• Home
  • »
  • News
  • »
  • district
  • »
  • ಹೆಣ್ಣು ಮಗುವಿಗೆ ತಾಯಿಯಾದ 13 ವರ್ಷದ ಅಪ್ರಾಪ್ತ ಬಾಲಕಿ ; ವಿಜಯಪುರದಲ್ಲೊಂದು ಅಮಾನವೀಯ ಘಟನೆ

ಹೆಣ್ಣು ಮಗುವಿಗೆ ತಾಯಿಯಾದ 13 ವರ್ಷದ ಅಪ್ರಾಪ್ತ ಬಾಲಕಿ ; ವಿಜಯಪುರದಲ್ಲೊಂದು ಅಮಾನವೀಯ ಘಟನೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ತಾಯಿ ಮನೆಯಲ್ಲಿ ಯಾರು ಇಲ್ಲದ ವೇಳೆ ಬಾಲಕಿಯೊಂದಿಗೆ ಸಲುಗೆಯಿಂದ ವರ್ತಿಸಿ ಮದುವೆಯಾಗಿ ನಂಬಿಸಿದ್ದ ಆರೋಪಿ ಈ ಕೃತ್ಯ ಎಸಗಿದ್ದಾನೆ

  • Share this:

ವಿಜಯಪುರ(ಜೂ.02): ವ್ಯಕ್ತಿಯೊಬ್ಬನ ಕಾಮದಾಟಕ್ಕೆ ಸಿಲುಗಿ ಅಪ್ರಾಪ್ತ ಬಾಲಕಿ ಹೆಣ್ಣು ಮಗುವಿಗೆ ಜನ್ಮ ನೀಡುವ ಮೂಲಕ ನರಕಯಾತನೆ ಅನುಭವಿಸುತ್ತಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನಲ್ಲಿ ನಡೆದಿದೆ. 13 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಕಟ್ಟಡ ಕಾರ್ಮಿಕ ಮದುವೆಯಾಗುವುದಾಗಿ ನಂಬಿಸಿ ನಿರಂತರವಾಗಿ ಒಂದು ವರ್ಷ ಈ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಆರೋಪಿ ಕೇಳಿ ಬಂದಿದೆ.  ಅಷ್ಟೇ ಅಲ್ಲ, ಅತ್ಯಾಚಾರದ ವಿಚಾರ ಯಾರಿಗಾದರೂ ತಿಳಿಸಿದರೆ ಜೀವ ಬೆದರಿಕೆ ಹಾಕಿದ್ದ ಎಂದು ಆರೋಪಿಯ ವಿರುದ್ಧ ದೂರು ದಾಖಲಾಗಿದೆ.


ಸಿಂದಗಿ ತಾಲೂಕಿನ ಗೊರವಗುಂಡಗಿ ಗ್ರಾಮದ 35 ವರ್ಷದ ಶರಣಬಸು ಅವರಾದಿ ಈ ಕೃತ್ಯ ಎಸಗಿದ್ದು, ಈತನಿಗೆ ಈಗಾಗಲೇ ಮದುವೆಯಾಗಿ ಮಕ್ಕಳಿವೆ. ಆದರೂ, ಮೂವರು ಮಕ್ಕಳೊಂದಿಗೆ ಬೆಂಗಳೂರಿನ ಕೆಂಗೇರಿ ಬಳಿಯ ಅನೆಪಾಳ್ಯದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ. ತಾಯಿ ಅಪ್ರಾಪ್ತ ಬಾಲಕಿಯ ಕುಟುಂಬದೊಂದಿಗೆ ಸ್ನೇಹ ಬೆಳೆಸಿದ್ದ. ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತೂಲಿನ ಈ ಬಾಲಕಿಯ ತಾಯಿ ತನ್ನ ಮೂವರು ಮಕ್ಕಳೊಂದಿಗೆ ಬೆಂಗಳೂರಿನಲ್ಲಿ ನೆಲೆಸಿ ಕೂಲಿ ಕೆಲಸ ಮಾಡಿಕೊಂಡಿದ್ದರು.


ತಾಯಿ ಮನೆಯಲ್ಲಿ ಯಾರು ಇಲ್ಲದ ವೇಳೆ ಬಾಲಕಿಯೊಂದಿಗೆ ಸಲುಗೆಯಿಂದ ವರ್ತಿಸಿ ಮದುವೆಯಾಗಿ ನಂಬಿಸಿದ್ದ ಆರೋಪಿ ಈ ಕೃತ್ಯ ಎಸಗಿದ್ದಾನೆ. ಈ ವಿಚಾರ ಬಾಲಕಿಯ ತಾಯಿಗೆ ಗೊತ್ತಾದ ಬಳಿಕ ಯಾರಿಗೂ ಹೇಳದಂತೆ ಅವಳಿಗೂ ಜೀವ ಬೆದರಿಕೆ ಹಾಕಿದ್ದ. ಲಾಕ್​​ ಡೌನ್ ಬಳಿಕ ಆ ತಾಯಿ ತನ್ನ ಮಕ್ಕಳೊಂದಿಗೆ ವಿಜಯಪುರ ಜಿಲ್ಲೆಯ ಸಿಂದಗಿಗೆ ವಾಪಸ್ಸಾಗಿದ್ದರು. ಆಗ ಆ ಬಾಲಕಿಯನ್ನು ಮದುವೆಯಾಗುವುದಾಗಿ ಮತ್ತೆ ನಂಬಿಸಿದ್ದ ಆರೋಪಿ ಆ ಬಾಲಕಿಯನ್ನು ಬೇರೋಂದು ಊರಿನಲ್ಲಿ ಶೆಡ್ ಹಾಕಿ ಇಟ್ಟಿದ್ದ ಎನ್ನಲಾಗಿದೆ.


ಇದನ್ನೂ ಓದಿ : ಫ್ರಾನ್ಸ್ ಅಧ್ಯಕ್ಷನ ಮನೆಯಲ್ಲಿ ಬೆಂಗಳೂರಿನಲ್ಲಿ ತಯಾರಿಸಿದ ಕೊರೋನಾ ಓವನ್; ಇದರ ವಿಶೇಷವೇನು ಗೊತ್ತಾ?


ಆತಂಕಕ್ಕೊಳಗಾದ ಬಾಲಕಿಯ ತಾಯಿ ವಿಜಯಪುರ ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ತನ್ನ ಅಳಲು ತೋಡಿಕೊಂಡಿದ್ದಾಳೆ. ಆಗ ಸಹಾಯವಾಣಿ ಕೇಂದ್ರ ನಿರ್ದೇಶಕಿ ಸುನಂದಾ ತೋಳಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಕೊನೆಗೂ ತಾಯಿಗೆ ಧೈರ್ಯ ಹೇಳಿದ್ದರಿಂದ ಬಾಲಕಿಯ ತಾಯಿ ವಿಜಯಪುರ ಜಿಲ್ಲೆಯ ಸಿಂದಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆರೋಪಿಯ ಪತ್ತೆಗೆ ಸಿಂದಗಿ ಪೊಲೀಸರು ಬಲೆ ಬೀಸಿದ್ದಾರೆ.

Published by:G Hareeshkumar
First published: