Cyber Crime: ಮರುಳಾಗುವಂತೆ ಮಾತಾಡಿ Flipkart ಹೆಸರಲ್ಲಿ ವಂಚನೆ; ಬರೋಬ್ಬರಿ 32 ಲಕ್ಷ ರೂ. ಕಳೆದುಕೊಂಡ ಉದ್ಯಮಿ

ವಂಚನೆಗೆ ಒಳಗಾಗಿರೋ ಗುರುಮೂರ್ತಿ ಸದ್ಯ ಸೈಬರ್ ಠಾಣೆ ಪೊಲೀಸರ ಮೊರೆ ಹೋಗಿದ್ದಾನೆ. ಈ ಕುರಿತು ಹುಬ್ಬಳ್ಳಿ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಹುಬ್ಬಳ್ಳಿ(ಜ.07): ಫ್ಲಿಪ್ ಕಾರ್ಟ್(Flipkart) ನಲ್ಲಿ ಬಂಡವಾಳ ಹೂಡಿಕೆ ಮಾಡಿ ಎಂದು ನಂಬಿಸಿ ಲಕ್ಷಾಂತರ ರೂಪಾಯಿ ಪಂಗನಾಮ ಹಾಕಿರೋ ಘಟನೆ ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದಿದೆ. ಹುಬ್ಬಳ್ಳಿ(Hubli)ಯ ವ್ಯಕ್ತಿಗೆ ಸೈಬರ್ ವಂಚಕಿ ಬರೋಬ್ಬರಿ 32 ಲಕ್ಷ ರೂಪಾಯಿ ವಂಚಿಸಿದ್ದಾಳೆ. ದೂರವಾಣಿ ಮೂಲಕ ಸಂಪರ್ಕ ಮಾಡಿದ್ದ ಮಹಿಳೆ, ಕಂಪನಿಯ ಪ್ರಾಜೆಕ್ಟ್(Company Projects) ಗಳಲ್ಲಿ ಹೂಡಿಕೆ ಮಾಡಿ ಎಂದು ನಂಬಿಸಿ ವಂಚನೆ ಮಾಡಿದ್ದಾಳೆ. ಹುಬ್ಬಳ್ಳಿಯ ಗುರುಮೂರ್ತಿ ನಾಣ್ಯದ ಎನ್ನುವಾತ ಮೋಸಹೋದ ಉದ್ಯಮಿಯಾಗಿದ್ದಾನೆ.

ವಂಚಿಸಿದ ಮಹಿಳೆ ಯಾರೆಂದು ತಿಳಿದಿಲ್ಲ

ಹಂತ ಹಂತವಾಗಿ ಗುರುಮೂರ್ತಿ ಖಾತೆಯಿಂದ 32 ಲಕ್ಷ ರೂಪಾಯಿ ವರ್ಗಾಯಿಸಿಕೊಂಡು ಮೋಸ ಮಾಡಲಾಗಿದೆ. ಕೆಲವೇ ದಿನಗಳ ಅಂತರದಲ್ಲಿ ಗುರುಮೂರ್ತಿ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾನೆ. ಲಕ್ಷ್ಮೀ ಮೇಹರ್ ಎನ್ನುವ ಮಹಿಳೆ ಹೆಸರಲ್ಲಿ ವಂಚನೆ ನಡೆದಿದೆ. ವಂಚನೆ ಮಾಡಿರೋ ಲಕ್ಷ್ಮಿ ಮೇಹರ್ ಯಾರು ಎಂಬಿತ್ಯಾದಿ ವಿಚಾರಗಳು ತಿಳಿದಿಲ್ಲ. ವಂಚನೆಗೆ ಒಳಗಾಗಿರೋ ಗುರುಮೂರ್ತಿ ಸದ್ಯ ಸೈಬರ್ ಠಾಣೆ ಪೊಲೀಸರ ಮೊರೆ ಹೋಗಿದ್ದಾನೆ. ಈ ಕುರಿತು ಹುಬ್ಬಳ್ಳಿ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಇದನ್ನೂ ಓದಿ: Variety Eggs: ಒಂದು ಕೋಳಿ, ಬಗೆಬಗೆಯ ಮೊಟ್ಟೆ... ವೆರೈಟಿ ಮೊಟ್ಟೆ ಇಡೋ ವಿಚಿತ್ರ ಕೋಳಿ ಇಲ್ಲಿದೆ..ಮೊಟ್ಟೆ ಹೇಗಿದೆ ನೋಡಿ

ಫೇಸ್ ಬುಕ್ ಮೂಲಕವೂ ವಂಚನೆ
ಫೇಸ್ ಬುಕ್ ಮೂಲಕ ಪರಿಚಯಿಸಿಕೊಂಡು ಯುವತಿಯೊಬ್ಬಳು ಯುವಕನಿಗೆ ವಂಚಿಸಿರೋ ಘಟನೆ ಹುಬ್ಬಳ್ಳಿಯಲ್ಲಿ ಬೆಳಿಕಿಗೆ ಬಂದಿದೆ. ಹುಬ್ಬಳ್ಳಿಯಲ್ಲಿ ಹೂಡಿಕೆ ಮಾಡಲೆಂದು ಅಮೇರಿಕದಿಂದ ಬರೋದಾಗಿ ಹೇಳಿ ಯುವತಿ ವಂಚಿಸಿದ್ದಾಳೆ ಎನ್ನಲಾಗಿದೆ. ತನ್ನ ಖಾತೆಗೆ ಯುವತಿ 59,200 ರೂಪಾಯಿ ಹಣ ವರ್ಗಾಯಿಸಿಕೊಂಡಿದ್ದಾಳೆ. ಶಾಂತಿನಗರದ ನಿಖಿಲ್ ಶಾಹ ವಂಚನೆಗೆ ಒಳಗಾದ ಯುವಕನಾಗಿದ್ದಾನೆ. ಅಶರ್ ಡಾಮಿನು ಎಂಬ ಯುವತಿ ವಂಚಿಸಿದ್ದಾಳೆ ಎಂಬ ಆರೋಪ ಕೇಳಿ ಬಂದಿದೆ.

ಫೇಸ್​ಬುಕ್ ರಿಕ್ವೆಸ್ಟ್​ ಕಳುಹಿಸಿದ್ದ ಯುವತಿ

ಫೇಸ್ ಬುಕ್ ರಿಕ್ವೆಸ್ಟ್ ಕಳುಹಿಸಿದ್ದ ಯುವತಿ, ನಂತರ ನಿಖಿಲ್ ಸ್ನೇಹ ಸಂಪಾದಿಸಿ ವಾಟ್ಸ್ ಆ್ಯಪ್ ನಂಬರ್ ಪಡೆದಿದ್ದಳು. ತನ್ನ ಬಳಿ ಇರುವ ಯು.ಎಸ್. ಡಾಲರ್ ನೊಂದಿಗೆ ಹುಬ್ಬಳ್ಳಿ ಯಲ್ಲಿ ಹೂಡಿಕೆ ಮಾಡಲು ಬರ್ತಿರೋದಾಗಿ ನಂಬಿಸಿದ್ದಳು. ನನ್ನ ಬಳಿ ಯೆಲ್ಲೊ ಕಾರ್ಡ್ ಇಲ್ಲದ ಕಾರಣ, ಯು ಎಸ್ ಡಾಲರ್ ಇರುವ ಕಾರಣಕ್ಕೆ ದೆಹಲಿ ಏರ್ ಪೋರ್ಟ್ ನಲ್ಲಿ ಕಸ್ಟಡಿಗೆ ಹಾಕಿದ್ದಾರೆ ಎಂದು ಯುವಕನಿಗೆ ತಿಳಿಸಿದ್ದಳು. ಕಸ್ಟಡಿಯಿಂದ ಬಿಡಿಸಿಕೊಳ್ಳಲು ಹಣ ಮತ್ತು ಹುಬ್ಬಳ್ಳಿಗೆ ವಿಮಾನ ಟಿಕೇಟ್ ಇತ್ಯಾದಿ ನೆಪ ಹೇಳಿ ಯುವತಿ ತನ್ನ ಖಾತೆಗೆ ಹಣ ಹಾಕಿಸಿಕೊಂಡಿದ್ದಳು. ನಿಖಿಲ್ ಖಾತೆಯಿಂದ ಹಣ ವರ್ಗಾಯಿಸಿಕೊಂಡು ವಂಚನೆ ಮಾಡಿದ್ದಾಳೆ. ಹುಬ್ಬಳ್ಳಿ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇದನ್ನೂ ಓದಿ: Mandya: ಶಾಲೆಗೆ ಮೊಬೈಲ್ ತಂದ ತಪ್ಪಿಗೆ ಬಾಲಕಿಯ ಬಟ್ಟೆ ಬಿಚ್ಚಿಸಿದ ಮುಖ್ಯ ಶಿಕ್ಷಕಿ?

ಸುಳಿವು ಇನ್ನೂ ಸಿಕ್ಕಿಲ್ಲ

ಒಟ್ಟಾರೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಸೈಬರ್ ಅಪರಾಧಗಳು ನಡೆಯುತ್ತಲೇ ಇವೆ. ದಿನೇ ದಿನೇ ಆನ್ ಲೈನ್ ವಂಚನೆ ಹೆಚ್ಚಾಗಿದ್ದು, ನಾಗರೀಕರ ನಿದ್ದೆಗೆಡಿಸಿದೆ. ಸಾವಿರಾರು ರೂಪಾಯಿಗಳಿಂದ ಹಿಡಿದು ಲಕ್ಷಾಂತರ ರೂಪಾಯಿಗಳವರೆಗೂ ವಂಚನೆಗಳು ನಡೆಯಲಾರಂಭಿಸಿವೆ. ಆದರೆ ಆನ್ ಲೈನ್ ವಂಚಕರ ಸುಳಿವು ಸಿಗದೆ, ಪೊಲೀಸರನ್ನೂ ತಲೆಕೆಡಿಸಿಕೊಳ್ಳುವಂತೆ ಮಾಡಿದೆ.
Published by:Latha CG
First published: