ಸಚಿವ ಸ್ಥಾನದಂತೆ ಪರಿಷತ್‌ ಸ್ಥಾನವೂ ಸಿ.ಪಿ. ಯೋಗೇಶ್ವರ್‌ ಕೈತಪ್ಪಲಿದೆಯಾ?; ಹೌದು ಎನ್ನುತ್ತಿವೆ ಬಿಜೆಪಿ ಮೂಲಗಳು!

ಅಶ್ವತ್ಥ್‌ ನಾರಾಯಣ್ ಹೀಗೊಂದು ಹೇಳಿಕೆ ನೀಡುತ್ತಿದ್ದಂತೆ ಈ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ರಾಮನಗರ ಬಿಜೆಪಿ ಜಿಲ್ಲಾಧ್ಯಕ್ಷ ರುದ್ರೇಶ್‌ ಎಲ್ಲರಿಗೂ MLC ಆಗಬೇಕು ಎಂಬ ಆಸೆ ಇರುತ್ತದೆ. ಹಾಗಾಗಿ ನಾನು ಕೂಡ ಆಕಾಂಕ್ಷಿ. ಆದರೆ ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ನಾನು ಬದ್ಧ ಎನ್ನುವ ಮೂಲಕ ಸಿಪಿವೈ ಗೆ ಪರಿಷತ್‌ ಸ್ಥಾನ ನೀಡುವ ಬಗ್ಗೆ ಬಹಿರಂಗವಾಗಿಯೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

news18-kannada
Updated:June 1, 2020, 7:51 PM IST
ಸಚಿವ ಸ್ಥಾನದಂತೆ ಪರಿಷತ್‌ ಸ್ಥಾನವೂ ಸಿ.ಪಿ. ಯೋಗೇಶ್ವರ್‌ ಕೈತಪ್ಪಲಿದೆಯಾ?; ಹೌದು ಎನ್ನುತ್ತಿವೆ ಬಿಜೆಪಿ ಮೂಲಗಳು!
ಮಾಜಿ ಸಚಿವ ಸಿ.ಪಿ.ಯೋಗೇಶ್ವರ್
  • Share this:
ರಾಮನಗರ (ಜೂನ್‌ 01); ರಾಜ್ಯ ವಿಧಾನ ಪರಿಷತ್‌ ಚುನಾವಣೆ ಹತ್ತಿರವಾಗುತ್ತಿದ್ದಂತೆ ಬಿಜೆಪಿಯಲ್ಲಿ ದಿನಿದಿಂದ ದಿನಕ್ಕೆ ಆಕಾಂಕ್ಷಿಗಳ ಸಂಖ್ಯೆ ಅಧಿಕವಾಗುತ್ತೇ ಇದೆ. ಈ ಬಾರಿ ರಾಮನಗರದಲ್ಲಿ ಪಕ್ಷ ಸಂಘಟನೆ ಮಾಡುವ ಸಲುವಾಗಿ ಸಿ.ಪಿ. ಯೋಗೇಶ್ವರ್‌ ಅವರಿಗೆ ಸ್ಥಾನ ಖಚಿತ ಎನ್ನಲಾಗಿತ್ತು. ಆದರೆ, ಅವರಿಗೆ ಪರಿಷತ್‌ ಟಿಕೆಟ್‌ ನೀಡಲು ಇದೀಗ ಸ್ವತಃ ಪಕ್ಷದಲ್ಲೇ ಮತ್ತೊಮ್ಮೆ ಭಿನ್ನಾಭಿಪ್ರಾಯ ಭುಗಿಲೆದ್ದಿದೆ.

ಡಿಸಿಎಂ ಅಶ್ವತ್ಥ್‌ ನಾರಾಯಣ್‌ ಇಂದು ಜಿಲ್ಲೆಗೆ ಆಗಮಿಸಿದ್ದರು. ಈ ವೇಳೆ ವಿಧಾನ ಪರಿಷತ್‌ ಟಿಕೆಟ್‌ ಅನ್ನು ಸಿ.ಪಿ. ಯೋಗೇಶ್ವರ್‌ ಅವರಿಗೆ ನೀಡುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, "ಯೋಗೇಶ್ವರ್ MLC ಆಗಬೇಕು, ಮುಂದೆ ಆಗುತ್ತಾರೆ ಎಂಬ ವಿಶ್ವಾಸ ನನಗಿದೆ. ಪಕ್ಷದ ಮಟ್ಟದಲ್ಲಿ ಅವರ ಹೆಸರು ಚಾಲ್ತಿಯಲ್ಲಿದೆ. ಆದರೆ ಪಕ್ಷದ ವರಿಷ್ಠರು ಹಾಗೂ ಸಿಎಂ  ಈ ಬಗ್ಗೆ ತೀರ್ಮಾನ ಮಾಡುತ್ತಾರೆ.

ಜಿಲ್ಲಾ ಮಟ್ಟದಲ್ಲಿ ಯಾವುದೇ ಭಿನ್ನಮತ ಇಲ್ಲ. ಯೋಗೇಶ್ವರ್ MLC ಆಗಲಿ ಎಂಬುದೇ ನನ್ನ ಹಾಗೂ ಜಿಲ್ಲೆಯ ಎಲ್ಲಾ ನಾಯಕರ ಆಸೆಯಾಗಿದೆ.ಇದಕ್ಕೆ ಯಾರು ಕೂಡ ವಿರೋಧ ವ್ಯಕ್ತಪಡಿಸುವುದಿಲ್ಲಾ ಸ್ವತಃ ರುದ್ರೇಶ್ ಕೂಡ ಇದಕ್ಕೆ ಒಪ್ಪುತ್ತಾರೆ" ಎಂದು ಹೇಳಿದ್ದಾರೆ.

ಆದರೆ, ಅಶ್ವತ್ಥ್‌ ನಾರಾಯಣ್ ಹೀಗೊಂದು ಹೇಳಿಕೆ ನೀಡುತ್ತಿದ್ದಂತೆ ಈ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ರಾಮನಗರ ಬಿಜೆಪಿ ಜಿಲ್ಲಾಧ್ಯಕ್ಷ ರುದ್ರೇಶ್‌, "ಎಲ್ಲರಿಗೂ MLC ಆಗಬೇಕು ಎಂಬ ಆಸೆ ಇರುತ್ತದೆ. ಹಾಗಾಗಿ ನಾನು ಕೂಡ ಆಕಾಂಕ್ಷಿ. ಆದರೆ ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ನಾನು ಬದ್ಧ" ಎನ್ನುವ ಮೂಲಕ ಸಿಪಿವೈ ಗೆ ಪರಿಷತ್‌ ಸ್ಥಾನ ನೀಡುವ ಬಗ್ಗೆ ಬಹಿರಂಗವಾಗಿಯೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಹಿಂದೆಯೂ ಸಹ ಸಿಪಿವೈ ವಿರುದ್ಧ ರುದ್ರೇಶ್ ಗುಡುಗಿದ್ದರು. ಯೋಗೇಶ್ವರ್ ಪಕ್ಷದಲ್ಲಿ ಇದ್ದಾರೆ ಅಷ್ಟೇ, ಆದರೆ ಜಿಲ್ಲೆಯಲ್ಲಿ ಪಕ್ಷ ಕಟ್ಟುವ ಬಗ್ಗೆ ಅವರಿಗೆ ಯಾವ ಆಲೋಚನೆಯೂ ಇಲ್ಲ. ಹಾಗಾಗಿ ಅವರಿಗೆ ಅಧಿಕಾರ ಯಾಕೆ? ಎಂದು ಪ್ರಶ್ನೆ ಮಾಡಿದ್ದರು. ಈ ಬಾರಿಯೂ ಸಹ ಯೋಗೇಶ್ವರ್‌ ವಿರುದ್ಧ ರಾಮನಗರ ಜಿಲ್ಲೆಯಲ್ಲೇ ದೊಡ್ಡ ಮಟ್ಟದ ಅಪಸ್ವರ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಸಚಿವ ಸ್ಥಾನ ಕೈತಪ್ಪಿದಂತೆ ಪರಿಷತ್‌ ಸ್ಥಾನವೂ ಕೈತಪ್ಪಿದರೂ ಅಚ್ಚರಿ ಇಲ್ಲ ಎಂಬ ಮಾತು ಸ್ವತಃ ಬಿಜೆಪಿ ವಲಯದಿಂದಲೇ ಕೇಳಿ ಬರುತ್ತಿದೆ.

ಇದನ್ನೂ ಓದಿ : ಡಿಕೆಶಿ ಕೆಪಿಸಿಸಿ ಪದಗ್ರಹಣಕ್ಕೆ ಲಾಕ್‌ಡೌನ್ ರೂಲ್ಸ್ ಗ್ರಹಣ; ಜೂನ್‌ 7ಕ್ಕೂ ನಡೆಯಲ್ಲ ಪ್ರಮಾಣ ವಚನ
First published: June 1, 2020, 7:51 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading