ಮೈಸೂರು ಪೊಲೀಸರ ಭರ್ಜರಿ ಕಾರ್ಯಾಚರಣೆ : ತರಕಾರಿ ಜೊತೆಗೆ ಗಾಂಜಾ ಸಾಗಾಟ ಮಾಡುತ್ತಿದ್ದ ಕೇರಳದ ನಾಲ್ವರ ಬಂಧನ

ಬಂಧಿತರು ವೃತ್ತಿಪರ ಗಾಂಜಾ ಮಾರಾಟಗಾರರು. ಮೇಲ್ನೋಟಕ್ಕೆ ಬೇರೆ ಬೇರೆ ಕೆಲಸ ಮಾಡುವ ಇವರು ಗಾಂಜಾ ಮಾರಾಟವನ್ನೇ ದಂಧೆ ಮಾಡಿಕೊಂಡಿದ್ದಾರೆ.

news18-kannada
Updated:September 30, 2020, 5:08 PM IST
ಮೈಸೂರು ಪೊಲೀಸರ ಭರ್ಜರಿ ಕಾರ್ಯಾಚರಣೆ : ತರಕಾರಿ ಜೊತೆಗೆ ಗಾಂಜಾ ಸಾಗಾಟ ಮಾಡುತ್ತಿದ್ದ ಕೇರಳದ ನಾಲ್ವರ ಬಂಧನ
ಗಾಂಜಾ
  • Share this:
ಮೈಸೂರು(ಸೆಪ್ಟೆಂಬರ್​. 30) : ರಾಜ್ಯದಲ್ಲಿ ಈಗ ಗಾಂಜಾ ವಿಚಾರ ದೊಡ್ಡ ಸದ್ದು ಮಾಡುತ್ತಿದೆ. ವಿಚಾರ ಇಷ್ಟು ಬಿಸಿ ಇರುವ ವೇಳೆಯಲ್ಲೇ ಆಂಧ್ರಪ್ರದೇಶದಿಂದ ಭಾರೀ ಪ್ರಮಾಣದ  ಗಾಂಜಾ ಮೈಸೂರು ಮಾರ್ಗವಾಗಿ ಕೇರಳಕ್ಕೆ ಸಾಗಾಣಿಕೆ ಆಗುತ್ತಿತ್ತು. ಮೈಸೂರು ಪೊಲೀಸರು ಖಚಿತ ಮಾಹಿತಿ ಮೇರೆಗೆ ಈ ಅಕ್ರಮ ಗಾಂಜಾ ಸಾಗಾಟವನ್ನ ಪತ್ತೆ ಹಚ್ಚಿದ್ದಾರೆ. ಈ ಸಂಬಂಧ ನಾಲ್ವರ ಬಂಧನವಾಗಿದ್ದು, 84 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ‌ತರಕಾರಿ ಸಾಗಾಣಿಕೆ ಮಾಡುವ ಕ್ರೇಟ್ ವಾಹನದಲ್ಲಿ ಟೊಮೆಟೋ ಜೊತೆಗೆ ಗಾಂಜಾವನ್ನು ಸಾಗಿಸಲಾಗುತ್ತಿತ್ತು. ಇದರಿಂದ ಎಲ್ಲಾ ಚೆಕ್ ಪೋಸ್ಟ್ ಗಳಲ್ಲೂ ಬಲು ಸುಲಭವಾಗಿ ತಪ್ಪಿಸಿಕೊಂಡು ಇವರು ಬಂದಿದ್ದಾರೆ. ಮೈಸೂರು ಜಿಲ್ಲಾ ಪೊಲೀಸರಿಗೆ ಖಚಿತ ಮಾಹಿತಿಯಿಂದ ವಾಹನ ತಪಾಸಣೆ ಮಾಡಿದ್ದಾಗ ಗಾಂಜಾ ಪತ್ತೆಯಾಗಿದೆ. ಕೇರಳ ಮೂಲದ ಮಹಮ್ಮದ್ ಶಫಿ, ಸಲೀಂ, ಪಫೀ, ಇಬ್ರಾಹಿಂ ಕುಟ್ಟಿ ಬಂಧಿತ ಆರೋಪಿಗಳು‌‌.

ಬಂಧಿತರಿಂದ 84 ಕೆಜಿ ಗಾಂಜಾ ಹಾಗೂ ಗಾಂಜಾ ಸಾಗಿಸುತ್ತಿದ್ದ ವಾಹನವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಮೈಸೂರು ನಂಜನಗೂಡು ಹೆದ್ದಾರಿಯಲ್ಲಿರುವ ವಿಮಾ ನಿಲ್ದಾಣದ ಬಳಿ ಪೋಲೀಸರ ಬಲೆಗೆ ಆರೋಪಿಗಳು ಬಿದ್ದಿದ್ದಾರೆ.

ಬಂಧಿತರು ವೃತ್ತಿಪರ ಗಾಂಜಾ ಮಾರಾಟಗಾರರು. ಮೇಲ್ನೋಟಕ್ಕೆ ಬೇರೆ ಬೇರೆ ಕೆಲಸ ಮಾಡುವ ಇವರು ಗಾಂಜಾ ಮಾರಾಟವನ್ನೇ ದಂಧೆ ಮಾಡಿಕೊಂಡಿದ್ದಾರೆ. ಆಂಧ್ರಪ್ರದೇಶ ದಿಂದ ಕೇರಳಕ್ಕೆ ಗಾಂಜಾ ತೆಗೆದು ಕೊಂಡು ಹೋಗಿ ಅಲ್ಲಿ ಚಿಕ್ಕ ಚಿಕ್ಕ ಪ್ಯಾಕ್ ಗಳಲ್ಲಿ ಗಾಂಜಾ ತುಂಬಿ ಅಲ್ಲಿಂದ ಮಾರಾಟ ಮಾಡುತ್ತಿದ್ದರು.

ಕೇರಳದ ಹಲವು ಭಾಗ ಹಾಗೂ ಕರ್ನಾಟಕದ ಹಲವು ಭಾಗಗಳೂ ಇವರ ಮಾರಾಟದ ಕೇಂದ್ರಗಳಾಗಿವೆ. ಪ್ರತಿ ಬಾರಿಯೂ ಇವರು ತರಕಾರಿ ಸಾಗಾಣಿಕೆ ರೂಪದಲ್ಲೇ ಗಾಂಜಾ ಸಾಗಾಣಿಕೆ ಮಾಡುತ್ತಿದ್ದರು ಎಂದು ಆರಂಭದ ತನಿಖೆಯಲ್ಲಿ ಗೊತ್ತಾಗಿದೆ.

ಇದನ್ನೂ ಓದಿ : ಬಾಬ್ರಿ ಮಸೀದಿ ತೀರ್ಪು ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಮುನ್ನುಡಿ : ಆಂದೋಲಶ್ರೀ

ಗಾಂಜಾ ಸಾಗಾಣಿಕೆ, ಮಾರಾಟ ಹಾಗೂ ಖರೀದಿ ತಡೆಯಲು ಪೊಲೀಸರು ಎಷ್ಟೇ ಪ್ರಯತ್ನ ಪಡ್ತಿದ್ದರು ಮಾರಾಟಗಾರರು ಪ್ರತಿ ಬಾರಿಯೂ ಹೊಸ ಹೊಸ ಮಾರ್ಗ ಹುಡುಕಿಕೊಳ್ತಿದ್ದಾರೆ. ಹೀಗಾಗಿ, ಗಾಂಜಾ ಮಾರಾಟ , ಸಾಗಾಣಿಕೆ ತಡೆಯೋದು ಪೊಲೀಸರಿಗೆ ದೊಡ್ಡ ಸವಾಲೇ ಆಗಿದೆ. ಮೈಸೂರಿನ ಈ ಪ್ರಕರಣದಿಂದ ಗಡಿಯಲ್ಲಿ ಮತ್ತಷ್ಟು ಬಂದೋಬಸ್ತ್‌ ಹೆಚ್ಚಾಗಿದೆ.
ಮೈಸೂರಿನಲ್ಲಿ ನಿರ್ಗತಿಕ ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮೈಸೂರಿನ ಮೆಟ್ರೋ ಪೋಲ್​​ ವೃತ್ತದ ಬಳಿ ನಡೆದಿದೆ.  ಕೊಲೆಯಾದ ವ್ಯಕ್ತಿಯ ಹೆಸರು ತಿಳಿದಿಲ್ಲ. ರಕ್ತದ ಮಡುವಿನಲ್ಲೇ ಬರ್ಬರವಾಗಿ ನಿರ್ಗತಿಕ ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ. ತಡರಾತ್ರಿ ದುಷ್ಕರ್ಮಿಗಳು ಕೊಲೆ‌ ಮಾಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದು, ಘಟನಾ ಸ್ಥಳಕ್ಕೆ ಡಿಸಿಪಿ ಗೀತಾ ಪ್ರಸನ್ನ ಭೇಟಿ ಪರಿಶೀಲನೆ ನಡೆಸಿದ್ದಾರೆ. ಲಕ್ಷ್ಮೀಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
Published by: G Hareeshkumar
First published: September 30, 2020, 5:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading