HOME » NEWS » District » CRIME NEWS ILLEGAL LIQUOR AND GANJA SEIZED IN VIJAYPURA POLICE HK

ವಿಜಯಪುರ ಪೊಲೀಸರ ಭರ್ಜರಿ ಕಾರ್ಯಾಚರಣೆ : ಅಪಾರ ಪ್ರಮಾಣದ ಗಾಂಜಾ, ಅಕ್ರಮ ಮದ್ಯ ವಶ

ಜಿಲ್ಲೆಯಲ್ಲಿ ಕಳೆದ 10 ದಿನಗಳಲ್ಲಿ 550 ಕಡೆ ನಾನಾ ಕಡೆ ದಾಳಿ ನಡೆಸಲಾಗಿದ್ದು, ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ವಿರುದ್ಧ 102 ಕೇಸ್ ದಾಖಲು ಮಾಡಿ 270 ಲೀಟರ್ ಅಕ್ರಮ ಮದ್ಯ ವಶಪಡಿಸಿಕೊಂಡಿದ್ದಾರೆ.

news18-kannada
Updated:September 14, 2020, 5:40 PM IST
ವಿಜಯಪುರ ಪೊಲೀಸರ ಭರ್ಜರಿ ಕಾರ್ಯಾಚರಣೆ : ಅಪಾರ ಪ್ರಮಾಣದ ಗಾಂಜಾ, ಅಕ್ರಮ ಮದ್ಯ ವಶ
ಗಾಂಜಾ ವಶಪಡಿಸಿಕೊಂಡ ಪೊಲೀಸರು
  • Share this:
ವಿಜಯಪುರ(ಸೆಪ್ಟೆಂಬರ್​. 14): ವಿಜಯಪುರ ಪೊಲೀಸರು ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಗಾಂಜಾ, ಅಕ್ರಮ ಮದ್ಯ ಮಾರಾಟ, ಕೊಲೆ ಆರೋಪಿಗಳನ್ನು ಬಂಧಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ವಿಜಯಪುರ ಎಸ್ಪಿ ಅನುಪಮ ಅಗ್ರವಾಲ, ಕಳೆದ ಒಂದು ವಾರದ ಅವಧಿಯಲ್ಲಿ ಪೊಲೀಸರು ನಡೆಸಿರುವ ಕಾರ್ಯಾಚರಣೆಯ ಸಂಪೂರ್ಣ ಮಾಹಿತಿ ನೀಡಿದ್ದಾರೆ. ವಿಜಯಪುರ ನಗರದ ಗೋಲಗುಂಬಜ ಸರ್ಕಲ್ ವ್ಯಾಪ್ತಿಯ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಐನಾತಿ ಕಳ್ಳನಿಗೆ ಕೈಕೊಳ ತೊಡಿಸಿದ್ದಾರೆ. ಆರೋಪಿ ರಾಜು ಶಿವಾನಂದ ಹೊಸಮನಿ ಎಂಬಾತನನ್ನು ಬಂಧಿಸಿದ್ದು, ಆತನ ಬಳಿಯಿದ್ದ 12. 38 ಲಕ್ಷ ರೂ ಮೌಲ್ಯದ 233 ಗ್ರಾಂ ಚಿನ್ನಾಭರಣ ಮತ್ತು ಬೈಕ್ ವಶಪಡಿಸಿಕೊಂಡಿದ್ದಾರೆ. ಈತ ವಿಜಯಪುರ ನಗರದ ಆದರ್ಶ ನಗರ, ಜಲನಗರ ಮತ್ತು ಗಾಂಧಿಚೌಕ್ ಪೊಲೀಸಾ ಠಾಣೆಗಳ ವ್ಯಾಪ್ತಿಯಲ್ಲಿ 4 ಮನೆಗಳಲ್ಲಿ ಕಳ್ಳತನ ನಡೆಸಿದ್ದಾನೆ. 

ಜಲನಗರ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಸ್ವರೂಪ, ಸತೀಶ ಮತ್ತು ಅಪ್ರಾಪ್ತ ಬಾಲಕನೊಬ್ಬನ್ನು ಬಂಧಿಸಿ ಮೂರು ಕಳ್ಳತನ ಪ್ರಕರಣ ಪತ್ತೆ ಮಾಡಿದ್ದಾರೆ.  ಅಲ್ಲದೇ, ಆರೋಪಿಗಳ ಬಳಿಯಿದ್ದ ಸುಮಾರು  10 ಲಕ್ಷ ರೂ ಮೌಲ್ಯದ 190 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಈ ಆರೋಪಿಗಳೂ ಕೂಡ ಆದರ್ಶ ನಗರ, ಜಲನಗರ, ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಕಳ್ಳತನ ಮಾಡಿದ್ದರು. ಕಳೆದ ಒಂದು ವಾರದಲ್ಲಿ ನಿಡಗುಂದಿ, ಸಿಇಎನ್, ಗಾಂಧಿಚೌಕ್ ಮತ್ತು ಕೊಲ್ಹಾರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, 7 ಗಾಂಜಾ ಮಾರಾಟ ಪ್ರಕರಣ ಪತ್ತೆ ಮಾಡಿದ್ದಾರೆ. ಅಲ್ಲದೇ, ಆರೋಪಿಗಳ ಬಳಿಯದ್ದ 10 ಲಕ್ಷ ರೂ ಮೌಲ್ಯದ 150 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ. ಅಲ್ಲದೇ, ಏಳು ಜನ ಆರೋಪಿಗಳನ್ನು ಬಂಧಿಸಿದ್ದಾರೆ.

ಅಲ್ಲದೇ, ವಿಜಯಪುರ ಜಿಲ್ಲೆಯಲ್ಲಿ ಕಳೆದ 10 ದಿನಗಳಲ್ಲಿ 550 ಕಡೆ ನಾನಾ ಕಡೆ ದಾಳಿ ನಡೆಸಲಾಗಿದ್ದು, ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ವಿರುದ್ಧ 102 ಕೇಸ್ ದಾಖಲು ಮಾಡಿ 270 ಲೀಟರ್ ಅಕ್ರಮ ಮದ್ಯ ವಶಪಡಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಜೂಜಾಟದಲ್ಲಿ ತೊಡಗಿದ್ದ 32 ಕೇಸ್ ದಾಖಲು ಮಾಡಿ ಲಕ್ಷಾಂತರ ನಗರ ವಶಪಡಿಸಿಕೊಂಡಿದ್ದಾರೆ. ನಿನ್ನೆ ಇಂಡಿ ಗ್ರಾಮೀಣ ಪೊಲೀಸರು ಗಂಧದ ಕಟ್ಟಿಗೆ ಮಾರಾಟ ಮಾಡುತ್ತಿದ್ದ 3 ಜನ ಆರೋಪಿಗಳನ್ನು ಬಂಧಿಸಿ ಅವರ ಬಳಿಯಿದ್ದ 34 ಸಾವಿರ ರೂ ಮೌಲ್ಯದ 17 ಕೆಜಿ ಗಂಧದ ಕಟ್ಟಿಗೆಗಳನ್ನು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ : ಜಮೀರ್ ಪರ ಮಾತಾಡಿ ಸಿದ್ದರಾಮಯ್ಯನವರು ತಮ್ಮ ವ್ಯಕ್ತಿತ್ವ ತಾವೇ ಹಾಳು ಮಾಡಿಕೊಳ್ಳುತ್ತಿದ್ದಾರೆ : ಸಚಿವ ಜಗದೀಶ್ ಶೆಟ್ಟರ್​

ಈ ಮಧ್ಯೆ ಜಿಲ್ಲೆಯ ಬಬಲೇಶ್ವರ ಪೊಲೀಸರರು ಅಕ್ರಮ ಗಾಂಜಾ ಬೆಳೆ ಪತ್ತೆ ಮಾಡಿದ್ದಾರೆ. ಬಬಲೇಶ್ವರ ತಾಲೂಕಿನ ಕಾರಜೋಳ ಗ್ರಾಮದಲ್ಲಿ ಬೆಳೆಯಲಾಗಿದ್ದ 1.40 ಲಕ್ಷ ರೂ ಮೌಲ್ಯದ 18.80 ಕೆ ಜಿ ಹಸಿ ಗಾಂಜಾ ಗಿಡಗಳ ವಶಪಡಿಸಿಕೊಂಡಿದ್ದಾರೆ. ಅಲ್ಲದೇ, ಈ ಸಂಬಂದ ಆರೋಪಿಗಳಾದ ಚಂದ್ರಶೇಖರ ವಿಠ್ಠಲ ಹಳಿಜೋಳ(31) ಮತ್ತು ಮುತ್ತಪ್ಪ ಮುದಕಪ್ಪ ಹಳಿಜೋಳ(21) ಬಂಧಿಸಿದ್ದಾರೆ.

ಈ ಮಧ್ಯೆ ಗೋಲಗುಂಬಜ ಸರ್ಕಲ್ ವ್ಯಾಪ್ತಿಯಲ್ಲಿ ಬರುವ ಗೋಲಗುಂಬಜ, ಆದರ್ಶ ನಗರ ಮತ್ತು ಜಲನಗರ ಪೊಲೀಸರು ಕಳೆದ ಒಂದು ವರ್ಷದಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಈ ಅವಧಿಯಲ್ಲಿ ಒಟ್ಟು 21 ಹಗಲು ಕಳ್ಳತನ, 4 ಸರಗಳ್ಳತನ, 5 ರಾಬರಿ ಪ್ರಕರಣಗಳನನು ಭೇದಿಸಿದ್ದಾರೆ. ಅಲ್ಲದೇ, ಈ ಸಂಬಂಧ 1041 ಗ್ರಾಂ ಚಿನ್ನಾಭರಣ, 500 ಗ್ರಾಂ ಬೆಳ್ಳಿಯ ಆಭರಣ ಮತ್ತು 5 ಬೈಕ್ ವಶಪಡಿಸಿಕೊಂಡಿದ್ದಾರೆ.

ಅಷ್ಟೇ ಅಲ್ಲ, 5 ಕೊಲೆ ಪ್ರಕರಣ ಪತ್ತೆ ಮಾಡಿ ಒಟ್ಟು 21 ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್ಪಿ ಅನುಪಮ ಅಗ್ರವಾಲ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಗೋಲಗುಂಬಜ ಸರ್ಕಲ್ ವ್ಯಾಪ್ತಿಯ ಪೊಲೀಸರಿಗೆ ಎಸ್ಪಿ ಅನುಪಮ ಅಗ್ರವಾಲ ಪ್ರಶಂಸಾ ಪತ್ರ ನೀಡಿ ಅಭಿನಂದಿಸಿದರು.
Published by: G Hareeshkumar
First published: September 14, 2020, 5:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories