HOME » NEWS » District » CP YOGESHWAR GATE KEEPER TO RAMESH JARKIHOLI SAYS HD KUMARASWAMY RHHSN ATVR

ರಮೇಶ್ ಜಾರಕಿಹೊಳಿ ಸರ್ಕಾರಕ್ಕೆ ಕೈಹಾಕಿದ್ದ, ಇವನು ಅವನ ಗೇಟ್ ಕೀಪರ್; ಸಿಪಿವೈಗೆ ಹೆಚ್ಡಿಕೆ ಚಾಟಿ

ನಾನು‌ ಇಲ್ಲಿನ  ಶಾಸಕ, ನಾನೇನು ಕೈಗೆ ಬಳೆ ತೊಟ್ಟಿಕೊಂಡು ಕುಳಿತ್ತಿದ್ದೀವಾ, ಚನ್ನಪಟ್ಟಣದಲ್ಲಿ ನನ್ನ ಅಡಿಯಲ್ಲಿ ಕೆಲಸ ನಡೆಯಬೇಕು. ಅವನು ಯಾವ ಕ್ಷೇತ್ರದಿಂದ ಎಂ ಎಲ್ ಸಿ ಆಗಿದ್ದಾನೆ. ಸಿನಿಮಾ ಕ್ಷೇತ್ರದಿಂದ ಎಂ ಎಲ್ ಸಿ ಆಯ್ಕೆಯಾಗಿದ್ದಾನೆ. ಸಿನಿಮಾ ರಂಗದವರ ಕಷ್ಟ ಸುಖ ನೋಡಿಕೊಳ್ಳಲಿ ಎಂದು ಹೆಚ್ಡಿಕೆ ವಾಗ್ದಾಳಿ ನಡೆಸಿದರು.

news18-kannada
Updated:December 12, 2020, 9:12 PM IST
ರಮೇಶ್ ಜಾರಕಿಹೊಳಿ ಸರ್ಕಾರಕ್ಕೆ ಕೈಹಾಕಿದ್ದ, ಇವನು ಅವನ ಗೇಟ್ ಕೀಪರ್; ಸಿಪಿವೈಗೆ ಹೆಚ್ಡಿಕೆ ಚಾಟಿ
ಎಚ್.ಡಿ.ಕುಮಾರಸ್ವಾಮಿ
  • Share this:
ರಾಮನಗರ (ಚನ್ನಪಟ್ಟಣ): ಕಲ್ಚರ್ ಇಲ್ಲದ ಜನರ ಬಗ್ಗೆ ನಾನೇಕೆ ಚರ್ಚೆ ಮಾಡಲಿ, ಅವರ ಬ್ಯಾಕ್ ಗ್ರೌಂಡ್ ಏನು, ಎಷ್ಟು ಜನರಿಗೆ ಟೋಪಿ ಹಾಕಿ ಬಂದಿದ್ದಾರೆಂದು ನನಗೆ ಗೊತ್ತು ಎಂದು ಬಿಜೆಪಿ ಎಂಎಲ್​ಸಿ ಸಿ.ಪಿ.ಯೋಗೇಶ್ವರ್ ವಿರುದ್ಧ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ತೀವ್ರ ವಾಗ್ದಾಳಿ ನಡೆಸಿದರು.

ಗ್ರಾ.ಪಂ ಚುನಾವಣೆ ಹಿನ್ನೆಲೆ ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಕಾರ್ಯಕರ್ತರ ಸಭೆ ನಡೆಸಿದರು. ಇದಕ್ಕಿಂತ ಮುಂಚೆ ಮಾಧ್ಯಮದವರೊಂದಿಗೆ ಮಾತನಾಡಿದ ಹೆಚ್ಡಿಕೆ,  ಯೋಗೇಶ್ವರ್ ರಾಜಕೀಯಕ್ಕೆ ಬರುವ ಮುಂಚೇನೆ ನನಗೆ ಚನ್ನಪಟ್ಟಣ  ಪರಿಚಯವಿತ್ತು. ವಿಠಲೇನಹಳ್ಳಿ ಗೋಲಿಬಾರ್ ಆದಾಗ ಇವನು ಎಲ್ಲಿದ್ದ. ಚನ್ನಪಟ್ಟಣದ ಹಳ್ಳಿಗಳ ಹೆಸರು ನಾನು ಹೇಳಬೇಕಾ ಇವನಿಗೆ, ಇದು ಅವನ ದುರಂಕಾರದ ಮಾತು ಎಂದು ಕುಮಾರಸ್ವಾಮಿ ಚನ್ನಪಟ್ಟಣದ 10 ಊರ ಹೆಸರೇಳಲಿ ಎಂದು ಸವಾಲು ಹಾಕಿದ್ದ ಯೋಗೇಶ್ವರ್​ಗೆ ಟಾಂಗ್ ನೀಡಿದರು.

ಇನ್ನು ನನ್ನಿಂದಲೇ ಹೆಚ್ಡಿಕೆ ಸರ್ಕಾರ ಅಧಿಕಾರ ಕಳೆದುಕೊಳ್ತು ಎಂದಿದ್ದ ಬಗ್ಗೆ ಮಾತನಾಡಿಇವನೇನು ದೊಡ್ಡ ಮಹಾನ್ ನಾಯಕನ. ಇವನು ಕೈಯಿಂದ ಹಣ ಖರ್ಚು ಮಾಡುತ್ತಾನಾ. ಯಾರಿಗೋ ಟೋಪಿ ಹಾಕಿ ಬಂದವನು ಇವನು, ತೆಂಗಿನಕಾಯಿ ಮಾರಿ ಹಣವನ್ನ ಪ್ರಿಂಟ್ ಮಾಡಿದ್ದಾನಾ ಇವನು. ತಾಲೂಕಿನ ಎಷ್ಟು ಜನರಿಗೆ  ತೆಂಗಿನಕಾಯಿ ದುಡ್ಡು ಕೊಟ್ಟಿಲ್ಲವೋ ಗೊತ್ತಿಲ್ಲ. ಚನ್ನಪಟ್ಟಣದ ನೀರಾವರಿ ಯೋಜನೆಯ ಪೈಪ್ ಲೈನ್ ನಲ್ಲಿಯೂ ಹಣ ಹೊಡೆದ, ಪ್ರತಿಯೊಂದಕ್ಕೂ ಕಮಿಷನ್ ಪಡೆದಿದ್ದಾನೆ. ನಾನೇನು ಇವನ ರೀತಿ ರಾಜಕಾರಣ ಮಾಡ್ತಿದ್ದೀನಾ ಎಂದು ಕಿಡಿಕಾರಿದರು.

ದೇವೇಗೌಡರ ಕುಟುಂಬವನ್ನ ರಾಜಕೀಯವಾಗಿ ಮುಗಿಸಲು ಸಾಧ್ಯವಿಲ್ಲ. ಅವನ್ಯಾರೋ ರಮೇಶ್ ಜಾರಕಿಹೊಳಿ ಸರ್ಕಾರ ತೆಗೆಯಲು ಕೈಹಾಕಿದ್ದ, ಅವನ ಹಿಂದೆ ಇವನು ಗೇಟ್ ಕೀಪರ್ ಕೆಲಸ ಮಾಡಿಕೊಂಡು ಇದ್ದ. ಇವನನ್ನ ನೋಡಿ ಎಂ ಎಲ್ ಎ ಗಳು ಬಂದಿದ್ದಾರಾ ಎಂದರು.

ಇದನ್ನು ಓದಿ: Farmers Protest: ಪ್ರತಿಭಟನೆ ತೀವ್ರಗೊಳಿಸಲು ಮುಂದಾದ ರೈತರು: ಡಿ. 14ಕ್ಕೆ ಉಪವಾಸ ನಡೆಸಲು ನಿರ್ಧಾರ

ಹೆಚ್ಡಿಕೆ ಸಿಎಂ ಆಗಿದ್ದಾಗ ಹೋಟೆಲ್ ನಲ್ಲಿ ಕಾಲ ಕಳೆದಿದ್ದರು ಎಂಬ ವಿಚಾರಕ್ಕೆ ಮಾತನಾಡಿ, ನಾನು 24 ಗಂಟೆ ಹೋಟೆಲ್ ನಲ್ಲಿ ಇದ್ನಾ? ನಾನು ಅರಮನೇ ಕೂಡ ನೋಡಿದ್ದೇನೆ. ರಷ್ಯಾದ ಪ್ಯಾಲೇಸ್ ನಲ್ಲೂ ಮಲಗಿದ್ದೇನೆ. ಯೋಗೇಶ್ವರ್ ನಿಂದ ನಾನು ಹೇಳಿಸಿಕೊಳ್ಳಬೇಕಾ. ಎಸ್ ಎಂ ಕೃಷ್ಣರವರು ಹೋಟೆಲ್ ನಲ್ಲಿದ್ದರು, ಈಗ ಯಡಿಯೂರಪ್ಪ ಪುತ್ರ ವಿಜಯೇಂದ್ರ ಸಹ ಹೋಟೆಲ್ ನಲ್ಲಿ ಇದ್ದಾರೆ. ವಿಧಾನಸೌಧದ ಬಳಿ ಉಳಿಯಲು ಹೋಟೆಲ್ ನಲ್ಲಿ ಇರ್ತಾರೆ, ಅದು ತಪ್ಪಾ ಎಂದು ಯೋಗೇಶ್ವರ್ ಗೆ ಟಾಂಗ್ ಕೊಟ್ಟರು.

ಇನ್ನು  ಚನ್ನಪಟ್ಟಣ ಕ್ಷೇತ್ರವನ್ನ ಕಂಟ್ರೋಲ್ ಗೆ ತೆಗೆದುಕೊಳ್ತೇನೆಂಬ ಯೋಗೇಶ್ವರ್ ಹೇಳಿಕೆಗೆ ಗರಂ ಆದ ಹೆಚ್ಡಿಕೆ ಅವನು ಹೇಗೆ ಕಂಟ್ರೋಲ್‌ ತೆಗೆದುಕೊಳ್ಳುತ್ತಾನೆ, ಸರ್ಕಾರ ಕರ್ನಾಟಕದ್ದು, ಇವನದ್ದಲ್ಲ.  ನಾನು‌ ಇಲ್ಲಿನ  ಶಾಸಕ, ನಾನೇನು ಕೈಗೆ ಬಳೆ ತೊಟ್ಟಿಕೊಂಡು ಕುಳಿತ್ತಿದ್ದೀವಾ, ಚನ್ನಪಟ್ಟಣದಲ್ಲಿ ನನ್ನ ಅಡಿಯಲ್ಲಿ ಕೆಲಸ ನಡೆಯಬೇಕು. ಅವನು ಯಾವ ಕ್ಷೇತ್ರದಿಂದ ಎಂ ಎಲ್ ಸಿ ಆಗಿದ್ದಾನೆ. ಸಿನಿಮಾ ಕ್ಷೇತ್ರದಿಂದ ಎಂ ಎಲ್ ಸಿ ಆಯ್ಕೆಯಾಗಿದ್ದಾನೆ. ಸಿನಿಮಾ ರಂಗದವರ ಕಷ್ಟ ಸುಖ ನೋಡಿಕೊಳ್ಳಲಿ ಎಂದು ಹೆಚ್ಡಿಕೆ ವಾಗ್ದಾಳಿ ನಡೆಸಿದರು.

ವರದಿ : ಎ.ಟಿ.ವೆಂಕಟೇಶ್
Published by: HR Ramesh
First published: December 12, 2020, 9:12 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories