ದಕ್ಷಿಣ ಕನ್ನಡ: ಕೊರೋನಾ ಸೋಂಕಿಗೆ ಓರ್ವ ಪ್ರೊಬೆಷನರಿ PSI ಸಾವು, 29 ಸಿಬ್ಬಂದಿಗಳಿಗೆ ಪಾಸಿಟೀವ್!

ದಕ್ಷಿಣಕನ್ನಡ ಜಿಲ್ಲಾ ಪೋಲೀಸ್​ಗೂ ಕೊರೋನಾ ಸಂಕಷ್ಟ ಎದುರಾಗಿದ್ದು, ಇಲಾಖೆಯ ಒರ್ವ ಮಹಿಳಾ ಪ್ರೋಫೆಷನರಿ ಪಿಎಸೈ  ಕೊರೋನಾಕ್ಕೆ ಇಂದು ಬಲಿಯಾಗಿದ್ದಾರೆ. ಅಲ್ಲದೆ ,ಒಟ್ಟು 29 ಪೋಲೀಸರಲ್ಲಿ ಸೋಂಕು ಪತ್ತೆಯಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ದಕ್ಷಿಣ ಕನ್ನಡ (ಜೂನ್ 01); ರಾಜ್ಯದಲ್ಲಿ ಕಂಡು ಬಂದ ಕೋವಿಡ್-19 ರ‌ಎರಡನೇ ಅಲೆ ಪೋಲೀಸ್ ಇಲಾಖೆಯನ್ನು ಸಾಕಷ್ಟು ಕಾಡಿದೆ. ಕಾನೂನು ಸುವ್ಯವಸ್ಥೆ ಹಾಗೂ ಲಾಕ್ ಡೌನ್ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಉದ್ಧೇಶದಿಂದ ಕಾರ್ಯಾಚರಿಸು ತ್ತಿರುವ ಪೋಲೀಸರಲ್ಲಿ  ಹೆಚ್ಚಿನ ಸಂಖ್ಯೆಯಲ್ಲಿ ಕೊರೋನಾ ಪಾಸಿಟೀವ್ ಪ್ರಕರಣಗಳು ಪತ್ತೆಯಾಗಿದ್ದು, ಹಲವರು ಸಾವನ್ನಪ್ಪಿದ್ದಾರೆ. ದಕ್ಷಿಣಕನ್ನಡ ಜಿಲ್ಲಾ ಪೋಲೀಸ್​ಗೂ ಕೊರೋನಾ ಸಂಕಷ್ಟ ಎದುರಾಗಿದ್ದು,  ಜಿಲ್ಲಾ ಪೋಲೀಸ್ ಇಲಾಖೆಯ ಒರ್ವ ಮಹಿಳಾ ಪ್ರೋಫೆಷನರಿ ಪಿಎಸೈ  ಕೊರೋನಾಕ್ಕೆ ಇಂದು ಬಲಿಯಾಗಿದ್ದಾರೆ. ಅಲ್ಲದೆ, ಒಟ್ಟು 29 ಪೋಲೀಸರಲ್ಲಿ  ಸೋಂಕು ಪತ್ತೆಯಾಗಿದೆ.

29 ಪಾಸಿಟೀವ್ ಪ್ರಕರಣಗಳಲ್ಲಿ ಇದೀಗ 18 ಮಂದಿ ಪೋಲೀಸರು ಕೊರೋನಾದಿಂದ ಗುಣಮುಖವಾಗಿ ಮತ್ತೆ ಸೇವೆಗೆ ಹಾಜರಾಗಿದ್ದಾರೆ. ಉಳಿದ 11 ಮಂದಿ ಈಗಲೂ ಕೊರೋನಾ ಪಾಸಿಟೀವ್ ಆಗಿ ಕ್ವಾರಂಟೈನ್ ನಲ್ಲಿದ್ದಾರೆ. ಈ ಎಲ್ಲಾ ಸಿಬ್ನಂದಿಗಳ ಮೇಲ್ವಿಚಾರಣೆಯನ್ನು ಕಂಟ್ರೋಲ್ ರೂಂ ಮೂಲಕ ನೋಡಿಕೊಳ್ಳಲಾಗುತ್ತಿದ್ದು, ಅವರಿಗೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಇಲಾಖೆಯ ವತಿಯಿಂದಲೇ ನಿರ್ವಹಿಸಲಾಗುತ್ತಿದೆ ಎಂದು ದಕ್ಷಿಣಕನ್ನಡ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಖುಷಿಕೇಶ್ ಸೊನಾವಣೆ ನ್ಯೂಸ್ 18 ಗೆ ತಿಳಿಸಿದ್ದಾರೆ.

ಅಲ್ಲದೆ ಕೊರೋನಾ ಸೋಂಕು ಪೋಲೀಸ್ ಸಿಬ್ಬಂದಿಗಳಿಗೆ ಹರಡದ ದೃಷ್ಟಿಯಿಂದ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಎಲ್ಲಾ ಠಾಣೆಗಳಿಗೂ ಈ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಕೋವಿಡ್ ಹಿನ್ನಲೆಯಲ್ಲಿ ಈ ಎಲ್ಲಾ ವ್ಯವಸ್ಥೆಗಳನ್ನು ಕಂಟ್ರೋಲ್ ರೂಂ ಮೂಲಕವೇ ಗಮನಿಸಲಾಗುತ್ತಿದೆ. ಕೇವಲ ಪೋಲಿಸ್ ಸಿಬ್ಬಂದಿಗಳು ಮಾತ್ರವಲ್ಲದೆ, ಕುಟುಂಬ ಸದಸ್ಯರ ಬಗ್ಗೆಯ ಸುರಕ್ಷತೆಯ ಬಗ್ಗೆಯೂ ಹೆಚ್ಚಿನ ಕಾಳಜಿಯನ್ನು ವಹಿಸಲಾಗುತ್ತಿದೆ.

ಕೊವಿಡ್ ಲಸಿಕೆಯನ್ನು ದಕ್ಷಿಣಕನ್ನಡ ಜಿಲ್ಲೆಯ ಬಹುತೇಕ ಎಲ್ಲಾ ಸಿಬ್ಬಂದಿಗಳಿಗೂ ನೀಡಲಾಗಿದ್ದು, ಹೆಚ್ಚಿನವರ  ಎರಡನೇ ಡೋಸ್ ಕೂಡಾ ಪಡೆದಾಗಿದ್ದು, ಇನ್ನು ಕೆಲವೇ ಸಿಬ್ಬಂದಿಗಳು ಎರಡನೇ ಡೋಸ್ ಪಡೆದುಕೊಳ್ಳಲು ಬಾಕಿಯಿದೆ.  ಮೊದಲನೇಯ ಕೋವಿಡ್ ಅಲೆಗೆ ಹೋಲಿಸಿದಲ್ಲಿ ಈ ಬಾರಿ ದಕ್ಷಿಣಕನ್ನಡ ಜಿಲ್ಲಾ ಪೋಲೀಸ್ ಇಲಾಖೆಯಲ್ಲಿ ಕೊರೊನಾ ಪಾಸಿಟೀವ್ ಆದವರ ಸಂಖ್ಯೆ ಕೊಂಚ ಕುಸಿದಿದ್ದು, ಗಂಭೀರವಾಗಿ ಆಸ್ಪತ್ರೆಗೆ ಸೇರಿದವರ ಸಂಖ್ಯೆಯೂ ಗಣನೀಯವಾಗಿ ಕುಸಿದಿದೆ.

ಇದನ್ನೂ ಓದಿ: ಪಶ್ಚಿಮ ಬಂಗಾಳದ ಮಾಜಿ ಮುಖ್ಯ ಕಾರ್ಯದರ್ಶಿಗೆ ಕೇಂದ್ರ ಸರ್ಕಾರದಿಂದ ಶೋಕಾಸ್ ನೊಟೀಸ್​!

ಅಲ್ಲದೆ ಎರಡನೇ ಅಲೆಯಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡ ಹಿನ್ನಲೆಯಲ್ಲಿ ಎರಡನೇ ಅಲೆಯಲ್ಲಿ ಪೋಲೀಸರಲ್ಲಿ ಪಾಸಿಟೀವ್ ಸಂಖ್ಯೆ ಇತರ ಜಿಲ್ಲೆಗೆ ಹೋಲಿಸಿದಲ್ಲಿ ಸಾಕಷ್ಟು ಕಡಿಮೆಯಾಗಿರುವುದು  ಸಮಾಧಾನಕರ ಬೆಳವಣಿಗೆಯಾಗಿ ಕಂಡುಬಂದಿದೆ.ಮೊದಲ ಕೊರೊನಾ ಅಲೆಯ ಸಂದರ್ಭದಲ್ಲಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೊರೊನಾ ಪಾಸಿಟೀವ್ ಆದ ಪೋಲೀಸರ ಸಂಖ್ಯೆ ಹೆಚ್ಚಾಗಿ ಕೆಲವು ಠಾಣೆಗಳಲ್ಲಿ ಪೋಲೀಸ್ ಸಿಬ್ಬಂದಿಗಳ ಕೊರತೆಯೂ ಕಂಡು ಬಂದಿತ್ತು. ಜಿಲ್ಲೆಯ ಬಹುತೇಕ ಎಲ್ಲಾ ಪೋಲೀಸ್ ಠಾಣೆಗಳೂ ಲಾಕ್‌ಡೌನ್ ಆಗಿತ್ತು.

ಇದನ್ನೂ ಓದಿ: ಬ್ಲಾಕ್​ ಫಂಗಸ್​: ಭಾರತದ ನೀತಿಯನ್ನು ಪ್ರಶ್ನಿಸಿ ಕೇಂದ್ರದ ಎದುರು 3 ಪ್ರಶ್ನೆಗಳನ್ನಿಟ್ಟ ರಾಹುಲ್ ಗಾಂಧಿ!

ಆ ಬಳಿಕದ ಬೆಳವಣಿಗೆಯಲ್ಲಿ ಪೋಲೀಸ್ ಠಾಣೆಗೆ ಸಾರ್ವಜನಿಕ ಭೇಟಿಗೆ ಹಲವು ನಿರ್ಬಂಧಗಳನ್ನು ವಿಧಿಸಲಾಗಿತ್ತು. ಅಲ್ಲದೆ ಪೋಲೀಸ್ ಠಾಣೆಯ ಸುತ್ತಮುತ್ತ ಬ್ಯಾರಿಕೇಟ್ ಗಳನ್ನು ಅಳವಡಿಸಿ ಅನಗತ್ಯ ವ್ಯಕ್ತಿಗಳ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಈ ಬ್ಯಾರಿಕೇಡ್ ಗಳನ್ನು ಕೆಲವು ಪೋಲೀಸ್ ಠಾಣೆಗಳಲ್ಲಿ ತೆರವುಗೊಳಿಸಲಾಗಿದ್ದರೂ, ಇನ್ನು ಕೆಲವು ಠಾಣೆಗಳಲ್ಲಿ ಇದೇ ವ್ಯವಸ್ಥೆಯನ್ನು ಈ ಬಾರಿಯೂ ಮುಂದುವರಿಸಲಾಗಿದೆ. ಅಲ್ಲದೆ ದೂರುದಾರಿಗೆ ಠಾಣೆಯ ಹೊರಗೇ ಕುಳಿತುಕೊಳ್ಳುವ ಹಾಗೂ ದೂರು ದಾಖಲಿಸಿಕೊಳ್ಳುವ ವ್ಯವಸ್ಥೆಯನ್ನು ಮುಂದುವರಿಸಲಾಗಿದೆ.

ನ್ಯೂಸ್​​​18 ಕನ್ನಡ ಕಳಕಳಿ : ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:MAshok Kumar
First published: