ಚನ್ನಪಟ್ಟಣಕ್ಕೆ ಡಿ.ಕೆ.ಸುರೇಶ್ ಎಂಟ್ರಿ; ಕಾರ್ಯಕರ್ತರು - ಮುಖಂಡರು ಅಲರ್ಟ್, ಬೊಂಬೆನಗರಿಯಲ್ಲಿ ಕಾಂಗ್ರೆಸ್ ಸರ್ಜರಿ 

ಪಕ್ಷದ ಕಾರ್ಯಕರ್ತರು, ಮುಖಂಡರ ಮಧ್ಯೆ ಯಾವುದೇ ಗೊಂದಲಗಳು ಮೂಡಬಾರದು. ಎಲ್ಲರಿಗೂ ಸಹ ಸೂಕ್ತ ಸಮಯದಲ್ಲಿ ಸ್ಥಾನಮಾನ ಸಿಗಲಿದೆ. ಆದರೆ ಕೆಲವರು ಸ್ಥಾನಮಾನಕ್ಕಾಗಿ ಕಿತ್ತಾಡಿಕೊಂಡು ಪಕ್ಷಕ್ಕೆ ಮುಜುಗರ ತರಬೇಡಿ ಎಂದು ಸಂಸದ ಡಿ.ಕೆ.ಸುರೇಶ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ಬ್ಲಾಕ್ ಅಧ್ಯಕ್ಷರ ನೇಮಕಾತಿ ವಿಚಾರದಲ್ಲಿ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದರು. ನಂತರ ಡಿ.ಕೆ.ಸುರೇಶ್ ಮುಂದಾಳತ್ವದಲ್ಲಿ ಮಾತುಕತೆ ನಡೆದಿದ್ದು ಈಗ ಎಲ್ಲವೂ ಸರಿಯಾಗಿದೆ ಎನ್ನಲಾಗಿದೆ.

ಡಿ ಕೆ ಸುರೇಶ್

ಡಿ ಕೆ ಸುರೇಶ್

  • Share this:
ರಾಮನಗರ(ಚನ್ನಪಟ್ಟಣ): ಸಂಸದ ಡಿ.ಕೆ‌.ಸುರೇಶ್ ರಾಜಕೀಯವಾಗಿ ಸಾಕಷ್ಟು ಅನುಭವ ಹೊಂದಿದ್ದಾರೆ. ಅಣ್ಣ ಡಿ.ಕೆ.ಶಿವಕುಮಾರ್ ರಾಜ್ಯ ಕಾಂಗ್ರೆಸ್ ನ  ಜವಾಬ್ದಾರಿ ತೆಗೆದುಕೊಂಡು ಸಲೀಸಾಗಿ ರಾಜ್ಯ ಪ್ರವಾಸ ಮಾಡ್ತಿದ್ದಾರೆ ಅದಕ್ಕೆ ಕಾರಣ ಡಿ.ಕೆ‌.ಸುರೇಶ್. ಯಾಕೆಂದರೆ  ಡಿ.ಕೆ.ಸುರೇಶ್ ರಾಮನಗರ ಜಿಲ್ಲೆಯನ್ನ ನೋಡಿಕೊಳ್ತಾರೆ ಎನ್ನುವ ಧೈರ್ಯದಿಂದ.‌ ಇನ್ನು ಈಗ ರಾಮನಗರ - ಚನ್ನಪಟ್ಟಣ ನಗರಸಭೆ ಚುನಾವಣೆ ಘೋಷಣೆಯಾಗಿದ್ದು, ಚನ್ನಪಟ್ಟಣ ಕಾಂಗ್ರೆಸ್ ಗೆ ಡಿ.ಕೆ.ಸುರೇಶ್ ಭರ್ಜರಿ ಸರ್ಜರಿ ಮಾಡುವ ಮೂಲಕ ಪಕ್ಷದ ಮುಖಂಡರಿಗೆ ಖಡಕ್ ಸೂಚನೆ ನೀಡಿದ್ದಾರೆ.

ಪ್ರಮೋದ್ - ಸುನೀಲ್ ಗೆ ಜವಾಬ್ದಾರಿ, ಪಕ್ಷ ಕಟ್ಟಲು ಸೂಚನೆ: ಈವರೆಗೆ ಕಳೆದ 10 ವರ್ಷಕ್ಕೂ ಹೆಚ್ಚು ಕಾಲ ಚನ್ನಪಟ್ಟಣ ನಗರ ಬ್ಲಾಕ್ ಅಧ್ಯಕ್ಷರಾಗಿ ಎ.ಸಿ‌.ವೀರೇಗೌಡ ಇದ್ದರೆ, ಗ್ರಾಮಾಂತರ ಬ್ಲಾಕ್ ಅಧ್ಯಕ್ಷರಾಗಿ ಶಿವಮಾದು ಇದ್ದರು. ಆದರೆ ಈಗ ನೂತನ ನಗರ ಬ್ಲಾಕ್ ಅಧ್ಯಕ್ಷರಾಗಿ ಸುನೀಲ್ ಆಯ್ಕೆಯಾಗಿದ್ದರೆ, ಗ್ರಾಮಾಂತರ ಬ್ಲಾಕ್ ಅಧ್ಯಕ್ಷರಾಗಿ ಪ್ರಮೋದ್ ಆಯ್ಕೆಯಾಗುವ ಮೂಲಕ ತಾಲೂಕು ಕಾಂಗ್ರೆಸ್ ನಲ್ಲಿ ಹೊಸಬೆಳಕು ಮೂಡಿದೆ. ಸುನೀಲ್ - ಪ್ರಮೋದ್ ಇಬ್ಬರೂ ಸಹ ಅರ್ಹರಿದ್ದು, ಮುಂದಿನ ದಿನಗಳಲ್ಲಿ ಚನ್ನಪಟ್ಟಣ ಕಾಂಗ್ರೆಸ್ ಗೆ ಅನುಕೂಲವಾಗಲಿದೆ ಎಂಬ ಚರ್ಚೆಗಳು ಈಗಾಗಲೇ ಪ್ರಾರಂಭವಾಗಿದೆ. ಇವರಿಬ್ಬರನ್ನು ಸ್ವತಃ ಡಿ.ಕೆ‌.ಶಿವಕುಮಾರ್ ಹಾಗೂ ಡಿ.ಕೆ‌.ಸುರೇಶ್, ಪಕ್ಷದ ಕಾರ್ಯಕರ್ತರು, ಮುಖಂಡರ ಅಭಿಪ್ರಾಯ ಪಡೆದು ಆಯ್ಕೆ ಮಾಡಿದ್ದು ಇಬ್ಬರೂ ಸಹ ಪಕ್ಷ ಸಂಘಟನೆ ಮಾಡಬೇಕೆಂದು ಸೂಚಿಸಿದ್ದಾರೆ.

ಪಕ್ಷದ ಕಾರ್ಯಕರ್ತರು, ಮುಖಂಡರ ಮಧ್ಯೆ ಯಾವುದೇ ಗೊಂದಲಗಳು ಮೂಡಬಾರದು. ಎಲ್ಲರಿಗೂ ಸಹ ಸೂಕ್ತ ಸಮಯದಲ್ಲಿ ಸ್ಥಾನಮಾನ ಸಿಗಲಿದೆ. ಆದರೆ ಕೆಲವರು ಸ್ಥಾನಮಾನಕ್ಕಾಗಿ ಕಿತ್ತಾಡಿಕೊಂಡು ಪಕ್ಷಕ್ಕೆ ಮುಜುಗರ ತರಬೇಡಿ ಎಂದು ಸಂಸದ ಡಿ.ಕೆ.ಸುರೇಶ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ಬ್ಲಾಕ್ ಅಧ್ಯಕ್ಷರ ನೇಮಕಾತಿ ವಿಚಾರದಲ್ಲಿ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದರು. ನಂತರ ಡಿ.ಕೆ.ಸುರೇಶ್ ಮುಂದಾಳತ್ವದಲ್ಲಿ ಮಾತುಕತೆ ನಡೆದಿದ್ದು ಈಗ ಎಲ್ಲವೂ ಸರಿಯಾಗಿದೆ ಎನ್ನಲಾಗಿದೆ. ಜೊತೆಗೆ ಎಲ್ಲರೂ ಒಗ್ಗಟ್ಟಾಗಿ ದುಡಿಯಲು ಮುಂದಾಗಿದ್ದಾರೆಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ. ಹಾಗೆಯೇ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸುನೀಲ್ - ಪ್ರಮೋದ್ ಸಹ ಈವರೆಗೂ ಕಾಂಗ್ರೆಸ್ ಪಕ್ಷವನ್ನ ಉತ್ತಮವಾಗಿ ಸಂಘಟನೆ ಮಾಡಿಕೊಂಡು ಬಂದಿದ್ದಾರೆ. ಹಾಗಾಗಿ ಇವರಿಗೆ ಈ ಸ್ಥಾನವನ್ನ ನೀಡಲಾಗಿದೆ.

ಡಿ.ಕೆ.ಸುರೇಶ್ ಎಂಟ್ರಿಯಿಂದ ಚನ್ನಪಟ್ಟಣ ಕಾಂಗ್ರೆಸ್ ಚುರುಕು: ನಾವಿಕನಿಲ್ಲದ ದೋಣಿಯಂತಾಗಿದ್ದ ಚನ್ನಪಟ್ಟಣ ಕಾಂಗ್ರೆಸ್ ಗೆ ಈಗ ಸಂಸದ ಡಿ.ಕೆ‌.ಸುರೇಶ್ ಆಸರೆಯಾಗಿದ್ದಾರೆ. ಜೊತೆಗೆ ಮುಂಬರುವ ತಾ.ಪಂ - ಜಿ.ಪಂ ಚುನಾವಣೆಯಲ್ಲಿಯೂ ಸಹ ಡಿ.ಕೆ.ಸುರೇಶ್ ಚನ್ನಪಟ್ಟಣ ಕ್ಷೇತ್ರದ ಬಗ್ಗೆ ಹೆಚ್ಚಿನ ಗಮನಹರಿಸುತ್ತಾರೆಂಬ ಮಾಹಿತಿ ಇದೇ. ಹಾಗೆಯೇ ಈಗಿನ ನಗರಸಭೆ ಚುನಾವಣೆಯಲ್ಲಿ ಚನ್ನಪಟ್ಟಣದ 31 ವಾರ್ಡ್ ನಲ್ಲಿಯೂ ಸಹ ಪಕ್ಷದ ಅಭ್ಯರ್ಥಿಗಳನ್ನ ಕಣಕ್ಕಿಳಿಸಬೇಕೆಂದು ನೂತನ ಅಧ್ಯಕ್ಷರಿಗೆ ಸೂಚನೆ ನೀಡಿದ್ದಾರೆ. ಜೊತೆಗೆ ನಗರಸಭೆಯ ಚುನಾವಣೆಯ ಉಸ್ತುವಾರಿಯನ್ನ MLC ರವಿ ವಹಿಸಿದ್ದು, ಕಾಂಗ್ರೆಸ್ ಕಾರ್ಯಕರ್ತರು ಹೆದರುವ ಅವಶ್ಯಕತೆ ಇಲ್ಲ ಎಂಬ ಸಂದೇಶ ನೀಡಿದ್ದಾರೆ.
ಒಟ್ಟಾರೆ ಸಂಸದ ಡಿ.ಕೆ.ಸುರೇಶ್ ರಿಂದ ಚನ್ನಪಟ್ಟಣ ಕಾಂಗ್ರೆಸ್ ಗೆ ಬಲತುಂಬುವ ಕೆಲಸ ಪ್ರಾರಂಭವಾಗಿದೆ.
Published by:Soumya KN
First published: