HOME » NEWS » District » CRIME NEWS WIFE LOVER ATTACK ON HUSBAND IN MANDYA RGM HK

ಬೇರೊಬ್ಬ ವ್ಯಕ್ತಿ ಜೊತೆ ಸುತ್ತಾಟ ; ಪ್ರಶ್ನಿಸಿದ ಗಂಡನ ಮೇಲೆ ಹೆಂಡತಿ, ಪ್ರಿಯಕರನಿಂದ ಹಲ್ಲೆ

ದೂರುದಾರನ ಹೆಂಡತಿಯಾಗಿರುವ ಲಕ್ಷ್ಮಿ ಮಂಡ್ಯದ ಮಿಮ್ಸ್ ವೈದ್ಯಕೀಯ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕಿಯಾಗಿದ್ದು, ಇತ್ತೀಚೆಗೆ ತನ್ನ ಗಂಡನನ್ನು ಬಿಟ್ಟು ಹರೀಶ್ ಎಂಬುವರ ಜೊತೆ ಓಡಾಡುತ್ತಿದ್ದು, ಈ ಸಂಬಂಧ ಗಂಡ ಪ್ರಶ್ನೆ ಮಾಡಿದ್ದಾರೆ

news18-kannada
Updated:November 29, 2020, 4:00 PM IST
ಬೇರೊಬ್ಬ ವ್ಯಕ್ತಿ ಜೊತೆ ಸುತ್ತಾಟ ; ಪ್ರಶ್ನಿಸಿದ ಗಂಡನ ಮೇಲೆ ಹೆಂಡತಿ, ಪ್ರಿಯಕರನಿಂದ ಹಲ್ಲೆ
ಸಾಂದರ್ಭಿಕ ಚಿತ್ರ
  • Share this:
ಮಂಡ್ಯ(ನವೆಂಬರ್​. 29): ಬೇರೊಬ್ಬ ವ್ಯಕ್ತಿಯೊಂದಿಗೆ ಸುತ್ತಾಡುತ್ತಿದ್ದ ಹೆಂಡತಿಗೆ ಬುದ್ದಿ ಹೇಳಿದ ಕಾರಣಕ್ಕೆ ಹೆಂಡತಿ ಸೇರಿದಂತೆ ಆತನ ಪ್ರಿಯಕರ ಹಾಗೂ ಮತ್ತವನ ಸ್ನೇಹಿತರು ಗಂಡನಿಗೆ ಕೊಲೆ ಬೆದರಿಕೆ ಹಾಕಿ ಹಲ್ಲೆ ನಡೆಸಿದ ಪ್ರಕರಣ ಮಂಡ್ಯದಲ್ಲಿ‌ ನಡೆದಿದೆ. ಈ ಸಂಬಂಧ ಗಂಡ ಪೊಲೀಸರಿಗೆ ತನ್ನ ಹೆಂಡತಿ ಸೇರಿ ಆಕೆಯ ಪ್ರಿಯಕರ ಹಾಗೂ ಸ್ನೇಹಿತರ ವಿರುದ್ದ ದೂರು ನೀಡಿದ್ದಾರೆ. ಸಕ್ಕರೆನಾಡು ಮಂಡ್ಯದಲ್ಲಿ ಈ ಘಟನೆ ನಡೆದಿದ್ದು, ಹೆಂಡತಿಯ ವಿರುದ್ದ ಗಂಡ ಈಗ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಗಂಡ ವೆಂಕಟೇಶ್ ಎಂಬುವರು ಮಂಡ್ಯದ ಪಶ್ವಿಮ ಠಾಣೆಗೆ ಈ ಸಂಬಂಧ ದೂರು ನೀಡಿದ್ದಾರೆ. ದೂರುದಾರನ ಹೆಂಡತಿಯಾಗಿರುವ ಲಕ್ಷ್ಮಿ ಮಂಡ್ಯದ ಮಿಮ್ಸ್ ವೈದ್ಯಕೀಯ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕಿಯಾಗಿದ್ದು, ಇತ್ತೀಚೆಗೆ ತನ್ನ ಗಂಡನನ್ನು ಬಿಟ್ಟು ಹರೀಶ್ ಎಂಬುವರ ಜೊತೆ ಓಡಾಡುತ್ತಿದ್ದು, ಈ ಸಂಬಂಧ ಗಂಡ ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ಈ ಬಗ್ಗೆ ತಿಳುವಳಿಕೆ ಹೇಳಿ ಈ ರೀತಿ ಮಾಡದಂತೆ ಬುದ್ದಿ ಹೇಳಿದ್ದಾರೆ.

ಅಲ್ಲದೇ ಸ್ನೇಹಿತನೆಂದು ಹೇಳಿ‌ ಹೆಂಡತಿ ಜೊತೆಗೆ ಆಗಾಗ ಮನೆಗೆ ಬರುತ್ತಿದ್ದ ಹರೀಶ್ ನ ಮನೆಗೂ ಸಹ ತೆರಳಿ ಬುದ್ದಿ ಹೇಳಿ ಬಂದಿದ್ದಾರೆ. ಇದರಿಂದ ಆಕ್ರೋಶಗೊಂಡ ಹೆಂಡತಿ ಹಾಗೂ ಜೊತೆಗಿದ್ದ ಹರೀಶ್ ಆಕ್ರೋಶಗೊಂಡು ಸ್ನೇಹಿತರೊಂದಿಗೆ ಗಂಡ ವೆಂಕಟೇಶ್ ಮನೆಗೆ ತೆರಳಿ ಅವಾಚ್ಯ ಶಬ್ದದಿಂದ ನಿಂದಿಸಿ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾರೆ.

ಇನ್ನು ಇದರಿಂದ ಮನನೊಂದ ಗಂಡ ವೆಂಕಟೇಶ್ ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು ಮಂಡ್ಯದ ಪಶ್ಚಿಮ ಠಾಣೆಗೆ  ಹೆಂಡತಿ ಸೇರಿದಂತೆ ಇತರರ ವಿರುದ್ದ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಾದ ಹೆಂಡತಿ‌ ಲಕ್ಷ್ಮಿ ಸೇರಿ ಆಕೆಯ ಜೊತೆಗಿದ್ದ ಹರೀಶ್ ಹಾಗೂ ಇವರ ಇಬ್ಬರು ಸ್ನೇಹಿತರ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : ಚುನಾವಣೆ ನಡೆಸೋದು ಹೇಗೆಂದು ನನಗೆ ಗೊತ್ತಿದೆ - ಹೆದರದೇ ಸಂಘಟನಾ ಕಾರ್ಯದಲ್ಲಿ ತೊಡಗಿ: ಶಾಸಕ ಡಿ.ಸಿ.ಗೌರಿಶಂಕರ್

ಗಂಡ ವೆಂಕಟೇಶ್ ಇದೀಗ ಈ ಘಟನೆಯಿಂದಾಗಿ ಮಾನಸಿಕವಾಗಿ ಕುಗ್ಗಿ ಹೋಗಿದ್ದು ಹೆಂಡತಿಯ ನಡವಳಿಕೆಯಿಂದಾಗಿ ತನ್ನ ಜೀವನ ಹಾಳಾಯ್ತು ಎಂದು ಕೊರಗುತ್ತಿದ್ದಾರೆ.

ಒಟ್ಟಾರೆ ಪ್ರೀತಿಸಿ ಮದುವೆಯಾಗಿದ್ದ ಈ ದಂಪತಿಯ ಜೀವನದಲ್ಲಿ ಕೌಟುಂಬಿಕ ಕಲಹ ಆರಂಭವಾಗಿದೆ. ಹೆಂಡತಿಯ ಸ್ನೇಹಿತನಾಗಿ ಬಂದು ಇದೀಗ ತನ್ನ ಹೆಂಡತಿಯನ್ನೆ ಬುಟ್ಟಿಗೆ ಹಾಕಿಕೊಂಡ ಸ್ನೇಹಿತನಿಂದಾಗಿ ಈ ದಂಪತಿಯ ಜೀವನದಲ್ಲಿ ಬಿರುಗಾಳಿ ಎದ್ದಿದೆ. ಗಂಡ ಹೆಂಡಿರ ಈ ಜಗಳದಲ್ಲಿ ಕೂಸು ಬಡವಾಯ್ತು ಎನ್ನುವ ರೀತಿ ಇರುವ ಒಬ್ಬ ಮುದ್ದಾದ  ಗಂಡು ಮಗು ಕೂಡ ಅಪ್ಪ ಅಮ್ಮನ ಪ್ರೀತಿಯಿಂದ ವಂಚಿತವಾಗುತ್ತಿರುವುದು ಸುಳ್ಳಲ್ಲ.
Published by: G Hareeshkumar
First published: November 29, 2020, 3:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories