ಹಾಸನದಲ್ಲಿ ಇಂದು ನಾಲ್ವರು ಕಂಡಕ್ಟರ್ ಸೇರಿ 25 ಮಂದಿಗೆ ಸೋಂಕು ದೃಢ

ಇದುವರೆಗೂ ಹಾಸನದಲ್ಲಿ 478 ಕೊರೋನ ಪಾಸಿಟಿವ್ ಕೇಸ್ ಕಂಡು ಬಂದಿದ್ದು, 255 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟಾರೆ ಸದ್ಯಕ್ಕೆ 217 ಕೇಸ್ಗಳು ಆಕ್ಟಿವ್ ಆಗಿವೆ.

news18-kannada
Updated:July 4, 2020, 10:08 PM IST
ಹಾಸನದಲ್ಲಿ ಇಂದು ನಾಲ್ವರು ಕಂಡಕ್ಟರ್ ಸೇರಿ 25 ಮಂದಿಗೆ ಸೋಂಕು ದೃಢ
ಪ್ರಾತಿನಿಧಿಕ ಚಿತ್ರ
  • Share this:
ಹಾಸನ: ಕರ್ತವ್ಯ ನಿರ್ವಹಿಸುತ್ತಿದ್ದ ನಾಲ್ವರು ಕಂಡಕ್ಟರ್‌ಗಳು ಸೇರಿದಂತೆ ಹಾಸನದಲ್ಲಿ ಇಂದು 25 ಜನರಿಗೆ ಕೊರೋನ ಪಾಸಿಟಿವ್ ಬಂದಿದ್ದು ಆತಂಕಕ್ಕೆ ಕಾರಣವಾಗಿದೆ. ನಾಲ್ವರು ನಿರ್ವಾಹಕರು ಅರಸೀಕೆರೆ, ತುಮಕೂರು, ಬೆಂಗಳೂರು ಮಾರ್ಗದ ಬಸ್‌ಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ‌. ಸೋಂಕಿತ ಕಂಡಕ್ಟರ್‌ಗಳು ಹಲವರ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದ್ದಾರೆ.

ಇವರಷ್ಟೇ ಅಲ್ಲದೆ 25 ಜನರಲ್ಲಿ ಓರ್ವ ಪೊಲೀಸ್, ಇಬ್ಬರು ಆರೋಗ್ಯ ಇಲಾಖೆ ಸಿಬ್ಬಂದಿಗೂ ಇಂದು ಕೊರೋನ ಪಾಸಿಟಿವ್ ಬಂದಿರುವುದು ಆತಂಕ ಮೂಡಿಸಿದೆ.  ಇಂದು ಓರ್ವ 36 ವರ್ಷದ ಯುವಕ ಕೊರೋನಾದಿಂದ ಮೃತಪಟ್ಟಿದ್ದಾರೆ.

ಇದುವರೆಗೂ ಹಾಸನದಲ್ಲಿ 478 ಕೊರೋನ ಪಾಸಿಟಿವ್ ಕೇಸ್ ಕಂಡು ಬಂದಿದ್ದು, 255 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್​ಚಾರ್ಜ್ ಆಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟಾರೆ ಸದ್ಯಕ್ಕೆ 217 ಕೇಸ್‌ಗಳು ಆಕ್ಟಿವ್ ಆಗಿವೆ.

ಇದನ್ನೂ ಓದಿ: ರಾಜ್ಯದಲ್ಲಿ ಒಂದೇ ದಿನ 42 ಸಾವು; 1,839 ಪ್ರಕರಣ ದಾಖಲು

ಇನ್ನು, ರಾಜ್ಯಾದ್ಯಂತ ಇಂದು 1,839 ಪ್ರಕರಣಗಳು ದೃಢಪಟ್ಟಿವೆ. ಬೆಂಗಳೂರೊಂದರಲ್ಲೇ ಸಾವಿರಕ್ಕೂ ಹೆಚ್ಚು ಕೇಸ್​ಗಳು ಪತ್ತೆಯಾಗಿವೆ. ಇತರ ಜಿಲ್ಲೆಗಳಿಗೂ ಬೆಂಗಳೂರು ಕಂಟಕವಾಗಿ ಪರಿಣಮಿಸಿದೆ.

ವರದಿ: ಡಿಎಂಜಿ ಹಳ್ಳಿ ಅಶೋಕ್
Published by: Vijayasarthy SN
First published: July 4, 2020, 10:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading