‘ನಂಗೆ ಸೋಂಕಿಲ್ಲ, ಆಸ್ಪತ್ರೆಗೆ ಬರೊಲ್ಲ’ – ಬೀದರ್​ನಲ್ಲಿ ನಡುರಸ್ತೆಯಲ್ಲೇ ಸೋಂಕಿತನ ರಂಪಾಟ

35 ವರ್ಷದ ಸೋಂಕಿತನ ರಂಪಾಟದಿಂದ ಕೆಲ ಹೊತ್ತು ವೈದ್ಯಕೀಯ ಸಿಬ್ಬಂದಿ ಹೈರಾಣಾದರೆ, ಬೀದರ್​ನ ಜನ ನಿಬಿಡ ಪ್ರದೇಶವಾದ ಬಸವೇಶ್ವರ ಸರ್ಕಲ್​ನಲ್ಲಿ ಸ್ಥಳೀಯರು ಸಾಮಾಜಿಕ ಅಂತರ ಇಲ್ಲದೆ ಗುಂಪುಗೂಡಿದ್ದರು.

news18-kannada
Updated:July 8, 2020, 4:01 PM IST
‘ನಂಗೆ ಸೋಂಕಿಲ್ಲ, ಆಸ್ಪತ್ರೆಗೆ ಬರೊಲ್ಲ’ – ಬೀದರ್​ನಲ್ಲಿ ನಡುರಸ್ತೆಯಲ್ಲೇ ಸೋಂಕಿತನ ರಂಪಾಟ
ಬೀದರ್​ನಲ್ಲಿ ಲಾಕ್​​ಡೌನ್ ಸಂದರ್ಭದ ಪ್ರಾತಿನಿಧಿಕ ಚಿತ್ರ
  • Share this:
ಬೀದರ್: ಕೇರಳದಲ್ಲಿ ಕ್ವಾರಂಟೈನ್​ನಲ್ಲಿದ್ದ ವ್ಯಕ್ತಿ ಹೊರಗೆ ಸುತ್ತಾಡುವಾಗ ಆತನನ್ನು ಹಿಡಿಯಲು ಹೋದಾಗ ರಂಪಾಟ ಮಾಡಿದ್ದ ಘಟನೆಯ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗಿದೆ. ಈಗ ಅದೇ ರೀತಿಯ ಘಟನೆಯೊಂದು ಬೀದರ್​ನಲ್ಲೂ ನಡೆದಿದೆ. ಕೊರೊನಾ ಪಾಸಿಟಿವ್ ಬಂದ ವ್ಯಕ್ತಿಯೋರ್ವ ಐಶೋಲೇಶನ್ ವಾರ್ಡ್​ಗೆ ಶಿಫ್ಟ್ ಮಾಡಲು ಕರೆದೊಯ್ಯಲು ಬಂದಿದ್ದ ವೈದ್ಯಕೀಯ ಸಿಬ್ಬಂದಿಯೊಂದಿಗೆ ನಡು ಬೀದಿಯಲ್ಲೇ ರಂಪಾಟ ನಡೆಸಿದ ಘಟನೆ ನಗರ ಪ್ರದೇಶದಲ್ಲಿ ನಡೆದಿದೆ.

ಕೊರೊನಾ ದೃಢಪಟ್ಟ ಹಿನ್ನೆಲೆ 35 ವರ್ಷದ ಯುವಕನೋರ್ವನನ್ನು ಕರೆದೊಯ್ಯಲು ನಗರದ ಬಸವೇಶ್ವರ ಸರ್ಕಲ್​ಗೆ ಅಂಬುಲೆನ್ಸ್ ಸಮೇತ ವೈದ್ಯಕೀಯ ಸಿಬ್ಬಂದಿ ಆಗಮಿಸಿದ್ದರು. ಈ ವೇಳೆ ವೈದ್ಯಕೀಯ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ ಸೋಂಕಿತ ವ್ಯಕ್ತಿ, ' ನನಗೆ ಸೋಂಕು ತಗುಲಿಲ್ಲ. ನಾನು ಐಸೋಲೇಷನ್ ವಾರ್ಡ್​ಗೆ ಶಿಫ್ಟ್ ಆಗುವುದಿಲ್ಲ‌ ' ಎಂದು ವರಾತ ತೆಗೆದ. ಸೋಂಕಿತನ ರಂಪಾಟದಿಂದ ಕೆಲ ಹೊತ್ತು ವೈದ್ಯಕೀಯ ಸಿಬ್ಬಂದಿ ಹೈರಾಣಾದರೆ, ಜನ ನಿಬಿಡ ಪ್ರದೇಶವಾದ ಬಸವೇಶ್ವರ ಸರ್ಕಲ್​ನಲ್ಲಿ ಸ್ಥಳೀಯರು ಸಹ ಗುಂಪುಗೂಡಿದ್ದರು. ಕೆಲಹೊತ್ತು ಸ್ಥಳದಲ್ಲಿ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಸೋಂಕಿತನ ರಂಪಾಟ ನೋಡಲು ನೆರೆದಿದ್ದರು.

ಇದನ್ನೂ ಓದಿ: ಕಿಮ್ಸ್ ಯಡವಟ್ಟು; ಅಂತ್ಯಸಂಸ್ಕಾರದ ನಂತರ ಬಯಲಾಯಿತು ಸೋಂಕು ವಿಚಾರ; ಗುತ್ತಲ ಜನರು ಕಂಗಾಲುವೈದ್ಯಕೀಯ ಸಿಬ್ಬಂದಿಯ ಮನವೊಲಿಕೆಗೆ ಮೊದ ಮೊದಲು ಬಗ್ಗದ ಸೋಂಕಿತ ವ್ಯಕ್ತಿ ತನ್ನ ಬೈಕ್ ತಳ್ಳಿಕೊಂಡೇ ನಗರದ ಕೆಲವೆಡೆ ಓಡಾಟ ನಡೆಸಿದ. ಸೋಂಕಿತನ ಓಡಾಟದಿಂದ ಕೆಲಹೊತ್ತು ವಾಹನ ಸವಾರರು ಆತಂಕಿತರಾಗಿದ್ದರು. 'ನನಗೆ ಸೋಂಕಿಲ್ಲ, ನಾನು ಆಸ್ಪತ್ರೆಗೆ ಬರುವುದಿಲ್ಲ' ಎಂಬ ಸೋಂಕಿತನ ಕಿರಿಕ್​ಗೆ ಹೈರಾಣಾಗಿದ್ದ ವೈದ್ಯಕೀಯ ಸಿಬ್ಬಂದಿ ಸಹ ಆತನನ್ನು ಬೆನ್ನಟ್ಟಿ ಮನವೊಲಿಸುವಲ್ಲಿ ಕೊನೆಗೂ ಯಶಸ್ವಿಯಾಗಿ, ಬ್ರಿಮ್ಸ್ ಜಿಲ್ಲಾಸ್ಪತ್ರೆಯ ಐಶೋಲೇಷನ್ ವಾರ್ಡ್​ಗೆ ದಾಖಲಿಸುವಲ್ಲಿ ಸಫಲರಾದರು.
Published by: Vijayasarthy SN
First published: July 8, 2020, 4:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading