• Home
  • »
  • News
  • »
  • district
  • »
  • ಕಪ್ಪತ್ತಗುಡ್ಡ ಪ್ರದೇಶದಲ್ಲಿ ಸೈಕ್ಲಿಸ್ಟ್ ಕಲವರ; ಕಲ್ಲು, ತಗ್ಗು, ಹದಗೆಟ್ಟ ರಸ್ತೆಯಲ್ಲಿ ಶರವೇಗದಲ್ಲಿ ಸರ್ಕಸ್

ಕಪ್ಪತ್ತಗುಡ್ಡ ಪ್ರದೇಶದಲ್ಲಿ ಸೈಕ್ಲಿಸ್ಟ್ ಕಲವರ; ಕಲ್ಲು, ತಗ್ಗು, ಹದಗೆಟ್ಟ ರಸ್ತೆಯಲ್ಲಿ ಶರವೇಗದಲ್ಲಿ ಸರ್ಕಸ್

ಕಪ್ಪತ್ತಗುಡ್ಡದಲ್ಲಿ ಸೈಕ್ಲಿಸ್ಟ್ ಸರ್ಕಸ್

ಕಪ್ಪತ್ತಗುಡ್ಡದಲ್ಲಿ ಸೈಕ್ಲಿಸ್ಟ್ ಸರ್ಕಸ್

ಗುಡ್ಡಗಾಡು ಪ್ರದೇಶದಲ್ಲಿ ಸೈಕ್ಲಿಂಗ್ ಮಾಡೋದು ಸುಲಭವಲ್ಲ. ಸಾಕಷ್ಟು ಸೈಕ್ಲಿಸ್ಟ್ ಗಳು ಗುರಿ ಮುಟ್ಟುವ ಭರದಲ್ಲಿ ಬಿದ್ದು ಗಾಯಗೊಂಡಿದ್ದಾರೆ. ಪಾಲಕರು ತಮ್ಮ ಮಕ್ಕಳ ಸಾಹಸ ನೋಡಲು ಬಂದಿದ್ರು. ಏನೇ ಇರಲಿ ಮುಂದಿನ ತಿಂಗಳು ನಡೆಯುವ ರಾಷ್ಟ್ರೀಯ ಚಾಂಪಿಯನ್ ಶಿಪ್ ನಲ್ಲಿ ಕನ್ನಡ ಸೈಕ್ಲಿಸ್ಟ್ ಕಲಿಗಳು ಚಿನ್ನದ ಹುಡುಗರಾಗಿ ಹೊರ ಹೊಮ್ಮಲಿ ಅನ್ನೋದು ಕನ್ನಡಿಗರ ಆಸೆ.

ಮುಂದೆ ಓದಿ ...
  • Share this:

ಗದಗ: ಕಪ್ಪಗುಡ್ಡಗಾಡು ಪ್ರದೇಶದಲ್ಲಿ ಸೈಕ್ಲಿಸ್ಟ್ ಕಲವರ ಬಲು ಜೋರಾಗಿತ್ತು. ಕಲ್ಲು, ತಗ್ಗು, ಹದಗೆಟ್ಟ ರಸ್ತೆಯಲ್ಲಿ ಶರವೇಗದಲ್ಲಿ ಸೈಕ್ಲಿಸ್ಟ್​ಗಳ ಸಾಹಸ ಮೈ ಜುಮ್ ಎನ್ನುವಂತಿತ್ತು. ಅಂದ ಹಾಗೆ ಈ ಸಾಹಸ ಕ್ರೀಡೆ ನಡೆದಿದ್ದು ಗದಗ ತಾಲೂಕಿನ ಬಿಂಕದಟ್ಟಿಯ ಸಾಲುಮರದ ತಿಮ್ಮಕ್ಕ ಗಾರ್ಡನ್ ಹಿಂಭಾಗದ ಕಪ್ಪತ್ತಗುಡ್ಡ ಸೆರಗಿನಲ್ಲಿ. ಕಪ್ಪತ್ತಗುಡ್ಡ ಅಂದ್ರೆ ಕೇಳ್ತೀರಾ ನಡೆದುಕೊಂಡು ಹತ್ತೋದೆ ಬಲು ಕಷ್ಟ ಅಂಥದ್ರಲ್ಲಿ ಸೈಕಲ್ ತುಳಿಯೋದು ಅಬ್ಬಾ. ಆದ್ರೆ ಈ ಹುಡುಗ, ಹುಡುಗಿಯರ ಸಾಹಸ ನೋಡಿದ್ರೆ ಎಂಥವರ ಮೈ ಜುಮ್ ಎನ್ನುತ್ತೆ. ಅಂದ್ಹಾಗೆ ಫೆಬ್ರುವರಿ 19, 20 ಹಾಗೂ 21 ರಂದು ಮೂರು ದಿನಗಳ ಕಾಲ ಗದಗ ಜಿಲ್ಲೆಯಲ್ಲಿ 17ನೇ ಮೌಂಟೆನ್ ಬೈಕ್ ರಾಷ್ಟ್ರೀಯ ಚಾಂಪಿಯನ್ ಶಿಪ್ ನಡೆಯಲಿದೆ. ಈ ಚಾಂಪಿಯನ್ ಶಿಪ್ ನಲ್ಲಿ ಪಂಜಾಬ್, ದೆಹಲಿ, ಮಹಾರಾಷ್ಟ್ರ, ರಾಜಸ್ಥಾನ್, ಬಿಹಾರ್ ಸೇರಿ ದೇಶದ 20ಕ್ಕೂ ಹೆಚ್ಚು ರಾಜ್ಯಗಳ ಸೈಕ್ಲಿಸ್ಟ್ ಗಳು ಭಾಗಿಯಾಗಲಿದ್ದಾರೆ. ಹೀಗಾಗಿ ಈ ರಾಷ್ಟ್ರೀಯ ಚಾಂಪಿಯನ್ ಶಿಪ್ ಗೆ ಕರ್ನಾಟಕ ಸೈಕ್ಲಿಸ್ಟ್ ಕಲಿಗಳ ಆಯ್ಕೆ ಪ್ರಕ್ರಿಯೆ ಇಂದು ಬಿಂಕದಕಟ್ಟಿ ಗುಡ್ಡದಲ್ಲಿ ನಡೆಯಿತು.


ಬೆಂಗಳೂರು, ಮೈಸೂರು, ಧಾರವಾಡ, ವಿಜಯಪುರ, ಬಾಗಲಕೋಟೆ ಸೇರಿ ರಾಜ್ಯದ 110 ಸೈಕ್ಲಿಸ್ಟ್ ಗಳು ಭಾಗಿಯಾಗಿದ್ದರು. 14 ಸೈಕ್ಲಿಸ್ಟ್ ಗಳ ಆಯ್ಕೆಗೆ ಸಾಕಷ್ಟು ಕಸರತ್ತು ನಡೆಯಿತು. ಗುಡ್ಡಗಾಡು ರಸ್ತೆಯಲ್ಲಿ ಜೀವ ಪಣಕ್ಕೀಟು ಸೈಕ್ಲಿಸ್ಟ್ ಗಳು ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಲೇಬೇಕು ಅಂತ ಸೈಕಲ್ ತುಳಿದ್ದಿದ್ದೇ ತುಳಿದಿದ್ದು. ಸೈಕ್ಲಿಸ್ಟ್ ಸವಾರಿ ನೋಡೋಲು ರೋಮಾಂಚನವಾಗಿತ್ತು.


ಗುಡ್ಡಗಾಡು ಸೈಕ್ಲಿಸ್ಟ್ ಸಾಹಸದಲ್ಲಿ ಮೈಸೂರು ಯುವಕರು ಮೇಲುಗೈ ಸಾಧಿಸಿದರು. ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಸೈಕ್ಲಿಸ್ಟ್ ಗಳು ಭರ್ಜರಿ ತಾಲೀಮು ಮಾಡಿದ್ರು. ಮೈಸೂರು, ಬೆಂಗಳೂರು, ವಿಜಯಪುರ, ಬಾಗಲಕೋಟೆಯಿಂದ ಹದಿನೈದು ದಿನಗಳು ಮುಂಚೆಯೇ ಗದಗ ನಗರಕ್ಕೆ ಆಗಮಿಸಿ ಠಿಕಾಣಿ ಹೂಡಿದ್ದರು.  ನಿತ್ಯವೂ ಗುಡ್ಡಗಾಡು ಪ್ರದೇಶದಲ್ಲಿ ಸಖತ್ ತಾಲೀಮು ಮಾಡಿದ್ರು. ಹೀಗಾಗಿ ಮಂಗಳವಾರ ನಡೆದ ಆಯ್ಕೆ ಪಂದ್ಯದಲ್ಲಿ ಇವ್ರದ್ದೇ ಮೇಲುಗೈಯಾಗಿತ್ತು. ಏರಿಳಿತ, ಕಲ್ಲುಗಳಿಂದ ಕೂಡಿದ್ದ ಗುಡ್ಡಗಾಡು ಪ್ರದೇಶದಲ್ಲಿ 14, 16, 18 ವರ್ಷದೊಳಗಿನ ಯುವಕ, ಯುವತಿಯರು ಭಾಗಿಯಾಗಿದ್ದರು. ಯುವತಿಯರು ಕೂಡ ನಾವೇನೂ ಕಮ್ಮಿ ಇಲ್ಲ ಅಂತ ಭರ್ಜರಿ ಸೈಕಲ್ ತುಳಿದು ಮುಂದಿನ ತಿಂಗಳು ನಡೆಯುವ ರಾಷ್ಟ್ರ ಮಟ್ಟದ ಚಾಂಪಿಯನ್ ಶಿಪ್ ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿ ರಾಜ್ಯದಲ್ಲಿ ನಡೆಯುವ ಗುಡ್ಡಗಾಡು ಸೈಕ್ಲಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಾಗಿಯಾಗಲು ಕನ್ನಡನಾಡಿನ ಸೈಕ್ಲಿಸ್ಟ್ ಗಳು ತುದಿಗಾಲಲ್ಲಿ ನಿಂತಿದ್ದಾರೆ. ನಮ್ಮದೇ ನಾಡಿಲ್ಲಿ ನಡಿಯುವ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಹುಡುಗ, ಹುಡುಗಿಯರಾಗಿ ಹೊರ ಹೊಮ್ಮಲು ಸಜ್ಜಾಗಿದ್ದೇವೆ ಅಂತಿದ್ದಾರೆ.


ಇದನ್ನು ಓದಿ; ಗುರುವಾರ ಖಾತೆ ಹಂಚಿಕೆ ಪಟ್ಟಿ ಪ್ರಕಟ; ಅತೃಪ್ತ ಶಾಸಕರ ಅಸಮಾಧಾನ ಶಮನಕ್ಕೆ ಸಿಎಂ ಕಸರತ್ತು


ಉತ್ತರ ಕರ್ನಾಟಕದ ಸೈಕ್ಲಿಸ್ಟ್ ಗಳು ವೆಲೋಡ್ರೋಮ್ ಹಾಗೂ ರಸ್ತೆ ಸೈಕ್ಲಿಂಗ್ ನಲ್ಲಿ ಎತ್ತಿದ ಕೈ. ಆದ್ರೆ, ಈಗ ಗುಡ್ಡಗಾಡು ಪ್ರದೇಶಲ್ಲೂ ಮಿಂಚಲು ಸಜ್ಜಾಗಿದ್ದಾರೆ. ಗುಡ್ಡಗಾಡು ಪ್ರದೇಶದಲ್ಲಿ ಸೈಕ್ಲಿಂಗ್ ಮಾಡೋದು ಸುಲಭವಲ್ಲ. ಸಾಕಷ್ಟು ಸೈಕ್ಲಿಸ್ಟ್ ಗಳು ಗುರಿ ಮುಟ್ಟುವ ಭರದಲ್ಲಿ ಬಿದ್ದು ಗಾಯಗೊಂಡಿದ್ದಾರೆ. ಪಾಲಕರು ತಮ್ಮ ಮಕ್ಕಳ ಸಾಹಸ ನೋಡಲು ಬಂದಿದ್ರು. ಏನೇ ಇರಲಿ ಮುಂದಿನ ತಿಂಗಳು ನಡೆಯುವ ರಾಷ್ಟ್ರೀಯ ಚಾಂಪಿಯನ್ ಶಿಪ್ ನಲ್ಲಿ ಕನ್ನಡ ಸೈಕ್ಲಿಸ್ಟ್ ಕಲಿಗಳು ಚಿನ್ನದ ಹುಡುಗರಾಗಿ ಹೊರ ಹೊಮ್ಮಲಿ ಅನ್ನೋದು ಕನ್ನಡಿಗರ ಆಸೆ.


ವರದಿ: ಸಂತೋಷ ಕೊಣ್ಣೂರ

Published by:HR Ramesh
First published: