ಹುಬ್ಬಳ್ಳಿ ಪೊಲೀಸರ ಭರ್ಜರಿ ಕಾರ್ಯಾಚರಣೆ ; ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ‌

ಪೊಲೀಸ್ ಮಹಾ ನಿರ್ದೇಶಕರ ಮೀಟಿಂಗ್ ಬೆನ್ನಲ್ಲೇ ಉಪನಗರ ಠಾಣೆ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಸದ್ಯಕ್ಕೆ ಇಬ್ಬರನ್ನು ಬಂಧಿಸಿದ್ದು, ಗಾಂಜಾ ಮೂಲ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ.

ಇಬ್ಬರು ಆರೋಪಿಗಳು

ಇಬ್ಬರು ಆರೋಪಿಗಳು

  • Share this:
ಹುಬ್ಬಳ್ಳಿ(ಸೆಪ್ಟೆಂಬರ್​. 03): ಹುಬ್ಬಳ್ಳಿ ಉಪನಗರ ಠಾಣೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಯುವಕರನ್ನು ಬಂಧಿಸಿದ್ದಾರೆ. ದೇಶಪಾಂಡೆ ನಗರದ ಚರ್ಚ್ ಬಳಿ ಇಬ್ಬರು ಯುವಕರನ್ನು ವಶಕ್ಕೆ ಪಡೆಯಲಾಗಿದೆ. ಗದಗ ಮೂಲದ ಮಾರುತಿ ಹರಿಣಶಿಕಾರಿ, ಚಂದಪ್ಪ ಹರಿಣಶಿಕಾರಿ ಬಂಧಿತರು. ಆರೋಪಿಗಳಿಂದ ಐದು ಕೆಜಿ ಗಾಂಜಾ ಹಾಗೂ ಒಂದು ಬೈಕ್ ಜಪ್ತಿ ಮಾಡಲಾಗಿದೆ.

ಬಂಧಿತರು ಹುಬ್ಬಳ್ಳಿ- ಧಾರವಾಡದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಪೂರೈಕೆ ಮಾಡುತ್ತಿದ್ದರು ಎನ್ನಲಾಗಿದೆ‌. ಹೊರ ರಾಜ್ಯಗಳಿಂದ ಅವಳಿ ನಗರಕ್ಕೆ ಬೃಹತ್ ಪ್ರಮಾಣದ ಗಾಂಜಾ ಪೂರೈಕೆ ಆಗುತ್ತೆ ಎನ್ನುವ ದೂರುಗಳು ನಿರಂತರವಾಗಿ ಕೇಳಿ ಬರುತ್ತಿವೆ. ಹೀಗಾಗಿ ನಿನ್ನೆಯಷ್ಟೇ ಹುಬ್ಬಳ್ಳಿ- ಧಾರವಾಡ ಕಮೀಷನರೇಟ್‌ನ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಡಿಜಿಪಿ ಪ್ರವೀಣ ಸೂದ್ ಸಭೆ ನಡೆಸಿದ್ದರು. ಮಾದಕವಸ್ತುಗಳ ಸಾಗಾಟದ ಮೇಲೆ ನಿಗಾ ಇರಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.

ಪೊಲೀಸ್ ಮಹಾ ನಿರ್ದೇಶಕರ ಮೀಟಿಂಗ್ ಬೆನ್ನಲ್ಲೇ ಉಪನಗರ ಠಾಣೆ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಸದ್ಯಕ್ಕೆ ಇಬ್ಬರನ್ನು ಬಂಧಿಸಿದ್ದು, ಗಾಂಜಾ ಮೂಲ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ. ಗಾಂಜಾ ಜಾಲ ಭೇದಿಸಲು ತನಿಖೆ ನಡೆಸುತ್ತಿರುವ ಪೊಲೀಸರು ಅಕ್ರಮದಲ್ಲಿ ಶಾಮೀಲಾಗಿರುವ ಮತ್ತಷ್ಟು ಜನರ ಪತ್ತೆಗೆ ಬಲೆ ಬೀಸಿದ್ದಾರೆ. ಬಂಧಿತ ಮಾರುತಿ ಮತ್ತು ಚಂದಪ್ಪ ಕಳೆದ ಹಲವು ವರ್ಷಗಳಿಂದ ಅವಳಿ ನಗರದ ಸಂಪರ್ಕದಲ್ಲಿ ಇದ್ದಾರೆ. ಸ್ಥಳೀಯರ ಸಹಕಾರ ಪಡೆದು ಗಾಂಜಾ ಪೂರೈಕೆ ಮಾಡುತ್ತಾರೆ ಎನ್ನಲಾಗಿದೆ. ಈ ಕುರಿತು ಉಪನಗರ ಠಾಣೆ ಪೊಲೀಸರು ಖಚಿತ ಮಾಹಿತಿ ಸಂಗ್ರಹಿಸಿದ್ದರು.

ಇದನ್ನೂ ಓದಿ : ಪೀರನವಾಡಿ ಗ್ರಾಮದ ವೃತ್ತಕ್ಕೆ ಛತ್ರಪತಿ ಶಿವಾಜಿ ಹೆಸರು ನಾಮಕರಣ : ರಾಯಣ್ಣ, ಶಿವಾಜಿ ಪ್ರತಿಮೆಗೆ ಗೌರವ ಸಲ್ಲಿಸಿದ ಗ್ರಾಮಸ್ಥರು..!

ಪೊಲೀಸ್ ಆಯುಕ್ತ ಆರ್. ದಿಲೀಪ್, ಉಪ ಆಯುಕ್ತ ಕೃಷ್ಣಕಾಂತ ಅವರ ಮಾರ್ಗದರ್ಶನದಲ್ಲಿ ತಂಡ ರಚಿಸಲಾಗಿತ್ತು. ಉಪನಗರ ಠಾಣೆ ಇನ್ಸ್‌ಪೆಕ್ಟರ್ ಎಸ್‌.ಕೆ. ಹೊಳೆಣ್ಣವರ್, ಪಿಎಸ್‌ಐ ಸೀತಾರಾಮ್ ಮತ್ತು ಅಶೋಕ್ ಹಾಗೂ ಸಿಬ್ಬಂಧಿಗಳಾದ ಸುನೀಲ್, ಮಲ್ಲಿಕಾರ್ಜುನ, ಮಂಜುನಾಥ್, ಕರಿಬಸಪ್ಪ, ಬಸವರಾಜ್, ರೇಣಪ್ಪ, ರವಿ ತಂಡ ದುಷ್ಕರ್ಮಿಗಳ ಬಂಧನಕ್ಕೆ ಕಾರ್ಯಾಚರಣೆ ನಡೆಸಿದ್ದರು. ದೇಶಪಾಂಡೆ‌ ನಗರದ ಚರ್ಚ್ ಬಳಿ ಬೈಕ್‌ನಲ್ಲಿ ಗಾಂಜಾ ಸಾಗಿಸುತ್ತಿದ್ದ ಆರೋಪಿಗಳನ್ನು ಯಶಸ್ವಿಯಾಗಿ ವಶಕ್ಕೆ ಪಡೆಯಲಾಗಿದೆ.

ಬಂಧಿತರಿಂದ ಹಲವು ಮಾಹಿತಿಗಳು ಸಿಕ್ಕಿದ್ದು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಒಟ್ಟಾರೆ ಡಿಜಿಪಿ ವಾರ್ನಿಂಗ್ ನಂತರ ಮೈಕೊಡವಿ ಮೇಲೆದ್ದಿರುವ ಹುಬ್ಬಳ್ಳಿ- ಧಾರವಾಡ ಅವಳಿ ನಗರದ ಪೊಲೀಸರು ಗಾಂಜಾ ದಂಧೆಕೋರರ ಜನ್ಮ ಜಾಲಾಡುತ್ತಿದ್ದಾರೆ.
Published by:G Hareeshkumar
First published: