ಕೊವೀಡ್ ‌ಲಸಿಕೆ ಡ್ರೈರನ್ ಗೆ ಯಾದಗಿರಿಯಲ್ಲಿ ಸಿದ್ದತೆ; ಜಿಲ್ಲೆಯ 6 ಕೇಂದ್ರಗಳಲ್ಲಿ ಲಸಿಕೆ ವಿತರಣೆಗೆ ತಾಲೀಮು

ಒಂದು ಕೇಂದ್ರಕ್ಕೆ 25 ಜನ ಆರೋಗ್ಯ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿಗಳ  ತಂಡ ರಚನೆ ಮಾಡಲಾಗಿದೆ. ಈಗಾಗಲೇ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ತರಬೇತಿ ನೀಡಲಾಗಿದೆ.ಮುದ್ನಾಳ ಗ್ರಾಮದಲ್ಲಿರುವ ಜಿಲ್ಲಾಸ್ಪತ್ರೆಯಲ್ಲಿ ನಿರೀಕ್ಷಣಾ ಕೋಣೆ, ಲಸಿಕಾ ಕೊಠಡಿ, ವೀಕ್ಷಣಾ ಕೊಠಡಿಯನ್ನು ಆರಂಭಿಸಲಾಗಿದೆ.

ಕೋವಿಡ್ ಲಸಿಕೆ.

ಕೋವಿಡ್ ಲಸಿಕೆ.

  • Share this:
ಯಾದಗಿರಿ; ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ರಾಜ್ಯ ಸರಕಾರ ರಾಜ್ಯದಲ್ಲಿ ಕೊವೀಡ್ ಲಸಿಕೆ ವಿತರಣೆಗೆ ನಾಳೆ ಡ್ರೈರನ್ ನಡೆಸುತ್ತಿದ್ದು ಯಾದಗಿರಿ ಜಿಲ್ಲೆಯಲ್ಲಿ ಕೂಡ ಜಿಲ್ಲಾಡಳಿತ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಲಸಿಕೆ ವಿತರಣೆಯ ತಾಲೀಮಿಗೆ ಸಿದ್ದತೆ ಮಾಡಿಕೊಂಡಿದೆ.ಕೊವೀಡ್ ಆರಂಭದಲ್ಲಿ ಯಾದಗಿರಿ ಜಿಲ್ಲೆಯ ಜನರಿಗೆ ಮುಂಬೈ ವಲಸಿಗರಿಂದ ಕಂಟಕವಾಗಿತ್ತು.ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಕೊವೀಡ್ ಕಡಿವಾಣ ಹಾಕಲು ಕಟ್ಟುನಿಟ್ಟಿನ ಕ್ರಮಕೈಗೊಂಡಿತ್ತು. ನಂತರ ಹಂತ ಹಂತವಾಗಿ ಯಾದಗಿರಿ ಜಿಲ್ಲೆಯಲ್ಲಿ ಕೊವೀಡ್ ಪ್ರಕರಣಗಳು ಕೂಡ ಇಳಿಮುಖವಾಗಿದ್ದು ಜಿಲ್ಲೆಯ ಜನರಿಗೆ ನಿಟ್ಟುಸಿರು ಬಿಡುವಂತಾಗಿದೆ. ಯಾದಗಿರಿ ಜಿಲ್ಲೆಯಲ್ಲಿ ಕೂಡ ನಾಳೆ ಕೊವೀಡ್ ಲಸಿಕೆ ವಿತರಣೆಯ ಡ್ರೈರನ್ ಗೆ ಭರದ ಸಿದ್ದತೆ ಮಾಡಿಕೊಳ್ಳಲಾಗಿದೆ.ರಾಜ್ಯ ಸರಕಾರ ಕೂಡ ರಾಜ್ಯದ 263 ಕಡೆ ಡ್ರೈರನ್ ನಡೆಸುತ್ತಿದ್ದು,ಅದರಂತೆ ಯಾದಗಿರಿ ಜಿಲ್ಲೆಯಲ್ಲಿ 6 ಕೇಂದ್ರಗಳಲ್ಲಿ ಕೊವೀಡ್ ಲಸಿಕೆ ತಾಲೀಮು ನಡೆಸಲಾಗುತ್ತಿದೆ.

ಆರೋಗ್ಯ ಇಲಾಖೆ ಅಧಿಕಾರಿಗಳು ಸಕಲ ಸಿದ್ದತೆ ಮಾಡಿಕೊಂಡಿದ್ದಾರೆ.ಲಸಿಕೆ ತಾಲೀಮು ಕೇಂದ್ರಗಳು 6 ಆರಂಭ ಮಾಡಿದ್ದು ಯಾದಗಿರಿಯಲ್ಲಿ  ನೂತನ ಜಿಲ್ಲಾಸ್ಪತ್ರೆ, ವಿಬಿಆರ್ ಖಾಸಗಿ ಆಸ್ಪತ್ರೆ, ಸುರಪುರ ನಗರದಲ್ಲಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಯರಗೋಳ ಪ್ರಾಥಮಿಕ ಆರೋಗ್ಯ ಕೇಂದ್ರ, ವಡಗೇರಾ ಸಮುದಾಯ ಆರೋಗ್ಯ ಕೇಂದ್ರ,ಶಹಾಪುರ ತಾಲ್ಲೂಕು ಆಸ್ಪತ್ರೆ ಸೇರಿ 6 ಕಡೆ ಡ್ರೈರನ್ ಲಸಿಕೆ ಕೇಂದ್ರಗಳನ್ನು ಆರಂಭ ಮಾಡಲಾಗಿದೆ.

ಒಂದು ಕೇಂದ್ರಕ್ಕೆ 25 ಜನ ಆರೋಗ್ಯ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿಗಳ  ತಂಡ ರಚನೆ ಮಾಡಲಾಗಿದೆ. ಈಗಾಗಲೇ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ತರಬೇತಿ ನೀಡಲಾಗಿದೆ.ಮುದ್ನಾಳ ಗ್ರಾಮದಲ್ಲಿರುವ ಜಿಲ್ಲಾಸ್ಪತ್ರೆಯಲ್ಲಿ ನಿರೀಕ್ಷಣಾ ಕೋಣೆ, ಲಸಿಕಾ ಕೊಠಡಿ, ವೀಕ್ಷಣಾ ಕೊಠಡಿಯನ್ನು ಆರಂಭಿಸಲಾಗಿದೆ.

ಇದನ್ನೂ ಓದಿ: ಬಿಸಿಲನಾಡಲ್ಲಿ ಅಧಿಕ ಮಳೆ, ಕಡಿಮೆಯಾದ ತೊಗರಿ ಇಳುವರಿ; ಸಂಕಷ್ಟದಲ್ಲಿ ರೈತರು

ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಇಂದುಮತಿ ಪಾಟೀಲ ಮಾತನಾಡಿ,ಜಿಲ್ಲೆಯಲ್ಲಿ ಕೂಡ 6 ಕೊವೀಡ್ ಡ್ರೈರನ್ ಕೇಂದ್ರಗಳನ್ನು ಆರಂಭ ಮಾಡಲಾಗಿದ್ದು ಅಗತ್ಯ ಸಿದ್ದತೆ ಕೈಗೊಳ್ಳಲಾಗಿದೆ. ಈಗಾಗಲೇ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಸೂಕ್ತ ತರಬೇತಿ ನೀಡಲಾಗಿದೆ ಎಂದರು.ಈಗಾಗಲೇ ಡ್ರೈರನ್ ಗೆ ಬರುವ ಕೊರೊನಾ ವಾರಿಯರ್ಸ್ ಗಳ ಪಟ್ಟಿ ಸಿದ್ದತೆ ಮಾಡಿಕೊಳ್ಳಲಾಗಿದೆ.

ಯಾದಗಿರಿ ಜಿಲ್ಲೆಯ ಸುರಪುರ, ಶಹಾಪುರ,ವಡಗೇರಾ,6 ಕೇಂದ್ರಗಳಲ್ಲಿ ಸಿದ್ದತೆ ಮಾಡಿಕೊಳ್ಳಲಾಗಿದೆ. ಖುದ್ದು ಯಾದಗಿರಿ ಜಿಲ್ಲಾಧಿಕಾರಿ ಡಾ.ರಾಗಾಪ್ರಿಯಾ ,ಡಿಎಚ್ ಓ ಡಾ.ಇಂದುಮತಿ ಪಾಟೀಲ ಡ್ರೈರನ್ ಯಶಸ್ವಿಗೊಳಿಸಲು ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದಾರೆ. ಬೆಳಿಗ್ಗೆ 10:30 ಗಂಟೆಯಿಂದಲೇ ಜಿಲ್ಲೆಯ 6 ಕೇಂದ್ರಗಳಲ್ಲಿ ಡ್ರೈರನ್ ಆರಂಭವಾಗಲಿದೆ. ಡ್ರೈರನ್ ಗೆ ಪಟ್ಟಿ ಮಾಡಿದ ಕೊರೊನಾ ವಾರಿಯರ್ಸ್‌ ಗಳು ಬೆಳಿಗ್ಗೆ ಕೇಂದ್ರಗಳಿಗೆ ಭೇಟಿ ನೀಡಿ ಡ್ರೈರನ್  ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಕೊವೀಡ್ ಕಡಿವಾಣಕ್ಕೆ ಜಿಲ್ಲಾಡಳಿತ ಸಕಲ ಸಿದ್ದತೆ ಕೈಗೊಂಡಿದೆ.
Published by:MAshok Kumar
First published: