ದೊಡ್ಡಬಳ್ಳಾಪುರ; ಮಗನ ನಿಶ್ಚಿತಾರ್ಥಕ್ಕೆ ಬಂದ ಅಪ್ಪ ಲಿಫ್ಟ್​ ಗುಂಡಿಗೆ ಬಿದ್ದು ಸಾವು

Crime News: ನಿನ್ನೆ ಮಧ್ಯಾಹ್ನ ಸುಮಾರು 1 ಗಂಟೆಯ ಸಮಯದಲ್ಲಿ  ವರನ ತಂದೆ ಮಂಜುನಾಥ್  ಮೂರನೇ ಮಹಡಿಯಲ್ಲಿ ಆಯ ತಪ್ಪಿ ಲಿಫ್ಟ್  ಗುಂಡಿಗೆ ಬಿದ್ದಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ  ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ.

ದುರ್ಘಟನೆ ನಡೆದ ಹೋಟೆಲ್

ದುರ್ಘಟನೆ ನಡೆದ ಹೋಟೆಲ್

  • Share this:
ದೊಡ್ಡಬಳ್ಳಾಪುರ (ಡಿ. 7): ಹೋಟೆಲ್​ನಲ್ಲಿ ಮಗನ ಮದುವೆ ನಿಶ್ಚಿತಾರ್ಥ ಸಮಾರಂಭದಲ್ಲಿ ಭಾಗಿಯಾಗಿದ್ದ ತಂದೆ ಆಯ ತಪ್ಪಿ  ಹೋಟೆಲ್​ನ ಲಿಫ್ಟ್  ಗುಂಡಿಗೆ ಬಿದ್ದು ಸಾವನ್ನಪ್ಪಿದ್ದಾರೆ. ದೊಡ್ಡಬಳ್ಳಾಪುರ  ತಾಲೂಕಿನ ಗ್ರಾಮಾಂತರ ಪೊಲೀಸ್  ಠಾಣೆಯ ಪಕ್ಕದ ಸಮೃದ್ಧಿ ಗ್ರ್ಯಾಂಡ್ ಹೊಟೇಲ್​ ನಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ 60 ವರ್ಷದ ಮಂಜುನಾಥ್  ಎಂಬ ವ್ಯಕ್ತಿ ಮೃತಪಟ್ಟಿದ್ದಾರೆ. ಇವರು ಬೆಂಗಳೂರು ನಗರ ಜಿಲ್ಲೆಯ ಬೆಂಗಳೂರು  ದಕ್ಷಿಣ  ತಾಲೂಕಿನ ಎಲೇಕೊಡಿಗೇನಹಳ್ಳಿ ನಿವಾಸಿಯಾಗಿದ್ದಾರೆ.

ಮೃತ ವ್ಯಕ್ತಿಯ ಮಗ ದರ್ಶನ್ ಅವರ ಮದುವೆಯನ್ನು ದೊಡ್ಡಬಳ್ಳಾಪುರ ತಾಲೂಕಿನ  ಕಂಟನಕುಂಟೆಯ  ಶಿಲ್ಪಾ ಎಂಬುವವರ ಜೊತೆ ನಿಶ್ಚಯ ಮಾಡಲಾಗಿತ್ತು. ಭಾನುವಾರ ಸಮೃದ್ಧಿ  ಗ್ರ್ಯಾಂಡ್  ಹೊಟೇಲ್ ನ ಮೂರನೇ ಮಹಡಿಯಲ್ಲಿ  ನಿಶ್ಚಿತಾರ್ಥ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ನಿನ್ನೆ ಮಧ್ಯಾಹ್ನ ಸುಮಾರು 1 ಗಂಟೆಯ ಸಮಯದಲ್ಲಿ  ವರನ ತಂದೆ ಮಂಜುನಾಥ್  ಮೂರನೇ ಮಹಡಿಯಲ್ಲಿ ಆಯ ತಪ್ಪಿ ಲಿಫ್ಟ್  ಗುಂಡಿಗೆ ಬಿದ್ದಿದ್ದಾರೆ.

ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಬೆಂಗಳೂರಿನ  ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ  ಫಲಕಾರಿಯಾಗದೆ  ಅವರು ಸಾವನ್ನಪ್ಪಿದ್ದಾರೆ. ಮಂಜುನಾಥ್ ಅವರ  ಸಾವಿಗೆ ಹೊಟೇಲ್  ಮಾಲೀಕರ ನಿರ್ಲಕ್ಷ್ಯವೇ ಕಾರಣವೆಂದು ಹೇಳಲಾಗಿದೆ. ಕೆಲವು ದಿನಗಳಿಂದ ಹೊಟೇಲ್ ನ ಮೂರು ಮಹಡಿಗಳಿಗೆ ಲಿಫ್ಟ್  ಅಳವಡಿಸುವ  ಕಾಮಗಾರಿ ನಡೆಯುತ್ತಿದ್ದು, ಮೆಟ್ಟಿಲ ಬಳಿಯೇ  ಲಿಫ್ಟ್  ಅಳವಡಿಸುವ ಕಾರ್ಯ ನಡೆದಿತ್ತು.

ಲಿಫ್ಟ್  ಬಳಿ ತಡೆಗೋಡೆ ಅಳವಡಿಸದೆ ಇದ್ದದ್ದು ಸಾವಿಗೆ ಕಾರಣವಾಗಿದೆ ಎನ್ನಲಾಗಿದೆ. ದೊಡ್ಡಬಳ್ಳಾಪುರ  ನಗರ ಪೊಲೀಸ್  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published by:Sushma Chakre
First published: