HOME » NEWS » District » CRIME NEWS KODAGU ROBBERS ARRESTED BY POLICE TODAY RSK MAK

ಕೊಡಗು: ಮರದ ವ್ಯಾಪಾರಿಗಳ ಅಡ್ಡಗಟ್ಟಿ ದರೋಡೆ ಮಾಡಿದ್ದ ಖದೀಮರು ಅಂದರ್

ಕಾರಿನಲ್ಲಿ ಬಂದಿದ್ದ ಇಬ್ಬರು ಅಪರಿಚಿತ ವ್ಯಕ್ತಿಗಳು ತಡೆದು ದರೋಡೆ ನಡೆಸಿದ್ದರು ಎನ್ನಲಾಗಿದೆ. ನಂತರದಲ್ಲಿ ಲಾರಿ ಚಾಲಕನಾಗಿದ್ದ ತಮಿಳುನಾಡಿನ ಮೇಟುಪಾಳ್ಯಂ ಗ್ರಾಮದ ನಿವಾಸಿಯಾದ ಲಿಂಗರಾಜು ಎಂಬುವವರಿಗೆ ಪ್ರಾಣ ಬೆದರಿಕೆಯೊಡ್ಡಿದ್ದರಂತೆ.

news18-kannada
Updated:April 1, 2021, 7:23 AM IST
ಕೊಡಗು: ಮರದ ವ್ಯಾಪಾರಿಗಳ ಅಡ್ಡಗಟ್ಟಿ ದರೋಡೆ ಮಾಡಿದ್ದ ಖದೀಮರು ಅಂದರ್
ಬಂಧಿತ ಆರೋಪಿಗಳು.
  • Share this:
ಕೊಡಗು : ಮರದ ದಿಮ್ಮಿಗಳನ್ನು ಹೊತ್ತು ಸಾಗುತಿದ್ದ ಲಾರಿ ತಡೆದು ದರೋಡೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಖದೀಮರ ನ್ನು ಕೊಡಗು ಪೊಲೀಸರು ಎಡೆಮುರಿ ಕಟ್ಟಿದ್ದಾರೆ. ಕೊಡಗು ಜಿಲ್ಲೆಯ ಆರ್ಜಿ ಗ್ರಾಮದಲ್ಲಿ ಇಬ್ಬರು ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. ವಿರಾಜಪೇಟೆ ತಾಲ್ಲೂಕಿನ ಬೇತ್ರಿ ಗ್ರಾಮದ ನಿವಾಸಿ 21 ವರ್ಷದ ಯೂನೀಸ್ ಮತ್ತು ಕೊಂಡಂಗೇರಿ ಗ್ರಾಮದ ನಿವಾಸಿ ಸಿದ್ದಿಕ್ ದರೋಡೆ ಪ್ರಕರಣದಲ್ಲಿ ಬಂಧಿತ ಆರೋಪಿಗಳು. ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಮೂರ್ನಾಡು ಸಮೀಪದ  ಎಂ.ಭಾಡಗ ಎಂಬಲ್ಲಿ ವಾರದ ಹಿಂದೆ ಅಷ್ಟೇ ಅಂದರೆ, ಮಾರ್ಚ್ ತಿಂಗಳ 23 ರಂದು ಮರದ ವ್ಯಾಪಾರಿಯಾಗಿದ್ದ ಕೊಟ್ಟಮುಡಿ ಗ್ರಾಮದ ಕೆ.ಎ. ಶಂಸುದ್ದೀನ್ ಎಂಬುವರಿಗೆ ಸೇರಿದ ಮರದ ನಾಟಗಳನ್ನು ತಮಿಳುನಾಡು ರಾಜ್ಯದ ಲಾರಿ ಸಂಖ್ಯೆ ಟಿ.ಎನ್.38, 5711 ರಲ್ಲಿ ಮರದ ನಾಟಗಳನ್ನು ತುಂಬಿಕೊಂಡು ಸಾಗಿಸುತ್ತಿದ್ದ ವೇಳೆಯಲ್ಲಿ ರಾತ್ರಿ ಸುಮಾರು 12 ಗಂಟೆ ಸಮಯದಲ್ಲಿ ಬೇತ್ರಿ ಸೇತುವೆಯ ಬಳಿ ಮರದ ತುಂಬಿದ ಲಾರಿಯನ್ನು ದರೋಡೆ ಮಾಡಿದ್ದರು.

ಕಾರಿನಲ್ಲಿ ಬಂದಿದ್ದ ಇಬ್ಬರು ಅಪರಿಚಿತ ವ್ಯಕ್ತಿಗಳು ತಡೆದು ದರೋಡೆ ನಡೆಸಿದ್ದರು ಎನ್ನಲಾಗಿದೆ. ನಂತರದಲ್ಲಿ ಲಾರಿ ಚಾಲಕನಾಗಿದ್ದ ತಮಿಳುನಾಡಿನ ಮೇಟುಪಾಳ್ಯಂ ಗ್ರಾಮದ ನಿವಾಸಿಯಾದ ಲಿಂಗರಾಜು ಎಂಬುವವರಿಗೆ ಪ್ರಾಣ ಬೆದರಿಕೆಯೊಡ್ಡಿದ್ದರಂತೆ. ಕಬ್ಬಿಣದ ಸಲಾಕೆಯಿಂದ ಲಾರಿ ಡ್ರೈವರ್ ಗೆ ಹಲ್ಲೆ ಮಾಡಲು ಮುಂದಾಗಿದ್ದರಂತೆ. ಬಳಿಕ ಚಾಲಕನನ್ನು ಬೆದರಿಸಿ ಆತನ ಬಳಿಯಿದ್ದ 11 ಸಾವಿರ ರೂ ನಗದು ದೋಚಿ ಪರಾರಿ ಆಗಿದ್ದರು ಎನ್ನಲಾಗಿದೆ.

ಘಟನೆ ನಡೆದ ಬಳಿಕ ಲಾರಿ ಚಾಲಕ ಲಿಂಗರಾಜು ನಡೆದ ಘಟನೆಯನ್ನು ಮರದ ವ್ಯಾಪಾರಿ ಶಂಸುದ್ದೀನ್ ಅವರಿಗೆ ಮಾಹಿತಿ ನೀಡಿದ್ದಾರೆ. ನಂತರ ಮಾರ್ಚ್ 24 ರಂದು ಚಾಲಕನೊಂದಿಗೆ ವಿರಾಜಪೇಟೆಗೆ ಆಗಮಿಸಿದ ಶಂಸುದ್ದೀನ್ ವಿರಾಜಪೇಟೆ ಗ್ರಾಮಾಂತರ ಪೊಲೀಸು ಠಾಣೆಗೆ ಹೋಗಿ ಕಳ್ಳತನಕ್ಕೆ ಸಂಬಂಧಿಸಿದಂತೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡ ವಿರಾಜಪೇಟೆ ಗ್ರಾಮಾಂತರ ಠಾಣೆಯ ಪೊಲೀಸರು ತನಿಖೆಯನ್ನು  ಆರಂಭಿಸುತ್ತಾರೆ.

ಇದನ್ನೂ ಓದಿ: Ishrat Jahan Encounter Case: ಇಶ್ರತ್​ ಜಹಾನ್​ ನಕಲಿ ಎನ್​ಕೌಂಟರ್​ ಪ್ರಕರಣ; ಕಳಂಕಿತ ಮೂವರು ಪೊಲೀಸರನ್ನು ಬಿಡುಗಡೆಗೊಳಿಸಿದ ಸಿಬಿಐ ಕೋರ್ಟ್​

ಈ ಕೃತ್ಯ ಎಸಗಿದವರ ಹಿಂದೆ ಬಿದ್ದ ಪೊಲೀಸರಿಗೆ ದರೋಡೆ ಯಾರು ಮಾಡಿದ್ದಾರೆ ಎಂದು ಮಾಹಿತಿಯನ್ನು ಕಲೆ ಹಾಕಿದ್ದಾರೆ. ಬಳಿಕ ಆರೋಪಿಗಳ ಸುಳಿವು ತಿಳಿದ ಪೊಲೀಸರು ಆರ್ಜಿ ಗ್ರಾಮದಲ್ಲಿ ಪ್ರಕರಣದ ಆರೋಪಿಗಳು ಇರುವುದಾಗಿ ಖಚಿತ ಮಾಹಿತಿ ಆಧರಿಸಿ ಮಂಗಳವಾರ ರಾತ್ರಿ ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಕೆ ಎಲ್ 40 ಮತ್ತು ಹೆಚ್ 8014 ನಂಬರಿನ ಮಾರುತಿ ಸ್ವಿಫ್ಟ್ ಕಾರು ಮತ್ತು ದರೋಡಿ ಲಾರಿ ಚಾಲಕನಿಂದ ದೋಚಿದ್ದ 15 ಸಾವಿರ ಹಣದಲ್ಲಿ 5 ಸಾವಿರ ರೂಪಾಯಿ ನಗದನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳಾದ ಯೂನಿಸ್ ಮತ್ತು ಸಿದ್ದೀಕ್ ಎಂಬುವವರ ಮೇಲೆ ಐಪಿಸಿ ಕಾಯ್ದೆ ಅನ್ವಯ  ದರೋಡೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
Published by: MAshok Kumar
First published: April 1, 2021, 7:04 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories