• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಗದಗ ಜಿಲ್ಲೆ ಮಲಪ್ರಭ ನದಿ ತಟ್ಟದ ಹೊಳೆ ಆಲೂರು ಗ್ರಾಮಸ್ಥರ ನಿದ್ದೆಗೆಡಿಸಿದ್ದ ಮೊಸಳೆ ಶವವಾಗಿ ಪತ್ತೆ!

ಗದಗ ಜಿಲ್ಲೆ ಮಲಪ್ರಭ ನದಿ ತಟ್ಟದ ಹೊಳೆ ಆಲೂರು ಗ್ರಾಮಸ್ಥರ ನಿದ್ದೆಗೆಡಿಸಿದ್ದ ಮೊಸಳೆ ಶವವಾಗಿ ಪತ್ತೆ!

ಮೃತಪಟ್ಟಿರುವ ಮೊಸಳೆ

ಮೃತಪಟ್ಟಿರುವ ಮೊಸಳೆ

ಕೂಡಲೇ ಗ್ರಾಮಸ್ಥರು ಮೊಸಲೆ ಶವವನ್ನು‌ ಕಂಡು ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಅವರು ಕೂಡ ಸ್ಥಳಕ್ಕೆ ಆಗಮಿಸಿ ಬೃಹತ್ ಗಾತ್ರದ ಮೊಸಳೆ ಹೊರದೆ ತೆಗೆದು, ಮೊಸಳೆ ಶವ ಪರೀಕ್ಷೆ ಮಾಡಿದ್ದಾರೆ. ಮೊಸಳೆ ಹಸಿವಿನಿಂದ ಬಳಲಿ ಸಾವನ್ನಪ್ಪಿದೆ ಎನ್ನುವ ವಿಷಯ ಬಹಿರಂಗವಾಗಿದೆ.

  • Share this:

ಗದಗ: ಮಲಪ್ರಭ ನದಿ ತಟ್ಟದ ಗ್ರಾಮಸ್ಥರ ನಿದ್ದೆ ಗೆಡಿಸಿದ್ದ ಮೊಸಳೆ ಶವವಾಗಿ ಪತ್ತೆಯಾಗಿದೆ. ಹೌದು ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆ ಆಲೂರು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದ್ದ ಮೊಸಳೆ ಶವವಾಗಿ ಪತ್ತೆಯಾಗಿದೆ. ಇದರೊಂದಿಗೆ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.


ಆದರೆ ಮೊಸಳೆ ಸಾವನ್ನಪ್ಪಿದ್ದು ಗ್ರಾಮಸ್ಥರಲ್ಲಿಯು ಸಹ ದುಃಖ ತರಿಸಿದೆ. ಮೊದಲು ಗ್ರಾಮದ ಪಕ್ಕದ ಮಲಪ್ರಭಾ ನದಿಯಲ್ಲಿ ಬೃಹತ್ ಗಾತ್ರದ ಮೊಸಳೆ ಪತ್ತೆಯಾಗಿದ್ದರಿಂದ ಗ್ರಾಮದಲ್ಲಿ ಆತಂಕ ಮನೆ ಮಾಡಿತ್ತು. ಗ್ರಾಮ ಪಂಚಾಯತ್ ಸಿಬ್ಬಂದಿಗಳು ಸಹ ಡಂಗೂರ ಸಾರುವ ಮೂಲಕ ಜನರಲ್ಲಿ ಎಚ್ಚರಿಕೆ ಮೂಡಿಸಿದ್ದರು. ಆದರೆ ಈಗ ಮಲಪ್ರಭಾ ನದಿಯಲ್ಲಿ ಮೊಸಳೆ ಶವ ಪತ್ತೆಯಾಗಿದೆ. ಕೂಡಲೇ ಗ್ರಾಮಸ್ಥರು ಮೊಸಲೆ ಶವವನ್ನು‌ ಕಂಡು ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಅವರು ಕೂಡ ಸ್ಥಳಕ್ಕೆ ಆಗಮಿಸಿ ಬೃಹತ್ ಗಾತ್ರದ ಮೊಸಳೆ ಹೊರದೆ ತೆಗೆದು, ಮೊಸಳೆ ಶವ ಪರೀಕ್ಷೆ ಮಾಡಿದ್ದಾರೆ. ಮೊಸಳೆ ಹಸಿವಿನಿಂದ ಬಳಲಿ ಸಾವನ್ನಪ್ಪಿದೆ ಎನ್ನುವ ವಿಷಯ ಬಹಿರಂಗವಾಗಿದೆ. ಹೀಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಮೊದಲೇ ಮೊಸಳೆಯನ್ನು ಪತ್ತೆ ಮಾಡಿದ್ದರೆ ಅದು ಬದುಕಿ ಉಳಿಯುತ್ತಿತ್ತು. ಈಗ ನಮ್ಮೂರಲ್ಲಿ ಸಾವನ್ನಪ್ಪಿದ್ದು, ನಮಗೂ ಬೇಜಾರ ಆಗುತ್ತಿದೆ ಎನ್ನುತ್ತಾರೆ ಗ್ರಾಮಸ್ಥರು.


ಇದನ್ನು ಓದಿ: Bihar Exit Poll Results | ಮತದಾನೋತ್ತರ ಸಮೀಕ್ಷೆಯಲ್ಲಿ ತೇಜಸ್ವಿ ಯಾದವ್ ನೇತೃತ್ವದ ಮಹಾಘಟ್​ಬಂಧನ್​ಗೆ ಅಧಿಕಾರ ಸಾಧ್ಯತೆ


ಇನ್ನೂ ಹೊಳೆ ಆಲೂರು ಗ್ರಾಮದಲ್ಲಿ ಮೊಸಳೆ ಶವ ಪರೀಕ್ಷೆ ನಡೆಸಿ, ಅಲ್ಲಿಯೇ ಅಂತ್ಯ ಸಂಸ್ಕಾರ ಮಾಡಲಾಗಿದೆ. ಸುಮಾರು‌ 50 ವರ್ಷದ ಮೊಸಳೆ ವಯೋ ಸಹಜವಾಗಿ ಸಾವನ್ನಪ್ಪಿದೆ. ಶವ ಪರೀಕ್ಷೆ ನಡೆಸಿದಾಗ ಮೊಸಳೆಗೆ ಯಾವುದೇ ಗಾಯದ ಗುರುತು ಇರಲಿಲ್ಲ. ಹಾಗಾಗಿಯೇ ಅದು ವಯೋ ಸಹಜವಾಗಿ ಸಾವನ್ನಪ್ಪಿದೆ. ಇನ್ನೂ ಮೊಸಳೆಯ ಹೊಟ್ಟೆಯಲ್ಲಿ ಆಹಾರ ಇರಲಿಲ್ಲ ನಿಮೋನಿಯಾದಿಂದ ಸಾವನ್ನಪ್ಪಿರುವ ಶಂಕೆ ಸಹ ವ್ಯಕ್ತವಾಗಿದ್ದು, ಸಂಪೂರ್ಣವಾದ ವರದಿ ಬರಬೇಕಾಗಿದೆ ಎಂದು ಗದಗ ಜಿಲ್ಲಾ ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಸೂರ್ಯಸೇನ್ ಅವರು ತಿಳಿಸಿದ್ದಾರೆ.


ಒಟ್ಟಿನಲ್ಲಿ ಪ್ರವಾಹಕ್ಕೆ ತುತ್ತಾಗಿದ್ದ ಜನರ ನೆಮ್ಮದಿ ಹಾಳು ಮಾಡಿದ್ದ ಬೃಹತ್ ಗಾತ್ರದ ಮೊಸಳೆ ಶವವಾಗಿ ಪತ್ತೆಯಾಗಿರುವುದು, ಗ್ರಾಮಸ್ಥರಲ್ಲಿ ಸಮಾಧಾನ ತಂದಿದೆ. ಆದರೆ ಮೊಸಳೆ ಜೀವಂತವಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿಯಬೇಕಾಗಿತ್ತು. ಅವರು ಕಾಲಹರಣ ಮಾಡಿದ್ದರಿಂದ ಮೊಸಳೆ ಸಾವನ್ನಪ್ಪಿದೆ ಎಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ.


ವರದಿ; ಸಂತೋಷ ಕೊಣ್ಣೂರ

Published by:HR Ramesh
First published: