• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ರಾಮನಗರ-ಚನ್ನಪಟ್ಟಣದಲ್ಲಿ ಈ ಬಾರಿ ಪಟಾಕಿ ಮಾರಾಟದಲ್ಲಿ ಭಾರೀ ನಷ್ಟ, ಬೆಲೆಯಲ್ಲೂ ಇಳಿಮುಖ

ರಾಮನಗರ-ಚನ್ನಪಟ್ಟಣದಲ್ಲಿ ಈ ಬಾರಿ ಪಟಾಕಿ ಮಾರಾಟದಲ್ಲಿ ಭಾರೀ ನಷ್ಟ, ಬೆಲೆಯಲ್ಲೂ ಇಳಿಮುಖ

ರಾಮನಗರದಲ್ಲಿರುವ ಪಟಾಕಿ ಅಂಗಡಿ

ರಾಮನಗರದಲ್ಲಿರುವ ಪಟಾಕಿ ಅಂಗಡಿ

ಕೊರೋನಾ ಹಿನ್ನೆಲೆಯಲ್ಲಿ ರಾಮನಗರ ಮತ್ತು ಚನ್ನಪಟ್ಟಣದಲ್ಲಿ ಪಟಾಕಿ ಮಾರಾಟ ತೀರಾ ಕಡಿಮೆ ಆಗಿದೆ. ಗ್ರಾಹಕರ ಕೊರತೆ ಹಾಗೂ ಚೌಕಾಸಿಯಿಂದ ಪಟಾಕಿ ವ್ಯಾಪಾರಿಗಳು ಭಾರೀ ನಷ್ಟ ಅನುಭವಿಸಿದ್ದಾರೆ.

  • Share this:

ರಾಮನಗರ: ರೇಷ್ಮೆನಗರಿ ರಾಮನಗರ ಜಿಲ್ಲೆಯಲ್ಲಿ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಹಸಿರು‌ ಪಟಾಕಿ ಮಾರಾಟ ಮಾಡಲು ಜಿಲ್ಲಾಡಳಿತ ಅನುಮತಿ ನೀಡಿದ ಹಿನ್ನೆಲೆಯಲ್ಲಿ ರಾಮನಗರದ ಜಿಲ್ಲಾ ಕ್ರೀಡಾಂಗಣ ಹಾಗೂ ಚನ್ನಪಟ್ಟಣದ ಬಾಲಕರ ಪದವಿ ಪೂರ್ವ ಕಾಲೇಜು‌ ಮೈದಾನದಲ್ಲಿ ಪಟಾಕಿ ಅಂಗಡಿಗಳು ತೆರೆದಿವೆ. ಆದರೆ ಹಸಿರು ಪಟಾಕಿ ಅಂದರೆ ಸರ್ಕಾರಕ್ಕೆ ಗೊತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.


ಕೊರೋನಾ ಹಿನ್ನೆಲೆಯಲ್ಲಿ ಬೆರಳೆಣಿಕೆಯಷ್ಟು ಜನರು ಪಟಾಕಿ ಕೊಳ್ಳಲು ಆಗಮಿಸುತ್ತಿದ್ದಾರೆ. ಸಾಮಾಜಿಕ ಅಂತರ ಹಾಗೂ ಮಾಸ್ಕ್ ಹಾಕಿದವರಿಗೆ ಮಾತ್ರ ಪಟಾಕಿ ವಿತರಣೆ ಮಾಡಲಾಗುತ್ತಿದೆ‌. ಪ್ರತಿವರ್ಷ ಈ ಎರಡೂ ಕಡೆಗಳಲ್ಲಿ ಅತಿಹೆಚ್ಚಾಗಿ ಪಟಾಕಿ ಬಾಕ್ಸ್ ಗಳು ಮಾರಾಟವಾಗುತ್ತಿತ್ತು. ಆದರೆ ಈ ಬಾರಿ ಕೊರೋನಾ ಇರುವ ಹಿನ್ನೆಲೆ ಕೇವಲ ನಗರ ಪ್ರದೇಶದ ಜನರು ಮಾತ್ರ ಪಟಾಕಿ ಖರೀದಿಗೆ ಬರುತ್ತಿದ್ದಾರೆ. ಗ್ರಾಮಾಂತರ ಭಾಗದ ಜನರು ಪಟಾಕಿ ಖರೀದಿ ಮಾಡಲು ಮುಂದೆ ಬರುತ್ತಿಲ್ಲ.


ಪಟಾಕಿ ಖರೀದಿಗೆ ಬರುವ ಜನರು ಚೌಕಾಸಿ ಮಾಡ್ತಿದ್ದಾರೆ. ಈ ಹಿಂದೆ ಒಂದು ಪಟಾಕಿ ಬಾಕ್ಸ್ ಗೆ 800-1000 ರೂ ಬೆಲೆಯಿತ್ತು. ಆದರೆ ಈ ಬಾರಿ ನಾವೇ 500-600 ರೂ ಗೆ ಮಾರಾಟ ಮಾಡಲು ನಿರ್ಧಾರ ಮಾಡಿದ್ದೇವೆ. ಆದರೆ ಖರೀದಿಗೆ ಬರುವ ಜನರು ಮಾತ್ರ ಕೇವಲ 200-300 ರೂ ಗೆ ಕೇಳ್ತಿದ್ದಾರೆ. ಆದರೆ ನಾವು ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಸ್ಟಾಲ್​ಗಳನ್ನ ಹಾಕಿದ್ದೇವೆ. ಜನರು ಹೆಚ್ಚಾಗಿ ಬರುತ್ತಿಲ್ಲ, ಬಂದರೂ ನಮ್ಮ ಬೆಲೆಯನ್ನ ಒಪ್ಪಿಕೊಳ್ಳುತ್ತಿಲ್ಲ. ಹಾಗಾಗಿ ನಮಗೆ ನಷ್ಟವಾದರೂ ಜನ ಕೇಳಿದ ಬೆಲೆಗೆ ಪಟಾಕಿ ಬಾಕ್ಸ್​ಗಳನ್ನ ಮಾರಾಟ ಮಾಡ್ತಿದ್ದೇವೆಂದು ಮಾರಾಟಗಾರರು ಬೇಸರವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: ಬಸವ ನಾಡಿನಲ್ಲಿ ಬಿಸಿಯೂಟ ಆಹಾರ ಧಾನ್ಯ ವಿತರಣೆ ಆರಂಭ; ನ್ಯೂಸ್18ಗೆ ಮಕ್ಕಳಿಂದ ಧನ್ಯವಾದ


ವಾತಾವರಣದಲ್ಲಿ ಕೋಲ್ಡ್ ಇರುವ ಕಾರಣದಿಂದ ಪಟಾಕಿಗಳು ಮಂಕಾಗುತ್ತಿವೆ. ಈ ಮಧ್ಯೆ ಜನರು ಹೆಚ್ಚಾಗಿ ಬಾರದಿರುವುದು ಸಂಕಷ್ಟವಾಗಿದೆ. ಇದರ ಜೊತೆಗೆ ಪಟಾಕಿಯಿಂದ ಮಾಲಿನ್ಯ ಜಾಸ್ತಿ ಆಗುತ್ತೆ ಅಂತಾರೆ. ಆದರೆ ಸರ್ಕಾರಿ ವಾಹನಗಳಿಂದ ಬರುವ ಹೊಗೆಯಿಂದಲೂ ಸಹ ಮಾಲಿನ್ಯ ಹೆಚ್ಚಾಗುತ್ತಿದೆ. ಈ ಬಗ್ಗೆ ಸರ್ಕಾರವನ್ನ ಪ್ರಶ್ನಿಸುವವರು ಯಾರೂ ಇಲ್ಲ ಎಂದು ಪಟಾಕಿ ಮಳಿಗೆಯ ಮಾಲೀಕ ಮಹೇಶ್ ಮೆಂಗಳ್ಳಿ ಅಭಿಪ್ರಾಯಪಟ್ಟಿದ್ದಾರೆ.


ವರದಿ: ಎ.ಟಿ.ವೆಂಕಟೇಶ್

Published by:Vijayasarthy SN
First published: