HOME » NEWS » District » CRIME RATE HAS INCREASED IN UTTARA KANNADA DISTRICT RHHSN DKK

ಉತ್ತರ ಕನ್ನಡ ಜಿಲ್ಲೆಯಲ್ಲಿ ನಿಲ್ಲದ ಅಪರಾಧ ಪ್ರಕರಣಗಳು; ಕೊರೋನಾ ಕಾಲದಲ್ಲೂ ಮಾದಕ ವಸ್ತು ಸಾಗಾಟದಲ್ಲಿ ಮುಂದೆ

ರಾಜ್ಯದಲ್ಲಿ ಗಾಂಜಾ ಸಾಗಾಟ, ಮಾರಾಟ ಸದ್ದು ಮಾಡಿದ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲೂ ಅವ್ಯಾಹತವಾಗಿ ನಡೆಯುತ್ತಿದೆ ಎಂದು ಇಲ್ಲಿನ ಜನಪ್ರತಿನಿಧಿಗಳೇ ಒಪ್ಪಿಕೊಂಡಿದ್ದರು. ಅದಕ್ಕೆ ಸಾಕ್ಷಿಯಾಗಿ ಗೋಕರ್ಣ ಮತ್ತು ಶಿರಸಿಯ ಹೆಸರನ್ನು ಕೂಡಾ ಸೂಚಿಸಿದ್ದರು.

news18-kannada
Updated:December 9, 2020, 5:12 PM IST
ಉತ್ತರ ಕನ್ನಡ ಜಿಲ್ಲೆಯಲ್ಲಿ ನಿಲ್ಲದ ಅಪರಾಧ ಪ್ರಕರಣಗಳು; ಕೊರೋನಾ ಕಾಲದಲ್ಲೂ ಮಾದಕ ವಸ್ತು ಸಾಗಾಟದಲ್ಲಿ ಮುಂದೆ
ಪ್ರಾತಿನಿಧಿಕ ಚಿತ್ರ.
  • Share this:
ಕಾರವಾರ; ಕೋವಿಡ್ ವರ್ಷದಲ್ಲೂ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮತ್ತು ಗೋಕರ್ಣ ಭಾಗದಲ್ಲಿ  ಅಪರಾಧ ಸಂಖ್ಯೆ ಇಳಿಕೆಯಾಗಿಲ್ಲ. ಡ್ರಗ್ಸ್ ಪೂರೈಕೆ ಪ್ರಕರಣಗಳು ಈ ಭಾಗದಲ್ಲಿ ಹೆಚ್ಚು ಸದ್ದು ಮಾಡಿದ್ದು ಪ್ರಜ್ಞಾವಂತ ಜನ‌ ಆತಂಕಿತರಾಗಿದ್ದಾರೆ. ಅಲ್ಲದೇ ಕಾನೂನು ಬಾಹಿರವಾಗಿ ಜಾನುವಾರು ಸಾಗಾಟವೂ ಹೆಚ್ಚಾಗಿದೆ.

2020ರ ವರ್ಷಪೂರ್ತಿ ಕೋವಿಡ್ ಸೋಂಕಿನಿಂದಲೇ ಜನ ಜರ್ಜರಿತರಾಗಿದ್ದರೂ ಉತ್ತರ ಕನ್ನಡದಲ್ಲಿ ಅಪರಾಧಗಳ ಸಂಖ್ಯೆಯಲ್ಲೇನು ಹೆಚ್ಚು ಇಳಿಕೆಯಾಗಿಲ್ಲ. ರಾಜ್ಯದಲ್ಲಿ ಭಾರೀ ಸದ್ದು ಮಾಡಿದ್ದ ಮಾದಕ ವಸ್ತುಗಳ ಬಳಕೆ, ಸಾಗಾಟ ಹಾಗೂ ಮಾರಾಟ ದಂಧೆಯತ್ತ ಕಣ್ಣಿಟ್ಟಿದ್ದ ಉತ್ತರ ಕನ್ನಡ ಪೊಲೀಸರು ಜಿಲ್ಲೆಯಲ್ಲೂ ಕಾರ್ಯಾಚರಣೆ ನಡೆಸಿದ್ದರು. ಮಾದಕ ವಸ್ತುಗಳ ಬಳಕೆ, ಸಾಗಾಟ ಹಾಗೂ ಮಾರಾಟಕ್ಕೆ ಸಂಬಂಧಿಸಿದಂತೆ ಗೋಕರ್ಣ ಹಾಗೂ ಶಿರಸಿ ಸೇರಿ ಈ ವರ್ಷ ಒಟ್ಟು 31 ಪ್ರಕರಣ ದಾಖಲಾಗಿದ್ದು, ಈ ಎರಡೂ ಸ್ಥಳವನ್ನು ಹಾಟ್‌ಸ್ಪಾಟ್ ಎಂದು ಜಿಲ್ಲಾ‌ ಪೊಲೀಸ್ ಇಲಾಖೆ ಗುರುತಿಸಿದೆ.

2017ರಲ್ಲಿ 32 ಪ್ರಕರಣದಲ್ಲಿ 59 ಆರೋಪಿಗಳನ್ನು ಬಂಧಿಸಲಾಗಿದ್ದರೆ, 2018ರಲ್ಲಿ 16 ಪ್ರಕರಣದಲ್ಲಿ 31, 2019ರಲ್ಲಿ 13 ಪ್ರಕರಣದಲ್ಲಿ 33 ಆರೋಪಿಗಳನ್ನು ಬಂಧಿಸಲಾಗಿತ್ತು. ಆದರೆ, 2020ರಲ್ಲೇ ಅತಿ ಹೆಚ್ಚು, ಅಂದರೆ 31 ಪ್ರಕರಣದಲ್ಲಿ 72 ಆರೋಪಿಗಳನ್ನು ಬಂಧಿಸಲಾಗಿದೆ.

ಇನ್ನು, ಕಳೆದ ಕೆಲವು ವರ್ಷಗಳಿಗೆ ಹೋಲಿಕೆ ಮಾಡಿದರೆ ಪ್ರಸಕ್ತ ಸಾಲಿನಲ್ಲಿ ಕಳ್ಳತನ ಪ್ರಕರಣಗಳಲ್ಲಿ ಹೆಚ್ಚಿನದನ್ನು ಜಿಲ್ಲಾ ಪೊಲೀಸ್ ಇಲಾಖೆಯಿಂದ ಪತ್ತೆ ಹಚ್ಚಲಾಗಿದೆ. 2017ರಲ್ಲಿ ಶೇ 30.47, 2018ರಲ್ಲಿ ಶೇ 31.46, 2019ರಲ್ಲಿ ಶೇ 50.90ರಷ್ಟು ಪ್ರಕರಣ ಪತ್ತೆಯಾಗಿತ್ತು. ಪ್ರಸಕ್ತ ಶೇ 71.7ರಷ್ಟು ಸಾಧನೆಯಾಗಿದೆ. 2017ರಲ್ಲಿ ದಾಖಲಾದ 303ರಲ್ಲಿ 169, 2018ರಲ್ಲಿ 273ರಲ್ಲಿ 83, 2019ರಲ್ಲಿ 223ರಲ್ಲಿ 70, 2020ರಲ್ಲಿ 165 ಪ್ರಕರಣದಲ್ಲಿ 77ನ್ನು ಪತ್ತೆ ಮಾಡಲಾಗಿದೆ.

ಇದನ್ನು ಓದಿ: ಬೀಗರ ಔತಣಕೂಟದಲ್ಲಿ ಬಾಡೂಟ ಸವಿದ ಜನರು ವಾಂತಿ-ಭೇದಿಯಿಂದ ಆಸ್ಪತ್ರೆಗೆ ದಾಖಲು

ಕಾನೂನು ಬಾಹಿರ ಜಾನುವಾರ ಸಾಗಾಟ‌ಕೂಡ ಎಗ್ಗಿಲ್ಲದೆ ಸಾಗಿದೆ

ಕಾನೂನು ಬಾಹಿರವಾಗಿ ಜಾನುವಾರು ಸಾಗಾಟಕ್ಕೆ ಸಂಬಂಧಿಸಿ 2017ರಲ್ಲಿ 30 ಪ್ರಕರಣ 68 ಆರೋಪಿಗಳು, 2018ರಲ್ಲಿ 38 ಪ್ರಕರಣ 114 ಆರೋಪಿಗಳು, 2019ರಲ್ಲಿ 32 ಪ್ರಕರಣದಲ್ಲಿ 88, 2020ರಲ್ಲಿ 51 ಪ್ರಕರಣದಲ್ಲಿ 121 ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಮಟ್ಕಾ ದಂಧೆಗೆ ಸಂಬಂಧಿಸಿ 128 ಪ್ರಕರಣದಲ್ಲಿ 198 ಆರೋಪಿತರು, 2018ರಲ್ಲಿ 227 ಪ್ರಕರಣದಲ್ಲಿ 365 ಆರೋಪಿಗಳು, 2019ರಲ್ಲಿ 392 ಪ್ರಕರಣದಲ್ಲಿ 623 ಆರೋಪಿಗಳು, 2020ರಲ್ಲಿ 210 ಪ್ರಕರಣ 291 ಆರೋಪಿಗಳ ಬಂಧನವಾಗಿದೆ.ಏನಂತಾರೆ ಅಧಿಕಾರಿಗಳು?

ಇನ್ನು, ಈ ಬಗ್ಗೆ ಮಾತನಾಡಿರುವ ಜಿಲ್ಲಾ‌ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು, ಕೊರೋನಾ ಲಾಕ್ ಡೌನ್ ಸಮಯದಲ್ಲಿ ಅಂಥ ಹೆಚ್ಚು ಕಳವು ಪ್ರಕರಣಗಳು ನಡೆದಿಲ್ಲ. ಕಳೆದ ವರ್ಷದಷ್ಟೇ ಅಪರಾಧ ಪ್ರಕರಣಗಳು ಈ ವರ್ಷವೂ ದಾಖಲಾಗಿದೆ. ಆದರೆ, ಕಳೆದ ವರ್ಷಕ್ಕಿಂತ ಹೆಚ್ಚಿನ ಪ್ರಕರಣಗಳನ್ನು ಈ ಬಾರಿ ಪತ್ತೆ ಹಚ್ಚಲಾಗಿದೆ ಎಂದು ತಿಳಿಸಿದ್ದಾರೆ.

ಗೋಕರ್ಣ, ಶಿರಸಿ ಮತ್ತೆ‌ ಮುನ್ನೆಲೆಗೆ

ರಾಜ್ಯದಲ್ಲಿ ಗಾಂಜಾ ಸಾಗಾಟ, ಮಾರಾಟ ಸದ್ದು ಮಾಡಿದ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲೂ ಅವ್ಯಾಹತವಾಗಿ ನಡೆಯುತ್ತಿದೆ ಎಂದು ಇಲ್ಲಿನ ಜನಪ್ರತಿನಿಧಿಗಳೇ ಒಪ್ಪಿಕೊಂಡಿದ್ದರು. ಅದಕ್ಕೆ ಸಾಕ್ಷಿಯಾಗಿ ಗೋಕರ್ಣ ಮತ್ತು ಶಿರಸಿಯ ಹೆಸರನ್ನು ಕೂಡಾ ಸೂಚಿಸಿದ್ದರು. ಆ ಬಳಿಕ ಎಚ್ಚೆತ್ತ ಪೊಲೀಸ್ ಇಲಾಖೆ ಗೋಕರ್ಣ ಭಾಗದಲ್ಲಿ ನಿರಂತರವಾಗಿ ಪ್ರಕರಣ ದಾಖಲಿಸಿತ್ತು. ಬಳಿಕ ಶಿರಸಿ ಭಗದಲ್ಲೂ ಕೂಡಾ ಗಾಂಜಾ ಮಾರಾಟ ಮತ್ತು ಸಾಗಾಟದಾರರನ್ನು ಪೊಲೀಸರು ಬಲೆಗೆ ಬೀಳಿಸಿದ್ದರು. ಈಗ ಮತ್ತೆ ಈ ಎರಡು ಕ್ಷೇತ್ರ ಮುನ್ನೆಲೆಗೆ ಬಂದಿದೆ.
Published by: HR Ramesh
First published: December 9, 2020, 5:12 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories