ಗಂಡನ ಕೊಲೆ ಮಾಡಿಸಿದ್ದ ಹೆಂಡತಿ ಸೇರಿದಂತೆ ನಾಲ್ವರು ಆರೋಪಿಗಳ ಬಂಧನ

ಅಮ್ಜದ್ ಖಾನ್ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಲಕ್ಷ್ಮಿಸಿಂಗ್ ಗಂಡ ಶಂಕರ್ ಸಿಂಗ್‌ಗೆ ನಿದ್ರೆ ಮಾತ್ರೆ ನೀಡಿ, ತದನಂತರ ಹಗ್ಗದಿಂದ ಬಿಗಿದು ಕೊಲೆ ಮಾಡಿದ್ದರು

news18-kannada
Updated:June 3, 2020, 9:30 AM IST
ಗಂಡನ ಕೊಲೆ ಮಾಡಿಸಿದ್ದ ಹೆಂಡತಿ ಸೇರಿದಂತೆ ನಾಲ್ವರು ಆರೋಪಿಗಳ ಬಂಧನ
ಆರೋಪಿಗಳು
  • Share this:
ಕೊಪ್ಪಳ(ಜೂ.03): 15 ವರ್ಷಗಳ ಹಿಂದೆ ಕೊಲೆ ನಡೆದು, ಮುಚ್ಚಿ ಹೋಗಿದ್ದ ಪ್ರಕರಣವನ್ನು ಗಂಗಾವತಿ ಪೊಲೀಸರು ಭೇದಿಸಿದ್ದಾರೆ. ಜಿಲ್ಲೆಯ ಗಂಗಾವತಿ ನಗರದಲ್ಲಿ 2005 ರಲ್ಲಿ ಕೊಲೆ ಆಗಿತ್ತು. ಆದರೆ, ಘಟನೆ ನಡೆದು 15 ವರ್ಷಗಳ ಬಳಿಕ ಕೊಲೆಯಾದ ವ್ಯಕ್ತಿಯ ಮಗಳು ದೂರು ಕೊಟ್ಟ ಹಿನ್ನೆಲೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ. ಶಂಕರ್ ಸಿಂಗ್ ಎನ್ನುವ ವ್ಯಕ್ತಿಯನ್ನು ಆತನ ಹೆಂಡತಿಯಾದ ಲಕ್ಷ್ಮಿಸಿಂಗ್ ಕೊಲೆ ಮಾಡಿಸಿದ್ದು, ಆಕೆಗೆ ಸಹಾಯ ಮಾಡಿದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಲಕ್ಷ್ಮಿ ಸಿಂಗ್ ಜೊತೆ ಅಮ್ಜದ್ ಖಾನ್, ಅಬ್ದುಲ್ ಹಫೀಜ್, ಬಾಬಾ ಜಾಕೀರಬಾಷ, ಶಿವನಗೌಡ ನವಲಿ ಎನ್ನುವವರು ಇದೀಗ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ.

ಪ್ರಿಯಕರನ ಜೊತೆ  ಸೇರಿ ಗಂಡನ ಕೊಲೆಗೈದ ಹೆಂಡತಿ.!

2005 ರಲ್ಲಿ ಲಕ್ಷ್ಮೀ ಸಿಂಗ್ ಗಂಡ ಪಂಪಾಪತಿ ಅಲಿಯಾಸ್ ಶಂಕರ್ ಸಿಂಗ್ ಕೊಲೆಯಾಗುತ್ತೆ. ಕೊಲೆ ಕಾರಣವೇ ಲಕ್ಷ್ಮೀ ಸಿಂಗ್‌ಳ ಕಳ್ಳ ಕಾಮದಾಟ. ಕೊಲೆಯ ಎರಡನೇ ಆರೋಪಿಯಾದ ಅಮ್ಜದ್ ಖಾನ್ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಲಕ್ಷ್ಮಿಸಿಂಗ್  ಗಂಡ  ಶಂಕರ್ ಸಿಂಗ್‌ಗೆ ನಿದ್ರೆ ಮಾತ್ರೆ ನೀಡಿ, ತದನಂತರ ಹಗ್ಗದಿಂದ ಬಿಗಿದು ಹತ್ಯೆಗೈಯುತ್ತಾರೆ. ಕೊಲೆ ಮಾಡಿದ ದಿನದ ಹಿಂದಿನ ದಿನ ಮಕ್ಕಳನ್ನು ಬೇರೆ ಊರಿಗೆ ಕಳುಹಿಸಿ ಕೊಲೆ ಸ್ಕೇಚ್ ಹಾಕಿದ್ರು. ಇದಾದ ಬಳಿಕ ಲಕ್ಷ್ಮೀ ಸಿಂಗ್ ತಾನು ಇದ್ದ ಮನೆಯ ಕಾಂಪೌಂಡ್ ಒಳಗೆ ತೆಗ್ಗು ಅಗೆದು ಶವವನ್ನು ಮುಚ್ಚಿ ಹಾಕ್ತಾರೆ.

2015ರಲ್ಲಿ ಮನೆ ಖರೀದಿ ಮಾಡಿದಾಗ ಕೊಲೆಯ ಪ್ರಕರಣ ಬೆಳಕಿಗೆ

2015 ರಲ್ಲಿ ಕಾರಟಗಿ ತಾಲೂಕಿನ ಈಳಿಗನೂರು ಗ್ರಾಮದ ಶಿವನಗೌಡ ಎನ್ನುವವರು ಲಕ್ಷ್ಮಿಸಿಂಗ್ ಮನೆ ಖರೀದಿ ಮಾಡುತ್ತಾರೆ. ಇದೇ ವೆಳೆ ಟಾಯ್ಲೆಟ್ ರೂಮ್ ಕಟ್ಟಿಸೊಕೆ ಶಿವನಗೌಡ ತೆಗ್ಗು ತೆಗೆಸಿದಾಗ ಶವದ ಅವಶೇಷಗಳು ಪತ್ತೆಯಾಗುತ್ತವೆ. ಇದನ್ನು ಗಮನಿಸಿ ಶಿವನಗೌಡ, ಮನೆ ಖರೀದಿಗೆ ಕೊಟ್ಟ ಲಕ್ಷ್ಮೀಸಿಂಗ್ ಆಕೆಯ ಮಕ್ಕಳಾದ ವಿದ್ಯಾಸಿಂಗ್ ಕರೆಸಿ ಮಾಹಿತಿ ನೀಡುತ್ತಾನೆ. ಆದರೆ, ಇದರಿಂದ ಗಾಬರಿಯಾದ ಲಕ್ಷ್ಮೀಸಿಂಗ್ ಮಕ್ಕಳಿಗೆ ಹೆದರಿಸಿ ಶಿವನಗೌಡ ಜೊತೆ ಸೇರಿಕೊಂಡು ಪ್ರಕರಣವನ್ನು ಅಲ್ಲಿಗೆ ಮುಚ್ಚಿ ಹಾಕುತ್ತಾಳೆ. ತದನಂತರ ಕಳೆ ಬರಹವನ್ನು ಹೊಸಪೇಟೆ ಊರಿನ ಹೊರವಲಯದಲ್ಲಿ ಸುಟ್ಟ ಅದರ ಬೂದಿಯನ್ನು ಆನೆಗೊಂದಿಯ ತಳವಾರಘಟ್ಟದ ತುಂಗಭದ್ರಾ ನದಿಯಲ್ಲಿ ಬಿಟ್ಟು ಬಂದಿದ್ದು ಮತ್ತಷ್ಟು ಪ್ರಕರಣ ಮುಚ್ಚಲು ಕಾರಣವಾಗಿತ್ತು.

ಹೆದರಿ ಸುಮ್ಮನಾಗಿದ್ದ ಮಗಳಿಂದ ಪ್ರಕರಣ ಬೆಳಕಿಗೆ

2015 ರಲ್ಲಿಯೇ ಕೊಲೆ ಪ್ರಕರಣ ಕೊಲೆಯಾದ ಶಂಕರ್ ಸಿಂಗಳ ಮಗಳಾದ ವಿದ್ಯಾಸಿಂಗ್   ಗಮನಕ್ಕೆ ಬಂದ್ರೂ ಕೊಲೆ ಆರೋಪಿಗಳ ಬೆದರಿಕೆಗೆ ಸುಮ್ಮನೆ ಆಗಿದ್ದಳು. ಆದರೆ, ಕೆಲ ದಿನಗಳ ನಂತರ ವಿದ್ಯಾಸಿಂಗ್ ಮತ್ತು ಅವಳ ತಾಯಿ ನಡುವೆ ಜಗಳವಾಗಿದ್ದು, ಇದರಿಂದ ಆಕ್ರೋಶಗೊಂಡ ಮಗಳು ನನಗೆ ರಕ್ಷಣೆ ನೀಡಿ ತಂದೆ ಕೊಲೆ ಬಗ್ಗೆ ತನಿಖೆ ನಡೆಸುವಂತೆ ಗಂಗಾವತಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ. ತೀಕ್ಷ್ಣವಾಗಿ ಕಾರ್ಯಪ್ರವೃತ್ತರಾದ ಕೊಪ್ಪಳ ಎಸ್ಪಿ ಜಿ.ಸಂಗೀತಾ ಹಾಗೂ ಗಂಗಾವತಿ ಡಿವೈಎಸ್ಪಿ ಬಿ.ಪಿ ಚಂದ್ರಶೇಖರ ಸೂಚನೆ ಮೇರೆಗೆ ಗಂಗಾವತಿ ಠಾಣೆಯ ಪಿಐ ನೇತೃತ್ವದಲ್ಲಿ ತಂಡ ರಚನೆ ಮಾಡಿ ಪ್ರಕರಣ ಪತ್ತೆ ಹಚ್ಚಿದ್ದಾರೆ.ಇದನ್ನೂ ಓದಿ : ಕೊರೋನಾ ಎಫೆಕ್ಟ್​: ಇದುವರೆಗೂ ಬಿಎಂಟಿಸಿಗೆ ಆದ ಕಲೆಕ್ಷನ್​​ ಎಷ್ಟು ಗೊತ್ತೇ?

ಇನ್ನೂ ಪೊಲೀಸ್ ಅಧಿಕಾರಿಗಳಿಗೆ ಎಎಸ್ಐ ಶೈನಾಜ್ ಬೇಗಂ, ಕ್ರೈಂ ಪೊಲೀಸ ಸಿಬ್ಬಂದಿಗಳಾದ ಚಿರಂಜೀವಿ, ಅನೀಲ್ ಕುಮಾರ್, ವಿರೇಶ್, ಮಹೇಶ್, ಮೈಲಾರಪ್ಪ, ರಾಘವೇಂದ್ರ, ಪ್ರಭಾಕರ್, ನರಸಪ್ಪ ಸಾಥ್ ನೀಡಿದ್ದು, ಪ್ರಕರಣ ದಾಖಲಾದ ಕೆಲ ದಿನಗಳಲ್ಲಿ 15 ವರ್ಷದ ಕೊಲೆ ಪ್ರಕರಣ ಬಯಲಿಗೆ ಬಂದಿದೆ. ಇನ್ನೂ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾದ ಪೊಲೀಸ್ ತಂಡಕ್ಕೆ ಎಸ್ಪಿ ಬಹುಮಾನ ಘೋಷಣೆ ಮಾಡಿದ್ದಾರೆ. 
First published: June 3, 2020, 8:37 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading