ಮಂಡ್ಯ: ಕೊರೋನಾ ಒಂದನೆ ಅಲೆ ಆಯ್ತು, ಎರಡನೇ ಅಲೆ ಕೂಡ ತನ್ನ ರೌದ್ರ ನರ್ತನವನ್ನ ತೋರಿ ಮರೆಯಾಗ್ತಿದೆ. ಆದ್ರೆ ಇನ್ನೇನೋ ಎಲ್ಲಾ ಮುಗಿತು ಅನ್ನುವಷ್ಟರಲ್ಲಿ ಈಗ ಮೂರನೇ ಅಲೆಯದ್ದೆ ಎಲ್ಲೆಡೆ ಚೆರ್ಚೆ. ಆದ್ರೆ ಇದರ ನಡುವೆ ಮಂಡ್ಯ ಜನರು ಸ್ವಲ್ಪ ನಿಟ್ಟುಸಿರು ಬಿಡಬಹುದಾದ ವಿಚಾರ ಈಗ ಹೊರ ಬಿದ್ದಿದೆ.
ಹೌದು, ಕೊರೋನಾ ಮೊದಲ ಅಲೆಯಲ್ಲಿ ಜಿಲ್ಲೆಯಲ್ಲಿ ಮಕ್ಕಳ ಮೇಲೆ ಕೇವಲ ಶೇಕಡಾ 9.35 ರಷ್ಟು ಸೋಂಕು ತಗುಲಿದ್ರೆ, ಎರಡನೇ ಅಲೆಯಲ್ಲಿ ಶೇಕಡಾ 10.23 ರಷ್ಟು ಸೋಂಕು ತಗುಲಿದೆ. ಹಿಗಾಗಿ ಮೊದಲ ಅಲೆ ಮತ್ತು ಎರಡನೇ ಅಲೆ ಎರಡನ್ನೂ ಹೊಲಿಸಿ ನೋಡಿದಾಗ ಎರಡೂ ಅಲೆಗಳಲ್ಲಿ ಅಷ್ಟೇನು ವೆತ್ಯಾಸ ಕಂಡು ಬಂದಿಲ್ಲ. ಹೀಗಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಮಾಹಿತಿ ಬಹಿರಂಗಪಡಿಸಿದ್ದು, ಜಿಲ್ಲೆಯಲ್ಲಿ ಪೋಷಕರು ಮೂರನೆ ಅಲೆ ಬಗ್ಗೆ ಚಿಂತಿಸುವ ಅಗತ್ಯವಿಲ್ಲ, ಆದರೆ ಯಾರೂ ಕೂಡ ಮೂರನೇ ಅಲೆ ಬಗ್ಗೆ ನಿರ್ಲಕ್ಷ್ಯ ಮಾಡುವುದು ಬೇಡ ಅಂತ ತಿಳಿಸಿದೆ.
ಮಕ್ಕಳ ಮೇಲೆ ಸೋಂಕಿನ ಗಂಭೀರ ಪರಿಣಾಮ ಇಲ್ಲ
ಜಿಲ್ಲೆಯಲ್ಲಿ ಒಂದನೇ ಹಾಗೂ ಎರಡನೇ ಅಲೆಯಲ್ಲಿ ಇದುವರೆಗೂ ದಾಖಲಾದ ಸೋಂಕಿತರಲ್ಲಿ ಅತಿ ಹೆಚ್ಚು ಹಿರಿಯ ನಾಗರಿಕರೆ ಆಗಿದ್ದು, ಎರಡನೇ ಸ್ಥಾನವನ್ನ 40ರ ನಂತರದ ಹಾಸು ಪಾಸಿನ ವ್ಯಕ್ತಿಗಳಾಗಿದ್ದಾರೆ. ಅದರಲ್ಲಿ ಜಿಲ್ಲೆಯಲ್ಲಿ ಅತಿ ಹೆಚ್ಚು ಹಿರಿಯ ನಾಗರಿಕರೆ ಮರಣವನ್ನಪ್ಪಿರೋದು ಕಂಡು ಬಂದಿದೆ. ಹಿಗಾಗಿ ಇದುವರೆಗೂ ಜಿಲ್ಲೆಯಲ್ಲಿ ಮಕ್ಕಳು ಗಂಭೀರ ಸ್ವರೂಪದ ಸೋಂಕಿಗೆ ಹಾಗೂ ಸೋಂಕಿನಿಂದ ಕೊನೆಯುಸಿರೆಳೆದ ಯಾವುದೇ ಪ್ರಕರಣ ದಾಖಲಾಗಿಲ್ಲ. ಹಿಗಾಗಿ ಮೂರನೇ ಅಲೆ ಬಗ್ಗೆ ಜಿಲ್ಲೆಯ ಜನರು ಎದುರುವ ಅವಶ್ಯಕತೆ ಇಲ್ಲಾ ಅಂತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನು ಓದಿ: Covid third wave: ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆ ಸೋಂಕಿಗೆ 3.4 ಲಕ್ಷ ಮಕ್ಕಳು ತುತ್ತಾಗುವ ಸಾಧ್ಯತೆ
ಮೂರನೇ ಅಲೆ ಎದುರಿಸಲು ಸಕ್ಕರೆನಾಡು ಸಜ್ಜು
ಮೂರನೇ ಅಲೆ ಯಾವ ಸಂದರ್ಭದಲ್ಲಿ ಬೇಕಾದರು ಅಪ್ಪಳಿಸಬಹುದು. ಹಿಗಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೂಡ ಸಕಲ ಸಿದ್ದತೆ ಮಾಡಿಕೊಂಡಿದ್ದಾಗಿ ತಿಳಿಸಿದೆ. ಈಗಾಗಲೇ ಮಂಡ್ಯ ವೈದ್ಯಕೀಯ ಸಂಸ್ಥೆಯಲ್ಲಿ ಮಕ್ಕಳ ಚಿಕಿತ್ಸೆಗೆ ಬೇಕಾದ ಐಸಿಯು ಬೆಡ್ ಗಳನ್ನ ಸಿದ್ದಪಡಿಸಿದೆ. ಅಲ್ಲದೆ ಈಗಾಗಲೇ ಜಿಲ್ಲಾಸ್ಪತ್ರೆ ಸೇರಿದಂತೆ ತಾಲೂಕು ಆಸ್ಪತ್ರೆಗಳಲ್ಲಿ ಕೂಡ ಆಕ್ಸಿಜನ್ ಉತ್ಪಾದನೆಗೆ ಚಾಲನೆ ನೀಡಲಾಗಿದೆ. ಹಿಗಾಗಿ ಮೂರನೇ ಅಲೆಯಲ್ಲಿ ಜಿಲ್ಲೆಯ ಜನರು ಆತಂಕಪಡುವ ಅವಶ್ಯಕತೆ ಇಲ್ಲಾ. ಮಕ್ಕಳ ಮೇಲೆ ಗಂಭೀರವಾದ ಸೋಂಕು ತಗುಲುವ ಸಾಧ್ಯತೆ ಕಡಿಮೆ ಇದೆ. ಆದ್ರೆ ಯಾರೂ ಕೂಡ ನಿರ್ಲಕ್ಷ್ಯ ಮಾಡದೆ ಕೊವೀಡ್ ಮಾರ್ಗ ಸೂಚಿಗಳನ್ನ ಪಾಲಿಸಬೇಕು ಅಂತ ಮನವಿ ಮಾಡಲಾಗಿದೆ.
ದೇಶ ಮತ್ತು ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಈಗಾಗಲೇ ಸಾಕಷ್ಟು ಅನಾಹುತಗಳನ್ನು ಸೃಷ್ಟಿಸಿದೆ. ಸಾವಿರಾರು ಜನ ಈ ಸೋಂಕಿನಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಸಾವಿರಾರು ಮಕ್ಕಳು ಅನಾಥವಾಗಿವೆ. ಪ್ರಸ್ತುತ ಕೊರೋನಾ ಎರಡನೇ ಅಲೆ ತಣ್ಣಗಾಗುತ್ತಿದ್ದು, ಲಾಕ್ಡೌನ್ ಅನ್ನು ಸಹ ಹಿಂಪಡೆಯಲಾಗಿದೆ. ಆದರೆ, ಇನ್ನೂ 6 ರಿಂದ 8 ವಾರದಲ್ಲಿ ದೇಶಕ್ಕೆ 3ನೇ ಕೊರೋನಾ ಅಲೆ ಅಪ್ಪಳಿಸಲಿದೆ ಎಂದು ಏಮ್ಸ್ ಮುಖ್ಯಸ್ಥ ರಣದೀಪ್ ಗುಲೇರಿಯಾ ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಮೂರನೇ ಕೊರೋನಾ ಅಲೆಯನ್ನು ತಡೆಯುವುದು ಹೇಗೆ? ಎಂದು ಶಿಫಾರಸು ನೀಡುವ ಸಲುವಾಗಿ ರಾಜ್ಯ ಸರ್ಕಾರ ಡಾ. ದೇವಿಶೆಟ್ಟಿ ನೇತೃತ್ವದಲ್ಲಿ ಒಂದು ತಜ್ಞರ ತಂಡವನ್ನು ರಚನೆ ಮಾಡಿತ್ತು. ಇದೀಗ ಆ ತಂಡ ಮಂಗಳವಾರ ಮಧ್ಯಾಹ್ನ ಸಂಪೂರ್ಣ ವರದಿ ನೀಡಿದೆ.
ವರದಿ: ಸುನೀಲ್ ಗೌಡ ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ