HOME » NEWS » District » CT RAVI TESTED CORONA POSITIVE AND IN HOME QUARANTINE AT HIS FARM HOUSE IN CHIKKAMAGALURU SNVS

ಸಿ.ಟಿ. ರವಿಗೆ ಕೊರೋನಾ ಸೋಂಕು; ಹೋಮ್ ಕ್ವಾರಂಟೈನ್​ನಲ್ಲಿ ಸಚಿವರು

ನಿನ್ನೆ ತಡರಾತ್ರಿ ಸಿ.ಟಿ. ರವಿ ಅವರು ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಆಗಮಿಸಿದ್ದರು. ಈ ವೇಳೆ ಮುಂಜಾಗ್ರತಾ ಕ್ರಮವಾಗಿ ಕೊರೋನಾ ಪರೀಕ್ಷೆಗೆ ಸ್ಯಾಂಪಲ್ ನೀಡಿದ್ದರು. ಇವತ್ತು ಸಂಜೆ ಬಂದ ವರದಿಯಲ್ಲಿ ಸಿ.ಟಿ. ರವಿ ಅವರಿಗೆ ಪಾಸಿಟಿವ್ ಇರುವುದು ಖಚಿತವಾಗಿದೆ.

news18-kannada
Updated:July 11, 2020, 9:01 PM IST
ಸಿ.ಟಿ. ರವಿಗೆ ಕೊರೋನಾ ಸೋಂಕು; ಹೋಮ್ ಕ್ವಾರಂಟೈನ್​ನಲ್ಲಿ ಸಚಿವರು
ಸಿ.ಟಿ. ರವಿ
  • Share this:
ಚಿಕ್ಕಮಗಳೂರು(ಜುಲೈ 11): ಕನ್ನಡ ಮತ್ತು ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಅವರಿಗೆ ಕೊರೋನಾ ಸೋಂಕು ತಗುಲಿದೆ. ಕೊರೋನಾ ಪರೀಕ್ಷೆಯಲ್ಲಿ ಸಿ.ಟಿ. ರವಿಗೆ ಪಾಸಿಟಿವ್ ಬಂದಿದೆ. ಈಗ ಅವರು ಚಿಕ್ಕಮಗಳೂರಿನಲ್ಲಿ ಹೋಮ್ ಕ್ವಾರಂಟೈನ್​ನಲ್ಲಿದ್ದಾರೆ. ನಿನ್ನೆ ತಡರಾತ್ರಿ ಸಿ.ಟಿ. ರವಿ ಅವರು ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಆಗಮಿಸಿದ್ದರು. ಈ ವೇಳೆ ಮುಂಜಾಗ್ರತಾ ಕ್ರಮವಾಗಿ ಕೊರೋನಾ ಪರೀಕ್ಷೆಗೆ ಸ್ಯಾಂಪಲ್ ನೀಡಿದ್ದರು. ಇವತ್ತು ಸಂಜೆ ಬಂದ ವರದಿಯಲ್ಲಿ ಸಿ.ಟಿ. ರವಿ ಅವರಿಗೆ ಪಾಸಿಟಿವ್ ಇರುವುದು ಖಚಿತವಾಗಿದೆ.

ಕನ್ನಡ ಮತ್ತು ಸಂಸ್ಕೃತಿ ಸಚಿವರು ಚಿಕ್ಕಮಗಳೂರಿನ ರಾಮನಹಳ್ಳಿಯ ತಮ್ಮ ಗೆಸ್ಟ್ ಹೌಸ್​ನಲ್ಲಿ ಹೋಮ್ ಕ್ವಾರಂಟೈನ್​ನಲ್ಲಿದ್ಧಾರೆ. ಸಿ.ಟಿ. ರವಿ ಅವರು ಈ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲೂ ಹಂಚಿಕೊಂಡಿದ್ದಾರೆ. ತಾವು ಕ್ಷೇಮವಾಗಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರದ ಶಾಸಕ ಪ್ರಸಾದ್ ಅಬ್ಬಯ್ಯಗೆ ಕೊರೋನಾ ಸೋಂಕು

ತನಗೆ ಕೊರೋನಾ ಲಕ್ಷಣಗಳಿಲ್ಲ. ಕ್ಷೇಮವಾಗಿದ್ದು ಹೋಮ್ ಕ್ವಾರಂಟೈನ್​ನಲ್ಲಿದ್ದೇನೆ. ಸದ್ಯ ನನ್ನ ತೋಟದ ಮನೆಯಲ್ಲಿ ವಾಕ್ ಮಾಡುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ಧಾರೆ.
ರಾಜ್ಯದ ಹಲವು ಜನಪ್ರತಿನಿಧಿಗಳಿಗೆ ಕೊರೋನಾ ಸೋಂಕು ತಗುಲಿದೆ. ಚಿಕ್ಕಮಗಳೂರಿನ ವಿಧಾನಪರಿಷತ್ ಸದಸ್ಯರೊಬ್ಬರಿಗೂ ಇತ್ತೀಚೆಗೆ ಸೋಂಕು ಇರುವುದು ಖಚಿತಪಟ್ಟಿತ್ತು. ನಿನ್ನೆ ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ ಅವರಲ್ಲಿ ಸೋಂಕು ದೃಢಪಟ್ಟಿದೆ. ಮಂಡ್ಯದ ಸಂಸದೆ ಸುಮಲತಾ ಕೂಡ ಕೊರೋನಾ ಪಾಸಿಟಿವ್ ಆಗಿದ್ದು, ಮನೆಯಲ್ಲೇ ಕ್ವಾರಂಟೈನ್​ನಲ್ಲಿದ್ದಾರೆ. ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಅವರ ಕುಟುಂಬವರ್ಗದ ಕೆಲ ಸದಸ್ಯರಿಗೆ ಸೋಂಕು ಇದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಿವಾಸದ ಕೆಲ ಸಿಬ್ಬಂದಿಗೆ ಸೋಂಕು ಇದೆ.
Published by: Vijayasarthy SN
First published: July 11, 2020, 8:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories