ಬೆಂಗಳೂರಿನಲ್ಲಿ ಪೊಲೀಸರಿಗೆಂದೇ ವಿಶೇಷ ಕೋವಿಡ್ ಕಂಟ್ರೋಲ್ ರೂಂ

ಪೊಲೀಸ್ ಸಿಬ್ಬಂದಿ ಹಾಗೂ ಅವರ ಕುಟುಂಬಗಳಿಗೆ ಕೊರೋನಾ ಸಂಬಂಧಿತ ಮಾಹಿತಿ ಮತ್ತು ನೆರವಿಗಾಗಿ ಈ ಕಂಟ್ರೋಲ್ ರೂಮ್ ತೆರೆಯಲಾಗಿದೆ. ಇದು ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದೆ.

ಭಾಸ್ಕರ್ ರಾವ್.

ಭಾಸ್ಕರ್ ರಾವ್.

  • Share this:
ಬೆಂಗಳೂರು: ನಗರದಲ್ಲಿ ಕೊರೋನಾ ರೋಗಿಗಳ ಚಿಕಿತ್ಸೆಗೆ ಸರಿಯಾದ ವ್ಯವಸ್ಥೆ ಇಲ್ಲ ಎಂಬ ಆರೋಪ ಬಹಳಷ್ಟು ಕೇಳಿಬರುತ್ತಿದೆ. ಕೊರೋನಾ ವಾರಿಯರ್ ಆಗಿ ಕೊರೋನಾ ಸೋಂಕಿಗೆನ ಅಪಾಯಕ್ಕೆ ಹೆಚ್ಚು ಈಡಾಗುವ ಪೊಲೀಸರಿಗೆ ಈ ಭಾಗ್ಯ ಇಲ್ಲ. ನಗರದ ನೂರಾರು ಪೊಲೀಸರಿಗೆ ಸೋಂಕು ತಗುಲಿದೆ. ಹಲವು ಪೊಲೀಸರು ಸರಿಯಾದ ಆಸ್ಪತ್ರೆ ವ್ಯವಸ್ಥೆ ಇಲ್ಲದೆ ಹೈರಾಣಾಗಿ ಹೋಗಿದ್ಧಾರೆ. ಈ ಹಿನ್ನೆಲೆಯಲ್ಲಿ ಈ ಪೊಲೀಸ್ ಇಲಾಖೆ ತನ್ನ ಸಿಬ್ಬಂದಿಯ ಚಿಕಿತ್ಸೆ ಅಥವಾ ಮಾಹಿತಿಗೆಂದು ವಿಶೇಷ ಕೋವಿಡ್ ಕಂಟ್ರೋಲ್ ರೂಮ್ ತೆರೆದಿದೆ.

ಪೊಲೀಸ್ ಸಿಬ್ಬಂದಿ ಹಾಗೂ ಅವರ ಕುಟುಂಬಗಳಿಗೆ ಕೊರೋನಾ ಸಂಬಂಧಿತ ಮಾಹಿತಿ ಮತ್ತು ನೆರವಿಗಾಗಿ ಈ ಕೇಂದ್ರವನ್ನ ತೆರೆಯಲಾಗಿದೆ. ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ನಗರದ ಎಲ್ಲಾ ವಿಭಾಗಗಳ ಡಿಸಿಪಿಗಳಿಗೆ ಪತ್ರದ ಮೂಲಕ ಮಾಹಿತಿ ತಿಳಿಸಿದ್ದಾರೆ.

ಪೊಲೀಸರಿಗೆಂದೇ ಇರುವ ಈ ಕೋವಿಡ್ ಕಂಟ್ರೋಲ್ ರೂಮ್ ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತದೆ.

080 22942625 ಅಥವಾ 080 22943772 - ಈ ನಂಬರ್​ಗಳಿಗೆ ಕರೆ ಮಾಡಿದರೆ ಸೂಕ್ತ ಸಲಹೆ ಮತ್ತು ಚಿಕಿತ್ಸೆ ಸಿಗಲಿದೆ ಎನ್ನಲಾಗಿದೆ.

ಇದನ್ನೂ ಓದಿ: ಲಾಕ್ ಡೌನ್ ನಿಂದ ಹೆಚ್ಚಿದ ಕೆಲಸದ ಒತ್ತಡ ; ಪೊಲೀಸರಿಗೆ ಹೆಗಲು ಕೊಡಲು ಮುಂದಾದ ಸಾವಿರಾರು ಸ್ವಯಂ ಸೇವಕರು

ಇದರ ಜೊತೆಗೆ, ಪೊಲೀಸರು ಕರ್ತವ್ಯ ನಿಭಾಯಿಸಲು ಸುಲಭವಾಗುವಂತೆ ವಿವಿಧ ರೀತಿಯ ಕ್ರಮಗಳನ್ನ ಪೊಲೀಸ್ ಇಲಾಖೆ ಕೈಗೊಂಡಿದೆ. ಅದರಲ್ಲಿ ಸ್ವಯಂಸೇವಕರ ನೆರವೂ ಒಂದು. ಪೊಲೀಸರ ಜೊತೆ ಸ್ವಯಂಸೇವಕರಾಗಿ ಕೆಲಸ ಮಾಡಲು ನಾಗರಿಕರಿಗೆ ನೀಡಿದ್ದ ಆಹ್ವಾನಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಸುಮಾರು 10 ಸಾವಿರದಷ್ಟು ಜನರು ವಾಲಂಟೀರ್​ಗಳಾಗಿ ಕೆಲಸ ಮಾಡಲು ಮುಂದೆ ಬಂದಿದ್ದಾರೆ. ತಮ್ಮ ಹೆಸರನ್ನೂ ನೊಂದಾಯಿಸಿಕೊಂಡಿದ್ದಾರೆ. ಈ ಏಳು ದಿನಗಳ ಲಾಕ್ ಡೌನ್ ವೇಳೆ ಪೊಲೀಸರಿಗೆ ಇವರು ನೆರವಾಗಲಿದ್ದಾರೆ.

ರಸ್ತೆಗಳಲ್ಲಿ ಬ್ಯಾರಿಕೇಡ್ ಬಳಿ ವಾಹನಗಳ ತಪಾಸಣೆ; ಠಾಣೆಗಳಲ್ಲಿ ಕಂಪ್ಯೂಟರ್ ಕಾರ್ಯಾಚರಣೆ ಇತ್ಯಾದಿ ಹಲವು ಕೆಲಸಗಳಿಗೆ ಈ ಸ್ವಯಂ ಸೇವಕರನ್ನ ನಿಯೋಜಿಸಲು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಸೂಚನೆ ನೀಡಿದ್ಧಾರೆ.

ಈ ವಾಲಂಟೀರ್ಸ್​​ಗೆ ಕ್ಯಾಪ್ ಮತ್ತು ಜಾಕೆಟ್ ನೀಡಲಾಗುತ್ತಿದ್ದು, ದಿನಕ್ಕೆ ಐದಾರು ಗಂಟೆ ಇವರು ಕರ್ತವ್ಯ ನಿಭಾಯಿಸಲಿದ್ಧಾರೆ. ಈ ಕ್ರಮದಿಂದ ಪೊಲೀಸರ ಮೇಲಿನ ಒತ್ತಡ ಒಂದಷ್ಟು ತಗ್ಗುವ ನಿರೀಕ್ಷೆ ಇದೆ.

ಬೆಂಗಳೂರಿನಲ್ಲಿ ಕೊರೋನಾ ಸೋಂಕು ತಗುಲಿರುವ ಪೊಲೀಸರ ಸಂಖ್ಯೆ ಸಾವಿರದ ಗಡಿ ಸಮೀಪ ಧಾವಿಸುತ್ತಿದೆ. ಸಾರ್ವಜನಿಕವಾಗಿ ನಾನಾ ರೀತಿಯ ಜನರ ಜೊತೆ ಸಂಪರ್ಕದಲ್ಲಿರುವ ಪೊಲೀಸರಿಗೆ ಸೋಂಕು ಬಹಳ ಸುಲಭವಾಗಿ ಹರಡುತ್ತಿದೆ. ಕಂಟೈನ್ಮೆಂಟ್ ಜೋನ್​ಗಳಲ್ಲಿ ಕರ್ತವ್ಯ ನಿರ್ವಹಿಸುವ ವೇಳೆಯೇ ಹೆಚ್ಚು ಪೊಲೀಸರಿಗೆ ಸೋಂಕು ತಗುಲಿದೆ.
Published by:Vijayasarthy SN
First published: