HOME » NEWS » District » CYBER CRIME INCIDENTS INCREASED IN HUBLI DHARWAD CITIES IN THE NAME COVID 19 HK

ಕೊರೋನಾ ಬಂಡವಾಳ ಮಾಡಿಕೊಂಡು ವಂಚನೆ; ಹುಬ್ಬಳ್ಳಿ- ಧಾರವಾಡದಲ್ಲಿ ಸೈಬರ್ ಕ್ರೈಂ ಸಂಖ್ಯೆ ಹೆಚ್ಚಳ

ಒಟ್ಟು 12 ಪ್ರಕರಣಗಳಿಗೆ ಸಂಬಂಧಿಸಿದಂತೆ ಕೋರ್ಟ್‌ಗೆ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗಿದೆ. ಉಳಿದ ಪ್ರಕರಣಗಳು ತನಿಖಾ ಹಂತದಲ್ಲಿವೆ. ಆನ್ ಲೈನ್ ಮಾರುಕಟ್ಟೆ ಹೆಸರಲ್ಲಿ ವಂಚಕರು ಸಾರ್ವಜನಿಕರಿಗೆ ಕರೆ‌ ಮಾಡುತ್ತಿದ್ದಾರೆ

news18-kannada
Updated:September 25, 2020, 7:14 AM IST
ಕೊರೋನಾ ಬಂಡವಾಳ ಮಾಡಿಕೊಂಡು ವಂಚನೆ; ಹುಬ್ಬಳ್ಳಿ- ಧಾರವಾಡದಲ್ಲಿ ಸೈಬರ್ ಕ್ರೈಂ ಸಂಖ್ಯೆ ಹೆಚ್ಚಳ
ಸಾಂದದರ್ಭಿಕ ಚಿತ್ರ
  • Share this:
ಹುಬ್ಬಳ್ಳಿ(ಸೆಪ್ಟೆಂಬರ್ 25): ಹುಬ್ಬಳ್ಳಿ- ಧಾರವಾಡ ಅವಳಿ ನಗರದಲ್ಲಿ ವಂಚಕರು ಕೊರೋನಾ ಸನ್ನಿವೇಶವನ್ನು ಬಂಡವಾಳ ಮಾಡಿಕೊಂಡು ಜನರಿಗೆ ಮೋಸ ಮಾಡುತ್ತಿದ್ದಾರೆ. ಅವಳಿ ನಗರದಲ್ಲಿ ಸೈಬರ್ ಕ್ರೈಮ್‌ಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕಳೆದೊಂದು ತಿಂಗಳಲ್ಲಿ ಸೈಬರ್ ಕ್ರೈಮ್‌ಗಳ ಸಂಖ್ಯೆ ಶತಕದ ಗಡಿ ದಾಟಿದೆ. ಕೊರೋನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಲಾಕ್‌ಡೌನ್ ಘೋಷಣೆ ಮಾಡಿದ ಸಂದರ್ಭದಲ್ಲಿ ಜನರು ಮನೆಯಲ್ಲೇ ಇರಬೇಕಾದ ಅನಿವಾರ್ಯತೆ ಇತ್ತು. ಇಂತಹ ಸಂದರ್ಭದಲ್ಲಿ ಜನರು ಹೊರ ಬರದೇ ಮನೆಯಿಂದಲೇ ಆನ್ ಲೈನ್ ವ್ಯವಹಾರ ಮಾಡುತ್ತಿದ್ದರು‌. ಇಂತಹ ಸಂದರ್ಭವನ್ನೇ ಬಂಡವಾಳ ಮಾಡಿಕೊಂಡ ವಂಚಕರು ಮೋಸ ಮಾಡಲು ಆರಂಭಿಸಿದ್ದಾರೆ. ಹೀಗಾಗಿ ಅವಳಿ ನಗರದಲ್ಲಿ ಆನ್‌ಲೈನ್ ವಂಚನೆ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತಿವೆ. ಸಿಲಿಕಾನ್ ಸಿಟಿ ಬೆಂಗಳೂರಿನ ನಂತರ ಸೈಬರ್ ಕ್ರೈಂ ಪ್ರಕರಣಗಳು ಹುಬ್ಬಳ್ಳಿ- ಧಾರವಾಡದಲ್ಲಿ. ದಾಖಲಾಗಿವೆ. ಸೆಪ್ಟೆಂಬರ್ ತಿಂಗಳ ಮೊದಲ ವಾರದಲ್ಲಿಯೇ ಸೈಬರ್ ಕ್ರೈಂಗಳ ಸಂಖ್ಯೆ ಶತಕ ಬಾರಿಸಿದೆ.

ಸಾರ್ವಜನಿಕರು ನೀಡುತ್ತಿರುವ ಸೈಬರ್ ಕ್ರೈ ದೂರುಗಳನ್ನು ಭೇದಿಸಲು ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ 2018ರಲ್ಲಿ ಸೈಬರ್ ಕ್ರೈಮ್ ಪೊಲೀಸ್ ಠಾಣೆ ಆರಂಭಿಸಲಾಗಿತ್ತು. ಆ ವರ್ಷ 17 ಪ್ರಕರಣಗಳು ಮಾತ್ರ ದಾಖಲಾಗಿದ್ದವು. ಅಲ್ಲದೇ 2019ರಲ್ಲಿ ಪ್ರಕರಣಗಳ ಸಂಖ್ಯೆ 102ಕ್ಕೆ ಏರಿಕೆಯಾಗಿತ್ತು. 2020ರ ಸೆಪ್ಟೆಂಬರ್ ಮೊದಲ ವಾರದಲ್ಲಿಯೇ ಅದು ನೂರರ ಗಡಿ ದಾಟಿದೆ.

ಈ ವರೆಗೆ ಒಟ್ಟು 12 ಪ್ರಕರಣಗಳಿಗೆ ಸಂಬಂಧಿಸಿದಂತೆ ಕೋರ್ಟ್‌ಗೆ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗಿದೆ. ಉಳಿದ ಪ್ರಕರಣಗಳು ತನಿಖಾ ಹಂತದಲ್ಲಿವೆ. ಆನ್ ಲೈನ್ ಮಾರುಕಟ್ಟೆ ಹೆಸರಲ್ಲಿ ವಂಚಕರು ಸಾರ್ವಜನಿಕರಿಗೆ ಕರೆ‌ ಮಾಡುತ್ತಿದ್ದಾರೆ. ಕ್ಯೂ ಆರ್‌ ಕೋಡ್ ಕಳುಹಿಸಿ ಬ್ಯಾಂಕ್ ಖಾತೆಗೆ ಕನ್ನ ಹಾಕುತ್ತಿದ್ದಾರೆ. ಅಲ್ಲದೇ ಬ್ಯಾಂಕ್ ಪ್ರತಿನಿಧಿಗಳ ಸೋಗಿನಲ್ಲಿ ಕರೆ ಮಾಡುತ್ತಿದ್ದಾರೆ.

ಪತ್ತೆಯಾಗದಿರಲು ಕಾರಣ

- ಜಾಲತಾಣ ಕಂಪನಿಗಳು, ಗೂಗಲ್‌ ಸಹಿತ ಸರ್ಚ್ ಎಂಜಿನ್‌ ಕಂಪನಿಗಳ ಅಸಹಕಾರ

- ಖಾಸಗಿತನ ನೆಪದಲ್ಲಿ ವಿದೇಶದಲ್ಲಿರುವ ಕಂಪನಿಗಳಿಂದ ಮಾಹಿತಿ ಹಂಚಿಕೆಗೆ ನಕಾರ

- ದೇಶದಲ್ಲಿಪ್ರಮುಖ ಜಾಲತಾಣ, ಬ್ರೌಸರ್‌ ಕಂಪನಿಗಳ ಪ್ರಾದೇಶಿಕ ಕಚೇರಿ ಇಲ್ಲದಿರುವುದು- ವಿದೇಶದಿಂದ ಮಾಹಿತಿ ಪಡೆದುಕೊಳ್ಳಲು ಹಾಲಿ ವ್ಯವಸ್ಥೆಯಲ್ಲಿ ಕಾನೂನಿನ ಕೊರತೆ

ಇದನ್ನೂ ಓದಿ : Digital Library: ಡಿಜಿಟಲ್ ಗ್ರಂಥಾಲಯ ಯೋಜನೆಗೆ 5 ಲಕ್ಷ ಮಂದಿ ನೊಂದಣಿ : ಸಚಿವ ಸುರೇಶ್ ಕುಮಾರ್

ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ ನಿಷ್ಕ್ರಿಯವಾಗಿದೆ, ಬದಲಾವಣೆ ಮಾಡಬೇಕು ಎಂದು ಗ್ರಾಹಕರಿಂದಲೇ ಒಟಿಪಿ ಪಡೆದು ತಮ್ಮ ಖಾತೆಗೆ ಹಣ ವರ್ಗಾಯಿಸಿ ಕೊಳ್ಳುತ್ತಿದ್ದಾರೆ. ಹತ್ತು ಹಲವಾರು ರೀತಿಯಲ್ಲಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದರೂ ಕೂಡ ಪ್ರಕರಣಗಳ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ. ಇನ್ನೂ ನೌಕರಿ ಕೊಡಿಸುವುದಾಗಿ ನಂಬಿಸಿ ಬಹುತೇಕ ನಕಲಿ ವೆಬ್‌ಸೈಟ್‌ಗಳ ಮೂಲಕ ಸಾರ್ವಜನಿಕರನ್ನು ವಂಚಿಸುತ್ತಿದ್ದಾರೆ.
Youtube Video

ಪೊಲೀಸ್ ಇಲಾಖೆ ಮತ್ತಷ್ಟು ಚುರುಕಿನಿಂದ ಕಾರ್ಯಾಚರಣೆ ಮಾಡಬೇಕಾಗಿದೆ. ಸೈಬರ್ ಕ್ರೈಮ್ ನಿಯಂತ್ರಣ ಮಾಡುವುದರ ಜೊತೆಗೆ ದಾಖಲಾಗಿರುವ ಪ್ರಕರಣಗಳನ್ನು ಶೀಘ್ರ ಭೇದಿಸಬೇಕಿದೆ
Published by: G Hareeshkumar
First published: September 25, 2020, 7:14 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories