ಕೋವಿಡ್ ನೆಗೆಟಿವ್ ವರದಿ ಕಡ್ಡಾಯದಿಂದ ಮಡಿಕೇರಿಯಲ್ಲಿ ವಿವಾಹ ನಡೆಯೋದೇ ಡೌಟ್

ಮದುಮಗ ಮತ್ತು ಆತನ ತಂದೆ ತಾಯಿ ಹಾಗೂ ತೀರ ಅತ್ತಿರದ ನೆಂಟರಿಷ್ಟರೆಂದರೂ ಕನಿಷ್ಠ ಹತ್ತರಿಂದ 12 ಜನರು ವಿವಾಹಕ್ಕೆ ಕರ್ನಾಟಕಕ್ಕೆ ಬರಬೇಕಾಗಿದೆ. ಅಷ್ಟು ಜನರಿಗೆ ಖಾಸಗಿಯಾಗಿ ಕೋವಿಡ್ ಟೆಸ್ಟ್ ಮಾಡಿಸಲು 20 ರಿಂದ 25 ಸಾವಿರ ವ್ಯಯಿಸಬೇಕಾಗಿದೆ.

ಮದುವೆಯಾಗಬೇಕಾಗಿರುವ ನವ ಜೋಡಿಗಳು.

ಮದುವೆಯಾಗಬೇಕಾಗಿರುವ ನವ ಜೋಡಿಗಳು.

  • Share this:
ಕೊಡಗು: ಕೇರಳದಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿ ರುವುದರಿಂದ ಕೋವಿಡ್ ನೆಗೆಟಿವ್ ವರದಿ ಇಲ್ಲದಿದ್ದರೆ ಕರ್ನಾಟಕಕ್ಕೆ ಎಂಟ್ರಿ ನಿರಾಕರಿಸಿರುವುದು ಗೊತ್ತೇ ಇದೆ. ಹೀಗಾಗಿ ಕೊಡಗಿನಲ್ಲಿ ನಡೆಯಬೇಕಾಗಿರುವ ಯುವತಿಯ ಮದುವೆ ನಡೆಯುತ್ತೋ ಇಲ್ಲವೋ ಎನ್ನೋ ಆತಂಕ ಎದುರಾಗಿದೆ. ಹೌದು ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ಕಡಗದಾಳು ಗ್ರಾಮದ ರೋಹಿಣಿ ಮತ್ತು ಜಯಪ್ಪನಾಯ್ಕ ಅವರ ಮಗಳು ಆಶಾ ಅವರ ವಿವಾಹ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆ ಮುಳಿಯಾರ್ ನಾರಾಯಣ ನಾಯರ್ ಮತ್ತು ಗೀತಾ ದಂಪತಿ ಪುತ್ರ ಪ್ರಮೋದ್ ಎಂಬುವರೊಂದಿಗೆ ಫಿಕ್ಸ್ ಆಗಿದೆ. ಮಾರ್ಚ್ ಒಂದರಂದು ಅಂದರೆ ಸೋಮವಾರ ಮಡಿಕೇರಿಯ ಓಂಕಾರೇಶ್ವರ ದೇವಾಲಯದಲ್ಲಿ ಮದುವೆ ನಡೆಯಬೇಕಾಗಿದೆ.

ಮುಹೂರ್ತದ ಬಳಿಕ ಮಡಿಕೇರಿ ಹೊರವಲಯದಲ್ಲಿರುವ ಕೂರ್ಗ್ ಹೆರಿಟೇಜ್ ನಲ್ಲಿ ರೆಸೆಪ್ಷನ್ ಕೂಡ ನಡೆಯಲಿದೆ. ಆದರೆ ಕೇರಳದಿಂದ ಕೊಡಗಿಗೆ ಬರುವವರು 72 ಗಂಟೆಯೊಳಗೆ ಪಡೆದ ಕೋವಿಡ್ ನೆಗೆಟಿವ್ ವರದಿಯನ್ನು ಕೊಡಗಿನ ಗಡಿಗಳಲ್ಲಿ ನಿರ್ಮಿಸಿರುವ ಚೆಕ್ ಪೋಸ್ಟ್ ಗಳಲ್ಲಿ ಕಡ್ಡಾಯವಾಗಿ ಆರೋಗ್ಯ ಇಲಾಖೆ ಸಿಬ್ಬಂದಿ ನೀಡಬೇಕಾಗಿದೆ. ಈ ವರದಿಯನ್ನು ನೀಡದೆ ಕೊಡಗಿಗೆ ಎಂಟ್ರಿ ಆಗುವಂತಿಲ್ಲ. ಅದಕ್ಕೆ ಆರೋಗ್ಯ ಇಲಾಖೆ ಮತ್ತು ಜಿಲ್ಲಾಡಳಿತ ಅವಕಾಶವನ್ನು ನೀಡುವುದಿಲ್ಲ.

ಇದು ವಧುವಿನ ವಿವಾಹದ ಮೇಲೆ ಕರಿನೆರಳು ಬೀರಿದ್ದು ಮದುವೆಯ ದಿನ ವರ ಹಾಗೂ ಅವರ ಸಂಬಂಧಿಕರೆಲ್ಲರೂ ಬರುವರೋ ಇಲ್ಲವೋ ಎನ್ನೋ ಆತಂಕ ಎದುರಾಗಿದೆ. ಕೇರಳ ಸರ್ಕಾರ ಎಲ್ಲರಿಗೂ ಕೋವಿಡ್ ಟೆಸ್ಟ್ ಮಾಡುವ ಬದಲಿಗೆ ವಿದ್ಯಾರ್ಥಿಗಳು, ಸರ್ಕಾರಿ ನೌಕರರು ವೃದ್ಧರು ಇಂತಹವರಿಗೆ ಆದ್ಯತೆ ಮೇಲೆ ಕೋವಿಡ್ ಟೆಸ್ಟ್ ಮಾಡುತ್ತಿದೆಯಂತೆ. ಒಂದು ವೇಳೆ ಖಾಸಗಿಯಾಗಿ ಟೆಸ್ಟ್ ಮಾಡಿಸುವುದಾದರೆ ಒಬ್ಬರ ಟೆಸ್ಟ್ ಗೆ ಎರಡುವರೆ ಸಾವಿರ ಕೊಡಬೇಕಾಗಿದೆ.

ಇದನ್ನೂ ಓದಿ: ಮೇಯರ್ ಸ್ಥಾನ‌ ಬಿಟ್ಟುಕೊಟ್ಟಿದ್ದು ತನ್ವೀರ್ ಸೇಠ್ ಏಕಪಕ್ಷೀಯ ನಿರ್ಧಾರ; ಅವರನ್ನು ಪಕ್ಷದಿಂದ ಉಚ್ಚಾಟಿಸಲು ಆಗ್ರಹ

ಮದುಮಗ ಮತ್ತು ಆತನ ತಂದೆ ತಾಯಿ ಹಾಗೂ ತೀರ ಅತ್ತಿರದ ನೆಂಟರಿಷ್ಟರೆಂದರೂ ಕನಿಷ್ಠ ಹತ್ತರಿಂದ 12 ಜನರು ವಿವಾಹಕ್ಕೆ ಕರ್ನಾಟಕಕ್ಕೆ ಬರಬೇಕಾಗಿದೆ. ಅಷ್ಟು ಜನರಿಗೆ ಖಾಸಗಿಯಾಗಿ ಕೋವಿಡ್ ಟೆಸ್ಟ್ ಮಾಡಿಸಲು 20 ರಿಂದ 25 ಸಾವಿರ ವ್ಯಯಿಸಬೇಕಾಗಿದೆ. ಒಂದು ವೇಳೆ ಟೆಸ್ಟ್ ಮಾಡಿಸಿದರು, ಶನಿವಾರ ಭಾನುವಾರ ರಜೆಗಳು ಇರುವುದರಿಂದ 72 ಗಂಟೆ ಒಳಗಾಗಿ ವರದಿ ಪಡೆಯುವುದು ತೀರಾ ಕಷ್ಟವಾಗಿದೆ. ಹೀಗಾಗಿ ಸೋಮವಾರ ಬೆಳಿಗ್ಗೆ 10 ಗಂಟೆ 45 ನಿಮಿಷಕ್ಕೆ ನಡೆಯುವ ವಿವಾಹ ನಡೆಯುವುದೋ ಇಲ್ಲವೋ ಎನ್ನೋ ಆತಂಕ ಎದುರಾಗಿದೆ.

ಕೂಲಿ ಮಾಡಿ ಮಗಳ ಮದುವೆ ಮಾಡುತ್ತಿರುವ ರೋಹಿಣಿ ಮತ್ತು ಜಯಪ್ಪನಾಯಕ ಈಗಾಗಲೇ ಮಡಿಕೇರಿ ಸಮೀಪದ ಕೂರ್ಗ್ ಹೆರಿಟೇಜ್ ಎನ್ನೋ ಚೌಲ್ಟ್ರಿಯನ್ನು ಕೂಡ ಅಡ್ವಾನ್ಸ್ ಕೊಟ್ಟು ಬುಕ್ ಮಾಡಿದ್ದಾರೆ. ನೂರಾರು ನೆಂಟರಿಷ್ಟರಿಗೂ ಹೇಳಲಾಗಿದ್ದು, ಏನು ಮಾಡುವುದೋ ಎನ್ನೋದೆ ತೋಚದಂತೆ ಆಗಿದೆ ಎಂದು ಪೋಷಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ವರನ ಮನೆಯವರು ಕೂಡ ಹೋಗುವುದು ಹೇಗೆ ಎನ್ನೋ ಚಡಪಡಿಕೆಯಲ್ಲಿದ್ದು, ಹೇಗಾದರೂ ಮಾಡಿ ಬರಲು ಪ್ರಯತ್ನಿಸುತ್ತೇವೆ ಎನ್ನುತ್ತಿದ್ದಾರಂತೆ.
Published by:MAshok Kumar
First published: