• Home
  • »
  • News
  • »
  • district
  • »
  • Corona Virus: ಹೆಣಗಳ ಪಕ್ಕದಲ್ಲೇ ಸೋಂಕಿತರಿಗೆ ಚಿಕಿತ್ಸೆ, ಚಿತ್ರದುರ್ಗದಲ್ಲಿ ಭಯಾನಕ ವ್ಯವಸ್ಥೆ

Corona Virus: ಹೆಣಗಳ ಪಕ್ಕದಲ್ಲೇ ಸೋಂಕಿತರಿಗೆ ಚಿಕಿತ್ಸೆ, ಚಿತ್ರದುರ್ಗದಲ್ಲಿ ಭಯಾನಕ ವ್ಯವಸ್ಥೆ

ಚಿತ್ರದುರ್ಗದಲ್ಲಿ ಅವ್ಯವಸ್ಥೆ

ಚಿತ್ರದುರ್ಗದಲ್ಲಿ ಅವ್ಯವಸ್ಥೆ

ಜಿಲ್ಲಾ ಕೋವಿಡ್ ಆಸ್ಪತ್ರೆಗಳಲ್ಲಿ ಬೆಡ್ ಇಲ್ಲ ಅನ್ನೋ ಆರೋಗ್ಯ ಸಿಬ್ಬಂದಿ ಮತ್ತು ಅಧಿಕಾರಿಗಳು ಚಿಕಿತ್ಸೆ ಫಲಿಸದೆ ಮೃತಪಟ್ಟ ರೋಗಿಗಳ ಶವಗಳನ್ನ  ಬೇರೆ ಕಡೆಗೆ ಶಿಫ್ಟ್ ಮಾಡದೆ ಮೃತ ದೇಹಗಳ ನಡುವೆಯೇ ಸೋಂಕಿತರನ್ನ ಬಿಟ್ಟು ನಿರ್ಲಕ್ಷ ತೋರಿದ್ದರು.

  • Share this:

ಚಿತ್ರದುರ್ಗ : ಕೊರೋನಾ ಸೋಂಕಿನ ಚಿಕಿತ್ಸೆಗೆ ಒಂದೇ ವಾರ್ಡಿನಲ್ಲಿ  ದಾಖಲಾಗಿದ್ದ ಮೂವರು ಸೋಂಕಿತರು ಸಾವನ್ನಪ್ಪಿ ಗಂಟೆಗಳೇ ಕಳೆದಿದ್ದವು. ಸೋಂಕಿತರು ಮೃತಪಟ್ಟಿರೋ ಸುದ್ದಿ ತಿಳಿದರೂ ಮೃತ ದೇಹಗಳನ್ನ ಬೇರೆ ಕಡೆಗೆ ಸ್ಥಳಾಂತರ ಮಾಡದೆ ಚಿತ್ರದುರ್ಗ ಜಿಲ್ಲಾ  ಕೋವಿಡ್  ಆಸ್ಪತ್ರೆ ಸಿಬ್ಬಂದಿ, ಅಧಿಕಾರಿಗಳು ನಿರ್ಲಕ್ಷ ವಹಿಸಿದ್ದರು ಅನ್ನೋ ಆರೋಪಗಳು ಕೇಳಿ ಬಂದಿವೆ. ಈ ದೃಶ್ಯವನ್ನ ಮೊಬೈಲ್ನಲ್ಲಿ ವೀಡಿಯೋ ಮಾಡಿದ ಸೋಂಕಿತ ವಕೀಲರೊಬ್ಬರು ಆಸ್ಪತ್ರೆಯ ಅವ್ಯವಸ್ಥೆಯನ್ನ ಬಯಲು ಮಾಡಿ ಜಿಲ್ಲಾಡಳಿತದ ಬೇಜವಬ್ದಾರಿಯನ್ನ ತೋರಿಸಿ ಛೀಮಾರಿ ಹಾಕಿರುವ ಘಟನೆ ಚಿತ್ರದುರ್ಗ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ನಡೆದಿದೆ. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಮಹಾಮಾರಿ ಕೊರೋನಾ ಸೋಂಕಿನ ಸಂಖ್ಯೆ ಹೆಚ್ಚುತ್ತಲೇ ಇದೆ. ಸೋಂಕಿನ ವೇಗದ ಪ್ರಮಾಣ ಹೆಚ್ಚಿದಂತೆಲ್ಲಾ ಕೊರೋನಾ ಸೋಂಕಿಗೆ ಬಲಿಯಾಗಿ ಸಾವನ್ನಪ್ಪಿದ ಜನರ ಸಂಖ್ಯೆಯೂ ವೇಗವಾಗಿ ಏರುತ್ತಲಿದೆ.


ಹೀಗಿರುವಾಗ ಚಿತ್ರದುರ್ಗ ಜಿಲ್ಲೆಯಲ್ಲಿ ಕೊರೋನಾ ಸೋಂಕಿಗೆ ಸಿಲುಕಿ ಜನರು ಅಕ್ಷರಶಃ ನಲುಗಿ ಹೋಗಿದ್ದಾರೆ. ಅದೆಷ್ಟೋ ಜನರು ಸೋಂಕು ತಗುಲಿದ ಬಳಿಕ ಚಿಕಿತ್ಸೆ ಪಡೆಯೋಕೆ ಆಸ್ಪತ್ರೆಗಳಲ್ಲಿ ಬೆಡ್ಗಳು ಸಿಗದೆ ಹಗಲು ರಾತ್ರಿ ಎನ್ನದೇ ಕ್ಯೂ ನಲ್ಲಿ ನಿಂತು ಕಾಯಬೇಕಿದೆ. ಆದರೂ ಜಿಲ್ಲೆಯ ಕೋವಿಡ್ ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಆದರೇ ಜಿಲ್ಲಾ ಕೋವಿಡ್ ಆಸ್ಪತ್ರೆಗಳಲ್ಲಿ ಬೆಡ್ ಇಲ್ಲ ಅನ್ನೋ ಆರೋಗ್ಯ ಸಿಬ್ಬಂದಿ ಮತ್ತು ಅಧಿಕಾರಿಗಳು ಚಿಕಿತ್ಸೆ ಫಲಿಸದೆ ಮೃತಪಟ್ಟ ರೋಗಿಗಳ ಶವಗಳನ್ನ  ಬೇರೆ ಕಡೆಗೆ ಶಿಫ್ಟ್ ಮಾಡದೆ ಮೃತ ದೇಹಗಳ ನಡುವೆಯೇ ಸೋಂಕಿತರನ್ನ ಬಿಟ್ಟು ನಿರ್ಲಕ್ಷ ತೋರಿದ್ದರು.


ಇದನ್ನೂ ಓದಿhttps://kannada.news18.com/news/state/bengaluru-urban-state-of-the-art-modular-icu-with-led-screen-in-kc-general-hospital-bengaluru-lets-covid-patients-virtually-meet-their-families-sktv-564967.html


ಈ ಎಲ್ಲಾ ಅವ್ಯವಸ್ಥೆಯನ್ನ ಕಣ್ಣಾರೆ ಕಂಡು ಯಾತನೆ ಅನುಭವಿಸಿದ ಹನುಮಂತರಾಜು ಅನ್ನೋ ಸೋಂಕಿತ ವಕೀಲರು ಆ ಚಿತ್ರಣವನ್ನ ವೀಡಿಯೋ ಮಾಡಿ ಬಯಲಿಗೆ ಎಳೆದು ಜಿಲ್ಲಾಡಳಿತ ಹಾಗೂ ಆಸ್ಪತ್ರೆ ಸಿಬ್ಬಂದಿ, ಸೇರಿದಂತೆ ಆಳುವ ಸರ್ಕಾರಕ್ಕೆ ಛೀಮಾರಿ ಹಾಕಿದ್ದಾರೆ.


ಅಲ್ಲದೇ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರಿಗೆ ಸರಿಯಾದ ಸಮಯಕ್ಕೆ ತಿಂಡಿ ಇಲ್ಲ ಗಂಜಿ ಇಲ್ಲ, ನಾನು ಬಂದು ಎಂಟು ದಿನ ಕಳೆದರು ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ ಎಂದು ಆರೋಪ‌ ಮಾಡಿದ್ದು, ರಾತ್ರಿಯಿಂದ ಮೂರು ಮಂದಿ ಸೋಂಕಿತರು ಬಲಿಯಾಗಿದ್ದಾರೆ, ಬಂದು ನೋಡೋರು ದಿಕ್ಕಿಲ್ಲ. ಇದೆನಾ ಯಡಿಯೂರಪ್ಪ, ಇದೇನಾ ಮೋದಿ ಸರ್ಕಾರ ಎಂದು ಸೋಂಕಿತ ಗರಂ ಆಗಿದ್ದಾರೆ.


ಇನ್ನೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವ್ರೇ, ಗುಡುಗುತ್ತೀರಾ ಮಲಗುತ್ತೀರಾ ಎಂದು ವ್ಯಂಗ್ಯವಾಡಿದ್ದು, ರಾಜ್ಯದಲ್ಲಿ ಜೀವಕ್ಕೆ ಬೆಲೆಯೇ ಇಲ್ಲ, ಡಿಸಿ, ಡಿಎಸ್, ಡಿಎಚ್ಓ ನೀವೆಲ್ಲಾ ಸತ್ತಿದ್ದೀರಾ, ಯಡಿಯೂರಪ್ಪ ನವ್ರೇ ನಿಮ್ಮ ಮಕ್ಕಳು ನೀವು‌ ಚೆನ್ನಾಗಿ ಇದ್ದಿರಲ್ವಾ, ಈ ಸಾವುಗಳು ನೋಡ್ರಿ, ನಾವು ಬದುಕತಿವೋ ಸಾಯಿತ್ತೇವೋ ಅನ್ನೋದೆ ಗೊತ್ತಿಲ್ಲ. ಯಾರು ವೈದ್ಯರು ಕೂಡಾ ಬರ್ತಿಲ್ಲ, ಸಚಿವ ಸುಧಾಕರ್, ಸಚಿವ ರಾಮುಲು ಕೈಗೆ ಬಳೆ ತೊಟ್ಟುಕೊಳ್ಳಿ ಎಂದು ಆಕ್ರೋಶ ವ್ಯಕ್ತಪಡಿಸಿ, ನಾನೇನಾದ್ರು ಸತ್ತರೇ ನೀವೆ ಹೊಣೆ ಎಂದು ಸೋಂಕಿತ ಹನುಮಂತ ರಾಜು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Published by:Soumya KN
First published: