Crocodile: ಮಲಪ್ರಭಾ ನದಿಯಲ್ಲಿ ಮೊಸಳೆ ಪ್ರತ್ಯಕ್ಷ : ಬೆಚ್ಚಿ ಬಿದ್ದ ಗ್ರಾಮಸ್ಥರು..!

ಮೊಸಳೆ

ಮೊಸಳೆ

ಮಲಪ್ರಭಾ ನದಿಯ ಪಕ್ಕದಲ್ಲಿರುವ ಹೊಳೆ ಆಲೂರು ಗ್ರಾಮದಲ್ಲಿ ಮೊಸಳೆ ಪ್ರತ್ಯಕ್ಷವಾದ ಕೂಡಲೇ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಗ್ರಾಮದಲ್ಲಿ ಡಂಗುರು ಭಾರಿಸಿ ಅಲರ್ಟ್ ಇರುವಂತೆ ಹೇಳಿದ್ದಾರೆ.

  • Share this:

ಗದಗ(ನವೆಂಬರ್​. 07): ಮಲಪ್ರಭಾ ನದಿಯಲ್ಲಿ ಮೊಸಳೆ ಪ್ರತ್ಯಕ್ಷವಾಗಿರುವ ಹಿನ್ನಲೆಯಲ್ಲಿ ಗ್ರಾಮಸ್ಥರನ್ನು ಬೆಚ್ಚಿ ಬಿಳಿಸುವಂತ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ರೋಣ ತಾಲೂಕಿನ ಹೊಳೆ ಆಲೂರು ಗ್ರಾಮದಲ್ಲಿ ಆತಂಕ ಮನೆ ಮಾಡಿದೆ. ಕಳೆದ ನಾಲ್ಕು ದಿನಗಳ ಹಿಂದೆ ಮಲಪ್ರಭಾ ನದಿ ದಡದಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷವಾಗಿತ್ತು. ಗ್ರಾಮದ ಜನರು ಭಯಗೊಂಡ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು, ಮೊಸಳೆಯನ್ನು ಸೆರೆ ಹಿಡಿಯುವಂತೆ ಒತ್ತಾಯ ಸಹ ಮಾಡಿದರು. ಮರುದಿನ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಮೊಸಳೆ ಬಂದಿರುವ ಚಲನವಲನ ಗುರುತಿಸಿಕೊಂಡು ಹೋಗಿದ್ದಾರೆ. ಆದರೆ, ಮೊಸಳೆ ಸೆರೆ ಹಿಡಿಯುವ ಗೋಜಿಗೆ ಹೋಗಿಲ್ಲಾ. ಹೀಗಾಗಿ ಗ್ರಾಮಸ್ಥರು ಆತಂಕದಲ್ಲಿ ಜೀವನ ನಡೆಸುವಂತಾಗಿದೆ. ಅದರಲ್ಲೂ ಹೊಳೆ ಆಲೂರು ಗ್ರಾಮ ಮಲಪ್ರಭಾ ನದಿಯ ದಡದಲ್ಲಿರುವದರಿಂದ ಯಾವಾಗ ಗ್ರಾಮಕ್ಕೆ ನುಗ್ಗುತ್ತೋ ಎನ್ನುವ ಆತಂಕದಲ್ಲಿ ಜೀವನ ನಡೆಸುತ್ತಿದ್ದಾರೆ.


ನದಿಯ ದಡದಲ್ಲಿನ ಜಮೀನಿನಲ್ಲಿ ಕೆಲಸ ಮಾಡಲು ಸಹ ರೈತರು ಹಾಗೂ ರೈತ ಮಹಿಳೆಯರು ಭಯ ಪಡುತ್ತಿದ್ದಾರೆ. ಜಾನುವಾರುಗಳನ್ನು ನದಿಯಲ್ಲಿ ತೊಳೆಯಲು ಹೋಗಲು ಸಹ ಭಯ ಪಡುತ್ತಿದ್ದಾರೆ. ರಾತ್ರಿ ಹಗಲು ಎನ್ನದೆ ಯಾವಾಗ ಮೊಸಳೆ ಬರುತ್ತೋ ಅಂತಾ ಆಂತಕದಲ್ಲಿ ಜೀವನ ನಡೆಸುವಂತಾಗಿದೆ. ಹಾಗಾಗಿ ಕೂಡಲೇ ಮೊಸಳೆ ಪತ್ತೆ ಮಾಡಿ ಸೆರೆ ಹಿಡಿಯಬೇಕೆಂದು ಒತ್ತಾಯ ಮಾಡುತ್ತಿದ್ದಾರೆ.


ಮಲಪ್ರಭಾ ನದಿಯ ಪಕ್ಕದಲ್ಲಿರುವ ಹೊಳೆ ಆಲೂರು ಗ್ರಾಮದಲ್ಲಿ ಮೊಸಳೆ ಪ್ರತ್ಯಕ್ಷವಾದ ಕೂಡಲೇ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಗ್ರಾಮದಲ್ಲಿ ಡಂಗುರು ಭಾರಿಸಿ ಅಲರ್ಟ್ ಇರುವಂತೆ ಹೇಳಿದ್ದಾರೆ. ಹೀಗಾಗಿ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಗ್ರಾಮ ಪಂಚಾಯತ್ ಸಿಬ್ಬಂದಿಗಳು ನದಿಯ ಪಕ್ಕದಲ್ಲಿ ಮೊಸಳೆ ಪ್ರತ್ಯಕ್ಷವಾಗುತ್ತಾ ಅಂತಾ ಕಾಯುತ್ತಿದ್ದಾರೆ. ಆದರೆ, ಅರಣ್ಯ ಇಲಾಖೆ ಅಧಿಕಾರಿಗಳು ನದಿಯಲ್ಲಿ ಕಾರ್ಯಾಚರಣೆ ನಡೆಸಿ ಮೊಸಳೆ ಪತ್ತೆ ಕಾರ್ಯಕ್ಕೆ ಮುಂದಾಗಿಲ್ಲಾ ಎನ್ನುವದು ಗ್ರಾಮಸ್ಥರ ಆರೋಪವಾಗಿದೆ.


ಇದನ್ನೂ ಓದಿ : ಜನ್ಮದಿನವನ್ನು ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಕಳೆದ ಮಾಜಿ ಸಚಿವ ವಿನಯ್ ಕುಲಕರ್ಣಿ!


ಇನ್ನೂ ಅರಣ್ಯ ಇಲಾಖೆ ಕೆಲವು ಅಧಿಕಾರಿಗಳ ಹೇಳುವ ಪ್ರಕಾರ ಗದಗ ಜಿಲ್ಲೆಯಲ್ಲಿ ಮೊಸಳೆ ಹಿಡಿಯುವ ಸಿಬ್ಬಂದಿಗಳು ಇಲ್ವವಂತೆ ಹಾಗಾಗಿ ಪಕ್ಕದ ಧಾರವಾಡ ಜಿಲ್ಲೆಯಿಂದ‌ ಕರೆಸಿ ಕಾರ್ಯಾಚರಣೆ ಮಾಡಬೇಕು ಅಂತಾ ಹೇಳುತ್ತಿದ್ದಾರೆ. ಆದರೆ, ಗ್ರಾಮಸ್ಥರು ಭಯದಲ್ಲಿ ಜೀವನ ನಡೆಸುತ್ತಿದ್ದಾರೆ. ಅಧಿಕಾರಿಗಳು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿದ ನಂತರ ಗ್ರಾಮದ ಕಡೇ ಸೂಳದೆಯಿಲ್ಲಾ. ಹೀಗಾಗಿ ಆದಷ್ಟು ಬೇಗ ಮೊಸಳೆ ಕಾರ್ಯಾಚರಣೆ ಮಾಡಬೇಕೆಂದು ಗ್ರಾಮಸ್ಥರು ಒತ್ತಾಯ ಮಾಡುತ್ತಿದ್ದಾರೆ.


ಇನ್ನಾದರೂ ಗದಗ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಗಾಡವಾದ ನಿದ್ದೆಯಿಂದ ಎದ್ದು, ಮೊಸಳೆ ಪತ್ತೆ ಕಾರ್ಯಕ್ಕೆ ಮುಂದಾಗಬೇಕಾಗಿದೆ. ಕ್ಷಣ ಕ್ಷಣಕ್ಕೂ ಭಯದಲ್ಲಿ ಜೀವನ ನಡೆಸುತ್ತಿರುವ ನದಿ ದಡದ ಜನರಿಗೆ ನೆಮ್ಮದಿ ಕಲ್ಪಿಸಬೇಕಾಗಿದೆ.

Published by:G Hareeshkumar
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು