ಒಂದು ವಾರದಲ್ಲಿ ರಾಯಚೂರಿನಲ್ಲಿ ಉಲ್ಬಣಿಸಿದ ಕೊರೋನಾ ಪ್ರಕರಣಗಳು; ಜನರಲ್ಲಿ ಹೆಚ್ಚಿದ ಆತಂಕ

ಬಹುತೇಕರಿಗೆ ಸೋಂಕಿನ‌ ಮೂಲ ಪತ್ತೆಯಾಗುತ್ತಿಲ್ಲ. ಇನ್ನೂ ಐಎಲ್​ಐ ಹಾಗೂ ಸಾರಿ ಪ್ರಕರಣಗಳು ಅಧಿಕವಾಗುತ್ತಿದೆ. ಅದರಲ್ಲಿ ರಾಯಚೂರು ಹಾಗೂ ಸಿಂಧನೂರು ತಾಲೂಕಿನಲ್ಲಿ ಅಧಿಕ ಸೋಂಕಿತರು ಇದ್ದಾರೆ. ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕ ಪತ್ತೆ ಮಾಡುವುದು ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವಾಗಿದೆ.

news18-kannada
Updated:July 13, 2020, 9:56 PM IST
ಒಂದು ವಾರದಲ್ಲಿ ರಾಯಚೂರಿನಲ್ಲಿ ಉಲ್ಬಣಿಸಿದ ಕೊರೋನಾ ಪ್ರಕರಣಗಳು; ಜನರಲ್ಲಿ ಹೆಚ್ಚಿದ ಆತಂಕ
ಸಾಂದರ್ಭಿಕ ಚಿತ್ರ.
  • Share this:
ರಾಯಚೂರು; ಮಾರ್ಚ್ ತಿಂಗಳಿನಿಂದ ರಾಜ್ಯದಲ್ಲಿ ಕೊರೋನಾ ಸೋಂಕು ಹಬ್ಬಲು ಆರಂಭವಾಗಿದ್ದು, ಮೊದಲು ಎರಡು ತಿಂಗಳು ರಾಯಚೂರು ಜಿಲ್ಲೆ ಕೊರೋನಾದಿಂದ ಮುಕ್ತವಾಗಿತ್ತು. ಆದರೆ ಮೇ 17ರಿಂದ ರಾಯಚೂರು ಜಿಲ್ಲೆಯಲ್ಲಿ ಕೊರೋನಾ ಉಲ್ಬಣಿಸಿದೆ.

ಈ ಮೊದಲು ಮಹಾರಾಷ್ಟ್ರ ವಲಸಿಗರೆ ಅಧಿಕವಾಗಿದ್ದರು. ಮಹಾರಾಷ್ಟ್ರ ವಲಸಿಗರು ಕಡಿಮೆಯಾದ ನಂತರ ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣಕ್ಕೆ ಬರುತ್ತೆ ಎಂದುಕೊಂಡಿದ್ದರು. ಆದರೆ ಈಗ ಆಘಾತಕಾರಿಯಾಗಿ ಕೊರೋನಾ ಮತ್ತೆ ಉಲ್ಬಣಿಸುತ್ತಿದೆ. ರಾಯಚೂರು ಜಿಲ್ಲೆಯು ಮೇ 17 ರವರೆಗೆ ಕೊರೋನಾದಿಂದ ಮುಕ್ತವಾಗಿತ್ತು. ಲಾಕ್ ಡೌನ್ ನಾಲ್ಕನೆಯ ಹಂತ ಆರಂಭವಾದ ನಂತರ ಮಹಾರಾಷ್ಟ್ರದಿಂದ ವಲಸಿಗರು ಆಗಮಿಸಿದ್ದರು. ಒಟ್ಟು 3500 ಜನ ಮಹಾರಾಷ್ಟ್ರದಿಂದ ವಲಸೆ ಬಂದವರಲ್ಲಿ ಒಟ್ಟು 540 ಜನರಿಗೆ ಸೋಂಕು ತಗುಲಿದೆ.

ಜೂನ್ ಎರಡನೆಯ ವಾರದ ನಂತರ ಮಹಾರಾಷ್ಟ್ರ ವಲಸಿಗರು ಕಡಿಮೆಯಾಗಿ ಆ ಸಂದರ್ಭದಲ್ಲಿ ಒಂದು ವಾರದಲ್ಲಿ 20ಕ್ಕಿಂತ ಕಡಿಮೆ ಪ್ರಕರಣಗಳು ವರದಿಯಾಗುತ್ತಿದ್ದವು. ಅಲ್ಲಿಯವರೆಗೂ ಜಿಲ್ಲೆಯವರು ಇಬ್ಬರು, ಯಾದಗಿರಿ ಮೂಲದ ಒಬ್ಬರು ಸೇರಿ ಮೂರು ಜನರ ಸಾವಾಗಿತ್ತು. ಓಪೆಕ್ ಆಸ್ಪತ್ರೆ ಹಾಗೂ ಯರಮರಸ್ ಕೇರ್ ಸೆಂಟರ್​ನಲ್ಲಿ ಒಟ್ಟು 84 ಸಕ್ರಿಯ ಪ್ರಕರಣಗಳಿದ್ದವು. ಇದರಿಂದ ರಾಯಚೂರು ಜನ ಈ ಸಂದರ್ಭದಲ್ಲಿ ಮುಕ್ತರಾಗಿ ಮತ್ತೆ ಗ್ರೀನ್ ಝೋನಿಗೆ ಬರುತ್ತೇವೆ ಎಂದು ಸಮಾದಾನ ಪಟ್ಟಿದ್ದರು. ಈ ಸಮಾಧಾನ ಬಹಳ ದಿನ ಉಳಿಯಲಿಲ್ಲ. ಜುಲೈ ಆರಂಭದಿಂದ ಮತ್ತೆ ಕೊರೋನಾ ಉಲ್ಬಣಿಸುತ್ತಿದೆ. ಮಸ್ಕಿ ತಾಲೂಕಿನ 35 ವರ್ಷದ ಮಹಿಳೆ ಕೊಪ್ಪಳ ಜಿಲ್ಲೆಯ ಮರಳಿಯ ಲಗ್ನಕ್ಕೆ ಹೋಗಿ ಬಂದ ನಂತರ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆ ದಾಖಲಾಗಿದ್ದಾರು. ಆಕೆಯು ಸಿಂಧನೂರು ಬಟ್ಟೆ ಅಂಗಡಿ, ಮಾನವಿ ಹಾಗೂ ಸಿಂಧನೂರು ತಾಲೂಕಿನ ಹಲವು ಕಡೆ ಸೇರಿ ಇಲ್ಲಿಯವರೆಗೂ ಒಟ್ಟು 60ಕ್ಕೂ ಅಧಿಕ ಜನರಿಗೆ ಸೋಂಕು ತಗುಲಿದೆ. ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದವರಲ್ಲಿ ಈಗ ಸೋಂಕು ಕಾಣಿಸಿಕೊಳ್ಳುತ್ತಿದೆ.

ಒಂದೇ ವಾರದಲ್ಲಿ ಜಿಲ್ಲೆಯಲ್ಲಿ ಮತ್ತೆ 172 ಜನರಿಗೆ ಸೋಂಕು ದೃಢಪಟ್ಟಿದ್ದು ಅದರಲ್ಲಿ 46 ಜನರಿಗೆ ಟ್ರಾವೆಲ್ ಹಿಸ್ಟರಿ ಇಲ್ಲ. 13 ಜನರಿಗೆ ಐಎಲ್​ಐ, 11 ಜನರಿಗೆ ಸಾರಿ ಪ್ರಕರಣದಲ್ಲಿ ಪರೀಕ್ಷೆ ಮಾಡಿದಾಗ ಸೋಂಕು ದೃಢಪಟ್ಟಿದೆ. ಈ ಮೊದಲು 100ಕ್ಕಿಂತ ಕಡಿಮೆ ಇದ್ದ ರಾಯಚೂರು ತಾಲೂಕಿನಲ್ಲಿ ಈಗ 254 ಜನ ಸೋಂಕಿತರು ಪತ್ತೆಯಾಗಿದ್ದಾರೆ. ಕಳೆದ ಒಂದು ವಾರದಲ್ಲಿ ಒಟ್ಟು 5 ಜನ ಸಾವಾಗಿದೆ. ಐಸಿಯುನಲ್ಲಿ ಇನ್ನೂ 17 ಜನರಿದ್ದಾರೆ. ಸೋಂಕು ಈಗ ಸಮುದಾಯಕ್ಕೆ ಹಬ್ಬಿದಂತೆ ಕಾಣುತ್ತಿದೆ.

ಇದನ್ನು ಓದಿ: ರಾಜ್ಯ ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ, ಇದೊಂದು ಲಜ್ಜೆಗೆಟ್ಟ ಸರ್ಕಾರ; ಸಂಸದ ಡಿ.ಕೆ.ಸುರೇಶ್ ಆಕ್ರೋಶ

ಬಹುತೇಕರಿಗೆ ಸೋಂಕಿನ‌ ಮೂಲ ಪತ್ತೆಯಾಗುತ್ತಿಲ್ಲ. ಇನ್ನೂ ಐಎಲ್​ಐ ಹಾಗೂ ಸಾರಿ ಪ್ರಕರಣಗಳು ಅಧಿಕವಾಗುತ್ತಿದೆ. ಅದರಲ್ಲಿ ರಾಯಚೂರು ಹಾಗೂ ಸಿಂಧನೂರು ತಾಲೂಕಿನಲ್ಲಿ ಅಧಿಕ ಸೋಂಕಿತರು ಇದ್ದಾರೆ. ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕ ಪತ್ತೆ ಮಾಡುವುದು ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವಾಗಿದೆ. ಮುಂದಿನ ದಿನಗಳಲ್ಲಿ ಕೊರೋನಾವನ್ನು ಹೇಗೆ ಕಟ್ಟಿಹಾಕುತ್ತಾರೆ ಎಂಬುವುದನ್ನು ಕಾದು ನೋಡಬೇಕು.
Published by: HR Ramesh
First published: July 13, 2020, 9:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading