ನಡುರಾತ್ರಿಯಲ್ಲಿ ಗುಂಡಿನ ಸದ್ದು : ಆಸ್ತಿ ವಿವಾದಕ್ಕೆ ರೌಡಿ ಶೀಟರ್ ಬರ್ಬರ ಹತ್ಯೆ

ಗಂಭೀರವಾಗಿ ಗಾಯಗೊಂಡಿರುವ ಈರಪ್ಪ(27), ಸುನೀಲ್ (22) ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಧಾರವಾಡ(ಜುಲೈ.05): ಆಸ್ತಿ ಕಲಹಕ್ಕೆ ಸಂಬಂಧಿಸಿದಂತೆ ಶುಕ್ರವಾರ ತಡ ರಾತ್ರಿ ರಿವಾಲ್ವಾರದಿಂದ ಶೂಟ್ ಮಾಡಿರುವ ಘಟನೆ ಧಾರವಾಡದ ಮದಿಹಾಳ ಗಣೇಶ ನಗರದಲ್ಲಿ ನಡೆದಿದ್ದು, ಓರ್ವ ಮೃತಪಟ್ಟಿದ್ದಾನೆ. ರೌಡಿ ಶೀಟರ್ ಶಿವಯೋಗಿ ಗುರುಸಿದ್ದಪ್ಪ ಬಾವಿಕಟ್ಟಿ (44) ಸಾವನ್ನಪ್ಪಿದ ವ್ಯಕ್ತಿ.

ಶುಕ್ರವಾರ ರಾತ್ರಿ ಆಸ್ತಿ ವಿವಾದ ಸಂಬಂಧ ತೋಟಗೇರ ಬಡಾವಣೆಯಲ್ಲಿರುವ ಸಂಬಂಧಿ ಈರಪ್ಪ ಯಂಗಳ್ಳಿ ತನ್ನ ಸೇಹಿತರಾದ ಸುನೀಲ ಕೋನಣ್ಣವರ್ ಹಾಗೂ ಶಿವಯೋಗಿ ಬಾವಿಕಟ್ಟಿ ಜೊತೆಗೆ ಬಂದು, ಆಸ್ತಿಯೊಂದಕ್ಕೆ ಸಂಬಂಧಿಸಿದ ಜಗಳದ ವಿಷಯದಲ್ಲಿ ತಂಟೆ ತೆಗೆದಿದ್ದಾರೆ. ಈ ವೇಳೆ ಶ್ರೀಶೈಲ್ ನ ಟೊಂಕದಲ್ಲಿದ್ದ ರಿವಾಲ್ವಾರ್  ನಿಂದ ಮೂರು ಸುತ್ತು ಗುಂಡು ಹಾರಿದ ಪರಿಣಾಮ ರೌಡಿ ಶೀಟರ್ ಶಿವಯೋಗಿ ಹೆಣವಾಗಿದ್ದಾನೆ.

ಇದನ್ನೂ ಓದಿ : ಸಂಡೇ ಲಾಕ್ ಡೌನ್ ಸಂದರ್ಭದಲ್ಲಿ ಗಂಡನಿಗೆ ಊಟ ಕೊಡಲು 6 ಕಿ. ಮೀ ನಡೆದುಕೊಂಡು ಬಂದ ಪೊಲೀಸ್ ಕಾನ್ಸ್​ಟೇಬಲ್​ ಹೆಂಡತಿ..!

ಇನ್ನು ಗಂಭೀರವಾಗಿ ಗಾಯಗೊಂಡಿರುವ ಈರಪ್ಪ(27), ಸುನೀಲ್ (22) ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈರಪ್ಪ ಮತ್ತು ಶ್ರೀಶೈಲ್ ಮಧ್ಯೆ ಯಾವುದೋ ಆಸ್ತಿ ವ್ಯವಹಾರಕ್ಕೆ ಸಂಬಂಧಿಸಿದ ಹಿನ್ನೆಲೆಯಲ್ಲಿ ವೈಷಮ್ಯ ಇತ್ತು ಎನ್ನಲಾಗಿದೆ. ಅದೇ ಈ ಘಟನೆಗೆ ನಡೆಯಲು ಕಾರಣ ಎನ್ನಲಾಗುತ್ತಿದೆ.

ಈ  ಬಗ್ಗೆ ಖಚಿತವಾದ ಎಲ್ಲ ಮಾಹಿತಿಗಳು ಸಹ ನಮಗೆ ಲಭ್ಯವಾಗಿವೆ. ತನಿಖೆಗಾಗಿ ತಂಡವನ್ನು ರಚನೆ ಮಾಡಿದ್ದೇವೆ, ಶೀಘ್ರವೇ ಕೊಲೆ ಮಾಡಿರುವ ಆರೋಪಿಯನ್ನು ಬಂಧಿಸಲಾಗುವುದು ಎಂದು ಪೊಲೀಸ್ ಆಯುಕ್ತ ಆರ್. ದಿಲೀಪ್ ಅವರು ಹೇಳಿದ್ದಾರೆ.
Published by:G Hareeshkumar
First published: