news18-kannada Updated:February 24, 2021, 2:23 PM IST
ಅಂತ್ಯಕ್ರಿಯೆಗಾಗಿ ಅಧಿಕಾರಿಗಳಲ್ಲಿ ಬೇಡಿಕೊಳ್ಳುತ್ತಿರುವ ಜನಸಾಮಾನ್ಯರು.
ಕಲಬುರ್ಗಿ (ಫೆಬ್ರವರಿ); ಕೊರೋನಾ ಹೆಚ್ಚಳದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಕಲಬುರ್ಗಿ ಜಿಲ್ಲೆಯ ಆರು ಕಡೆ ಚೆಕ್ ಪೋಸ್ಟ್ ಸ್ಥಾಪಿಸಲಾಗಿದ್ದು, ಮಹಾರಾಷ್ಟ್ರದಿಂದ ಬರುತ್ತಿರುವವರ ಮೇಲೆ ಹದ್ದಿನ ಕಣ್ಣಿಡಲಾಗಿದೆ. ಮಹಾರಾಷ್ಟ್ರದಿಂದ ಬರೋರಿಗೆ ರಾಜ್ಯ ಎಂಟ್ರಿಗೆ ರಾಜ್ಯ ಸರ್ಕಾರ ಆರ್.ಟಿ.ಪಿ.ಸಿ.ಆರ್. ವರದಿ ಕಡ್ಡಾಯಗೊಳಿಸಿದೆ. 72 ತಾಸುಗಳ ಒಳಗಾಗಿ ತೆಗೆದಿರೋ ಆರ್.ಟಿ.ಪಿ.ಸಿ.ಆರ್. ನೆಗೆಟಿವ್ ವರದಿ ಇದ್ರೆ ಮಾತ್ರ ರಾಜ್ಯದೊಳಕ್ಕೆ ಬಿಟ್ಟುಕೊಳ್ಳಲು ಮಾರ್ಗಸೂಚಿ ಬಿಡುಗಡೆ ಮಾಡಿರೋದು ಜನರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅಂತ್ಯಕ್ರಿಯೆಗೆ ಹೋಗಲು ಬಂದವರನ್ನೂ ಅಧಿಕಾರಿಗಳು ಗಡಿಯಿಂದ ಮಹಾರಾಷ್ಟ್ರಕ್ಕೆ ವಾಪಸ್ ಕಳಿಸಿದ ಘಟನೆ ಕಲಬುರ್ಗಿ ಜಿಲ್ಲೆ ಅಫಜಲಪುರ ತಾಲೂಕಿನ ಬಳೂರ್ಗಿ ಚೆಕ್ ಪೋಸ್ಟ್ ಬಳಿ ನಡೆದಿದೆ.
ರಾಜ್ಯ ಪ್ರವೇಶಕ್ಕೆಂದು ಬಂದ ಹತ್ತಾರು ವಾಹನಗಳು ಸಾಲುಗಟ್ಟಿ ನಿಂತಿದ್ದು, ಆರ್.ಟಿ.ಪಿ.ಸಿ.ಆರ್. ವರದಿ ಇಲ್ಲದೇ ಇರೋದ್ರಿಂದ ಗಂಟೆ ಗಟ್ಟಲೆ ಕಾಯುವಂತಾಯಿತು. ಕ್ರೂಷರ್ ಮೂಲಕ ಆಗಮಿಸಿದ್ದ ಕುಟುಂಬವೊಂದು ಸ್ಥಳದಲ್ಲಿದ್ದ ಅಧಿಕಾರಿಳನ್ನು ಪರಿ ಪರಿಯಾಗಿ ಬೇಡಿಕೊಂಡ ಘಟನೆಯೂ ನಡೆಯಿತು. ಇರೋ ಒಬ್ಬ ತಮ್ಮ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ಕೊನೆಯದಾಗಿ ತಮ್ಮನ ಮುಖ ನೋಡಬೇಕೆನಿಸುತ್ತಿದೆ. ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳೋಕೆ ಬಿಡಿ ಅಂತ ಮಹಿಳೆ ಪರಿ ಪರಿಯಾಗಿ ಕೇಳಿಕೊಂಡಿದ್ದಾಳೆ. ಆದರೆ, ಸ್ಥಳಕ್ಕೆ ಭೇಟಿ ನೀಡಿದ್ದ ಅಫಜಲಪುರ ತಹಶೀಲ್ದಾರ್ ನಾಹಮ್ಮ ಮಹಿಳೆಯ ಮನವಿಯನ್ನು ತಿರಸ್ಕರಿಸಿದ್ದಾರೆ.
ಮಹಾರಾಷ್ಟ್ರದಿಂದ ವಾಹನದಲ್ಲಿ ಬಂದಿದ್ದ ಕುಟುಂಬ ಮೋರಟಿಗೆಗೆ ಅಂತ್ಯಕ್ರಿಯೆಗೆ ಹೊರಟಿತ್ತು. ಈ ವೇಳೆ ಗಡಿಯಲ್ಲಿ ಸಿಬ್ಬಂದಿ ಆರ್.ಟಿ.ಪಿ.ಸಿ.ಆರ್. ವರದಿ ಕೇಳಿದ್ದಾರೆ. ಯಾರ ಬಳಿಯೂ ವರದಿ ಇಲ್ಲದೇ ಇರೋದ್ರಿಂದ ಬಿಡಲಾಗೋದಿಲ್ಲವೆಂದ ತಹಶೀಲ್ದಾರ ನಾಗಮ್ಮ ತಿಳಿಸಿದ್ದಾರೆ. ಕೆಲ ಹೊತ್ತು ಬಿಸಿಲಲ್ಲಿಯೇ ಕಾದು ಮನವಿ ಮಾಡಿಕೊಂಡ ಕುಟುಂಬದ ಸದಸ್ಯರು, ಕೊನೆಗೆ ಅನಿವಾರ್ಯವಾಗಿ ಮಹಾರಾಷ್ಟ್ರಕ್ಕೆ ವಾಪಸ್ ಹೊರಟಿದ್ದಾರೆ. ಇದೇ ವೇಳೆ ಮಹಾರಾಷ್ಟ್ರ ಬಸ್ ನಲ್ಲಿ ಬಂದವರನ್ನೂ ಅಧಿಕಾರಿಗಳು ವಾಪಸ್ ಕಳುಹಿಸಿದ್ದಾರೆ.
ಆರ್.ಟಿ.ಪಿ.ಸಿ.ಆರ್. ಇಲ್ಲದೇ ಇರೋರನ್ನು ಯಾವುದೇ ಕಾರಣಕ್ಕೂ ಒಳಗೆ ಬಿಟ್ಟುಕೊಳ್ಳೋದಿಲ್ಲ. ಗಡಿಯಲ್ಲಿ ಕರ್ನಾಟಕಕ್ಕೆ ಪ್ರವೇಶ ಬೇಕೆಂದವರು ಆರ್.ಟಿ.ಪಿ.ಸಿ.ಆರ್. ನೊಂದಿಗೆ ಬರಬೇಕೆಂದು ತಹಶೀಲ್ದಾರ್ ನಾಗಮ್ಮ ಈ ವೇಳೆ ಮನವಿ ಮಾಡಿದ್ದಾರೆ. ಈ ಮುಂಚೆ ಮಹಾರಾಷ್ಟ್ರದಲ್ಲಿ ಕೊರೋನಾ ಹೆಚ್ಚಾಗಿದ್ದಾಗಲೂ ಥರ್ಮಲ್ ಸ್ಕ್ರೀನಿಂಗ್ ಮಾಡಿ ರಾಜ್ಯದ ಗಡಿ ಒಳಕ್ಕೆ ಬಿಟ್ಟುಕೊಳ್ಳಲಾಗುತ್ತಿತ್ತು. ಆದರೆ ಈ ಬಾರಿ ಮಾತ್ರ ರಾಜ್ಯದ ಎಂಟ್ರಿಗೆ ಆರ್.ಟಿ.ಪಿ.ಸಿ.ಆರ್. ಕಡ್ಡಾಯ ಮಾಡಿರೋದ್ರಿಂದ ಜನತೆ ಗೊಂದಲಕ್ಕೀಡಾಗಿದ್ದಾರೆ. ಬಹುತೇಕರು ಮಹಾರಾಷ್ಟ್ರಕ್ಕೆ ವಾಪಸ್ಸಾಗುತ್ತಿದ್ದಾರೆ.
ರೈಲುಗಳಲ್ಲಿ ನಡೆಯದ ತಪಾಸಣೆ;
ವಾಹನಗಳು ಬರೋ ಹಾದಿಗಳಲ್ಲಿ ಕೋವಿಡ್ ನಿಯಮಗಳ ಕಟ್ಟುನಿಟ್ಟಿನ ಜಾರಿಗೆ ಮುಂದಾಗಿದ್ದಾರೆ. ಆದರೆ ಮಹಾರಾಷ್ಟ್ರದಿಂದ ಬರೋ ರೈಲುಗಳಲ್ಲಿ ಮಾತ್ರ ಯಾವುದೇ ರೀತಿಯ ಮುನ್ನಚ್ಚರಿಕಾ ಕ್ರಮ ಕೈಗೊಂಡಿಲ್ಲ ಅನ್ನೋ ಆರೋಪ ಕೇಳಿ ಬಂದಿದೆ. ರಾಜ್ಯಕ್ಕೆ ಎಂಟ್ರಿ ಕೊಡೋ ವಾಹನಗಳ ತಪಾಸಣೆ ನಡೀತಿದ್ದರೂ, ರೈಲಿನಲ್ಲಿ ಬರುವವರಿಗೆ ಯಾವುದೇ ತಪಾಸಣೆ ನಡೀತಿಲ್ಲ. ಮುಖ್ಯ ರೈಲ್ವೆ ಜಂಕ್ಷನ್ ಗಳಲ್ಲಿ ಒಂದಾಗಿರೋ ವಾಡಿಯಲ್ಲಿ ಯಾರೂ ಕೇಳೋರಲ್ಲ ಅನ್ನೋ ಪರಿಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ: ಮೈಸೂರು ಮಹಾನಗರ ಪಾಲಿಕೆ ಚುನಾವಣೆ: ಬಿಜೆಪಿ ಲೆಕ್ಕಾಚಾರ ತಲೆಕೆಳಗು; ಜೆಡಿಎಸ್ಗೆ ಒಲಿದ ಮೇಯರ್ ಪಟ್ಟಮಹಾರಾಷ್ಟ್ರದಿಂದ ರೈಲಿನ ಮೂಲಕ ಬಂದವರನ್ನು ತಪಾಸಣೆ ಮಾಡದೆ ಬಿಡಲಾಗ್ತಿದೆ. ರಾಜ್ಯ ಸರ್ಕಾರ ಮಹಾರಾಷ್ಟ್ರದಿಂದ ಬರುವವರಿಗೆ ಆರ್.ಟಿ.ಪಿ.ಸಿ.ಆರ್. ಕಡ್ಡಾಯಗೊಳಿಸಿದೆ. ಆದರೆ ವಾಡಿ ರೈಲ್ವೆ ನಿಲ್ದಾಣದಲ್ಲಿ ಆರ್.ಟಿ.ಪಿ.ಸಿ.ಆರ್. ವರದಿಯನ್ನೂ ಕೇಳ್ತಿಲ್ಲ. ಥರ್ಮಲ್ ಸ್ಕ್ರೀನಿಂಗ್ ಸಹ ಮಾಡದೆ ಹಾಗೆಯೇ ಬಿಡಲಾಗ್ತಿದೆ. ಇದರಿಂದಾಗಿ ಜಿಲ್ಲೆಯ ಜನತೆಯಲ್ಲಿ ಮತ್ತಷ್ಟು ಭೀತಿ.
ಮಹಾರಾಷ್ಟ್ರದಿಂದ ಬಂದವರಿಂದ ಮತ್ತೆ ಸೋಂಕು ಹೆಚ್ಚಳವಾಗುವುದೆಂಬ ಆತಂಕ ಸೃಷ್ಟಿಯಾಗಿದೆ. ರೈಲ್ವೆ ನಿಲ್ದಾಣಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳವಂತೆ ಜನತೆ ಒತ್ತಾಯಿದೆ. ಮುಂಬೈ, ಪುಣೆ ಸೇರಿ ಮಹಾರಾಷ್ಟ್ರದ ಹಲವು ಕಡೆಗಳಿಂದ ನಿತ್ಯ ಸಂಚರಿಸ್ತಿರೋ ರೈಲುಗಳು.
(ವರದಿ - ಶಿವರಾಮ ಅಸುಂಡಿ)
Published by:
MAshok Kumar
First published:
February 24, 2021, 2:22 PM IST