ಕೊರೋನಾ ಸೋಂಕು ತಗುಲಿ ಆಸ್ಪತ್ರೆಯಲ್ಲಿದ್ದರೂ ಸೆಲ್ಪಿ ವಿಡಿಯೋ ಮಾಡಿ ಜನರಿಗೆ ಧೈರ್ಯ ತುಂಬಿದ ವೈದ್ಯದಂಪತಿ

ನಮ್ಮ ಬಳಿ ಚಿಕಿತ್ಸೆ ಪಡೆದ ಪ್ರತಿಯೊಬ್ಬರು ಸ್ವಯಂಪ್ರೇರಿತರಾಗಿ ಕೋವಿಡ್ ಟೆಸ್ಟ್ ಮಾಡಿಸಿ ಎಂದು ವೈದ್ಯ ದಂಪತಿ ಮನವಿ ಮಾಡಿದ್ದಾರೆ.

ಸೆಲ್ಪೀ ವಿಡಿಯೋದಲ್ಲಿ ಜನರಿಗೆ ಧೈರ್ಯ ತುಂಬಿದ ವೈದ್ಯ ದಂಪತಿ

ಸೆಲ್ಪೀ ವಿಡಿಯೋದಲ್ಲಿ ಜನರಿಗೆ ಧೈರ್ಯ ತುಂಬಿದ ವೈದ್ಯ ದಂಪತಿ

  • Share this:
ರಾಮನಗರ(ಜೂ.21): ಈ ವೈದ್ಯ ದಂಪತಿಗೆ ಕೊರೋನಾ ಪಾಸಿಟಿವ್ ಕಾಣಿಸಿಕೊಂಡಿದೆ. ಆದರೆ, ಚಿಕಿತ್ಸೆಯಲ್ಲಿರುವ ಇವರು ಜನರಿಗೆ ಧೈರ್ಯದ ಮಾತನಾಡಿದ್ದಾರೆ. ಯಾರು ಕೊರಗಬೇಡಿ, ಮರುಗಬೇಡಿ ಧೈರ್ಯವಾಗಿರಿ ಕೊರೋನಾ ಆತಂಕ ಬೇಡ ಎನ್ನುವ ಮೂಲಕ ಜನಸಾಮಾನ್ಯರಿಗೆ ಆತ್ಮಸ್ಥೈರ್ಯ ತುಂಬಿದ್ದಾರೆ. ಎಲ್ಲೆಡೆ ಈಗ ಇವರ ಸೆಲ್ಪಿ ವಿಡಿಯೋ ಜನರಿಗೆ ಧೈರ್ಯ ತುಂಬುವಂತಿದೆ. 

ರಾಮನಗರ ಜಿಲ್ಲೆ ಕನಕಪುರ ನಗರದ ನವೋದಯ ಕ್ಲಿನಿಕ್ ನ ವೈದ್ಯ ದಂಪತಿ ರಶ್ಮಿ ಹಾಗೂ ಚೇತನ್ ಗೆ ಕಳೆದ ಗುರುವಾರ ಸೋಂಕು ದೃಢಪಟ್ಟಿತ್ತು, ಈ ವೈದ್ಯ ದಂಪತಿಗಳು ಕನಕಪುರದ ಸುಮಾರು 800ಕ್ಕೂ ಅಧಿಕ ಮಂದಿಗೆ ಚಿಕಿತ್ಸೆ ನೀಡಿದ್ದರು. ಇನ್ನೂ ವೈದ್ಯ ದಂಪತಿಗೆ ಸೋಂಕು ದೃಢವಾಗುತ್ತಿದ್ದಂತೆ ಇವರ ಬಳಿ ಚಿಕಿತ್ಸೆ ಪಡೆದಿದ್ದ ಜನ ಆತಂಕಕ್ಕೆ ಒಳಗಾಗಿದ್ದರು. ತಕ್ಷಣವೇ ವೈದ್ಯ ದಂಪತಿಯನ್ನ ರಾಮನಗರದ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕಳೆದ ಎರಡು ದಿನಗಳಿಂದ ಕನಕಪುರ ಒಂದರಲ್ಲೇ 26 ಕ್ಕೂ ಹೆಚ್ಚು ಕೇಸ್ ಪತ್ತೆಯಾಗಿದ್ದು ಇನ್ನು ಮುಂದಿನ ದಿನಗಳಲ್ಲಿ ಹತ್ತು ಹಲವು ಕೇಸ್ ಗಳು ಪತ್ತೆಯಾಗುವ ಲಕ್ಷಣಗಳಿವೆ.

ಇನ್ನು ರಾಮನಗರದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವೈದ್ಯ ದಂಪತಿ  ಸೆಲ್ಫಿ ವಿಡಿಯೋ ಮಾಡುವ ಮೂಲಕ ಜನರಿಗೆ ಧೈರ್ಯ ತುಂಬಿದ್ದಾರೆ. ಯಾರು ಕೂಡ ಕೊರೋನಾಗೆ ಹೆದರುವ ಅವಶ್ಯಕತೆಯಿಲ್ಲ, ಕೆಮ್ಮು, ನೆಗಡಿಯಂತೆ ಇದು ಕೂಡ ಒಂದು ವೈರಸ್. ನಾವು ಧೈರ್ಯವಾಗಿದ್ದರೆ ನಮ್ಮ ದೇಹದಲ್ಲಿಯೇ ವೈರಸ್ ಸಾಯುತ್ತದೆ. ಹಾಗಾಗಿ ಜನ ಆತಂಕ ಪಡಬೇಡಿ.

ಇದನ್ನೂ ಓದಿ : ಶೆಟ್ಟಿಕಜೆ ಗ್ರಾಮಸ್ಥರಿಗೆ ಮಳೆಗಾಲ ಅಂದ್ರೆ ನಡುಕ ; 60 ವರ್ಷಗಳಿಂದಲೂ ತಪ್ಪದ ಗೋಳು

ಪೌಷ್ಠಿಕಾಂಶದ ಆಹಾರ ಸೇವಿಸಿ, ಬಿಸಿ ನೀರು ಕುಡಿಯಿರಿ ಎಂದು ಭರವಸೆಯ ಮಾತನಾಡಿದ್ದಾರೆ. ಜೊತೆಗೆ ನಮ್ಮ ಬಳಿ ಚಿಕಿತ್ಸೆ ಪಡೆದ ಪ್ರತಿಯೊಬ್ಬರು ಸ್ವಯಂಪ್ರೇರಿತರಾಗಿ ಕೋವಿಡ್ ಟೆಸ್ಟ್ ಮಾಡಿಸಿ ಎಂದು ಮನವಿ ಮಾಡಿದ್ದಾರೆ.

ಒಟ್ಟಾರೆ ಕೊರೋನಾ  ಸೋಂಕು ತಗುಲಿ ಮಾನಸಿಕವಾಗಿ ಕುಗ್ಗುವ ಜನರೆದುರು ಸೋಂಕು ತಗಲಿದ್ದರು ಸಹ ಚಿಕಿತ್ಸೆ ಪಡೆಯುತ್ತಿರುವ ಸ್ಥಳದಲ್ಲೇ ಸೆಲ್ಫಿ ವಿಡಿಯೋ ಮಾಡುವ ಮೂಲಕ ಸಾರ್ವಜನಿಕರಿಗೆ ಧೈರ್ಯ ತುಂಬುತ್ತಿರುವ ಈ ವೈದ್ಯ ದಂಪತಿಗೆ ಒಂದು ಸಲಾಂ ಎನ್ನಲೇಬೇಕು.

 
First published: