ಹಾಡ ಹಗಲೇ ಭೀಕರ ಕೊಲೆ, ಮತ್ತೆ ಬೆಚ್ಚಿಬಿದ್ದ ವಿಜಯಪುರದ ಜನ; ಜಿಲ್ಲೆಯಲ್ಲಿ ಹೆಚ್ಚುತ್ತಿವೆ ಅಪರಾಧ ಕೃತ್ಯಗಳು

ವಿಜಾಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬೂದಿಹಾಳ ಪಿ. ಎಚ್. ಗ್ರಾಮದಲ್ಲಿ 24 ವರ್ಷದ ಯುವಕನೊಬ್ಬನನ್ನು ಇಂದು ಹಾಡಹಗಲೇ ಮಾರಕಾಸ್ತ್ರಗಳಿಂದ ಭೀಕರವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ. ಹಣಕಾಸಿನ ವ್ಯವಹಾರ ಅಥವಾ ಹಳೆಯ ವೈಷಮ್ಯವೇ ಈ ಕೊಲೆಗೆ ಕಾರಣ ಎನ್ನಲಾಗಿದೆ. 

news18-kannada
Updated:August 26, 2020, 9:28 PM IST
ಹಾಡ ಹಗಲೇ ಭೀಕರ ಕೊಲೆ, ಮತ್ತೆ ಬೆಚ್ಚಿಬಿದ್ದ ವಿಜಯಪುರದ ಜನ; ಜಿಲ್ಲೆಯಲ್ಲಿ ಹೆಚ್ಚುತ್ತಿವೆ ಅಪರಾಧ ಕೃತ್ಯಗಳು
ಸಾಂದರ್ಭಿಕ ಚಿತ್ರ
  • Share this:
ವಿಜಯಪುರ (ಆಗಸ್ಟ್‌ 26) ವಿಜಯಪುರ ಜಿಲ್ಲೆಯಲ್ಲಿ ಹಾಡು ಹಗಲೇ ನೆತ್ತರು ಹರಿದಿದೆ. ಕಳೆದ ಎರಡು ದಿನಗಳ ಅವಧಿಯಲ್ಲಿ ಜಿಲ್ಲೆಯ ಸಿಂಧಗಿ ತಾಲೂಕಿನಲ್ಲಿ ಎರಡು ಕೊಲೆಗಳು ನಡೆದಿದ್ದು, ಜನ ಮತ್ತೆ ಬೆಚ್ಚಿ ಬಿದ್ದಿದ್ದಾರೆ. ಅಲ್ಲದೆ, ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಅಪರಾಧ ಚಟುವಟಿಕೆಗಳು ಹೆಚ್ಚುತ್ತಲೇ ಇರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

ಹೌದು ಕಳೆದ ಎರಡು ದಿನಗಳಲ್ಲಿ ಸಿಂಧಗಿ ತಾಲೂಕಿನಲ್ಲಿ ಎರಡು ಭೀಕರ ಕೊಲೆ ನಡೆದಿವೆ.  ಸೋಮವಾರ ಮಧ್ಯರಾತ್ರಿ ಸಿಂದಗಿ ಪಟ್ಟಣದಲ್ಲಿ ಎಟಿಎಂ ಸೆಕ್ಯೂರಿಟಿ ಗಾರ್ಡ್‌‌ನನ್ನು ಭೀಕರವಾಗಿ ಕೊಲೆ ಮಾಡಿದ ಮೂರು ಜನ ಮುಸುಕುಧಾರಿಗಳ ತಂಡ ಎಟಿಎಂ ನಲ್ಲಿದ್ದ ಹಣ ದೋಚಿ ಪರಾರಿಯಾಗಿದ್ದರು.

ಈ ಘಟನೆ ಮಾಸುವ ಮುನ್ನವೇ ನಿನ್ನೆ ತಡರಾತ್ರಿ ಮುದ್ದೇಬಿಹಾಳ ಪಟ್ಟಣದಲ್ಲಿ ಎಟಿಎಂ ಕಳ್ಳತನಕ್ಕೆ ವಿಫಲ ಯತ್ನ ನಡೆದಿತ್ತು.  ಈ ಘಟನೆ ಇನ್ನೂ ಚರ್ಚೆಯಲ್ಲಿರುವಾಗಲೇ ಸಿಂದಗಿ ತಾಲೂಕಿನ ಬೂದಿಹಾಳ ಪಿ. ಎಚ್. ಗ್ರಾಮದಲ್ಲಿ 24 ವರ್ಷದ ಯುವಕನೊಬ್ಬನನ್ನು ಇಂದು ಹಾಡಹಗಲೇ ಮಾರಕಾಸ್ತ್ರಗಳಿಂದ ಭೀಕರವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ. ಹಣಕಾಸಿನ ವ್ಯವಹಾರ ಅಥವಾ ಹಳೆಯ ವೈಷಮ್ಯ ಈ ಕೊಲೆಗೆ ಕಾರಣ ಎನ್ನಲಾಗಿದೆ.

ಕೊಲೆಯಾದ ಯುವಕನನ್ನು ಇಂಗಳಗಿ ಎಂದು ಗುರುತಿಸಲಾಗಿದೆ.  ಹಾಡು ಹಗಲೇ ನಡೆದ ಈ ಘಟನೆಯಿಂದಾಗಿ ಗ್ರಾಮಸದಲ್ಲಿ ಆತಂಕದ ವಾತಾವರಣ ಉಂಟಾಗಿದ್ದು, ಜಿಲ್ಲೆಯ ಜನ ಕೂಡ ಬೆಚ್ಚಿ ಬೀಳುವಂತಾಗಿದೆ.  ಯುವಕನ ಸಾವಿನಿಂದಾಗಿ ಸ್ಥಳದಲ್ಲಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಸಿಂದಗಿ ಪೊಲೀಸರ ದೌಡಾಯಿಸಿದ್ದು, ಪರಿಶೀಲನೆ ನಡೆಸಿದ್ದಾರೆ.  ವಿಜಯಪುರ ಜಿಲ್ಲೆಯ ಸಿಂದಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ : ನೆಟ್‌ಫ್ಲಿಕ್ಸ್‌ನ ಬ್ಯಾಡ್ ಬಾಯ್ ಬಿಲಿಯನೇರ್ಸ್ ವೆಬ್‌ ಸರಣಿ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ ಉದ್ಯಮಿ ಮೆಹುಲ್ ಚೋಕ್ಸಿ

ವಿಜಯಪುರ ಜಿಲ್ಲೆಯಲ್ಲಿ ಇತ್ತೀಚೆಗೆ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು, ಜನತೆಯಲ್ಲಿ ಆತಂಕ ಮೂಡಿದೆ.  ಶುಕ್ರವಾರ ವಿಜಯಪುರದ ಯುವಕ ಡೀಸೆಲ್ ತರಲು ಹೋಗಿ ನಾಪತ್ತೆಯಾಗಿದ್ದ.  ಬಳಿಕ ಸುಟ್ಟ ಸ್ಥಿತಿಯಲ್ಲಿ ಆತನ ಶವ ಪತ್ತೆಯಾಗಿತ್ತು.  ಈ ಪ್ರಕರಣದ ಆರೋಪಿಗಳೂ ಇನ್ನೂ ಪತ್ತೆಯಾಗಿಲ್ಲ.
ನಿನ್ನೆ ಸಿಂದಗಿ ಪಟ್ಟಣದಲ್ಲಿ ನಡೆದ ಸೆಕ್ಯೂರಿಟಿ ಗಾರ್ಡ್ ಕೊಲೆಯ ಆರೋಪಿಗಳ ಬಗ್ಗೆಯೂ ಇನ್ನೂ ಸುಳಿವು ಲಭ್ಯವಾಗಿಲ್ಲ.  ಈ ಎರಡೂ ಘಟನೆಗಳು ಇನ್ನೂ ಮಾಸುವ ಮುನ್ನವೇ ಈಗ ಮತ್ತೊಂದು ಕೊಲೆ ನಡೆದಿದೆ. ನಿನ್ನೆ ಸಿಎಂ ಕಾರ್ಯಕ್ರಮದ ಬಂದೋಬಸ್ತ್ ಮತ್ತು ಈಗ ಗಣೇಶೋತ್ಸವದ ಬಂದೋಬಸ್ತ್ ಮಧ್ಯೆ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳು ಪೊಲೀಸರೂ ನಿದ್ದೆಗೆಡುವಂತೆ ಮಾಡಿವೆ.
Published by: MAshok Kumar
First published: August 26, 2020, 9:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading