HOME » NEWS » District » CRIME NEWS HUSBAND HARASSED WIFE COMMITTED SUICIDE MAK

Crime News: ಗಂಡನ ಕಿರುಕುಳ, ಮೊದಲನೇಯವಳು ಅಗ್ನಿಪಾಲು ಎರಡನೇಯವಳು ನೀರುಪಾಲು

ಯಾವಾಗ ಸಾವಿತ್ರಿಗೆ ಎರಡು ಹೆಣ್ಣು ಮಕ್ಕಳೇ ಆದವೋ ಅಲ್ಲಿಂದ ವರಸೆ ಬದಲಿಸಿದ್ದ ರಾಜು, ಹೆಣ್ಣು ಯಾಕೆ ಹೆರ್ತಿಯಾ. ಹೆಣ್ಣು ಮಕ್ಕಳನ್ನು ತಗೊಂಡು ನಾನೇನು ಮಾಡಲಿ ಅಂತ ಸಾವಿತ್ರಿಗೆ ಮಾನಸಿಕ ಕಿರುಕುಳ ನೀಡೋಕೆ ಶುರು ಮಾಡಿದ್ದ.

news18-kannada
Updated:February 15, 2021, 5:16 PM IST
Crime News: ಗಂಡನ ಕಿರುಕುಳ, ಮೊದಲನೇಯವಳು ಅಗ್ನಿಪಾಲು ಎರಡನೇಯವಳು ನೀರುಪಾಲು
ಸಾಂದರ್ಭಿಕ ಚಿತ್ರ.
  • Share this:
ಬೆಳಗಾವಿ (ಫೆಬ್ರವರಿ 15); ಮದುವೆಯಾದ ದಂಪತಿಗಳಿಗೆ ಗಂಡು ಸಂತಾನ ವಾಗದಿದ್ದರೆ ಬೇಸರ ಆಗೋದು ಕಾಮನ್. ಗಂಡು ಸಂತಾನ ಬೇಕು ಅಂತ ಹರಕೆ ಪೂಜೆ ಮಾಡೋದು ಸಹ ಕಾಮನ್. ಆದರೆ, ಇಲ್ಲೊಬ್ಬ ಪತಿರಾಯ ಮೊದಲ ಹೆಂಡತಿಗೆ ಮೂರು ಜನ ಗಂಡು ಮಕ್ಕಳಿದ್ದರೂ ಸಹ ಎರಡನೇ ಹೆಂಡತಿಗೆ ಎರಡು ಹೆಣ್ಣು ಮಕ್ಕಳು ಹುಟ್ಟಿದ್ದಕ್ಕೆ ಆಕೆಗೆ ಮಾನಸಿಕ ಕಿರುಕುಳ ಕೊಟ್ಟಿದ್ದಾನೆ. ಗಂಡನ ಕಿರುಕುಳ ತಾಳಲಾರದ ಎರಡನೇ ಹೆಂಡತಿ ತನ್ನ ಎರಡು ಮಕ್ಕಳನ್ನ ಸೊಂಟಕ್ಕೆ ಕಟ್ಟಿಕೊಂಡು ಘಟಪ್ರಭಾ ನದಿಗೆ ಹಾರಿ ಪ್ರಾಣ ಬಿಟ್ಟಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಲೊಳಸೂರ ಗ್ರಾಮದಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ಸಾವಿತ್ರಿ ಎಂದು ಗುರುತಿಸಲಾಗಿದ್ದರೆ, ಆರೋಪಿ ಗಂಡನನ್ನು ರಾಜು ಬನಾಜ ಎನ್ನಲಾಗಿದೆ. ರಾಜುವಿಗೆ ಈಗಾಗಲೇ ಮದುವೆಯಾಗಿದ್ದು, ಮೊದಲ ಹೆಂಡತಿಗೆ ಮೂರು ಮಕ್ಕಳು. ಈತ ನೀಡುತ್ತಿದ್ದ ಕಿರುಕುಳಕ್ಕೆ ಆಕೆ ಬೆಂಕಿ ಹಚ್ಚಿಕೊಂಡು ಸತ್ತುಹೋಗಿದ್ದಾಳೆ. ನಂತರ ಈ ರಾಜು ಬನಾಜ ಕೈ ಹಿಡಿದಿದ್ದು ಈ ನತದೃಷ್ಟ ಹೆಣ್ಣು ಮಗಳು ಸಾವಿತ್ರಿ. ಮೊದಲ ಹೆಂಡತಿಗೆ ಮೂರು ಗಂಡು ಮಕ್ಕಳಿರುವ ಕಾರಣ ಅವರ ಲಾಲನೆ ಪಾಲನೆ ಮಾಡೋಕೆ ಬೇಕು ಅಂತ ತನ್ನ ಸಹೋದರ ಸಂಬಂಧದಲ್ಲೆ ರಾಜು ಹಿರಿಯರನ್ನು ಒತ್ತಾಯಿಸಿ ಸಾವಿತ್ರಿ ಕೈ ಹಿಡಿದಿದ್ದ.

ಯಾವಾಗ ಸಾವಿತ್ರಿಗೆ ಎರಡು ಹೆಣ್ಣು ಮಕ್ಕಳೇ ಆದವೋ ಅಲ್ಲಿಂದ ವರಸೆ ಬದಲಿಸಿದ್ದ ರಾಜು, ಹೆಣ್ಣು ಯಾಕೆ ಹೆರ್ತಿಯಾ. ಹೆಣ್ಣು ಮಕ್ಕಳನ್ನು ತಗೊಂಡು ನಾನೇನು ಮಾಡಲಿ ಅಂತ ಸಾವಿತ್ರಿಗೆ ಮಾನಸಿಕ ಕಿರುಕುಳ ನೀಡೋಕೆ ಶುರು ಮಾಡಿದ್ದ. ಅಲ್ಲದೆ ತವರು ಮನೆಯಿಂದ ಹಣ ತೆಗೆದುಕೊಂಡು ಬಾ ಅಂತ ಸಾವಿತ್ರಿಯನ್ನ ಪೀಡಿಸೋಕು ಶುರುಮಾಡಿದ್ದ. ಹೀಗಾಗಿ ನನ್ನ ತಂಗಿ ತನ್ನ ಎರಡು ಮಕ್ಕಳನ್ನ ತೆಗೆದುಕೊಂಡು ಇಂತಹ ನಿರ್ಧಾರಕ್ಕೆ ಬಂದಿದ್ದಾಳೆ ಅಂತಾರೆ ಸಾವಿತ್ರಿ ಅಣ್ಣ ಭೀಮಶಿ.

ಹೌದು ಕಳೆದ ಭಾನುವಾರ ತನ್ನ ಮಕ್ಕಳೊಂದಿಗೆ ಗಂಡನ ಮನೆಯಾದ ಅರಭಾವಿ ಗ್ರಾಮದಿಂದ ತನ್ನ ಎರಡು ಮಕ್ಕಳು ಸಹನಾ ಹಾಗೂ  ಪೂಜಾಳನ್ನು ಕರೆದುಕೊಂಡು ಮನೆ ಬಿಟ್ಟು ಬಂದು ಲೊಳಸೂರ ಸೇತುವೆ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಭಾನುವಾರ ಹೆಂಡತಿ ಮಕ್ಕಳು ಮನೆಯಿಂದ ಹೊರಬಂದ ನಂತರ ಗಂಡ ರಾಜು ಘಟಪ್ರಭಾ ಪೊಲೀಸ್ ಠಾಣೆಗೆ ತೆರಳಿ ಮಿಸ್ಸಿಂಗ್ ಕಂಪ್ಲೆಂಟ್ ನೀಡಲು ಹೋಗಿದ್ದಾನೆ. ಆಗ ಪೊಲೀಸರು ಇಂದೆ ಮನೆ ಬಿಟ್ಟು ಹೋಗಿದ್ದಾರೆ ಅಂತೀರಿ ಹುಡುಕಾಡಿ ನೋಡಿ ಸಿಗದಿದಿದ್ದರೆ ನಾವು ಕಂಪ್ಲೇಂಟ್ ತಗೊತಿವಿ ಅಂತ ಹೇಳಿದ್ದಾರೆ.

ಇದನ್ನೂ ಓದಿ: LPG Price Hike - ಇವತ್ತಿನಿಂದ ಎಲ್​ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ 50 ರೂ ಏರಿಕೆ; ಇಲ್ಲಿದೆ ಹೊಸ ದರ

ಆಗ ರಾಜು ಸುಮ್ಮನೆ ಮನೆಗೆ ಬಂದಿದ್ದಾನೆ ತದ ನಂತರ ಎರಡ್ಮೂರು ದಿನವಾದರೂ ಸಾವಿತ್ರಿ ಹಾಗೂ ಮಕ್ಕಳು ಮನೆಗೆ ಬರದಿದ್ದಾಗ ಹಿರಿಯರ ಸಮ್ಮುಖದಲ್ಲಿ  ಹೋಗಿ ಹೆಂಡತಿ ಮಕ್ಕಳು ಕಾಣೆಯಾದ ಬಗ್ಗೆ ಘಟಪ್ರಭಾ ಠಾಣೆಯಲ್ಲಿ ದೂರು ನೀಡಿ ಬಂದಿದ್ದಾನೆ.‌ ಅನುಮಾನಗೊಂಡ ಹಿರಿಯರು ರಾಜು ನನ್ನ ವಿಚಾರಿಸಲು ಪೊಲೀಸರ ಬಳಿ ಮನವಿ ಮಾಡಿದ್ದಾರೆ ಆಗ ರಾಜು ಹೆಂಡತಿ ಮಕ್ಕಳನ್ನು ಮನೆಗೆ ಕರೆದುಕೊಂಡು ಬರುವುದಾಗಿ ಪೊಲೀಸರ ಮುಂದೆ ಹೇಳಿದ್ದ ಅಂತ ಸ್ಥಳೀಯರು ಮಾಹಿತಿ ನೀಡಿದ್ದಾರೆ.
Youtube Video
ಹೆಂಡತಿ ಮಕ್ಕಳನ್ನು ಕರೆದುಕೊಂಡು ಬರ್ತಿನಿ ಅಂತವ ಪೊಲೀಸರ ಮುಂದೆ ಹೇಳಿ ಹೋದವನು ಇದುವರೆಗೂ ರಾಜು ಎಲ್ಲಿದ್ದಾನೆ ಅಂತ ಯಾರಿಗೂ ಗೊತ್ತಿಲ್ಲ. ಆದರೆ ಹೋದ ಭಾನುವಾರ ಹೊಳೆಗೆ ಹಾರಿದ್ದ ಸಾವಿತ್ರಿ ಹಾಗೂ ಮಕ್ಕಳು ಶವವಾಗಿ ಘಟಪ್ರಭಾ ನದಿಯಲ್ಲಿ ಪತ್ತೆಯಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಗೋಕಾಕ ಪೊಲೀಸರು ಸಧ್ಯ ರಾಜು ಬಂಧನಕ್ಕಾಗಿ ಬಲೆ ಬೀಸಿದ್ದಾರೆ.
Published by: MAshok Kumar
First published: February 15, 2021, 5:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories