HOME » NEWS » District » DACOITS FIRED ON PEOPLE IN CHIKMAGALUR AND ROBBED GOLDS MAK

ಹಾಡಹಗಲೇ ಕಾಫಿನಾಡಲ್ಲಿ ದರೋಡೆಕೋರರಿಂದ ಫೈರಿಂಗ್; ಚಿನ್ನದ ಅಂಗಡಿ ಕೊಳ್ಳೆಗೆ ವಿಫಲ ಯತ್ನ

ದರೋಡೆ ವೇಳೆ ಖದೀಮರು ಮೂರು ರೌಂಡ್ ಫೌರಿಂಗ್ ಮಾಡಿದ್ದಾರೆ. ಇದರಿಂದಾಗಿ ಚಿನ್ನದ ಅಂಗಡಿ ಮಾಲೀಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಇನ್ನು ವಿಷಯ ತಿಳಿಯುತ್ತಿದಂತೆ ನಗರ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಪರಿಸ್ಥಿತಿಯ ಗಂಭೀರತೆಯನ್ನರಿತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಕ್ಷಯ್ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ. 

news18-kannada
Updated:July 11, 2020, 8:13 PM IST
ಹಾಡಹಗಲೇ ಕಾಫಿನಾಡಲ್ಲಿ ದರೋಡೆಕೋರರಿಂದ ಫೈರಿಂಗ್; ಚಿನ್ನದ ಅಂಗಡಿ ಕೊಳ್ಳೆಗೆ ವಿಫಲ ಯತ್ನ
ದರೋಡೆಗೆ ಯತ್ನಿಸಿದ್ದ ಚಿನ್ನದ ಅಂಗಡಿ.
  • Share this:
ಚಿಕ್ಕಮಗಳೂರು (ಜುಲೈ 11): ಕಾಫಿನಾಡಲ್ಲಿ ಕೊರೋನಾ ಹೆಮ್ಮಾರಿ ಆರ್ಭಟ ಜೋರಾಗಿದ್ದು ಜನ ಆತಂಕದಿಂದಲೇ ದಿನದೂಡುವಂತಾಗಿದೆ. ಆದರೆ, ಜನ ಜೀವ ಭಯದಲ್ಲಿ ಬದುಕುತ್ತಿರುವ ಇಂತಹ ಸಮಯವನ್ನು ನೋಡಿಕೊಂಡೆ ಖದೀಮರು ಹಾಡಹಗಲೇ ಜ್ಯೂಯಲರ್ಸ್ ಶಾಪ್ ನಲ್ಲಿ ದರೋಡೆಗೆ ಮುಂದಾಗಿದ್ದಾರೆ. ಈ ವೇಳೆ ಮಾಲೀಕ ತಿರುಗಿಬಿಳುತ್ತಿದ್ದಂತೆ ಮಾಲೀಕನ ಮೇಲೆ ಗುಂಡು ಹಾರಿಸಿರುವ ದರೋಡೆಕೋರರು ಪರಾರಿಯಾಗಿದ್ದಾರೆ. ಹಾಡಹಗಲೇ ಫೈರಿಂಗ್ ಘಟನೆಗೆ ಇದೀಗ ಚಿಕ್ಕಮಗಳೂರಿನ ಜನ ಬೆಚ್ಚಿ ಬಿದ್ದಿದ್ದಾರೆ.

ಮೂವರು ದರೋಡೆಕೋರರು ಇಂದು ಹಾಡಹಗಲೇ ನಗರದಲ್ಲಿರುವ ಚಿನ್ನದ ಅಂಗಡಿಗೆ ಸ್ಕೇಚ್ ಹಾಕಿಕೊಂಡು ದರೋಡೆ ಮಾಡಲು ಮುಂದಾಗಿದ್ದರು. ನಗರದ ಎಂ.ಜಿ.ರಸ್ತೆಯಲ್ಲಿರುವ ಕೇಸರಿ ಜ್ಯುಯೆಲರ್ಸ್‌‌ಗೆ ಪಲ್ಸರ್ ಬೈಕ್‌ನಲ್ಲಿ ಬಂದ ಮೂವರು ಕಳ್ಳರು ಚಿನ್ನ ದೋಚಲು ಯತ್ನಿಸಿದ್ದಾರೆ. ಈ ವೇಳೆ ಮಾಲೀಕನ ಪ್ರತಿರೋಧಕ್ಕೆ ಜೇಬಿನಲ್ಲಿದ್ದ ಪಿಸ್ತೂಲ್ ತೋರಿಸಿ ಚಿನ್ನ ಕದಿಯೋಕೆ ಪ್ರಯತ್ನ ಮಾಡಿದ್ದಾರೆ. ಈ ವೇಳೆ ಮಾಲೀಕ ಜೋರಾಗಿ ಕಿರುಚಿಕೊಳ್ಳುತ್ತಿದ್ದಂತೆ ಆತನ ಮೇಲೆ ಫೈರಿಂಗ್ ಮಾಡಿ ಎಸ್ಕೇಪ್ ಆಗಿದ್ದಾರೆ.

ದರೋಡೆ ವೇಳೆ ಖದೀಮರು ಮೂರು ರೌಂಡ್ ಫೌರಿಂಗ್ ಮಾಡಿದ್ದಾರೆ. ಇದರಿಂದಾಗಿ ಚಿನ್ನದ ಅಂಗಡಿ ಮಾಲೀಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಇನ್ನು ವಿಷಯ ತಿಳಿಯುತ್ತಿದಂತೆ ನಗರ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಪರಿಸ್ಥಿತಿಯ ಗಂಭೀರತೆಯನ್ನರಿತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಕ್ಷಯ್ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ.

ಈ ಕುರಿತು ಮಾತನಾಡಿರುವ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಕ್ಷಯ್‌, "೦ದರೋಡೆ ಘಟನೆಯಲ್ಲಿ ಯಾವುದೇ ಚಿನ್ನಾಭರಣ ಕಳವಾಗಿಲ್ಲ. ಅದೃಷ್ಟವಶಾತ್‌ ಅಂಗಡಿ ಮಾಲೀಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಸ್ತೆಯಲ್ಲಿ ಸಿಸಿಟಿವಿ ಪೂಟೆಜ್ ಕಲೆಕ್ಟ್ ಮಾಡಿ ಆರೋಪಿಗಳನ್ನ ಶೀಘ್ರದಲ್ಲೇ ಪತ್ತೆಹಚ್ಚಲಾಗುವುದು" ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ರಾಜಸ್ಥಾನದಲ್ಲೂ ಆಪರೇಷನ್ ಕಮಲ, ಶಾಸಕರಿಗೆ 15 ಕೋಟಿ ಆಮಿಷ; ಅಶೋಕ್‌ ಗೆಹ್ಲೋಟ್‌ ಆರೋಪಒಟ್ಟಾರೆ, ಹಾಡಹಗಲೇ ನಗರದ ಮುಖ್ಯ ರಸ್ತೆಯಲ್ಲಿ ನಡೆದ ಗುಂಡಿನ ಶಬ್ಧಕ್ಕೆ ಕಾಫಿ ನಾಡಿನ ಜನ ಕಂಗಾಲಾಗಿರುವುದಂತೂ ದಿಟ. ಹೀಗಾಗಿ ಈ ಪ್ರಕರಣವನ್ನು ಶೀಘ್ರದಲ್ಲಿ ಬೇಧಿಸಬೇಕು ಎಂಬುದು ಎಲ್ಲರ ಆಗ್ರಹವಾಗಿದೆ.
Published by: MAshok Kumar
First published: July 11, 2020, 8:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading