HOME » NEWS » District » COVID 19 LOCKDOWN RELIEF FUND NOT YET FUNDED TO MANY AUTO DRIVERS IN KARNATAKA MAK

ಕೊರೋನಾ ಲಾಕ್​ಡೌನ್​ನಿಂದಾಗಿ ಉದ್ಯೋಗವಿಲ್ಲದ ಅಟೋ ಡ್ರೈವರ್; ಇನ್ನೂ ಸಿಕ್ಕಿಲ್ಲ ಪರಿಹಾರ ಹಣ

ಯಡಿಯೂರಪ್ಪ ಲಾಕ್ ಡೌನ್ ಸಂದರ್ಭದಲ್ಲಿ ಆಟೋ ಡ್ರೈವರ್​ಗಳು ಹಾಗೂ ಕುಶಲಕರ್ಮಿಗಳಿಗೆ ಪ್ರತಿಯೊಬ್ಬರಿಗೂ 5 ಸಾವಿರ ರೂಪಾಯಿ ಪರಿಹಾರ ನೀಡುವುದಾಗಿ ಘೋಷಣೆ ಮಾಡಿದ್ದರು. ಆದರೆ ಈ ಹಣ ಅಟೋ ಚಾಲಕರಿಗೆ ಇನ್ನೂ ತಲುಪಿಲ್ಲ.

news18-kannada
Updated:November 11, 2020, 6:02 PM IST
ಕೊರೋನಾ ಲಾಕ್​ಡೌನ್​ನಿಂದಾಗಿ ಉದ್ಯೋಗವಿಲ್ಲದ ಅಟೋ ಡ್ರೈವರ್; ಇನ್ನೂ ಸಿಕ್ಕಿಲ್ಲ ಪರಿಹಾರ ಹಣ
ಸಾಂದರ್ಭಿಕ ಚಿತ್ರ.
  • Share this:
ರಾಯಚೂರು: ಮಹಾಮಾರಿ ಕೊರೋನಾ ವಕ್ಕರಿಸಿದ ನಂತರ ಮೊದಲ ಮೂರು ತಿಂಗಳುಗಳ ಕಾಲ ಸಂಪೂರ್ಣವಾಗಿ ರಾಜ್ಯ ಸ್ತಬ್ದವಾಗಿತ್ತು. ಈಗ ಅನ್​ಲಾಕ್​ ಪ್ರಕ್ರಿಯೆ ನಡೆದರೂ ಸಂಪೂರ್ಣವಾಗಿ ಯಥಾಸ್ಥಿತಿಗೆ ಮರಳಿಲ್ಲ. ಲಾಕ್​ಡೌನ್ ಸಂದರ್ಭದಲ್ಲಿ ಅಟೋಗಳು ರಸ್ತೆಗಿಳಿದಿರಲಿಲ್ಲ. ಹೀಗಾಗಿ ಅಟೋ ಡ್ರೈವರ್ ಸೇರಿದಂತೆ ಕುಶಲಕರ್ಮಿಗಳಿಗೆ ಸರಕಾರ 5000 ರೂಪಾಯಿ ಪರಿಹಾರದ ಪ್ಯಾಕೇಜ್ ಘೋಷಣೆ ಮಾಡಿತ್ತು. ಆದರೆ ಇಲ್ಲಿಯವರೆಗೂ ಅಟೋ ಡ್ರೈವರ್​ಗಳಿಗೆ ಪರಿಹಾರ ತಲುಪಿಲ್ಲ. ರಾಯಚೂರು ಜಿಲ್ಲೆಯಲ್ಲಿ ಒಟ್ಟು 7414 ಜನರು ಅಟೋರಿಕ್ಷಾ ಚಾಲಕರಿದ್ದಾರೆ. ಅವರೆಲ್ಲರೂ ಮಾರ್ಚ್​ 24 ರಿಂದ ಮೇ ಅಂತ್ಯದವರೆಗೂ ಕೆಲಸವಿಲ್ಲದೆ ಮನೆಯಲ್ಲಿಯೇ ಇದ್ದರು. ಈ ಸುಮಾರು 3 ತಿಂಗಳ ಕಾಲ ದುಡಿಮೆ ಇರಲಿಲ್ಲ, ನಿತ್ಯ ಅಟೋ ಓಡಿಸಿ ಜೀವನ ನಡೆಸುವ ಅಟೋ ಚಾಲಕರು ಈ ದಿನಗಳಲ್ಲಿ ಅನುಭವಿಸಿದ ಸಂಕಷ್ಟ ಗಂಭೀರವಾಗಿತ್ತು.

ಈಗ ಜೂನ್ ತಿಂಗಳಿನಿಂದ ಅಟೋ ಗಳು ಓಡುತ್ತಿದ್ದರು ಅಟೋಗಳಲ್ಲಿ ಕಡಿಮೆ ಸಂಖ್ಯೆಯಲ್ಲಿ ಜನರನ್ನು ಸಾಗಿಸಬೇಕಾಗಿದೆ. ಜನರು ಸಹ ಇನ್ನೂ ಅಟೋಗಳನ್ನು ಹತ್ತಲು ಹಿಂಜರಿಯುತ್ತಿದ್ದಾರೆ. ಈಗಿನ ದುಡಿಮೆಯು ಅವರ ಹೊಟ್ಟೆ ಬಟ್ಟೆಗೆ ಸರಿಹೋಗುತ್ತಿದೆ. ಆದರೆ ಅಟೋ ಖರೀದಿಗಾಗಿ ಮಾಡಿರುವ ಸಾಲ ಅವರ ಮೇಲೆ ಹೊರೆಯಾಗಿದೆ. ಕೇಂದ್ರ ಸರಕಾರ ಹಳೆಯ ಅಟೋಗಳನ್ನು ಬಂದ್ ಮಾಡಿದ ಕಾರಣಕ್ಕೆ ಹೊಸ ಅಟೋಗಳನ್ನು ಖರೀದಿಸಿದ ಹಿನ್ನೆಲೆಯಲ್ಲಿ ಬಹುತೇಕರು ಹೊಸ ಅಟೋಗಳನ್ನು ಖರೀದಿಸಿದ್ದಾರೆ.

ಅವರಲ್ಲರೂ ಬಜಾಜ್ ಫೈನಾನ್ಸ್ ಸೇರಿದಂತೆ ವಿವಿಧ ಬ್ಯಾಂಕ್ ಹಾಗೂ ಖಾಸಗಿ ಹಣಕಾಸು ಸಂಸ್ಥೆಗಳಲ್ಲಿ ಸಾಲ ಮಾಡಿದ್ದಾರೆ. ನಿತ್ಯ ಅಟೋ ಓಡಿದಾಗ ಅವರ ದುಡಿಮೆಯಲ್ಲಿ ಕುಟುಂಬ ನಿರ್ವಹಣೆ ಮಾಡಿ ಕಷ್ಟಪಟ್ಟು ಆಗೊ ಹೀಗೂ ಹಣ ಉಳಿಸಿ ಕಂತು ಕಟ್ಟುತ್ತಿದ್ದರು, ಆದರೆ ಲಾಕ್ ಡೌನ್ ಸಮಯದಲ್ಲಿ ಕಂತು ಕಟ್ಟದೆ ಉಳಿಸಿಕೊಳ್ಳಲಾಗಿದೆ. ಲಾಕ್ ಡೌನ್ ಸಂದರ್ಭದಲ್ಲಿ 3 ತಿಂಗಳು ಕಂತು ಕಟ್ಟಲು ವಿನಾಯಿತಿ ನೀಡಿದ್ದರೂ ನಂತರದಲ್ಲಿ ಅಟೋಗಳ ಸಾಲದ ಮೇಲಿನ ಕಂತುಗಳನ್ನು ಕಟ್ಟಲೇಬೇಕಾಗಿದೆ.

ಇದನ್ನೂ ಓದಿ : Bangalore Fire Accident: ಕಾರ್ಖಾನೆಯಲ್ಲಿ ಅಗ್ನಿ ಅವಘಡ ಪ್ರಕರಣ; ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕ್ಕೆ ಸೂಚಿಸಿದ ಬಸವರಾಜ ಬೊಮ್ಮಾಯಿ

ಈಗ 2-3 ತಿಂಗಳನಿಂದ ಕಂತು ಕಟ್ಟಲು ಪರಿದಾಡುವಂತಾಗಿದೆ. ಈ ಮಧ್ಯೆ ಯಡಿಯೂರಪ್ಪ ಲಾಕ್ ಡೌನ್ ಸಂದರ್ಭದಲ್ಲಿ ಆಟೋ ಡ್ರೈವರ್​ಗಳು ಹಾಗೂ ಕುಶಲಕರ್ಮಿಗಳಿಗೆ ಪ್ರತಿಯೊಬ್ಬರಿಗೂ 5 ಸಾವಿರ ರೂಪಾಯಿ ಪರಿಹಾರ ನೀಡುವುದಾಗಿ ಘೋಷಣೆ ಮಾಡಿದ್ದರು. ಆದರೆ ಈ ಹಣ ಅಟೋ ಚಾಲಕರಿಗೆ ಇನ್ನೂ ತಲುಪಿಲ್ಲ.

ಅಲ್ಲಲ್ಲಿ ಶೇ 10 ರಷ್ಟು ಜನರಿಗೆ ಮಾತ್ರ ಪರಿಹಾರದ ಹಣ ಅವರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮಾ ಆಗಿದೆ, ಇನ್ನೂ ಶೇ 90 ರಷ್ಟು ಜನರಿಗೆ ಹಣ ಜಮಾ ಆಗಿಲ್ಲ. ಅದಕ್ಕಾಗಿ ಅಟೋ ಚಾಲಕರು ಯಡಿಯೂರಪ್ಪನವರೆ ನೀವು ಘೋಷಿಸಿ ಪರಿಹಾರವನ್ನು ನೀಡಿ ಎಂದು ಆಗ್ರಹಿಸಿದ್ದಾರೆ.
Published by: MAshok Kumar
First published: November 11, 2020, 6:02 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories