HOME » NEWS » District » DAILY LABORS COMING TO YADAGIRI FROM MAHARASHTRA BY THE CORONAVIRUS AFRAID RHHSN NMPG

ಮತ್ತೆ ಮಹಾರಾಷ್ಟ್ರ ವಲಸಿಗರಿಂದ ಕೊರೋನಾ ಕಂಟಕ! ಲಾಕ್​ಡೌನ್​ ಭೀತಿಯಿಂದ ಮರಳಿ ಊರಿಗೆ ಬರುತ್ತಿರುವ ಕಾರ್ಮಿಕರು...!

ಮುಂಬೈನಲ್ಲಿ ಕೂಲಿ ಮಾಡಿ ಬದುಕು ಸಾಗಿಸುತ್ತಿದ್ದ ಕಾರ್ಮಿಕರು ಕೊರೋನಾ ಆತಂಕದಿಂದ ಕೆಲಸ ಬಿಟ್ಟು ಊರಿಗೆ ಮರಳುತ್ತಿದ್ದಾರೆ. ಆದರೆ, ಊರಿನಲ್ಲಿ ಇವರಿಗೆ ಕೆಲಸ ಸಿಗುವುದು ಕಷ್ಟ. ಸರಕಾರ ವಲಸೆ ಕಾರ್ಮಿಕರಿಗೆ ಉದ್ಯೋಗ ‌ಖಾತ್ರಿ ಯೋಜನೆಯಡಿ ಕೆಲಸ ನೀಡಿ ಅನುಕೂಲ ಮಾಡಬೇಕಿದೆ.

news18-kannada
Updated:April 10, 2021, 6:30 AM IST
ಮತ್ತೆ ಮಹಾರಾಷ್ಟ್ರ ವಲಸಿಗರಿಂದ ಕೊರೋನಾ ಕಂಟಕ! ಲಾಕ್​ಡೌನ್​ ಭೀತಿಯಿಂದ ಮರಳಿ ಊರಿಗೆ ಬರುತ್ತಿರುವ ಕಾರ್ಮಿಕರು...!
ಸಾಂದರ್ಭಿಕ ಚಿತ್ರ
  • Share this:
ಯಾದಗಿರಿ: ದೇಶದೆಲ್ಲೆಡೆ ಕೊರೋನಾ ಎರಡನೇ ಅಲೆಯ ಅಬ್ಬರ ಜೋರಾಗಿದೆ. ಪ್ರತಿದಿನ ಒಂದು ಲಕ್ಷಕ್ಕೂ ಹೆಚ್ಚಿನ ಪ್ರಕರಣಗಳು ವರದಿಯಾಗುತ್ತಿವೆ. ಅದರಲ್ಲೂ ಪಕ್ಕದ  ಮಹಾರಾಷ್ಟ್ರ ಕೊರೋನಾ ಹಾಟ್​ಸ್ಪಾಟ್​ ಆಗಿದ್ದು, ದಿನಕ್ಕೆ 50 ಸಾವಿರಕ್ಕಿಂತ ಹೆಚ್ಚಿನ ಪ್ರಕರಣಗಳು ವರದಿಯಾಗುತ್ತಿವೆ. ಈಗಾಗಲೇ ಮಹಾರಾಷ್ಟ್ರ ಸರಕಾರ ಕೂಡ ಕೋವಿಡ್ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಮಹಾರಾಷ್ಟ್ರದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿ ಬೆಳಕಿಗೆ ಬರುತ್ತಿವೆ. ಮತ್ತೆ ಮಹಾರಾಷ್ಟ್ರದಲ್ಲಿ ಸರಕಾರ ಲಾಕ್ ಡೌನ್ ಮಾಡುವ ಆತಂಕದ ಜೊತೆಗೆ ಕೊರೋನಾ ಎರಡನೇ ಅಲೆ ಆತಂಕದಿಂದ ಜನ ಭಯಗೊಂಡು ಮರಳಿ ಊರಿಗೆ ವಾಪಸ್ ಬರುತ್ತಿದ್ದಾರೆ.

ಕಳೆದ ವರ್ಷ ಕೂಡ ಕೋವಿಡ್ ಆರಂಭದಲ್ಲಿ ಮಹಾರಾಷ್ಟ್ರದ ಮುಂಬೈ, ಪುನಾ ಹಾಗೂ ‌ಮೊದಲಾದ ಭಾಗದಿಂದ ಕೊರೋನಾ ಆತಂಕದಿಂದ ಕಾರ್ಮಿಕರು ಯಾದಗಿರಿ ಜಿಲ್ಲೆಗೆ ಬಂದಿದ್ದರು. ಮಹಾರಾಷ್ಟ್ರದಿಂದ ಬಂದ ಕಾರ್ಮಿಕರಿಂದ ಯಾದಗಿರಿ ‌ಜಿಲ್ಲೆಗೆ ಕಳೆದ ವರ್ಷ ಕೊರೋನಾ ಕಂಟಕವಾಗಿ ಪರಿಣಮಿಸಿತ್ತು. ಈಗ ಮತ್ತೆ ಮಹಾರಾಷ್ಟ್ರದ ಮುಂಬೈ, ಪುನಾ ಹಾಗೂ ವಿವಿಧ ಭಾಗದಿಂದ ಟ್ರೈನ್ ಗಳ ಮೂಲಕ ಸಾವಿರಾರು ಕಾರ್ಮಿಕರು ಗಂಟು ಮೂಟೆ ಕಟ್ಟಿಕೊಂಡು ಕುಟುಂಬ ಸಮೇತ ತವರಿಗೆ ವಾಪಸ್ ಬರುತ್ತಿದ್ದಾರೆ.

ಯಾದಗಿರಿ ಜಿಲ್ಲೆಯಲ್ಲಿ ಈಗ ದಿನೇ ದಿನೇ ಕೋವಿಡ್ ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿ ಬೆಳಕಿಗೆ ಬರುತ್ತಿದ್ದು ಮಹಾರಾಷ್ಟ್ರದಿಂದ ವಲಸೆ ಬರುವವರಲ್ಲಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಈಗಾಗಲೇ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಜಿಲ್ಲೆಯಲ್ಲಿ ‌ಕೋವಿಡ್ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಮಹಾರಾಷ್ಟ್ರದಿಂದ ಜಿಲ್ಲೆಗೆ ಬರುವವರ ಮೇಲೆ ಹದ್ದಿನ ಕಣ್ಣಿಟ್ಟು ಕೋವಿಡ್ ಟೆಸ್ಟ್ ಮಾಡಿದ ನಂತರ ಜಿಲ್ಲೆಯೊಳಗೆ ಬಿಡಲಾಗುತ್ತಿದೆ. ಯಾದಗಿರಿ ರೈಲ್ವೆ ನಿಲ್ದಾಣದಲ್ಲಿ ಕೂಡ ಆರೋಗ್ಯ ‌ಇಲಾಖೆ ಸಿಬ್ಬಂದಿಗಳು ಕೋವಿಡ್ ಟೆಸ್ಟ್ ಮಾಡುತ್ತಿದ್ದಾರೆ. ದಿನ ನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ಕಾರ್ಮಿಕರು ಜಿಲ್ಲೆಗೆ ಬರುತ್ತಿದ್ದಾರೆ.

ಈ ಬಗ್ಗೆ ನ್ಯೂಸ್ 18 ಕನ್ನಡದೊಂದಿಗೆ ಮಾತಮಾಡಿದ ಜಿಲ್ಲಾ ಆರೋಗ್ಯ ‌ಮತ್ತು‌ ಕುಟುಂಬ ಕಲ್ಯಾಣಾಧಿಕಾರಿ ಡಾ.ಇಂದುಮತಿ ಪಾಟೀಲ ಅವರು, ಮಹಾರಾಷ್ಟ್ರದಿಂದ ಯಾದಗಿರಿ ಜಿಲ್ಲೆಗೆ ಬರುವ ಪ್ರಯಾಣಿಕರ ಮೇಲೆ ನಿಗಾವಹಿಸಲಾಗಿದೆ. ಪ್ರತಿಯೊಬ್ಬರನ್ನು ಟೆಸ್ಟ್ ಮಾಡಲಾಗುತ್ತಿದೆ. ಜಿಲ್ಲೆಯ ಜನರು ನಿಷ್ಕಾಳಜಿ ವಹಿಸದೆ ಮಾಸ್ಕ್ ಧರಿಸುವ ಜೊತೆ ಸಾಮಾಜಿಕ ಅಂತರ ಕಾಪಾಡಿಕೊಂಡು ಕೋವಿಡ್ ನಿಯಮ ಸರಿಯಾಗಿ ಪಾಲನೆ ಮಾಡಬೇಕು ಸಲಗೆ ನೀಡಿದ್ದಾರೆ.

ಇದನ್ನು ಓದಿ: ಮೂರು ದಿನ ಕಳೆದರೂ ಮುಗಿಯದ ಸರ್ಕಾರ- ಸಾರಿಗೆ ನೌಕರರ ಹಗ್ಗ ಜಗ್ಗಾಟ; ಹೈರಾಣಾದ ಸಾರ್ವಜನಿಕರು!

ಮುಂಬೈನಿಂದ ಜಿಲ್ಲೆಗೆ ಬಂದ ಕಾರ್ಮಿಕ ಮಲ್ಲಪ್ಪ ಮಾತನಾಡಿ, ಮುಂಬೈನಲ್ಲಿ ಕೊರೋನಾ ಕೇಸ್​ಗಳು​ ಹೆಚ್ಚಿಗೆ ಬರುತ್ತಿವೆ. ಅದಕ್ಕೆ ನಾವು ಹೆಂಡತಿ, ಮಕ್ಕಳ ಸಮೇತ ಊರಿಗೆ ಬಂದಿದ್ದಿವಿ. ಊರಿನಲ್ಲೇ ಏನಾದರೂ ‌ಕೂಲಿ ಮಾಡಿ ಜೀವನ ನಡೆಸುತ್ತೇವೆ ಎಂದರು.
ಮಹಾರಾಷ್ಟ್ರದಿಂದ ಯಾದಗಿರಿ ಜಿಲ್ಲೆಗೆ ಬರುವರ ಸಂಖ್ಯೆ ಈಗ ದಿನೇ ದಿನೇ ಹೆಚ್ಚಾಗುತ್ತಿದ್ದು ಈಗ ಊರಲ್ಲಿ ವಲಸಿಗರಿಗೆ ಉದ್ಯೋಗ ಸಿಗುವುದು ಕಷ್ಟವಾಗಿದೆ. ಮುಂಬೈನಲ್ಲಿ ಕೂಲಿ ಮಾಡಿ ಬದುಕು ಸಾಗಿಸುತ್ತಿದ್ದ ಕಾರ್ಮಿಕರು ಕೊರೋನಾ ಆತಂಕದಿಂದ ಕೆಲಸ ಬಿಟ್ಟು ಊರಿಗೆ ಮರಳುತ್ತಿದ್ದಾರೆ. ಆದರೆ, ಊರಿನಲ್ಲಿ ಇವರಿಗೆ ಕೆಲಸ ಸಿಗುವುದು ಕಷ್ಟ. ಸರಕಾರ ವಲಸೆ ಕಾರ್ಮಿಕರಿಗೆ ಉದ್ಯೋಗ ‌ಖಾತ್ರಿ ಯೋಜನೆಯಡಿ ಕೆಲಸ ನೀಡಿ ಅನುಕೂಲ ಮಾಡಬೇಕಿದೆ.
Published by: HR Ramesh
First published: April 10, 2021, 6:30 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories