ಯಾದಗಿರಿ: ಜೇಬಿನಲ್ಲಿ ಮೊಬೈಲ್ ಇಟ್ಟುಕೊಳ್ಳುವ ಮುನ್ನ ಎಚ್ಚರವಾಗಿರಬೇಕು. ಯಾಕೆಂದ್ರೆ ನಿಮ್ಮ ಜೇಬಿಗೆ ಪುಟ್ಟ ಮಕ್ಕಳು ಬಂದು ಕತ್ತರಿ ಹಾಕಿ ಜೇಬಿನಲ್ಲಿದ್ದ ಮೊಬೈಲ್ ಎಗರಿಸುತ್ತಾರೆ. ಯಾದಗಿರಿ ನಗರದಲ್ಲಿ ಮಕ್ಕಳನ್ನು ಬಳಕೆ ಮಾಡಿಕೊಂಡು ಮೊಬೈಲ್ ದರೋಡೆ ಮಾಡುತ್ತಿದ್ದ ಗ್ಯಾಂಗ್ ಪತ್ತೆ ಹಚ್ಚಿ ಪೊಲೀಸರು ಕಂಬಿ ಹಿಂದೆ ನಿಲ್ಲಿಸಿದ್ದಾರೆ. ಯಾರಾದರು ಮಕ್ಕಳು ನಿಮ್ಮ ಹತ್ರ ಬಂದರೆ ಎಚ್ಚರ ವಹಿಸುವುದು ಅಗತ್ಯವಾಗಿದೆ. ಮಕ್ಕಳು ಇದ್ದಾರೆಂದು ಸುಮ್ಮನೆ ಕುಳಿತರೇ ಮೊಬೈಲ್ ನಾಪತ್ತೆಯಾಗುತ್ತದೆ. ಕತರ್ನಾಕ್ ಕಳ್ಳರು ಮೊಬೈಲ್ ಕದಿಯೋಕೆ ಮಕ್ಕಳನ್ನ ಬಳಕೆ ಮಾಡುತ್ತಿರುವುದು ಬಯಲಾಗಿದೆ.
ಮಕ್ಕಳ ಮೂಲಕ ಮೊಬೈಲ್ ಕಳ್ಳತನ ದಂಧೆ ನಡೆಸುತ್ತಿದ್ದ,ಆರೋಪಿಗಳಿಬ್ಬರನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಯಾರಿಗೂ ಅನುಮಾನ ಬಾರದಂತೆ , ಮಕ್ಕಳಿಗೆ ಯಾವುದೇ ಶಿಕ್ಷೆಯಾಗುವದಿಲ್ಲವೆಂದು ಅರಿತು ಈ ಗ್ಯಾಂಗ್ ,ತನ್ನ ಸಂಬಂಧಿಕರ ಮಕ್ಕಳನ್ನು ಮೊಬೈಲ್ ಕಳ್ಳತನ ಮಾಡಲು ಬಳಕೆ ಮಾಡಿಕೊಂಡು, ಮೊಬೈಲ್ ಕಳ್ಳತನ ದಂಧೆ ಮೂಲಕ ಭಾರಿ ಪ್ರಮಾಣದಲ್ಲಿ ಹಣ ಸಂಪಾದನೆ ಮಾಡುತ್ತಿದ್ದರು. ತೆಲಂಗಾಣ ಮೂಲದ ಆರೋಪಿಗಳಾದ ಆನಂದ ಹಾಗೂ ಆಶ್ವಿನಿ ತಮ್ಮ ಸಂಬಂಧಿಕರ ಮಕ್ಕಳನ್ನು ಮೊಬೈಲ್ ಕಳ್ಳತನ ದಂಧೆಗೆ ಬಳಕೆ ಮಾಡಿಕೊಳ್ಳುತ್ತಿದ್ದರು. ಮಕ್ಕಳಿಗೆ 500 ರಿಂದ 600 ರೂ ವರಗೆ ಹಣ ಕೊಡುತ್ತಿದ್ದರು.
ಈ ಬಗ್ಗೆ ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವೇದಮೂರ್ತಿ ಅವರು ಮಾತನಾಡಿ, ಹೈದ್ರಾಬಾದ್ ಮೂಲದ ನಿವಾಸಿಗಳಾದ ಆನಂದ ಹಾಗೂ ಆಶ್ವಿನಿ ಇಬ್ಬರು ಆರೋಪಿಗಳು ರಾಜ್ಯದ ಬೆಳಗಾವಿ, ಬಾಗಲಕೋಟೆ, ಬಳ್ಳಾರಿ ಹಾಗೂ ವಿವಿಧ ಭಾಗಗಳಲ್ಲಿ ಮಕ್ಕಳನ್ನು ಬಳಕೆ ಮಾಡಿಕೊಂಡು ಮೊಬೈಲ್ ಕಳ್ಳತನ ದಂಧೆ ನಡೆಸುತ್ತಿದ್ದರು. ಅನೇಕ ಕಡೆ ಸಾಕಷ್ಟು ಮೊಬೈಲ್ ಕಳ್ಳತನ ನಡೆಸಿದ್ದಾರೆ. 2 ಲಕ್ಷ ರೂಪಾಯಿ ಮೌಲ್ಯದ 40 ವಿವಿಧ ಕಂಪನಿಯ ಮೊಬೈಲ್ ಹಾಗೂ ಕೃತ್ಯಕ್ಕೆ ಬಳಕೆ ಮಾಡುತ್ತಿದ್ದ ಕಾರನ್ನು ಜಪ್ತಿ ಮಾಡಲಾಗಿದೆ ಎಂದರು.
ಇದನ್ನೂ ಓದಿ: ಟಿಪ್ಪು ಸುಲ್ತಾನ್ನ ಹುಚ್ಚು ನಾಯಿಗೆ ಹೋಲಿಸಿ ವಿವಾದಾತ್ಮಕ ಹೇಳಿಕೆ ನೀಡಿದ ಹಿಂದೂ ಮುಖಂಡ
ಇನ್ನೂ ಮೊಬೈಲ್ ಗಳನ್ನು ಕಾರಿನಲ್ಲಿ ತೆಗೆದುಕೊಂಡು ಹೈದ್ರಾಬಾದ್ ನಲ್ಲಿ ಮಾರಾಟ ಮಾಡಲಾಗುತ್ತಿತ್ತು. ಬೆಳಗಾವಿ, ಬಳ್ಳಾರಿ, ಬಾಗಲಕೋಟೆ ಮೊದಲಾದ ಭಾಗದಲ್ಲಿ ಆರೋಪಿಗಳಿಬ್ಬರು, ಮಕ್ಕಳ ಮೂಲಕ ಮೊಬೈಲ್ ಕಳ್ಳತನ ದಂಧೆ ನಡೆಸುತ್ತಿದ್ದರು.ಆರೋಪಿಗಳು ಮೊಬೈಲ್ ಸಮೇತ ಕಾರ ಮೂಲಕ ತೆರಳುವಾಗ ಯಾದಗಿರಿ ನಗರದ ಹಳೆ ಬಸ್ ನಿಲ್ದಾಣ ಮುಂಭಾಗದಲ್ಲಿ ಕಾರ ನಿಲ್ಲಿಸಿದರು.ಈ ವೇಳೆ ಅನುಮಾನಗೊಂಡ ಯಾದಗಿರಿ ನಗರ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿತರಿಂದ 40 ವಿವಿಧ ಕಂಪನಿಯ ಮೊಬೈಲ್ ಹಾಗೂ ಕಳ್ಳತನ ಕೃತ್ಯಕ್ಕೆ ಬಳಕೆ ಮಾಡುತ್ತಿದ್ದ ಕಾರ ಜಪ್ತಿ ಮಾಡಲಾಗಿದೆ ಎಂದು ಎಸ್ಪಿ ವೇದಮೂರ್ತಿ ತಿಳಿಸಿದ್ದಾರೆಒಟ್ಟಾರೆ ಯಾದಗಿರಿ ಜಿಲ್ಲೆಯ ಪೋಲಿಸರು ಅಂತರಾಜ್ಯ ಕತರ್ನಾಕ ಇಬ್ಬರು ಕಳ್ಳರನ್ನ ಪತ್ತೆ ಹಚ್ಚಿ ಜೈಲಿಗಟ್ಟಿದ್ದಾರೆ.ಮಕ್ಕಳನ್ನ ಬಳಕೆ ಮಾಡಿಕೊಂಡು ಮೊಬೈಲ್ ಕದಿಯುತ್ತಿದ್ದ ಕಳ್ಳರು ಸದ್ಯ ಕಂಬಿ ಎಣಿಸುವ ಪರಿಸ್ಥಿತಿ ಬಂದಿದೆ.ಅದೇ ರೀತಿ ಮೊಬೈಲ್ ಉಪಯೋಗಿಸುವ ಎಲ್ಲರೂ ಕೂಡ ತಮ್ಮ ಮೊಬೈಲ್ ಬಗ್ಗೆ ಎಚ್ಚರದಿಂದ ಇರಿ. ಕಳ್ಳರು ಈ ರೀತಿ ಮಕ್ಕಳನ್ನ ಬಳಕೆ ಮಾಡಿಕೊಂಡು ನಿಮ್ಮ ಮೊಬೈಲ್ ಎಗರಿಸ್ತಾರೆ ಹುಷಾರ ಆಗಿರಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ