HOME » NEWS » District » CRIME NEWS FATHER KILLED IS OWN DAUGHTER IN RAICHUR SBR MAK

Crime News: ಜಗಳವಾಡಿ ಮಗಳು ಹೊರಗೆ ಹೋಗಿದ್ದೇ ತಪ್ಪಾಯ್ತ?; ಕರುಳ ಕುಡಿಯನ್ನೇ ಕೊಂದ ತಂದೆ

ಮಗನ ಜೊತೆ ಜಗಳ ತೆಗೆದಿದ್ದ ಕಾರಣಕ್ಕೆ ಆರೋಪಿ ತಿಮ್ಮಯ್ಯ ಮಗಳನ್ನೇ ಬಲಿ ಪಡೆಯುವ ಹಂತಕ್ಕೆ ಹೋಗಿದ್ದು ನಿಜಕ್ಕೂ ನಂಬಲಾಗುತ್ತಿಲ್ಲ. ಏಕೆಂದರೆತಿಮ್ಮಯ್ಯ ಅವರದ್ದು ತುಂಬಾ ಖುಷಿಖುಷಿಯಿಂದ ಇದ್ದ ತುಂಬು ಕುಟುಂಬ ಎನ್ನಲಾಗುತ್ತಿದೆ.

news18-kannada
Updated:February 23, 2021, 5:11 PM IST
Crime News: ಜಗಳವಾಡಿ ಮಗಳು ಹೊರಗೆ ಹೋಗಿದ್ದೇ ತಪ್ಪಾಯ್ತ?; ಕರುಳ ಕುಡಿಯನ್ನೇ ಕೊಂದ ತಂದೆ
ಸಾಂದರ್ಭಿಕ ಚಿತ್ರ.
  • Share this:
ರಾಯಚೂರು: ಮನೆಯಲ್ಲಿ ಚಿಕ್ಕವರಿದ್ದಾಗ ಅಕ್ಕ-ತಂಗಿ ಜಗಳವಾಡುವುದು ಸಹಜ. ಆದರೆ, ಇಲ್ಲಿ ತಮ್ಮನೊಂದಿಗೆ ಜಗಳವಾಡಿದ್ದೆ ಬಾಲಕಿಯ ಜೀವಕ್ಕೆ ಎರವಾಗಿದೆ. ಇದೇ ಜಗಳದ ಹಿನ್ನೆಲೆಯಲ್ಲಿ ಕುಡುಕ ತಂದೆ ಸಿಟ್ಟಿನ‌ ಕೈಯಲ್ಲಿ ಬುದ್ದಿ ಕೊಟ್ಟು ಮಗಳನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಇಂದು ಬೆಳಗ್ಗೆ ಮನೆಯ ಎದುರು ಪಾತ್ರೆ ತೊಳೆಯುತ್ತಿದ್ದ ಮಗಳನ್ನು ಕೊಡಲಿಯಿಂದ ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದಾನೆ. ಈ ಹೃದಯವಿದ್ರಾವಕ ಘಟನೆ ರಾಯಚೂರು ಜಿಲ್ಲೆಯ ಲಿಂಗಸಗೂರಿನಲ್ಲಿನಲ್ಲಿ ನಡೆದಿದೆ. ಯರಜಂತಿಯ 14 ವರ್ಷದ ಬಾಲಕಿ ಮೋನಮ್ಮ ತಂದೆಯಿಂದಲೇ ಕೊಲೆಯಾಗಿರೋ ನತದೃಷ್ಟ ಬಾಲಕಿ. ಮೋನಮ್ಮ ತನ್ನ ಇಬ್ಬರು ತಮ್ಮಂದಿರು ಹಾಗೂ ತಂಗಿಯೊಂದಿಗೆ ಆಡುತ್ತಾ ದಿನಗಳನ್ನ ಕಳೆಯುತ್ತಿದ್ದಳು.

ಗುರುಗಂಟಾ ಬಳಿಯಲ್ಲಿಯ ದೇವಿಯ ಜಾತ್ರೆಗೆ ಹರಕೆ ತೀರಿಸಲು ಟಗರು ಮರಿಯೊಂದನ್ನು ತಂದು ಮೋನಮ್ಮ ಮನೆಯ ಮುಂದೆ ಕಟ್ಟುವಾಗ ಅದು ಮೋನಮ್ಮನ ತಮ್ಮನ ಕಾಲನ್ನು ತುಳಿದಿದೆ‌. ಇದೇ ಕಾರಣಕ್ಕೆ ಮೋನಮ್ಮಳ ತಾಯಿ ಸರಿಯಾಗಿ ಕೆಲಸ ಮಾಡೋದಕ್ಕೆ ಆಗಲ್ವಾ ಎಂದು ಗದರಿಸಿದ್ದಾಳೆ.

ಇದರಿಂದ ಮೋನಮ್ಮ ಅಕ್ಷರಶಃ ನೊಂದಿದ್ದಾಳೆ. ನಾನು ಇಷ್ಟೊಂದ್ ಕೆಲಸ ಮಾಡಿದ್ರೂ ನನಗೇ ಬೈತೀರಾ ಎಂದು ಸಂಬಂಧಿಕರ ಮನೆಗೆ ಹೋಗಿ ಅಳುತ್ತಾ ಕೂತಿದ್ದಾಳೆ. ಅಲ್ಲದೇ ಅಲ್ಲಿಯೇ ಮಲಗಿದ್ದಾಳೆ. ಸ್ವಲ್ಪ ತಡವಾಗಿ ಮನೆಗೆ ಬಂದಿದ್ದಾಳೆ. ಈ ವಿಷಯವನ್ನ ಮೋನಮ್ಮಳ ತಾಯಿ ಹನುಮಂತಿ ರಾತ್ರಿ ತನ್ನ ಗಂಡನಿಗೆ ಹೇಳಿದ್ದಾಳೆ. ಈ ವೇಳೆಯೂ ಮನೆಯಲ್ಲಿ ಸಣ್ಣದೊಂದು ಜಗಳವಾಗಿದೆ ಎಂದು ಹೇಳಲಾಗುತ್ತಿದೆ.

ಆದರೆ, ಇದೇ ಕಾರಣಕ್ಕೆ ಬೆಳಗ್ಗೆ ಕ್ರೂರಿ ತಂದೆ ಮಗಳನ್ನೇ ಕೊಡಲಿಯಿಂದ ಕೊಚ್ಚಿ ಕೊಲೆಗೈದಿದ್ದಾನೆ. ಮಗನ ಜೊತೆ ಜಗಳ ತೆಗೆದಿದ್ದ ಕಾರಣಕ್ಕೆ ಆರೋಪಿ ತಿಮ್ಮಯ್ಯ ಮಗಳನ್ನೇ ಬಲಿ ಪಡೆಯುವ ಹಂತಕ್ಕೆ ಹೋಗಿದ್ದು ನಿಜಕ್ಕೂ ನಂಬಲಾಗುತ್ತಿಲ್ಲ. ಏಕೆಂದರೆತಿಮ್ಮಯ್ಯ ಅವರದ್ದು ತುಂಬಾ ಖುಷಿಖುಷಿಯಿಂದ ಇದ್ದ ತುಂಬು ಕುಟುಂಬ ಎನ್ನಲಾಗುತ್ತಿದೆ. ಒಬ್ಬರನ್ನೊಬ್ಬರು ಬಿಟ್ಟು ಇರದೇ ಇದ್ದ ಸುಖ ಸಂಸಾರ. ಪ್ರತೀ ದಿನ ಮೋನಮ್ಮ ಕುರಿಗಳನ್ನ ಮೇಯಿಸಿಕೊಂಡು ಬರುತ್ತಿದ್ದಳು.

ಇದನ್ನೂ ಓದಿ: ಟೂಲ್​ಕಿಟ್​ ಪ್ರಕರಣ; ಪರಿಸರ ಕಾರ್ಯಕರ್ತೆ ದಿಶಾ ರವಿಗೆ ಜಾಮೀನು ನೀಡಿದ ದೆಹಲಿ ಕೋರ್ಟ್​
ಮತ್ತೊಂದೆಡೆ ತನ್ನ ಮಕ್ಕಳಿಗೆ ಸ್ವಲ್ಪ ಏನಾದ್ರೂ ಆದ್ರೆ ಸಹಿಸಿಕೊಳ್ಳಲಾಗದೇ ಇರ್ತಿದ್ದ ಆ ತಂದೆಯೇ ಮಗಳಿಗೆ ಈಗ ವಿಲನ್ ಆಗಿದ್ದಾನೆ. ಬೆಳ್ಳಂಬೆಳ್ಳಗ್ಗೆ ಕುಡಿತದ ಅಮಲಿನಲ್ಲಿದ್ದ ತಿಮ್ಮಯ್ಯ ಕ್ಷುಲ್ಲಕ ಕಾರಣಕ್ಕೆ ಮಗಳನ್ನೇ ಕೊಂದು ಕೊಲೆ ಮಾಡಿ ಎಸ್ಕೇಪ್ ಆಗಿದ್ದಾನೆ. ಯಾವಾಗ ತಿಮ್ಮಯ್ಯ ಮಗಳನ್ನ ಕೊಚ್ಚಿದನೋ ಆಗ ಇಡೀ ಕುಟುಂಬಕ್ಕೆ ದಿಗಿಲು ಬಡಿದಂತಾಗಿದ್ದು, ಮಗಳನ್ನ ಕಳೆದುಕೊಂಡ ಕುಟುಂಬದ ಆಕ್ರಂಧನ ಮುಗಿಲು ಮುಟ್ಟಿದೆ. 

Youtube Videoಈ‌ ಹನುಮಂತಿ ಹಾಗು ತಿಮ್ಮಯ್ಯ ಬೆಂಗಳೂರಿಗೆ ದುಡಿಯಲು ಹೋದವರು ಹದಿನೈದು ದಿನಗಳ ಹಿಂದೆ ಅಷ್ಟೆ ಜಾತ್ರೆಗಾಗಿ ಬಂದಿದ್ದಾರೆ. ಹಬ್ಬದ ವೇಳೆಯೇ ಮನೆಯಲ್ಲಿ ಇಂತಹದ್ದೊಂದು ದುರಂತ ನಡೆದಿರುವುದು ವಿಷಾಧನೀಯ. ಸದ್ಯ ಹಟ್ಟಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ತಿಮ್ಮಯ್ಯ ಹುಡಕಾಟಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
Published by: MAshok Kumar
First published: February 23, 2021, 5:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories