news18-kannada Updated:February 25, 2021, 2:59 PM IST
ಯಾದಗಿರಿ ಗಡಿಭಾಗದ ಚೆಕ್ಪೋಸ್ಟ್
ಯಾದಗಿರಿ: ನೆರೆಯ ಮಹಾರಾಷ್ಟ್ರದಲ್ಲಿ ಕೊರೋನಾ ಎರಡನೇ ಅಲೆ ಕಾಣಿಸಿಕೊಂಡ ಹಿನ್ನಲೆ ಯಾದಗಿರಿ ಜಿಲ್ಲೆಯಲ್ಲಿ ಕೂಡ ಕೊವೀಡ್ ಕಡಿವಾಣ ಹಾಕಲು ಯಾದಗಿರಿ ಜಿಲ್ಲಾಡಳಿತ ಜಿಲ್ಲೆಯ ಮೂರು ಕಡೆ ಚೆಕ್ ಪೋಸ್ಟ್ ಆರಂಭ ಮಾಡಿದೆ.ಆದ್ರೆ, ಜಿಲ್ಲಾಡಳಿತ ಕಾಟಾಚಾರಕ್ಕೆ ಚೆಕ್ ಪೋಸ್ಟ್ ಆರಂಭ ಮಾಡಿ ಕೈತೊಳೆದು ಕೊಂಡಿದೆಯಾ? ಎಂಬ ಅನುಮಾನ ಮೂಡುತ್ತಿದೆ. ಜಿಲ್ಲಾಡಳಿತ ಜಿಲ್ಲೆಯ ಸುರಪುರ ತಾಲೂಕಿನ ಮಲ್ಲಾ, ಮೂಡಬೂಳ ಹಾಗೂ ಯರಗೋಳ ಗ್ರಾಮದ ರಸ್ತೆ ಪಕ್ಕದಲ್ಲಿ ಚೆಕ್ ಪೋಸ್ಟ್ ಆರಂಭಮಾಡಿದೆ. ಜಿಲ್ಲೆಯೊಳಗೆ ಮಹಾರಾಷ್ಟ್ರ ದಿಂದ ಪ್ರವೇಶ ಮಾಡುವರ ಮೇಲೆ ನಿಗಾ ಇಡಲು ಚೆಕ್ ಆರಂಭ ಮಾಡಲಾಗಿದೆ. ಮಹಾರಾಷ್ಟ್ರದಿಂದ ಯಾದಗಿರಿ ಜಿಲ್ಲೆಗೆ ಆಗಮಿಸುವ ಪ್ರಯಾಣಿಕರ ಮೇಲೆ ಹದ್ದಿನ ಕಣ್ಣಿಡಲು ಜಿಲ್ಲಾಡಳಿತ ಗಡಿಭಾಗದ ಯರಗೋಳ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಚೆಕ್ ಪೊಸ್ಟ್ ಆರಂಭ ಮಾಡಿದೆ.
ಮಹಾರಾಷ್ಟ್ರದಿಂದ ಯಾದಗಿರಿ ಜಿಲ್ಲೆಗೆ ಪ್ರವೇಶ ಮಾಡುವ ಪ್ರಯಾಣಿಕರು ಕೊವೀಡ್ ನೆಗೆಟಿವ್ ರಿಪೋರ್ಟ್ ತೆಗೆದುಕೊಂಡು ಬರಬೇಕು ಒಂದು ವೇಳೆ ಕೊವೀಡ್ ನೆಗೆಟಿವ್ ರಿಪೋರ್ಟ್ ತೆಗೆದುಕೊಂಡು ಬಾರದಿದ್ದರೆ ಗಡಿಭಾಗದ ಚೆಕ್ ಪೋಸ್ಟ್ ನಲ್ಲಿಯೇ ಕೊವೀಡ್ ಟೆಸ್ಟ್ ಮಾಡಿಸಿಕೊಳ್ಳಬೇಕಾಗಿದೆ. ಚೆಕ್ ಪೊಸ್ಟ್ ನಲ್ಲಿ ಈಗಾಗಲೇ ಮಹಾರಾಷ್ಟ್ರದಿಂದ ಯಾದಗಿರಿ ಜಿಲ್ಲೆಗೆ ಪ್ರವೇಶ ಮಾಡುವರಿಗೆ ಕೊವೀಡ್ ಟೆಸ್ಟ್ ಮಾಡಲಾಗುತ್ತಿದೆ. ಆದ್ರೆ, ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತ್ಯವು ಸಾವಿರಾರು ವಾಹನಗಳು ವೇಗವಾಗಿ ಸಂಚಾರ ಮಾಡುತ್ತವೆ. ಪೊಲೀಸರು ವಾಹನಗಳನ್ನು ತಡೆದು ವಾಹನಗಳ ಬಗ್ಗೆ ವಿಚಾರಣೆ ಮಾಡಬೇಕು.
ಆದರೆ,, ಪೊಲೀಸ್ ಸಿಬ್ಬಂದಿಗಳು ಇಲ್ಲದೇ ಆರೋಗ್ಯ ಇಲಾಖೆ ಸಿಬ್ಬಂದಿಗಳೇ ಎಲ್ಲಾ ಕೆಲಸ ಮಾಡುವಂತಾಗಿದೆ. ಯಾವ ಭಾಗದಿಂದ ವಾಹನಗಳು ತೆಗೆದುಕೊಂಡು ಬರಲಾಗುತ್ತಿದೆ ಎಂಬ ಮಾಹಿತಿ ಪಡೆದು ನಂತರ ಮಹಾರಾಷ್ಟ್ರದಿಂದ ವಾಹನಗಳು ಬಂದ್ರೆ ಪ್ರಯಾಣಿಕರಿಗೆ ಕೊವೀಡ್ ಮಾಡಲಾಗುತ್ತಿದೆ. ಆದರೆ, ಪೊಲೀಸರಿಲ್ಲದೇ ಆರೋಗ್ಯ ಇಲಾಖೆ ಸಿಬ್ಬಂದಿಗಳೇ ಎಲ್ಲಾ ಕೆಲಸ ಕಾರ್ಯ ಮಾಡುವಂತಾಗಿದೆ. ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಡಾ.ಇಂದುಮತಿ ಕಾಮಶೆಟ್ಟಿ ಅವರು ಮಾತನಾಡಿ, ಜಿಲ್ಲಾಧಿಕಾರಿ ಅವರ ನಿರ್ದೆಶನದಂತೆ ಜಿಲ್ಲೆಯ ಮೂರು ಕಡೆ ಚೆಕ್ ಪೊಸ್ಟ್ ಆರಂಭ ಮಾಡಲಾಗಿದ್ದು ಮಹಾರಾಷ್ಟ್ರ ದಿಂದ ಬರುವ ಪ್ರಯಾಣಿಕರಿಗೆ ಕೊವೀಡ್ ಟೆಸ್ಟ್ ಮಾಡಿಸಲಾಗುತ್ತಿದೆ ಎಂದರು.
ಇದನ್ನೂ ಓದಿ: ಈ ಒಂದೇ ಶಾಲೆಯ 229 ಮಕ್ಕಳಿಗೆ ಕೊರೋನಾ ಸೋಂಕು; ಬೆಚ್ಚಿಬೀಳಿಸಿದೆ ಕೋವಿಡ್ ಮರು ಅಲೆ
ಈ ಹಿಂದೆ ಕೂಡ ಮಹಾರಾಷ್ಟ್ರದಿಂದ ವಲಸೆ ಬಂದ ಕಾರ್ಮಿಕರಿಂದ ಕೊರೋನಾ ಪ್ರಕರಣಗಳು ಹೆಚ್ಚಾಗಿದ್ದವು. ಮಹಾರಾಷ್ಟ್ರದಿಂದ ವಲಸೆ ಬಂದವರಿಗೆ ಹೆಚ್ಚಿನ ಪ್ರಮಾಣದಲ್ಲಿ ಕೊರೋನಾ ಕಾಣಿಸಿಕೊಂಡಿತ್ತು. ಈಗ ಮತ್ತೆ ನೆರೆಯ ಮಹಾರಾಷ್ಟ್ರದಲ್ಲಿ ಕೊರೋನಾ ಎರಡನೇ ಅಲೆ ಆರಂಭವಾಗುತ್ತಿರುವ ಹಿನ್ನೆಲೆ ಇದನ್ನು ಆರಂಭ ಹಂತದಲ್ಲಿ ಬ್ರೇಕ್ ಹಾಕಲು ಜಿಲ್ಲಾಡಳಿತ ಚೆಕ್ ಪೊಸ್ಟ್ ಆರಂಭ ಮಾಡಿದೆ. ಆದರೆ, ಪೊಲೀಸರು ಇಲ್ಲದಕ್ಕೆ ವಾಹನ ಸವಾರರು ಬೆದರದೆ ಹಾಗೆ ಜಿಲ್ಲೆಗೆ ಪ್ರವೇಶ ಮಾಡುತ್ತಿದ್ದಾರೆ. ಇದೆ ರೀತಿ ನಿಷ್ಕಾಳಜಿ ವಹಿಸಿದರೆ ಕೊರೊನಾ ಮತ್ತೆ ಕಂಟಕವಾಗಲಿದೆ.
ಚೆಕ್ ಪೋಸ್ಟ್ ಪರಿಶೀಲನೆ..!ಯಾದಗಿರಿ ತಾಲೂಕಿನ ಯರಗೋಳ ಗ್ರಾಮದಲ್ಲಿ ಆರಂಭ ಮಾಡಿದ ಚೆಕ್ ಪೋಸ್ಟ್ ಸ್ಥಳಕ್ಕೆ ತಹಶೀಲ್ದಾರ ಚನ್ನಮಲ್ಲಪ್ಪ ಘಂಟಿ ಅವರು ಕೂಡ ಚೆಕ್ ಪೋಸ್ಟ್ ಪರಿಶೀಲನೆ ಮಾಡಿದರು. ಈ ವೇಳೆ ಎಷ್ಟು ಜನರಿಗೆ ಕೊವೀಡ್ ಟೆಸ್ಟ್ ಮಾಡಿದ ಬಗ್ಗೆ ಮಾಹಿತಿ ಪಡೆದರು. ಮಹಾರಾಷ್ಟ್ರದಿಂದ ಜಿಲ್ಲೆಯೊಳಗೆ ಪ್ರವೇಶ ಮಾಡುವರ ಪ್ರಯಾಣಿಕರ ಕೊವೀಡ್ ನೆಗೆಟಿವ್ ವರದಿ ನೋಡಿ ಜಿಲ್ಲೆಯೊಳಗೆ ಬಿಡಬೇಕು ಇಲ್ಲದಿದ್ದರೆ ಟೆಸ್ಟ್ ಮಾಡಿಸಿ ಜಿಲ್ಲೆಯೊಳಗೆ ಬಿಡಬೇಕೆಂದು ಸಿಬ್ಬಂದಿಗಳಿಗೆ ಸೂಚಿಸಿದರು.
Published by:
MAshok Kumar
First published:
February 25, 2021, 2:39 PM IST