ಚಿಕ್ಕಮಗಳೂರು (ಆಗಸ್ಟ್ 14); ಬೆಂಗಳೂರಿನ ಡಿ.ಜೆ. ಹಳ್ಳಿ ಗಲಭೆ ತಣ್ಣಗಾಗುವ ಮುನ್ನವೇ ಗುರುವಾರ ಶೃಂಗೇರಿ ಪೀಠದ ಸಂಸ್ಥಾಪಕ ಶಂಕರಾಚಾರ್ಯ ಪುತ್ಥಳಿಯ ಮೇಲೆ ಈದ್ ಮಿಲಾದ್ ಹಬ್ಬದ ಶುಭಕೋರುವ ಬಾವುಟ ಹಾಕಿ ಕೋಮು ಸಾಮರಸ್ಯ ಕದಡಲು ಯತ್ನಿಸಲಾಗಿತ್ತು. ಆ ಬಾವುಟ ಎಸ್‌ಡಿಪಿಐ (ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯ) ಪಕ್ಷಕ್ಕೆ ಸೇರಿದ್ದಾಗಿದೆ ಎಂದು ಗುಲ್ಲು ಎಬ್ಬಿಸಿ ಎರಡು ಕೋಮುಗಳ ನಡುವೆ ದ್ವೇಷ ಮತ್ತು ಗಲಭೆ ಹುಟ್ಟಿಸುವ ಪ್ರಯತ್ನ ಮಾಡಲಾಗಿತ್ತು.
ಮೊನ್ನೆ ಬುಧವಾರ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಯ ಜನ ಚಳಿಗೆ ಬೆಚ್ಚಗೆ ಮೈಹೊದ್ದು ಮಲಗಿದ್ದರು. ಬೆಳಗ್ಗೆ ಏಳುವಷ್ಟರಲ್ಲಿ ಚಳಿಯಲ್ಲೂ ಮೈ ಬೆವರೋ ಘಟನೆಯೊಂದು ನಡೆದುಹೋಗಿತ್ತು. ಕಿಡಿಗೇಡಿಗಳು ಶಂಕರಾಚಾರ್ಯ ವೃತ್ತದ ಶಂಕರಾಚಾರ್ಯ ಪುತ್ಥಳಿ ಮೇಲೆ ಅನ್ಯ ಕೋಮಿನ ಭಾವುಟ ಹಾಕಿದ್ದರು. ಘಟನೆಯಿಂದ ಭೂದಿ ಮುಚ್ಚಿದ ಕೆಂಡದಂತಾದ ಶೃಂಗೇರಿಯಲ್ಲಿ ಪ್ರತಿಭಟನೆಗಳು ಜೋರಾದವು.
ಶೃಂಗೇರಿಯ ಮಾಜಿ ಶಾಸಕ ಡಿ ಎನ್ ಜೀವರಾಜ್ ಅವರು ಇದಕ್ಕೆ ಕೋಮು ಬಣ್ಣ ನೀಡಲು ಪ್ರಯತ್ನಿಸಿದ್ದವರಲ್ಲಿ ಪ್ರಮುಖರಾಗಿದ್ದರು. ಅವರು ಪೊಲೀಸರೊಂದಿಗೆ ನಡೆಸಿದ ಸಂಭಾಷಣೆಯ ತುಣುಕುಗಳು ವೈರಲ್ ಆಗಿದ್ದವು.
5. Planting SDPI flag on Sri Shankaracharya's statue in Sringeri & inciting violence.
It's high time that, Govt led by Sri @BSYBJP recommends central govt to ban this terror outfit.
Orgs like SDPI & PFI are threat to mankind, national security & for a harmonious society.
3/3 pic.twitter.com/qey1F2WIuc
— Shobha Karandlaje (@ShobhaBJP) August 14, 2020
ಆದರೆ ಈಗ ಶಂಕರಾಚಾರ್ಯರ ಪುತ್ಥಳಿ ಮೇಲೆ ಬಿದ್ದಿರುವ ಬಾವುಟ ಎಸ್‌ಡಿಪಿಐಗೆ ಸೇರಿದ್ದಲ್ಲ ಎಂದು ಹೇಳಲಾಗುತ್ತಿದೆ. ಅಲ್ಲದೆ ಒಂದು ಹಸಿರು ಬಣ್ಣದ ಬಾವುಟವನ್ನು ಪುತ್ಥಳಿಯ ಹತ್ತಿರವಿದ್ದ ಮಸೀದಿಯಿಂದ ಮಿಲಿಂದ್ ಎಂಬ ಯುವಕ ಕದ್ದು ಹೋಗುತ್ತಿದ್ದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಹುಣಸೂರು ಶಾಸಕ ಮಂಜುನಾಥ್‌ಗೆ ಜೀವ ಬೆದರಿಕೆ; ಹೆಚ್. ವಿಶ್ವನಾಥ್ ಪುತ್ರನ ವಿರುದ್ಧ ಪ್ರಚೋದನೆ ಆರೋಪ
ಪ್ರಕರಣವನ್ನು ಭೇದಿಸಿರುವ ಪೊಲೀಸರು, ಈ ಘಟನೆಯ ಹಿಂದೆ ಯಾವುದೇ ಪಕ್ಷ ಅಥವಾ ಸಂಘಟನೆಗಳಿಲ್ಲ. ಅವನೋರ್ವ ಕುಡುಕು. ಹೆಸರು ಮಿಲಿಂದ್. ಅಲಿಯಾಸ್ ಮಿಲ್ಲಿ. ಕುಡಿದ ಮತ್ತಿನಲ್ಲಿ ಹೀಗೆ ಮಾಡಿದ್ದಾನೆ. ಎಲ್ಲಾ ದಾಖಲೆಗಳಿವೆ. ಆತ ಎಲ್ಲಿ ಕುಡಿದ, ಎಲ್ಲಿಂದ ಬ್ಯಾನರ್ ತಂದ ಎಂಬ ಎಲ್ಲಾ ವಿಡಿಯೋ ಇದೆ. ಬ್ಯಾನರ್ ಈದ್ ಮಿಲಾದ್ ಶುಭಕೋರೋ ಸಂದೇಶದ್ದು, ಇದು ಉದ್ದೇಶ ಪೂರ್ವಕವಾಗಿ ಆಗಿರೋ ಘಟನೆಯಲ್ಲ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಮಚೀಂದ್ರ ಸ್ಪಷ್ಟಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ