HOME » NEWS » District » DAILY LABORS FEARS FROM BLACK MAGIC IN HAVERI DISTRICT RHHSN

ಉದ್ಯೋಗ ಖಾತ್ರಿ ಕೆಲಸಕ್ಕೆ ಬಂದಿದ್ದ ಕಾರ್ಮಿಕರಿಗೆ ವಾಮಾಚಾರದ ಕಾಟ: ಏನಿದು ಘಟನೆ..?

ನಾವು ಎಂದಿನಂತೆ ಕೆಲಸಕ್ಕೆ ಬಂದಿದ್ದೆವು. ಕೆರೆಯ ಅಂಗಳಕ್ಕೆ ಬಂದಾಗ ನಮಗೆ ಎಲ್ಲಿಲ್ಲದ‌ ಭಯ ಶುರುವಾಯಿತು. ಕರಲಕಟ್ಟಿ ಕೆರೆಯ ಬಳಿ ಎಲ್ಲೆಂದರಲ್ಲಿ ಕುಂಕುಮ, ಕುಂಕುಮ‌ ಮೆತ್ತಿದ ನಿಂಬೆಹಣ್ಣು, ಕುಂಬಳಕಾಯಿ ಹೀಗೆ ಏನೇನೋ ಬಿದ್ದಿದ್ದವು. ಇದನ್ನು ನೋಡಿ ಕೆಲಕಾಲ ಅಕ್ಷರಶಃ ಭಯದ ವಾತಾವರಣದಲ್ಲಿದ್ದೆವು. ನಂತರ ಅಧಿಕಾರಿಗಳು ಬಂದು ನಮ್ಮ ಮನವೊಲಿಸಿ, ಧೈರ್ಯ ತುಂಬಿದರು.

HR Ramesh | news18-kannada
Updated:April 13, 2021, 7:56 AM IST
ಉದ್ಯೋಗ ಖಾತ್ರಿ ಕೆಲಸಕ್ಕೆ ಬಂದಿದ್ದ ಕಾರ್ಮಿಕರಿಗೆ ವಾಮಾಚಾರದ ಕಾಟ: ಏನಿದು ಘಟನೆ..?
ಕೂಲಿ ಕಾರ್ಮಿಕರಿಗೆ ಧೈರ್ಯ ತುಂಬಿದ ಅಧಿಕಾರಿಗಳು.
  • Share this:
ಹಾವೇರಿ: ಉದ್ಯೋಗ ಖಾತ್ರಿ ಯೋಜನೆ ಅಂದರೆ ದುಡಿಯುವ ಕೈಗಳಿಗೆ ಕೆಲಸ ನೀಡುವ ಮಹತ್ವದ ಯೋಜನೆಯಾಗಿದೆ. ಅದರಂತೆ ಹಾವೇರಿ ಜಿಲ್ಲೆಯಲ್ಲಿ ನಿತ್ಯವೂ ಸಾಕಷ್ಟು ಸಂಖ್ಯೆಯ ಜನರು ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ‌ ಮಾಡಿಕೊಂಡು ಕುಟುಂಬ ಸಾಗಿಸುತ್ತಿದ್ದಾರೆ. ಆದರೆ ಜಿಲ್ಲೆಯ ಹಿರೇಕೆರೂರು ತಾಲೂಕಿನ ನೂಲಗೇರಿ ಗ್ರಾಮದ ಕರಲಕಟ್ಟಿ ಕೆರೆಯ ಹೂಳು ತೆಗೆಯುವ ಕಾಮಗಾರಿಗೆ ಬಂದ ಕೂಲಿ ಕಾರ್ಮಿಕರು ಕೆಲಸ ಬಿಟ್ಟು ಮರಳಿ ಮನೆಗೆ ಹೊರಟು ನಿಂತ ಘಟನೆ ನಡೆದಿದೆ.

ಕೆಲಸ‌ ಸ್ಥಳದಲ್ಲಿ ವಾಮಾಚಾರದ ವಸ್ತುಗಳು

ಕಳೆದ ಕೆಲವು ದಿನಗಳಿಂದ ಕೆರೆಯ ಹೂಳು ತೆಗೆಯುವುದು, ಕೆರೆಯ ಏರಿ ಮೇಲಿನ ಮುಳ್ಳು ಕಂಟೆ ಕಡಿಯುವ ಕೆಲಸ ಮಾಡುತ್ತಿದ್ದಾರೆ. ಪ್ರತಿದಿನ ಮೂವತ್ತು ಜನ ಕೂಲಿ ಕಾರ್ಮಿಕರು ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುತ್ತಿದ್ದಾರೆ. ಆದರೆ ಸೋಮವಾರ ಕೆರೆಯ ಅಂಗಳಕ್ಕೆ ಆಗಮಿಸಿದ್ದ ಕೂಲಿ ಕಾರ್ಮಿಕರು ಭಯದಿಂದಲೇ ಮನೆಯತ್ತ ವಾಪಸ್ ಹೊರಟು ನಿಂತಿದ್ದರು. ಯಾಕಂದರೆ ಕೂಲಿ ಕಾರ್ಮಿಕರು ಕೆಲಸ ಮಾಡುವ ಸ್ಥಳದಲ್ಲಿ ಕುಂಕುಮ, ಕುಂಕುಮ ಮೆತ್ತಿದ ಕುಂಬಳಕಾಯಿ, ಮಡಿಕೆ, ಮಡಿಕೆಯಲ್ಲಿ ಬೇವಿನ ಸೊಪ್ಪು, ನಿಂಬೆಹಣ್ಣು, ಊದುಬತ್ತಿ ಹೀಗೆ ವಾಮಾಚಾರಕ್ಕೆ ಬಳಸುವ ವಸ್ತುಗಳು ಬಿದ್ದಿದ್ದವು. ಇದನ್ನು ಕಂಡು ಭಯಗೊಂಡ ಕೂಲಿ ಕಾರ್ಮಿಕರು ಇಲ್ಲಿ ವಾಮಾಚಾರದ ಆಗಿದೆ. ನಮಗಿಲ್ಲಿ ಕೆಲಸ ಮಾಡಲು ಭಯ ಆಗುತ್ತದೆ. ಹೀಗಾಗಿ ನಾವು ಕೆಲಸ ಮಾಡುವುದಿಲ್ಲ ಎಂದು ವಾಪಸ್ ಮನೆಗೆ ಹೋಗುವ ತಯಾರಿಯಲ್ಲಿದ್ದರು.

ಕಿಡಿಗೇಡಿಗಳ ಕೃತ್ಯ : 

ಗ್ರಾಮದ ಕರಲಕಟ್ಟಿ ಕೆರೆ ಹೂಳೆತ್ತುವುದು ಮತ್ತು ಮುಳ್ಳು ಕಂಟೆ ಕಡಿಯುವುದನ್ನು ಸಹಿಸದ‌ ಕೆಲವು ಕಿಡಿಗೇಡಿಗಳು ಕೂಲಿ ಕಾರ್ಮಿಕರಲ್ಲಿ ಭಯ ಹುಟ್ಟಿಸಲು ಈ ರೀತಿಯ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಎಂದಿನಂತೆ ಕೂಲಿ ಕಾರ್ಮಿಕರು ಕೆಲಸಕ್ಕೆ ಬಂದಾಗ ಕೆಲಸ‌ ಮಾಡುವ ಸ್ಥಳದಲ್ಲಿ ಎಲ್ಲೆಂದರಲ್ಲಿ ಬಿದ್ದಿದ್ದ ವಾಮಾಚಾರಕ್ಕೆ ಬಳಸುವ ವಸ್ತುಗಳನ್ನು ಕಂಡು ಕಾರ್ಮಿಕರು ಕೆಲಸವೆ ಬೇಡ ಎನ್ನುವ ಲೆಕ್ಕಾಚಾರಕ್ಕೆ ಬಂದಿದ್ದರು. ವಿಷಯ ತಿಳಿದು ಸ್ಥಳಕ್ಕೆ ಬಂದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾಮದ ಕೆಲವರು ಇದು ಕಿಡಿಗೇಡಿಗಳ ಕೃತ್ಯ. ಈ ಬಗ್ಗೆ ಯಾರೂ ಭಯಪಡಬೇಡಿ ಎಂದು ಕೂಲಿ ಕಾರ್ಮಿಕರ ಮನವೊಲಿಸಿ ಕೂಲಿ ಕಾರ್ಮಿಕರು ಎಂದಿನಂತೆ ಕೆಲಸ ಮಾಡುವಂತೆ ಮಾಡಿದರು.

ಇದನ್ನು ಓದಿ: WestBengal Election: ಚುನಾವಣಾ ಪ್ರಚಾರದಿಂದ ಮಮತಾ ಬ್ಯಾನರ್ಜಿಗೆ 24 ಗಂಟೆಗಳ ಕಾಲ ನಿರ್ಬಂಧ ಹೇರಿದ ಚುನಾವಣಾ ಆಯೋಗ!

ಕೆಲಸವೆ ಬೇಡವೆಂದು ಕುಳಿತಿದ್ದ ಕಾರ್ಮಿಕರು: ವಾಮಾಚಾರದ ವಸ್ತುಗಳನ್ನು ಕಂಡ ಕೂಲಿ ಕಾರ್ಮಿಕರು ಕೆಲಕಾಲ ಹೀಗಿದ್ದಾಗ ಕೆಲಸ ಮಾಡೋದು ಹೇಗೆ.? ಇಲ್ಲಿ ಕೆಲಸ ಮಾಡುವುದು ಬೇಡ ಎಂದು ಕುಳಿತಿದ್ದರು. ಅದರಲ್ಲೂ ಮಹಿಳಾ‌‌ ಕಾರ್ಮಿಕರಂತೂ ಕೆಲಸ‌ ಬೇಡ, ನಾವು ಮನೆಗೆ ಹೋಗುತ್ತೇವೆ ಎಂದು ಮನೆಗೆ ಹೋಗುವ ತಯಾರಿಯಲ್ಲಿದ್ದರು. ಆಗ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಕೆಲವು ಸ್ಥಳೀಯರು ಕೂಲಿ ಕಾರ್ಮಿಕರ ಮನವೊಲಿಸಿ ಕೂಲಿ ಕಾರ್ಮಿಕರು ಕೆಲಸ ಮುಂದುವರೆಸುವಂತೆ ಮಾಡಿದರು ಎಂದು ಉದ್ಯೋಗ ಖಾತ್ರಿ ಯೋಜನೆಯ ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಾವು ಎಂದಿನಂತೆ ಕೆಲಸಕ್ಕೆ ಬಂದಿದ್ದೆವು. ಕೆರೆಯ ಅಂಗಳಕ್ಕೆ ಬಂದಾಗ ನಮಗೆ ಎಲ್ಲಿಲ್ಲದ‌ ಭಯ ಶುರುವಾಯಿತು. ಕರಲಕಟ್ಟಿ ಕೆರೆಯ ಬಳಿ ಎಲ್ಲೆಂದರಲ್ಲಿ ಕುಂಕುಮ, ಕುಂಕುಮ‌ ಮೆತ್ತಿದ ನಿಂಬೆಹಣ್ಣು, ಕುಂಬಳಕಾಯಿ ಹೀಗೆ ಏನೇನೋ ಬಿದ್ದಿದ್ದವು. ಇದನ್ನು ನೋಡಿ ಕೆಲಕಾಲ ಅಕ್ಷರಶಃ ಭಯದ ವಾತಾವರಣದಲ್ಲಿದ್ದೆವು. ನಂತರ ಅಧಿಕಾರಿಗಳು ಬಂದು ನಮ್ಮ ಮನವೊಲಿಸಿ, ಧೈರ್ಯ ತುಂಬಿದರು. ಇದು ಕಿಡಿಗೇಡಿಗಳ ಕೃತ್ಯ‌. ಇದಕ್ಕೆ ತಲೆಕೆಡಿಸಿಕೊಳ್ಳಬೇಡಿ ಎಂದು ಮನವೊಲಿಸಿದರು. ಆಗ ಮತ್ತೆ ಕೆಲಸ‌ ಮುಂದುವರೆಸಿದೆವು  ಎನ್ನುತ್ತಾರೆ ಕೂಲಿ ಕಾರ್ಮಿಕ ಮಹಿಳೆ ಮಂಜುಳಾ

ವರದಿ: ಮಂಜುನಾಥ ತಳವಾರ  
Published by: HR Ramesh
First published: April 13, 2021, 7:56 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories