ಕಲಬುರ್ಗಿಯಲ್ಲಿ ಪುಡಿ ರೌಡಿಗಳ ಅಟ್ಟಹಾಸ ; 20ಕ್ಕೂ ಹೆಚ್ಚು ಜನರ ಗ್ಯಾಂಗ್ ಪೊಲೀಸರ ಬಲೆಗೆ

ಕಳೆದ ಹಲವು ದಿನಗಳಿಂದ ಈ ಗ್ಯಾಂಗ್ ಕಲಬುರ್ಗಿ ನಗರದಲ್ಲಿ ಸಕ್ರೀಯವಾಗಿ ಕೆಲಸ ಮಾಡುತ್ತಿದ್ದರು. ಇದೀಗ ಖಾಕಿ ಬಲೆಯಲ್ಲಿ ಬಿದ್ದಿದ್ದು, ಅವರ ಆಟಕ್ಕೆ ಸದ್ಯಕ್ಕೆ ಬ್ರೇಕ್ ಬಿದ್ದಿದೆ

ಪೊಲೀಸರು ಬಂಧಿಸಿದ ಪುಡಿ ರೌಡಿಗಳು

ಪೊಲೀಸರು ಬಂಧಿಸಿದ ಪುಡಿ ರೌಡಿಗಳು

  • Share this:
ಕಲಬುರ್ಗಿ(ನವೆಂಬರ್​. 12):  ಅವರೆಲ್ಲರೂ ಇನ್ನೂ ಮೀಸೆ ಚಿಗುರದ ಹುಡುಗರು. ಆದರೆ, ಅವರು ಮಾಡುತ್ತಿದ್ದ ಖತರ್ನಾಕ್ ಕೆಲಸಗಳು ಮಾತ್ರ ಪೊಲೀಸ್ ಇಲಾಖೆಯನ್ನೇ ಬೆಚ್ಚಿಬೀಳಿಸುತ್ತಿತ್ತು. ಕೈಯಲ್ಲಿ ಲಾಂಗು ಮಚ್ಚು, ರಿವಾಲ್ವರ್ ಹಿಡಿದು ಸಾರ್ವಜನಿಕರನ್ನ ಬ್ಲಾಕ್‌ಮೇಲ್ ಮಾಡಿ ಹಣ ಕಿತ್ತಿಕೊಳ್ಳುತ್ತಿದ್ದ ಈ ಗ್ಯಾಂಗ್ ಇದೀಗ ಪೊಲೀಸರ ಬಲೆಗಿ ಬಿದ್ದಿದೆ.  ಕಲಬುರ್ಗಿ ನಗರದಲ್ಲಿ ಗ್ಯಾಂಗ್ ಕಟ್ಟಿಕೊಂಡು ಅಂಡರ್‌ ವರ್ಲ್ಡ್ ಡಾನ್ ಆಗುವುದಕ್ಕೆ ಹೊರಟಿದ್ದರು. ಇದೀಗ ಈ ಗ್ಯಾಂಗ್‌ನ್ನ ಕಲಬುರ್ಗಿ ಸಿಟಿ ಕ್ರೈಂ ಬ್ರ್ಯಾಂಚ್ ಪೊಲೀಸರು ಹೆಡೆಮುರಿಗೆ ಕಟ್ಟಿ ಲಾಕಪ್ ಗೆ ಹಾಕಿದ್ದಾರೆ. ಬಂಧಿತರಿಂದ ಕಾರು, ಮೊಬೈಲ್, ಬಂದೂಕು, ಚಾಕು, ಚೂರಿ, ಬಡಿಗೆ, ಬ್ಯಾಟ್ ಮತ್ತು ಇತರೆ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಲಬುರ್ಗಿ ಡಿಸಿಪಿ ಕಿಶೋರ್ ಬಾಬು ತಿಳಿಸಿದ್ದಾರೆ. ಅಂದ ಹಾಗೇ ಈ ಗ್ಯಾಂಗ್‌ನಲ್ಲಿ ಇಪ್ಪತ್ತಕ್ಕೂ ಹೆಚ್ಚು ಜನ ಸದಸ್ಯರಿದಾರೆ.

ಸಿದ್ಧಣ್ಣ ಬೆಳಮಗಿ, ರಾಹುಲ್ ಕವಟಗಿ, ರಘು ಕಲಕೇರಿ, ನಿತಿನ್ ಪಾಟೀಲ, ಅಕಾಶ್ ಮಾಡಬೂಳ, ಮುರಳಿ, ಪ್ರಶಾಂತ್ ಐಗೋಳ, ಅಭಿಷೇಕ್, ಶಿವಲಿಂಗೇಶ್ವರ ತಳವಾರ, ಕೃಷ್ಣ ಪವಾರ್, ಆಕಾಶ್ ಹಲಕಟ್ಟಿ, ವಿಶಾಲ್ ರಾಠೋಡ, ಕಾರ್ತೀಕ್, ಪೃಥ್ವಿ, ಮಿಥನ್ ಜಾಧವ್, ಸಂದೀಪ್ ಚವ್ಹಾಣ ಮತ್ತಿತರರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರೆಲ್ಲರೂ 20 ರಿಂದ 30 ವರ್ಷದೊಳಗಿನ ವಯೋಮಾನದವರಾಗಿದ್ದಾರೆ. ಪ್ರತ್ಯೇಕವಾಗಿ ಗುಂಪು ಕಟ್ಟಿಕೊಂಡು ಕಾರ್ಯಾಚರಣೆ ಮಾಡುತ್ತಾರೆ. ಚಿಕ್ಕ ವಯಸ್ಸಿನಲ್ಲಿಯೇ ಇವರೆಲ್ಲರೂ ಪಾತಕ ಲೋಕದ ಡಾನ್ ಆಗಲು ಹೊರಟಿದ್ದರು. ಮಾರಕಾಸ್ತ್ರಗಳನ್ನ ಹಿಡಿದು ಟಿಕ್‌ಟಾಕ್ ಮಾಡಿ ಅವೇ ವಿಡಿಯೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟು ಜನರು ಹೆದರುವಂತೆ ಮಾಡುತ್ತಿದ್ದರು.

ಇದನ್ನೂ ಓದಿ : ಸರ್ಕಾರದಿಂದ ಜನರಿಗೆ ಸಿಗುವ ವೈಯಕ್ತಿಕ ಸೌಲಭ್ಯಗಳನ್ನು ತಲುಪಿಸಲು ಆದ್ಯತೆ ನೀಡಿ: ಸಂಸದ ಬಿ.ವೈ.ರಾಘವೇಂದ್ರ

ಅಲ್ಲದೇ ನಗರದ ಸಾರ್ವಜನಿಕ ಪ್ರದೇಶಗಳಲ್ಲಿ ಜನರಿಗೆ ಹೆದರಿಸಿ ಬೆದರಿಸಿ ಚಿನ್ನಾಭರಣಗಳನ್ನ ಕಿತ್ತುಕೊಳ್ಳುವುದು, ಕಾಲೇಜು ಹುಡುಗಿಯರನ್ನ ಪೀಡಿಸುವುದು ಮಾಡುತ್ತಿದ್ದರು. ಅಲ್ಲದೆ ಕಾಲೇಜು ಹುಡುಗರನ್ನ ಹೆದರಿಸಿ ಹಫ್ತಾ ಕೇಳುತ್ತಿದ್ದರು. ಹಣ ನೀಡಿದಿದ್ರೆ ಅವರನ್ನ ಹೋಡಿಯುವುದಾಗಿ ಬೆದರಿಕೆ ಹಾಕುತ್ತಿದ್ದರು. ಕಳೆದ ಹಲವು ದಿನಗಳಿಂದ ಈ ಗ್ಯಾಂಗ್ ಕಲಬುರ್ಗಿ ನಗರದಲ್ಲಿ ಸಕ್ರೀಯವಾಗಿ ಕೆಲಸ ಮಾಡುತ್ತಿದ್ದರು. ಇದೀಗ ಖಾಕಿ ಬಲೆಯಲ್ಲಿ ಬಿದ್ದಿದ್ದು, ಅವರ ಆಟಕ್ಕೆ ಸದ್ಯಕ್ಕೆ ಬ್ರೇಕ್ ಬಿದ್ದಿದೆ. ಇವರೂ ಸೇರಿದಂತೆ ನಗರದ ಸುಮಾರು 500 ಪುಡಿ ರೌಡಿಗಳ ವಿರುದ್ಧ ರೌಡಿ ಶೀಟರ್ ತೆಗೆಯುವುದಾಗಿ ಡಿಸಿಪಿ ಕಿಶೋರ್ ಬಾಬು ಮಾಹಿತಿ ನೀಡಿದ್ದಾರೆ.

ಅದೇನೇ ಇರಲಿ, ಹದಿಹರೆಯದ ವಯಸ್ಸಿನಲ್ಲೇ ಈ ಯುವಕರ ಗ್ಯಾಂಗ್ ಪಾತಕ ಲೋಕದ ಲೀಡರ್ ಆಗಲು ಹೊರಟು, ಪೊಲೀಸರ ಅತಿಥಿಗಳಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಸಿಸಿಬಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Published by:G Hareeshkumar
First published: