HOME » NEWS » District » CRIME NEWS A MAN KILLED HIS WIFE IN HUBBALLI SAKLB MAK

Crime News: ಶೀಲ ಶಂಕಿಸಿ ಪತ್ನಿ ಕೊಲೆ, ಆತ್ಮಹತ್ಯೆ ಎಂದು ಬಿಂಬಿಸಲು ಹೋಗಿ ಪೊಲೀಸರ ಬಲೆಗೆ ಬಿದ್ದ ಪತಿ!

ಘಟನೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.  ವಿದ್ಯಾನಗರ ಪೊಲೀಸರು ಆರೋಪಿ ಕಾರು ಚಾಲಕ ಮಹದೇವಪ್ಪನನ್ನು ಬಂಧಿಸಿ, ತನಿಖೆ ಮುಂದುವರೆಸಿದ್ದಾರೆ.

news18-kannada
Updated:March 15, 2021, 4:20 PM IST
Crime News: ಶೀಲ ಶಂಕಿಸಿ ಪತ್ನಿ ಕೊಲೆ, ಆತ್ಮಹತ್ಯೆ ಎಂದು ಬಿಂಬಿಸಲು ಹೋಗಿ ಪೊಲೀಸರ ಬಲೆಗೆ ಬಿದ್ದ ಪತಿ!
ಪ್ರಾತಿನಿಧಿಕ ಚಿತ್ರ
  • Share this:
ಹುಬ್ಬಳ್ಳಿ; ಪತಿಯೇ ಪತ್ನಿಗೆ ನೇಣು ಬಿಗಿದು ಕೊಲೆ ಮಾಡಿ, ಆತ್ಮಹತ್ಯೆ ಎಂದು ಬಿಂಬಿಸಲು ಹೋಗಿ ತಾನೇ ಪೊಲೀಸರ ಬಲೆಗೆ ಬಿದ್ದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ತನ್ನ ಪತ್ನಿಯ ಮೇಲೆ ಅನುಮಾನಪಡುತ್ತಿದ್ದ ಪತಿಯೊಬ್ಬ ಪತ್ನಿಯನ್ನು ನೇಣಿ ಬಿಗಿದು ಮನೆಯಲ್ಲೆ ಕೊಲೆ ಮಾಡಿದ್ದಾನೆ. ಹುಬ್ಬಳ್ಳಿಯ ಲಿಂಗರಾಜನಗರ ಬಳಿಯ ಹನುಮಂತನಗರ ಬಡಾವಣೆಯಲ್ಲಿ ವಾಸವಾಗಿದ್ದ ಕಾರು ಚಾಲಕ ಮಹಾದೇವಪ್ಪ ಎಂಬಾತನಿಂದ ಕೃತ್ಯ ನಡೆದಿದೆ. 32 ವರ್ಷದ ರೇಣುಕಾ ಕೊಲೆಯಾದ ದುರ್ದೈವಿಯಾಗಿದ್ದಾಳೆ. ತನ್ನ ಮೊದಲ ಗಂಡನನ್ನು ಬಿಟ್ಟು ಬಂದಿದ್ದ ಕೋಲ್ಕತಾ ಮೂಲದ ರೇಣುಕಾಳನ್ನು ಕಳೆದ ವರ್ಷ ಕಾರು ಚಾಲಕ ಮಹಾದೇವಪ್ಪ ಮದುವೆಯಾಗಿದ್ದ. ಆದರೆ, ಪತ್ನಿಯ ಶೀಲದ ಮೇಲೆ ಸದಾ ಸಂಶಯ ವ್ಯಕ್ತಪಡಿಸುತ್ತಿದ್ದ ಪತಿ ಮಹಾದೇವಪ್ಪ ಇಂದು ಬೆಳ್ಳಿಗ್ಗೆ ಪತ್ನಿಯನ್ನು ಮನೆಯಲ್ಲೆ ನೇಣು ಬಿಗಿದು ಕೊಲೆ ಮಾಡಿದ್ದಾನೆ.

ಕೊಲೆ ಮಾಡಿದ ನಂತರ ಪತ್ನಿ ರೇಣುಕಾ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆಂದು ಬಿಂಬಿಸುವ ಪ್ರಯತ್ನವನ್ನು ಮಾಡಿದ್ದ ಪತಿ, ಕೊಲೆ ಆರೋಪ ಮುಕ್ತವಾಗಲು ಹುನ್ನಾರ ನಡೆಸಿದ್ದ. ಆದರೆ ಅನುಮಾನಗೊಂಡ ಪೊಲೀಸರ ವಿಚಾರಣೆ ನಡೆಸಿದಾಗ ಎಲ್ಲ ಸತ್ಯವನ್ನೂ ಬಾಯಿಬಿಟ್ಟಿದ್ದಾನೆ. ಕೊಲೆ ಪ್ರಕರಣದಿಂದ ಬಚಾವಾಗಲು ಹೋಗಿ ತಾನೇ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಇದನ್ನೂ ಓದಿ: Kamal Hassan Car Attack: ಪ್ರಚಾರದ ವೇಳೆ ಮಕ್ಕಳ್ ನೀಧಿ ಮಯ್ಯಂ ಮುಖ್ಯಸ್ಥ-ನಟ ಕಮಲಹಾಸನ್ ಮೇಲೆ ದಾಳಿ

ಘಟನೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.  ವಿದ್ಯಾನಗರ ಪೊಲೀಸರು ಆರೋಪಿ ಕಾರು ಚಾಲಕ ಮಹದೇವಪ್ಪನನ್ನು ಬಂಧಿಸಿ, ತನಿಖೆ ಮುಂದುವರೆಸಿದ್ದಾರೆ. ‌ಘಟನೆಯ ಕುರಿತು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
Published by: MAshok Kumar
First published: March 15, 2021, 4:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories