ಹುಬ್ಬಳ್ಳಿ: ಕೋವಿಡ್ ಸೋಂಕಿತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹುಬ್ಬಳ್ಳಿಯಲ್ಲಿ ಕೇಳಿಬಂದಿದೆ. ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ. ಬಳ್ಳಾರಿಯ ಸಿರುಗುಪ್ಪ ತಾಲೂಕಿನ 52 ವರ್ಷದ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಗಂಭೀರ ಆರೋಪ ಕೇಳಿ ಬಂದಿದೆ. ಹುಬ್ಬಳ್ಳಿಯ ಬಾಲಾಜಿ ಆಸ್ಪತ್ರೆಯಲ್ಲಿ ಘಟನೆ ನಡೆದಿದೆ ಎಂದು ಆರೋಪಿಸಲಾಗಿದೆ. ಕೋವಿಡ್ ಸೋಂಕು ತಗುಲಿ, ಪಾರ್ಶುವಾಯು ಪೀಡಿತೆಯಾಗಿರುವ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ದೂರಲಾಗಿದೆ. ಸೋಂಕಿತ ಮಹಿಳೆಯ ಮೇಲೆ ಆಸ್ಪತ್ರೆಯ ಡಿ ಗ್ರೂಪ್ ಸಿಬ್ಬಂದಿಯಿಂದ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಸೋಂಕಿತ ಮಹಿಳೆಯಿಂದ ಆರೋಪಿಸಿದ್ದಾಳೆ.
ಈ ಹಿನ್ನೆಲೆಯಲ್ಲಿ ಮಹಿಳೆಯ ಪುತ್ರ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ ಠಾಣೆ ಮೆಟ್ಟಿಲು ಹತ್ತಿದ್ದಾನೆ. ವಿದ್ಯಾನಗರ ಪೊಲೀಸ ಠಾಣೆಗೆ ಸಮಗ್ರ ಮಾಹಿತಿ ನೀಡಿ ದೂರು ದಾಖಲಿಸಲು ಮುಂದಾಗಿದ್ದಾನೆ. ಮೇ 23 ರಂದು ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಮೇಲೆ, ಚಿಕಿತ್ಸೆ ನೆಪದಲ್ಲಿ ಸಿಬ್ಬಂದಿಯಿಂದ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ರೋಗಿಯೂ ಎನ್ನದೆ ಅನುಚಿತವಾಗಿ ವರ್ತಿಸಿದ್ದಾನೆಂಬ ಎಂದು ನ್ಯೂಸ್ 18 ಗೆ ಸೋಂಕಿತ ಮಹಿಳೆಯ ಪುತ್ರ ಹೇಳಿಕೆ ನೀಡಿದ್ದಾನೆ.
ನಮ್ಮ ತಾಯಿಯ ಮೇಲೆ ಆದಂತೆ ಬೇರೆ ಯಾರ ಮೇಲೂ ಲೈಂಗಿಕ ದೌರ್ಜನ್ಯ ನಡೆಯಬಾರದು. ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಆಸ್ಪತ್ರೆಯ ಮುಖ್ಯಸ್ಥರನ್ನು ಕೇಳಿದ್ರೆ ಪ್ರಕರಣ ಅಲ್ಲಗೆಳುತ್ತಿದ್ದಾರೆ. ನಮ್ಮ ಆಸ್ಪತ್ರೆಯಲ್ಲಿ ಈ ರೀತಿಯ ಘಟನೆ ನಡೆಯೋಲ್ಲ. ಇದನ್ನು ಇಲ್ಲಿಯೇ ಮರೆತುಬಿಡಿ ಎನ್ನುತ್ತಿದ್ದಾರೆ.
ಆದರೆ, ನನ್ನ ತಾಯಿ ತನ್ನೊಂದಿಗೆ ಸಿಬ್ಬಂದಿ ನಡೆಸಿದ ಅನುಚಿತ ವರ್ತನೆ ಬಗ್ಗೆ ಅಳಲು ತೋಡಿಕೊಂಡಿದ್ದಾರೆ. ಈ ಕುರಿತು ತನಿಖೆ ನಡೆಯಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮಹಿಳೆಯ ಪುತ್ರ ಧನ ತೇಜ್ ಆಗ್ರಹಿಸಿದ್ದಾನೆ.
ಆದರೆ ಘಟನೆಯನ್ನು ಬಾಲಾಜಿ ಆಸ್ಪತ್ರೆಯ ಮುಖ್ಯಸ್ಥ, ಎಂ.ಡಿ. ಡಾ.ಕ್ರಾಂತಿ ಕಿರಣ ಅಲ್ಲಗಳೆದಿದ್ದಾರೆ. ನ್ಯೂಸ್ 18 ಕನ್ನಡಕ್ಕೆದೂರವಾಣಿ ಮೂಲಕ ಪ್ರತಿಕ್ರಿಯೆ ನೀಡಿದ ಡಾ.ಕ್ರಾಂತಿ ಕಿರಣ್, ನಮ್ಮ ಆಸ್ಪತ್ರೆಯ ಸಿಬ್ಬಂದಿಯಿಂದ ತಪ್ಪು ನಡೆದಿಲ್ಲ. ಸಿಬ್ಬಂದಿಗಳು ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಶುದ್ದ ಸುಳ್ಳು. ಸೋಕಿತ ಮಹಿಳೆಗೆ ಪಾರ್ಶ್ವವಾಯು ಆಗಿದೆ. ಅವರನ್ನು ಸ್ಕ್ಯಾನಿಂಗ್ ಮಾಡಿಸುವ ವೇಳೆ ಆಸ್ಪತ್ರೆಯ ಸಿಬ್ಬಂದಿ ಲಿಫ್ಟ್ ಮಾಡಿರಬಹುದು. ಲೈಂಗಿಕ ದೌರ್ಜನ್ಯದ ಆರೋಪ ಮಾಡುವ ಪುತ್ರ ಆಸ್ಪತ್ರೆಯ ಅನುಮತಿ ಇಲ್ಲದೇ ಕೋವಿಡ್ ವಾರ್ಡ್ ಪ್ರವೇಶ ಮಾಡಿದ್ದಾರೆ. ಪಿಪಿಇ ಕಿಟ್ ನ್ನೂ ಧರಿಸದೆ ಕೋವಿಡ್ ವಾರ್ಡ್ ಗೆ ಹೋಗಿ, ಬೇರೆ ರೋಗಿಗಳಿಗೂ ತೊಂದರೆ ಕೊಟ್ಟಿದ್ದಾನೆ.
ಅದನ್ನ ಪ್ರಶ್ನೆ ಮಾಡಿದ್ದಕ್ಕೆ ಲೈಂಗಿಕ ದೌರ್ಜನ್ಯದ ಆರೋಪ ಮಾಡ್ತುತ್ತಿರಬಹುದು. ನಮ್ಮ ಆಸ್ಪತ್ರೆಯ ಸಿಸಿ ಕ್ಯಾಮರಾಗಳಲ್ಲಿ ಎಲ್ಲವೂ ದಾಖಲಾಗಿದೆ. ಎಲ್ಲಿಯೂ ಈ ರೀತಿಯ ಅನುಚಿತ ಘಟನೆ ದೃಶ್ಯಗಳು ಕಂಡು ಬಂದಿಲ್ಲ. ತನಿಖೆಯಿಂದ ಎಲ್ಲವೂ ದೃಡಪಡಲಿದೆ ಎಂದು ಹುಬ್ಬಳ್ಳಿಯಲ್ಲಿ ಡಾ. ಕ್ರಾಂತಿ ಕಿರಣ್ ಹೇಳಿಕೆ ನೀಡಿದ್ದಾರೆ.
(ವರದಿ - ಶಿವರಾಮ ಅಸುಂಡಿ)
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ