುಣಮುಖರಾಗಿದ್ದಾರೆ. ಬೆಳ್ತಂಗಡಿ ಯ ಶಾಸಕ ಹರೀಶ್ ಪೂಂಜಾ, ಧರ್ಮಸ್ಥಳ ದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರ ಮುತುವರ್ಜಿಯಲ್ಲಿ ಆಶ್ರಮವಾಸಿಗಳ ಆರೈಕೆಯನ್ನು ಮಾಡಲಾಗಿತ್ತು.
ನೂರಾರು ಮಂದಿ ದಾದಿಯರು, ವೈದ್ಯರು ತಮ್ಮ ಜೀವದ ಹಂಗನ್ನು ತೊರೆದು ಕೊರೊನಾ ಸೋಂಕಿತರಿಗೆ ಚಿಕಿತ್ಸೆಯನ್ನು ನೀಡಿದ್ದರು. ನಿಸ್ವಾರ್ಥ ಸೇವೆಯ ಫಲವಾಗಿ ಈಗ ಎಲ್ಲರ ಆರೋಗ್ಯವೂ ಸುರಕ್ಷಿತ ವಾಗಿದ್ದು, ಎಲ್ಲರ ರಿಪೋರ್ಟ್ ಕೂಡಾ ನೆಗೆಟಿವ್ ಆಗಿದೆ.
ಇದನ್ನೂ ಓದಿ:Bank holidays in July 2021: ಬ್ಯಾಂಕ್ ಗ್ರಾಹಕರೇ ಗಮನಿಸಿ; ಜುಲೈ ತಿಂಗಳಿನಲ್ಲಿ 15 ದಿನ ಬ್ಯಾಂಕ್ಗಳಿಗೆ ರಜೆ
ಸಂಪೂರ್ಣ ಗುಣಮುಖರಾದವರೆಲ್ಲರನ್ನೂ ಒಂದು ತಿಂಗಳ ಬಳಿಕ ಮತ್ತೆ ನೆರಿಯಾ ಗ್ರಾಮದ ಸಿಯೋನ್ ಆಶ್ರಮಕ್ಕೆ ಮತ್ತೆ ಕರೆದುಕೊಂಡು ಬರಲಾಗಿದ್ದು, ಆಶ್ರಮದ ಸಿಬ್ಬಂದಿ ಮತ್ತು ನೆರಿಯಾ ಗ್ರಾಮಸ್ಥರು ಕೊರೊನಾ ಗೆದ್ದ ಆಶ್ರಮವಾಸಿಗಳಿಗೆ ಸ್ವಾಗತ ಕೋರಿದ್ದಾರೆ. ಆಶ್ರಮವೇ ಕೊರೋನಾ ಗೆದ್ದ ಖುಷಿಯಲ್ಲಿ ಇಡೀ ಆಶ್ರಮಕ್ಕೆ ಸುಣ್ಣ-ಬಣ್ಣ ಬಳಿದು ಸಿಂಗರಿಸಲಾಗಿತ್ತು.ಈ ಸಂಧರ್ಭದಲ್ಲಿ ಬೆಳ್ತಂಗಡಿ ಯ ಶಾಸಕ ಹರೀಶ್ ಪೂಂಜಾ ಆಶ್ರಮದ ಅಭಿವೃದ್ಧಿ ಗೆ 50 ಲಕ್ಷ ರೂಪಾಯಿ ಘೋಷಣೆ ಮಾಡಿದ್ದಾರೆ. ಸಿಯೋನ್ ಆಶ್ರಮದ 126 ಮಂದಿ ಪುರುಷರು 100 ಮಂದಿ ಮಹಿಳೆಯರು ಸೇರಿದಂತೆ ಒಟ್ಟು 126ಮಂದಿಗೆ ಸೋಂಕು ತಗುಲಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ