HOME » NEWS » District » CORONAVIRUS SHOCK BACK TO COASTAL TOURISM THAT WENT DOWN FROM LOCKDOWN LAST YEAR DKK MAK

CoronaVirus: ಕಳೆದ ವರ್ಷ ಲಾಕ್​ಡೌನ್​ನಿಂದ ನೆಲಕಚ್ಚಿ ಹೋಗಿದ್ದ ಕರಾವಳಿ ಪ್ರವಾಸೋದ್ಯಮಕ್ಕೆ ಮತ್ತೆ ಶಾಕ್!

ಹೋಟೆಲ್ ಮಾಲಿಕರು ಕೂಡಾ ಭಯದಲ್ಲೆ ದಿನ ದೂಡುತ್ತಿದ್ದು ಉತ್ತಮವಾಗಿ ಪ್ರವಾಸಿ ಸೀಸನ್ ನಡೆಯುತ್ತಿರುವ ಸಂದರ್ಭದಲ್ಲಿ ಮತ್ತೆ ಲಾಕ್ ಡೌನ್ ಆದ್ರೆ ಮತ್ತೆ ಜನ ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂದು ಆತಂಕ ತೋಡಿಕೊಂಡಿದ್ದಾರೆ.

news18-kannada
Updated:April 4, 2021, 7:35 PM IST
CoronaVirus: ಕಳೆದ ವರ್ಷ ಲಾಕ್​ಡೌನ್​ನಿಂದ ನೆಲಕಚ್ಚಿ ಹೋಗಿದ್ದ ಕರಾವಳಿ ಪ್ರವಾಸೋದ್ಯಮಕ್ಕೆ ಮತ್ತೆ ಶಾಕ್!
ಮುರುಡೇಶ್ವರ.
  • Share this:
ಕಾರವಾರ: ಕೊರೋನಾ ಎರಡನೇ ಅಲೆಯ ಆತಂಕ ನೇರವಾಗಿ ಪ್ರವಾಸೋದ್ಯಮದ ಮೇಲೆ ಪರಿಣಾಮ ಬೀರುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ವರ್ಷದ ಲಾಕ್​ಡೌನ್​ಗೆ ನೆಲಕಚ್ಚಿ ಹೋಗಿದ್ದ ಪ್ರವಾಸೋದ್ಯಮ ಈ ಬಾರಿ ಚೇತರಿಕೆ ಕಾಣುತ್ತಿರುವ ಸಮುಯದಲ್ಲೇ ಕೋವಿಡ್ ಎರಡನೆಯ ಅಲೆ ಮತ್ತೆ ಲಾಕ್​ಡೌನ್​ ಭಯ ಹುಟ್ಟಿಸಿದ್ದು ಹೊಟೇಲ್, ರೆಸ್ಟೋರೆಂಟ್ ಮಾಲಿಕರು ಮತ್ತು ಪ್ರವಾಸಿಗರು ಲಾಕ್​ಡೌನ್ ಬೇಡಾ ಎನ್ನುತ್ತಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಗೋಕರ್ಣ, ಮುರ್ಡೆಶ್ವರ ಪ್ರವಾಸಿ ತಾಣಗಳಲ್ಲಿ ಈಗ ಪ್ರವಾಸಿಗರು ಬೀಡು ಬಿಟ್ಟಿದ್ದಾರೆ. ಕಳೆದ ವರ್ಷ ಇದೆ ಸಂದರ್ಭದಲ್ಲಿ ಲಾಕ್​ಡೌನ್ ನಿಂದಾಗಿ ಇಡೀ ಪ್ರವಾಸೋದ್ಯಮವೇ ನೆಲಕಚ್ಚಿ ಹೋಗಿತ್ತು, ಅದೆಷ್ಟೊ ಜನ ಉದ್ಯೋಗವನ್ನ ಕಳೆದುಕೊಂಡಿದ್ರು. ಈಗ ಮತ್ತೆ ಅದೆ ಭಯ ಕಾಡುತ್ತಿದೆ.

ಬಂದ ಪ್ರವಾಸಿಗರು ಕೋವಿಡ್ ನಿಯಮ ಪಾಲನೆ ಮಾಡದೆ ಓಡಾಡುತ್ತಿದ್ದಾರೆ. ಕಳೆದ ವರ್ಷ ಬೇಸತ್ತು ಹೋಗಿದ್ದ ಪ್ರವಾಸಿಗರು ಈ ವರ್ಷ ರಿಲ್ಯಾಕ್ಸ್ ಗೋಸ್ಕರ ಉತ್ತರ ಕನ್ನಡ ಜಿಲ್ಲೆಯನ್ನ ಆಯ್ಕೆ ಮಾಡಿಕೊಂಡಿದ್ದಾರೆ. ಪ್ರವಾಸಿ ತಾಣಕ್ಕೆ ಬಂದ ಪ್ರವಾಸಿಗರು ಲಾಕ್​ಡೌನ್ ಮಾಡ್ಬೇಡಿ ನಾವು ಕೋವಿಡ್ ನಿಯಮ ಪಾಲನೆ ಮಾಡುತ್ತಿದ್ದೇವೆ ಎನ್ನುತ್ತಿದ್ದಾರೆ.

ಇತ್ತ ಹೋಟೆಲ್ ಮಾಲಿಕರು ಕೂಡಾ ಭಯದಲ್ಲೆ ದಿನ ದೂಡುತ್ತಿದ್ದು ಉತ್ತಮವಾಗಿ ಪ್ರವಾಸಿ ಸೀಸನ್ ನಡೆಯುತ್ತಿರುವ ಸಂದರ್ಭದಲ್ಲಿ ಮತ್ತೆ ಲಾಕ್ ಡೌನ್ ಆದ್ರೆ ಮತ್ತೆ ಜನ ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂದು ಆತಂಕ ತೋಡಿಕೊಂಡಿದ್ದಾರೆ. ಒಟ್ಟಾರೆ ಕೋವಿಡ್ ಎರಡನೆ ಅಲೆ ಜನರಲ್ಲಿ ಮುಳ್ಳಿನ ಮೇಲಿನ ನಡಿಗೆಯಲ್ಲೆ ಸಾಗುವಂತೆ ಮಾಡಿದೆ...

ಮತ್ತೆ ಲಾಕ್ ಡೌನ್ ಆದ್ರೆ ಏನು ಸಮಸ್ಯೆ?:

ಲಾಕ್​ಡೌನ್ ಶಬ್ಧ ಕೇಳಿದ್ರೆ ಮೊದಲು ಹೌ ಹಾರಿ ಹೊಗೋದು ಪ್ರವಾಸೋದ್ಯಮಿಗಳು, ಮತ್ತು ಪ್ರವಾಸಿಗರು..ಕಳೆದ ವರ್ಷದ ಕೋವಿಡ್ ಕರಾಳ ದಿನ ಕಣ್ಣ ಮುಂದೆ ಇರುವಾಗಲೆ ಈಗ ಮತ್ತೆ ಕೊರೋನಾ ಎರಡನೇ ಅಲೆ ಶುರುವಾಗಿದೆ ದಿನನಿತ್ಯಕ್ಕೂ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಎಲ್ಲ ಕಡೆ ಸರಕಾರ ನಿರ್ಭಂದ ಮತ್ತು ಕಠೀಣ ಕ್ರಮಗಳನ್ನ ಜಾರಿ ತರಲು ಮುಂದಾಗಿದೆ.

ರಾಜ್ಯದ ವಿವಿಧೆಡೆ ಪ್ರವಾಸಿ ತಾಣಗಳ ಮೇಲು ನಿರ್ಭಂದ ಹೇರಿದೆ ಈ‌ನಡುವೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮತ್ತೆ ಕೊರೋನಾ ದಿಂದ ನಿರ್ಭಂದ ಮತ್ತು ಕಠಿಣ ಕ್ರಮ ಬಂದ್ರೆ ಪ್ರವಾಸೋದ್ಯಮವನ್ನೆ ನೆಚ್ಚಿ ಬದುಕು ಕಟ್ಟಿಕೊಂಡು ಜನರು ಬೀದಿ ಪಾಲಾಗಲಿದ್ದಾರೆ. ಸಣ್ಣ ಪುಟ್ಟ ಉದ್ಯೋಗಿಗಳು ಮತ್ತೆ ನೆಲೆ ಕಾಣದೆ ಮೂಲೆ ಸೇರಲಿದ್ದಾರೆ. ಕಡಲತೀರಗಳಲ್ಲಿ ಪ್ರಚಾಸಿಗರನ್ನೆ ನಂಬಿ ಸಣ್ಣ ಪುಟ್ಟ ಉದ್ಯೋಗ ಮಾಡುವವರ ಪಾಡು ಹೇಳತೀರಾದಾಗುತ್ತದೆ, ದುಡಿಮೆ ಇಲ್ಲದೆ ಬೆಂಡಾಗಲಿದ್ದಾರೆ.

ಈಗಾಗಲೆ ಲಾಕ್ ಡೌನ್ ಬಳಿಕ ಚೇತರಿಕೆ ಕಂಡ ಪ್ರವಾಸೋದ್ಯಮಲ್ಲಿ ಹೋಟೆಲ್, ರೆಸ್ಟೋರೆಂಟ್  ನಲ್ಲಿ‌ ಕೆಲಸ ಮಾಡಲು ಬಂದ ಅಡುಗೆ ಕೆಲಸದವರು, ವೇಟರ್ ಗಳು, ಮತ್ತು ಹೀಗೆ ಸಣ್ಣ ಪುಟ್ಟ ಕಾರ್ಮಿಕರ ಜೀವನ ನಿಂತ ನೀರಾಗಲಿದೆ ಈ ಹಿನ್ನಲೆ ಯಲ್ಲಿ ಮತ್ತೆ ಲಾಕ್ ಡೌನ್ ಬೇಡಾ ಕಠೀಣ ನಿರ್ಭಂದ ಬೇಡಾ ಅಂತಿದ್ದಾರೆ ಪ್ರವಾಸಿಗರು ಮತ್ತು ಹೊಟೇಲ್ ಮಾಲಿಕರು.ಕೊರೋನಾ ಭಯವೇ ಇಲ್ಲ ಅಂತಾರೆ ಪ್ರವಾಸಿಗರು:

ಕೊರೋನಾ ಭಯವೇ ಇಲ್ಲ ಅಂತಿದ್ದಾರೆ ಪ್ರವಾಸಿಗರು, ಪ್ರವಾಸಿಗರು ಮೋಜು ಮಸ್ತಿಯ ಮೂಡಿನಲ್ಲಿ ಇದ್ದಾರೆ, ಯಾವುದೆ ಭಯ ಇಲ್ಲದೆ ವರ್ತಿಸುತ್ತಿದ್ದಾರೆ, ಕೊರೋನಾ ಭಯದಲ್ಲೆ ಮನೆಯಲ್ಲೆ ಇದ್ದರೆ ಮುಂದೆ ಜೀವನ ಹೋಗಲ್ಲ ಅಂತಾ ನ್ಯೂಸ್‌18 ಕನ್ನಡ ಜೊತೆ ಮಾತಿಗೆ ಇಳಿದಾಗ ತಮ್ಮ ಅಭಿಪ್ರಾಯ ಹಂವಿಕೊಂಡ್ರು.

ಕೊರೋನಾ ಲಸಿಕೆ ಕೂಡಾ ಈಗ ಬಂದಾಗಿದೆ ಮತ್ತೆ ಯಾಕೆ ಹೆದರಬೇಕು. ಸುರಕ್ಷಾ ಕ್ರಮ ತೆಗೆದುಕೊಂಡು ಓಡಾಟ ನಡೆಸಿದ್ರೆ ಕೊರೋನಾ ವನ್ನ ನಾವೇ ಹೊಡೆದೋಡಿಸಬಹುದು ಅಂತಾರೆ...ಈಗ ಎರಡನೇ ಅಲೆ ಮೂರನೇ ಅಲೆ ಅಂತಾ ನಮ್ಮ‌ಜೀವನ ಉತ್ತಮ ಸಮಯ ಹಾಳು ಮಾಡಿಕೊಂಡ್ರೆ ಪ್ರಯೋಜ‌ ಇಲ್ಲ ಎಂದು ಖಡಕ್ ಆಗಿ ಹೇಳುತ್ತಾರೆ.
Published by: MAshok Kumar
First published: April 4, 2021, 7:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories