ಮೈಸೂರಿನಲ್ಲಿ ಇಂದು ಕೊರೋನಾ ಸ್ಟೋಟ; ಸಾಂಸ್ಕೃತಿಕ ನಗರಿಯಲ್ಲಿ ಇನ್ಮುಂದೆ 6 ಗಂಟೆ ನಂತರ ಎಲ್ಲವೂ ಬಂದ್

ಮೈಸೂರಿನಲ್ಲಿ ದಿನೆ ದಿನೆ ಕೊರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾದಂತೆ ಕಾನೂನು ಸಹ ಕಠಿಣಗೊಳ್ಳುತ್ತಿದೆ. ಇನ್ಮುಂದೆ ಜನರು ಎಲ್ಲಂದರಲ್ಲಿ ಓಡಾಡೋದು ಮಾಸ್ಕ್‌ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಇರೋದು, ಸಂಜೆ 6ರ ನಂತರ ಮನೆ ಸೇರಿಕೊಳ್ಳದಿದ್ದರೆ ಪೊಲೀಸರಿಂದ ಲಾಠಿ ರುಚಿ ನೋಡಬೇಕಾದ ಪರಿಸ್ಥಿತಿ ಬರಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮೈಸೂರು; ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದು ಕೊರೋನಾ ಸ್ಪೋಟವಾಗಿದ್ದು ಒಂದೇ ದಿನ 50ಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣ ದಾಖಲಾಗಿದೆ. ಮೈಸೂರು ಆರೋಗ್ಯ ಇಲಾಖೆ ಮೂಲಗಳ ಪ್ರಕಾರ 51 ಕೊರೋನಾ ಪಾಸಿಟಿವ್‌ ಪ್ರಕರಣ ದಾಖಲಾಗಿದ್ದು, ದಿನವೊಂದರ ದಾಖಲಾದ ಅತಿ ಹೆಚ್ಚು ಪ್ರಕರಣಗಳಾಗಿವೆ. ಈವರೆಗೆ ಮೈಸೂರು ಜಿಲ್ಲೆಯಲ್ಲಿ 22 ಪ್ರಕರಣ ಮಾತ್ರ ಅತಿ ಹೆಚ್ಚು ಹೆಚ್ಚಾಗಿತ್ತು. ಇಂದು 51 ಪ್ರಕರಣ ದಾಖಲಾಗಿರೋದು ಮತ್ತಷ್ಟು ಆತಂಕದ ಮೂಡಿಸಿದೆ. ಸದ್ಯ ಮೈಸೂರಿನಲ್ಲಿ 270 ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಇಂದಿನ ಅಂಕಿ ಅಂಶದ ಪ್ರಕಾರ 300 ಗಡಿ ದಾಟಿದೆ.

ಈ ಬಗ್ಗೆ ಮಾತನಾಡಿ ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್  ಮೈಸೂರಿನಲ್ಲಿ ಇಂದು ಅತಿ ಹೆಚ್ಚು ಪಾಸಿಟಿವ್ ಪ್ರಕರಣ ಬಂದಿದ್ದು, ಇದು ಈವರೆಗೆ ಬಂದ ಸಂಖ್ಯೆಗಳಲ್ಲೇ ಅತಿ ಹೆಚ್ಚಾಗಿದೆ. ದಿನೆದಿನೆ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿವೆ. ಇದಕ್ಕೆ ನಾವು ಸಕಲ ರೀತಿಯಲ್ಲು ಸಜ್ಜಾಗಿದ್ದೇವೆ. ನರ್ಸ್ ಹಾಗೂ ಡಿ.ಗ್ರೂಪ್ ನೌಕರರ ಕೊರತೆ ಇದೆ. ಕೋವಿಡ್ ಆಸ್ಪತ್ರೆಯಲ್ಲಿ ಡಾಕ್ಟರ್​ಗಳೇ ಬೇರೆ ಬೇರೆ ಕೆಲಸ ಮಾಡುವ ಸ್ಥಿತಿ ಬಂದಿದೆ. ನಾವು ಹೆಚ್ಚು ಹೆಚ್ಚು ಸ್ಯಾಂಪಲ್ ಸಂಗ್ರಹ ಮಾಡ್ತಿದ್ದೀವಿ. ಟ್ರಾವೆಲ್ ಹಿಸ್ಟರಿ ಇಲ್ಲದ ಪ್ರಕರಣ ಹೆಚ್ಚಾಗಿದೆ. ILI ಹಾಗೂ SARI ಪ್ರಕರಣ ಹೆಚ್ಚಾಗಿವೆ. ಈ ಬಗ್ಗೆ ಟ್ರಾವಲ್ ಹಿಸ್ಟರಿ ಕಂಡುಹಿಡಿಯುವ ಕೆಲಸವೂ ಆಗುತ್ತಿದೆ ಎಂದು ತಿಳಿಸಿದರು.

ಇನ್ನು ಮುಂದೆ ಮೈಸೂರಿನಲ್ಲಿ ರಾತ್ರಿ 8 ಗಂಟೆ ಬದಲು ಸಂಜೆ 6ಕ್ಕೆ ಕರ್ಪ್ಯೂ ಜಾರಿಯಾಗಲಿದೆ ಅಂತ ಜಿಲ್ಲಾ ಉಸ್ತುವಾರಿ ಸಚಿವ ಹೇಳಿದ್ದಾರೆ. ಮೈಸೂರಿನಲ್ಲಿಂದು ಕೋವಿಡ್ ಸಂಬಂಧ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ಕರೆದಿದ್ದ ಸಚಿವ ಎಸ್.ಟಿ.ಸೋಮಶೇಖರ್ ಇನ್ಮುಂದೆ ಸಂಜೆ ಕರ್ಪ್ಯೂ 8ರ ಬದಲಿಗೆ ಸಂಜೆ  6 ಗಂಟೆಗೆ ಕರ್ಫ್ಯೂ ಇರಲಿದೆ. 6 ಗಂಟೆಯ ನಂತರ ಓಡಾಟವು ಇರೋದಿಲ್ಲ. ವ್ಯಾಪಾರವೂ ಇಲ್ಲ. ಕೋವಿಡ್ ನಿಯಂತ್ರಣ ಮೈಸೂರಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಜಿಲ್ಲಾಡಳಿತ ಇದಕ್ಕೆ ಸಜ್ಜಾಗಲಿದೆ. ಜನರ ಓಡಾಟ ನಿಯಂತ್ರಣ ಮಾಡುವ ಸಲುವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಹೀಗಾಗಿ 8ರ ಬದಲು 6ಕ್ಕೆ ಕರ್ಫ್ಯೂ ಜಾರಿಯಾಗಲಿದೆ. ಶುಕ್ರವಾರದಿಂದಲೇ ಈ ಆದೇಶ ಜಾರಿಯಾಗಲಿದ್ದು, ಜನರು ಸಹಕರಿಬೇಕು ಎಂದು ಮನವಿ ಮಾಡಿದರು.

ಇನ್ನು ಇದೇ ಶುಕ್ರವಾರದಿಂದ ಮಾಸ್ಕ್ ಧರಿಸದಿದ್ದರೆ 200 ರೂ. ದಂಡ ವಿಧಿಸುವ ಕಾರ್ಯಕ್ರಮಕ್ಕೆ ಮತ್ತೆ ಚಾಲನೆ ನೀಡಲಿದ್ದು, ಗ್ರಾಮಾಂತರ ಭಾಗದಲ್ಲಿ 100 ರೂ. ದಂಡ ನಗರ ಪ್ರದೇಶದಲ್ಲಿ 200 ರೂ. ದಂಡ ವಿಧಿಸಲು ಸೂಚಿಸಿದ್ದೇನೆ. ಎಲ್ಲ ಎಪಿಎಂಸಿ ಹಾಗೂ ಮಾರುಕಟ್ಟೆಗಳಿಗು ಈ ಕಾನೂನು ಅನ್ವಯವಾಗಲಿದೆ. ಪಾಲಿಕೆ ಅಧಿಕಾರಿಗಳು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಾರೆ. ಮಾಸ್ಕ್ ಇನ್ಮುಂದೆ ಕಡ್ಡಾಯವಾಗಲಿದೆ. ಬೇಕಾಬಿಟ್ಟಿ ಓಡಾಡಿದರೆ ದಂಡ ಕಟ್ಟಬೇಕಾಗುತ್ತದೆ ಎಂದು ಜಿಲ್ಲೆಯ ಜನರಿಗೆ ಖಡಕ್ ಎಚ್ಚರಿಕೆ ನೀಡಿದರು.

ಇದನ್ನು ಓದಿ: ಕೊರೋನಾ ಸೋಂಕಿನಿಂದ ಮಡಿದ ವ್ಯಕ್ತಿಯ ಮೃತದೇಹ ಎಳೆದೊಯ್ದು ಅಮಾನವೀಯವಾಗಿ ಅಂತ್ಯಕ್ರಿಯೆ!

ಒಟ್ಟಿನಲ್ಲಿ ಮೈಸೂರಿನಲ್ಲಿ ದಿನೆ ದಿನೆ ಕೊರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾದಂತೆ ಕಾನೂನು ಸಹ ಕಠಿಣಗೊಳ್ಳುತ್ತಿದೆ. ಇನ್ಮುಂದೆ ಜನರು ಎಲ್ಲಂದರಲ್ಲಿ ಓಡಾಡೋದು ಮಾಸ್ಕ್‌ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಇರೋದು, ಸಂಜೆ 6ರ ನಂತರ ಮನೆ ಸೇರಿಕೊಳ್ಳದಿದ್ದರೆ ಪೊಲೀಸರಿಂದ ಲಾಠಿ ರುಚಿ ನೋಡಬೇಕಾದ ಪರಿಸ್ಥಿತಿ ಬರಬಹುದು.
First published: